
ನವದೆಹಲಿ: ಸಾರ್ವಜನಿಕ ಪ್ರದೇಶದಲ್ಲಿ ಮಹಿಳೆಯರಿಗೆ ಕಿರುಕುಳದ ಅನುಭವವಾಗುವುದು ಸಾಮಾನ್ಯವಾಗಿಬಿಟ್ಟಿದೆ. ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ, ಬಸ್ಸು, ರೈಲಿನಲ್ಲಿ ಪ್ರಯಾಣಿಸುವಾಗ ಹೀಗೆ ಹಲವೆಡೆ ಮಹಿಳೆಯರಿಗೆ ಲೈಂಗಿಕ ಕಿರುಕುಳದ ಅನುಭವವಾಗುತ್ತದೆ. ಮಹಿಳೆಯರನ್ನು ಕೆಟ್ಟದಾಗಿ ನೋಡುವುದು, ಕೆಟ್ಟದಾಗಿ ಮಾತನಾಡುವುದು, ದೇಹವನ್ನು ಸ್ಪರ್ಶಿಸುವುದು ಮಾಡುತ್ತಾರೆ. ಕೆಲವೊಬ್ಬರು ಪ್ರತಿಕ್ರಿಯಿಸಿದರೆ ಇನ್ನು ಕೆಲವರು ಸಾರ್ವಜನಿಕ ಪ್ರದೇಶದಲ್ಲಿ ಸರಿಯಾಗಿ ಮಾತನಾಡಲು ಆಗದೆ, ಪ್ರತಿಕ್ರಿಯಿಸಲೂ ಸಾಧ್ಯವಾಗದೆ ಸಹಿಸಿಕೊಂಡು ಬಿಡುತ್ತಾರೆ. ಇಂಥವರಿಂದಲೇ ಈ ರೀತಿಯ ಕಾಮುಕರ ಉಪಟಳ ಹೆಚ್ಚಾಗುತ್ತದೆ.
ಓಲಾ, ಊಬರ್‌ನಲ್ಲಿ ಮಹಿಳೆ(Woman)ಯರಿಗೆ ಕಿರುಕುಳದ ಅನುಭವವಾಗೋದು ಸಾಮಾನ್ಯವಾಗಿಬಿಟ್ಟಿದೆ. ಅದೆಷ್ಟೋ ಬಾರಿ ಡ್ರೈವರ್ ಲೈಂಗಿಕ ಕಿರುಕುಳ ನೀಡುವುದು, ಅಸಭ್ಯವಾಗಿ ಮಾತನಾಡುವುದು, ವರ್ತಿಸುವ ಘಟನೆಗಳು ವರದಿಯಾಗಿವೆ. ಕೆಲವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ, ಇನ್ನು ಕೆಲವರು ಮಾನ ಮರ್ಯಾದೆಗೆ ಅಂಜಿ ಏನೂ ಮಾತನಾಡದೆ ಸುಮ್ಮನಾಗಿ ಬಿಡುತ್ತಾರೆ. ಸದ್ಯ ದೆಹಲಿಯಲ್ಲಿ ಮಹಿಳಾ ಪತ್ರಕರ್ತೆಯೊಬ್ಬರು (Journalist) ಉಬರ್ ಆಟೋ ರಿಕ್ಷಾ ಚಾಲಕ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ದೆಹಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ (Social media) ಹಂಚಿಕೊಂಡಿದ್ದಾರೆ.
ಗಂಡನ ಸೆಕ್ಸ್ ಕಾಟಕ್ಕೆ ನೊಂದು ಬೆಂಕಿ ಹಚ್ಚಿಕೊಂಡು, ಬೆಂದು ಬಂದಳು..!
ಆಟೋದ ಸೈಡ್ ಮಿರರ್‌ನಲ್ಲಿ ಮಹಿಳೆಯ ಸ್ತನ ನೋಡುತ್ತಿದ್ದ ಚಾಲಕ
ಪ್ರಮುಖ ಮಾಧ್ಯಮ ಸಂಸ್ಥೆಯೊಂದರಲ್ಲಿ ಪತ್ರಕರ್ತೆಯಾಗಿರುವ ಮಹಿಳೆ ನ್ಯೂ ಫ್ರೆಂಡ್ಸ್ ಕಾಲೋನಿಯಲ್ಲಿರುವ ತನ್ನ ನಿವಾಸದಿಂದ ಉಬರ್ ಆಟೋ ಹತ್ತಿ ಮಾಳವೀಯ ನಗರದಲ್ಲಿರುವ ತನ್ನ ಸ್ನೇಹಿತನ ಮನೆಗೆ ಪ್ರಯಾಣಿಸುತ್ತಿದ್ದಳು. ಈ ಸಂದರ್ಭದಲ್ಲಿ ಚಾಲಕ ವಾಹನದ ಮಿರರ್‌ನಲ್ಲಿ ತನ್ನ ಸ್ತನವನ್ನೇ (Breast) ನೋಡುತ್ತಿದ್ದ ಎಂದು ಮಹಿಳೆ ದೂರಿದ್ದಾಳೆ.
