ಸಣ್ಣ ಜ್ವರ ಬರಲಿ, ವೈದ್ಯರನ್ನು ಕೇಳ್ದೆ ಮಾತ್ರೆ ತೆಗೆದುಕೊಳ್ಳೋದು ತಪ್ಪು. ಅನಗತ್ಯ ಗರ್ಭಧಾರಣೆ ತಡೆಯಲು ಬಳಸುವ ಗರ್ಭನಿರೋಧಕ ಮಾತ್ರೆ ಸೇವನೆ ಮಾಡುವಾಗ ಕೂಡ ವೈದ್ಯರ ಸಲಹೆ ಅಗತ್ಯ. ಎಲ್ಲ ಮಾತ್ರೆಗಳು, ಎಲ್ಲ ವಯಸ್ಸಿನ ಮಹಿಳೆಯರಿಗೆ ಆಗಿಬರೋದಿಲ್ಲ. ಇದು ನಿಮ್ಮ ಜೀವ ತೆಗೆಯಬಹುದು.
ಗರ್ಭನಿರೋಧಕ ಮಾತ್ರೆ ಎಂಬ ವಿಷ್ಯ ಬಂದಾಗ ನೆನಪಾಗೋದು ಮಹಿಳೆಯರು ಮಾತ್ರ. ಯಾಕೆಂದ್ರೆ ಪುರುಷರಿಗೆ ಕಾಂಡೋಮ್ ಬಿಟ್ರೆ ಅನಗತ್ಯ ಗರ್ಭಧಾರಣೆ ತಡೆಯಲು ಬೇರೆ ಯಾವುದೇ ಮಾತ್ರೆಯಿಲ್ಲ. ವಿಜ್ಞಾನಿಗಳು ಮಾತ್ರೆಯ ಪ್ರಯೋಗ ನಡೆಸ್ತಲೆ ಇದ್ದಾರೆ. ಕಾಂಡೋಮ್, ನೈಸರ್ಗಿಕ ವಿಧಾನ ಹಾಗೂ ಸಂತಾನ ಹರಣ ಶಸ್ತ್ರಚಿಕಿತ್ಸೆ ಹೊರತುಪಡಿಸಿ ಮಹಿಳೆಯರಿಗೆ ಇರುವ ಆಯ್ಕೆಗಳಲ್ಲಿ ಗರ್ಭನಿರೋಧಕ ಮಾತ್ರೆ ಒಂದು. ಅನೇಕ ಮಹಿಳೆಯರು ಮಾತ್ರೆಯ ಆಶ್ರಯವನ್ನು ಪಡೆಯುತ್ತಾರೆ. ಒಮ್ಮೆ ಮಾತ್ರೆ ಸೇವನೆ ಶುರು ಮಾಡಿದ್ರೆ ಅದನ್ನು ನಿಲ್ಲಿಸೋದಿಲ್ಲ. ದೀರ್ಘ ಸಮಯದವರೆಗೆ ಮಾತ್ರೆ ಸೇವನೆ ಮಾಡ್ತಾ, ಅನಗತ್ಯ ಗರ್ಭಧಾರಣೆ ತಡೆಯೋದು ಬಹಳ ಅಪಾಯಕಾರಿ. ಗರ್ಭನಿರೋಧಕ ಮಾತ್ರೆ ಸೇವನೆ ಶುರು ಮಾಡುವ ಮೊದಲು ಮಾತ್ರವಲ್ಲದೆ ಆಗಾಗ ಇದ್ರೆ ಬಗ್ಗೆ ವೈದ್ಯರಿಂದ ಸಲಹೆ ಪಡೆಯಬೇಕಾಗುತ್ತದೆ.