ಆಟೋ ಚಾಲಕನನ್ನು ವಿನೋದ್ ಕುಮಾರ್ ಎಂದು ಗುರುತಿಸಲಾಗಿದ್ದು, ಆಟೋದ ಸೈಡ್ ಮಿರರ್‌ಗಳ ಆತ ಮೂಲಕ ತನ್ನ ಸ್ತನಗಳನ್ನು ಅನುಚಿತವಾಗಿ ನೋಡುತ್ತಿದ್ದನು ಎಂದು ಮಹಿಳೆ ತಿಳಿಸಿದ್ದಾರೆ. ಮಾತ್ರವಲ್ಲ ತಾನು ಈ ಸಂದರ್ಭದಲ್ಲಿ ಉಬರ್‌ನ ಸುರಕ್ಷತಾ ವೈಶಿಷ್ಟ್ಯವನ್ನು ಬಳಸಲು ಪ್ರಯತ್ನಿಸಿದೆ, ಆದರೆ ಯಾವುದೇ ಪ್ರಯೋಜನವಾಗಲಿಲ್ಲ ಎಂದು ತಿಳಿಸಿದ್ದಾರೆ.
ಪ್ಲಾಸ್ಮಾ ಬೇಕೆಂದು ನಂಬರ್ ಕೊಟ್ಟರೆ, ಶಿಶ್ನದ ಫೋಟೋ ಕಳುಹಿಸುವುದಾ? ಛೇ..
ಮಹಿಳೆ ನೀಡಿರುವ ದೂರಿನಲ್ಲೇನಿದೆ?
'ನಾನು ನನ್ನ ಮನೆಯಿಂದ ಆಟೋದಲ್ಲಿ ಸ್ನೇಹಿತನ ಮನೆಗೆ ಪ್ರಯಾಣಿಸುತ್ತಿದ್ದೆ. ಸ್ವಲ್ಪ ಸಮಯದ ನಂತರ, ಚಾಲಕನು ಆಟೋದ ಸೈಡ್ ಮಿರರ್‌ಗಳ ಮೂಲಕ ನನ್ನ ಎದೆಯನ್ನು ನಿಖರವಾಗಿ ನೋಡುತ್ತಿರುವುದನ್ನು ನಾನು ಗಮನಿಸಿದೆ. ನಾನು ಸ್ವಲ್ಪ ಬಲಕ್ಕೆ ತಿರುಗಿದೆ. ಆದರೂ ಆತ ನನ್ನ ಎದೆಯ ಭಾಗವನ್ನು ದಿಟ್ಟಸುವುದನ್ನು ಮುಂದುವರಿಸಿದ' ಎಂದು ಮಹಿಳಾ ಪತ್ರಕರ್ತೆ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಮಹಿಳೆ ಚಾಲಕನಿಗೆ ಈ ಬಗ್ಗೆ ಪ್ರಶ್ನಿಸಿ ದೂರು ನೀಡುವುದಾಗಿ ಹೇಳಿದಾಗ ಆತ ಉಡಾಫೆಯಿಂದ ವರ್ತಿಸಿದ ಎಂದು ಮಹಿಳೆ ತಿಳಿಸಿದ್ದಾಳೆ. ಮಹಿಳೆ ಘಟನೆಯ ವೀಡಿಯೊವನ್ನು ಚಿತ್ರೀಕರಿಸಿದ್ದು, ಅದನ್ನು ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ.ಸದ್ಯ ನಗರ ಪೊಲೀಸರು, ಕ್ಯಾಬ್ ಅಗ್ರಿಗೇಟರ್ ಸಂಸ್ಥೆಗೆ ನೋಟಿಸ್ ನೀಡಿದ್ದಾರೆ.
Dowry ಕೊಡೋದು ತಪ್ಪೇನಲ್ಲ, ಕುರೂಪಿ ಹುಡುಗಿಗೂ ಮದುವೆಯಾಗುತ್ತೆ..! ಪಠ್ಯದಲ್ಲಿ ವರದಕ್ಷಿಣೆಯ ಗುಣಗಾನ !
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.