ಗರ್ಭನಿರೋಧಕ (Contraception ) ಮಾತ್ರೆಗಳು ಮಹಿಳೆಯರ ಆರೋಗ್ಯ (Health) ದ ಮೇಲೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುತ್ತವೆ. ಬರೀ ಅವರ ದೈಹಿಕ ಆರೋಗ್ಯ ಮಾತ್ರವಲ್ಲದೆ ಮಾನಸಿಕ ಆರೋಗ್ಯ ಹದಗೆಡಲು ಇದು ಕಾರಣವಾಗುತ್ತದೆ. ಸಂಶೋಧನೆ (Research) ಯೊಂದರ ಪ್ರಕಾರ, ಗರ್ಭನಿರೋಧಕ ಮಾತ್ರೆಗಳ ನಿರಂತರ ಸೇವನೆಯಿಂದ ಮಹಿಳೆಯರು ಆಲೋಚನಾ ಶಕ್ತಿ ಕಳೆದುಕೊಳ್ತಾರೆ. ಇದ್ರಿಂದ ಸಾವು ಕೂಡ ಸಂಭವಿಸುವ ಅಪಾಯವಿರುತ್ತದೆ.
ನಾವಿಂದು ಅತಿಯಾಗಿ ಗರ್ಭನಿರೋಧಕ ಮಾತ್ರೆ (Pill) ಸೇವನೆ ಮಾಡೋದ್ರಿಂದ ಏನೆಲ್ಲ ನಷ್ಟವಾಗುತ್ತದೆ ಎಂಬುದನ್ನು ನಿಮಗೆ ಹೇಳ್ತೇವೆ.
ಹಾರ್ಮೋನ್ ನಲ್ಲಿ ಏರುಪೇರು : ಕಾಂಡೋಮ್ ಬಳಕೆಯಿಂದ ದೇಹದ ಒಳ ಭಾಗಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಆದ್ರೆ ಗರ್ಭನಿರೋಧಕ ಮಾತ್ರೆಗಳು ಬಾಯಿಯ ಮೂಲಕ ನಮ್ಮ ದೇಹ ಸೇರುತ್ತವೆ. ಇದು ಇಡೀ ನಮ್ಮ ದೇಹದ ಮೇಲೆ ಪರಿಣಾಮ ಬೀರುತ್ತದೆ. ಮಾತ್ರೆಗಳು ಹಾರ್ಮೋನುಗಳ ಬದಲಾವಣೆಗೆ ಕಾರಣವಾಗುತ್ತದೆ. ಹಾಮೋರ್ನ್ ಬದಲಾವಣೆಯಿಂದ ಮಹಿಳೆಯ ದೇಹದಲ್ಲಿ ಅನೇಕ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
Egg Freezing ಎಂದರೇನು? ಗರ್ಭಧರಿಸುವ ಈ ವಿಧಾನದಿಂದ ಅಪಾಯ ಇದ್ಯಾ?
ಜನನ ನಿಯಂತ್ರಣ ಮಾತ್ರೆಗಳು ಮಾರಕವಾಗಬಹುದು : ಕೆಲವು ಜನನ ನಿಯಂತ್ರಣ ಮಾತ್ರೆಗಳು ಸಂಯೋಜಿತ ಮಾತ್ರೆಗಳಾಗಿರುತ್ತವೆ. ಅದರ ಸೇವನೆ ಮಾರಕವಾಗಿರುತ್ತದೆ. ಮಾತ್ರೆ ಸೇವನೆಯಿಂದ ರಕ್ತ ಹೆಪ್ಪುಗಟ್ಟುವ ಸಾಧ್ಯತೆಯಿರುತ್ತದೆ. ಥ್ರಂಬೋಸಿಸ್, ಶ್ವಾಸಕೋಶದ ಮೇಲೆ ಹೆಪ್ಪುಗಟ್ಟುವಿಕೆ ಸಮಸ್ಯೆ, ಪಾರ್ಶ್ವವಾಯು ಮತ್ತು ಹೃದಯಾಘಾತದ ಅಪಾಯ ಹೆಚ್ಚಾಗುವ ಸಾಧ್ಯತೆಯಿರುತ್ತದೆ. ಇಷ್ಟೇ ಅಲ್ಲದೆ ಗರ್ಭನಿರೋಧಕ ಮಾತ್ರೆಗಳ ಸೇವನೆಯು ಅಧಿಕ ರಕ್ತದೊತ್ತಡ, ಕೆಲವು ರೀತಿಯ ಕ್ಯಾನ್ಸರ್ ಹಾಗೂ ಯಕೃತ್ತಿನ ಗೆಡ್ಡೆಯಂತಹ ಸಮಸ್ಯೆಗೆ ಕಾರಣವಾಗುತ್ತದೆ. ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಂಡ ನಂತರ ಕೆಲವು ಮಹಿಳೆಯರು ತೀವ್ರ ತಲೆನೋವಿಗೆ ಒಳಗಾಗ್ತಾರೆ. ಕೆಲ ಮಹಿಳೆಯರಿಗೆ ಮೈಗ್ರೇನ್ ಕಾಡುವುದಿದೆ. ಹಾಗಾಗಿ ನೀವು ವೈದ್ಯರ ಸಲಹೆಯಿಲ್ಲದೆ ಯಾವುದೇ ಕಾರಣಕ್ಕೂ ಗರ್ಭನಿರೋಧಕ ಮಾತ್ರೆಗಳನ್ನು ಸೇವಿಸಬಾರದು.
ನಿರಂತರ ದೇಹ ಸಂಪರ್ಕ ಹೊರತು ಪಡಿಸಿ, ಈ ಕಡೆ ಗಮನ ಹರಿಸಿದರೆ ಪ್ರೆಗ್ನೆನ್ಸಿ ಸುಲಭ!
ಈ ಮಹಿಳೆಯರು ಯಾವುದೇ ಕಾರಣಕ್ಕೂ ಗರ್ಭನಿರೋಧಕ ಮಾತ್ರೆ ಬಳಸಬಾರದು : ಮೊದಲೇ ಹೇಳಿದಂತೆ ವೈದ್ಯರ ಸಲಹೆ ಇಲ್ಲದೆ ಯಾವುದೇ ಮಹಿಳೆ ಗರ್ಭನಿರೋಧಕ ಮಾತ್ರೆ ಸೇವನೆ ಮಾಡ್ಬಾರದು. ಆರು ತಿಂಗಳು ಇಲ್ಲವೆ ವರ್ಷಕ್ಕೊಮ್ಮೆ ವೈದ್ಯರ ಪರೀಕ್ಷೆಗೆ ಒಳಗಾಗಿ ಮಾತ್ರೆ ಬಗ್ಗೆ ಸಲಹೆ ಪಡೆಯುತ್ತಿರಬೇಕು. ಗರ್ಭಿಣಿ ಅಪ್ಪಿತಪ್ಪಿಯೂ ಗರ್ಭನಿರೋಧಕ ಮಾತ್ರೆ ಸೇವನೆಯನ್ನು ಮಾಡಬಾರದು. ನಿಮ್ಮ ವಯಸ್ಸು 40ರ ಗಡಿದಾಟಿದ್ದರೆ ನೀವು ಗರ್ಭನಿರೋಧಕ ಮಾತ್ರೆ ಸೇವನೆಗೆ ಹೋಗ್ಬೇಡಿ. ಕೆಲ ಅನಾರೋಗ್ಯದಿಂದ ಬಳಲುತ್ತಿದ್ದು, ಅದಕ್ಕೆ ಪ್ರತಿ ದಿನ ಮಾತ್ರೆ ಸೇವನೆ ಮಾಡ್ತಿರುವ ಮಹಿಳೆಯರು ಕೂಡ ಗರ್ಭನಿರೋಧಕ ಮಾತ್ರೆ ಸೇವನೆ ಮಾಡಬಾರದು. ಹಾಗೇ ಅಧಿಕ ತೂಕ ಹೊಂದಿರುವ ಮಹಿಳೆಯರು ಹಾಗೆ ಮದ್ಯಪಾನ, ಧೂಮಪಾನ ಸೇರಿದಂತೆ ಯಾವುದೇ ಮಾದಕ ದ್ರವ್ಯಗಳನ್ನು ಸೇವನೆ ಮಾಡುತ್ತಿರುವ ಮಹಿಳೆಯರು ಕೂಡ ಗರ್ಭನಿರೋಧಕ ಮಾತ್ರೆಯನ್ನು ತೆಗೆದುಕೊಳ್ಳಬಾರದು. ಇದು ನಿಮ್ಮ ಆರೋಗ್ಯವನ್ನು ಹದಗೆಡಿಸುವ ಜೊತೆಗೆ ಸಾವಿಗೆ ಕಾರಣವಾಗಬಹುದು.