Women life: ಕೊಪ್ಪಳದಲ್ಲಿ ತಲೆ ಎತ್ತಲಿವೆ ಸ್ಯಾನಿಟರಿ ಪ್ಯಾಡ್‌ ಬರ್ನರ್‌ ಘಟಕ

By Kannadaprabha News  |  First Published Mar 3, 2023, 8:46 AM IST

ಸ್ಯಾನಿಟರಿ ಪ್ಯಾಡ್‌ ಬಳಕೆ ಹಾಗೂ ಬಳಿಕ ಅದರ ವಿಲೇವಾರಿ ಮಾಡುವ ಕುರಿತಂತೆ ಬಹುತೇಕ ಮಹಿಳೆಯರಿಗೆ ಅರಿವು ಇಲ್ಲ. ಇದ್ದರೂ ಅದನ್ನು ಸಮರ್ಪಕವಾಗಿ ವಿಲೇವಾರಿ ಮಾಡುತ್ತಿಲ್ಲ. ಇದು ಈಗ ದೊಡ್ಡ ಸಮಸ್ಯೆಗೆ ಕಾರಣವಾಗುತ್ತಿದೆ. ಇದಕ್ಕೆ ಪರಿಹಾರವಾಗಿ ‘ಸ್ಯಾನಿಟರ್‌ ಪ್ಯಾಡ್‌ ಬರ್ನರ್‌’ (ಸುಡುವ) ಘಟಕ ಸ್ಥಾಪಿಸಲು ಕೊಪ್ಪಳ ನಗರಸಭೆ ನಿರ್ಧರಿಸಿದೆ.


ಮರಡ್ಡಿ ಅಳವಂಡಿ

ಕೊಪ್ಪಳ (ಮಾ.3) : ಸ್ಯಾನಿಟರಿ ಪ್ಯಾಡ್‌ ಬಳಕೆ ಹಾಗೂ ಬಳಿಕ ಅದರ ವಿಲೇವಾರಿ ಮಾಡುವ ಕುರಿತಂತೆ ಬಹುತೇಕ ಮಹಿಳೆಯರಿಗೆ ಅರಿವು ಇಲ್ಲ. ಇದ್ದರೂ ಅದನ್ನು ಸಮರ್ಪಕವಾಗಿ ವಿಲೇವಾರಿ ಮಾಡುತ್ತಿಲ್ಲ. ಇದು ಈಗ ದೊಡ್ಡ ಸಮಸ್ಯೆಗೆ ಕಾರಣವಾಗುತ್ತಿದೆ. ಇದಕ್ಕೆ ಪರಿಹಾರವಾಗಿ ‘ಸ್ಯಾನಿಟರ್‌ ಪ್ಯಾಡ್‌ ಬರ್ನರ್‌(sanitary pad burner unit)’ (ಸುಡುವ) ಘಟಕ ಸ್ಥಾಪಿಸಲು ಕೊಪ್ಪಳ ನಗರಸಭೆ ನಿರ್ಧರಿಸಿದೆ.

Tap to resize

Latest Videos

undefined

ನಗರಸಭೆಯ ಈ ತೀರ್ಮಾನ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಬೇಗನೆ ಕಾರ್ಯಗತವಾಗಬೇಕು ಎನ್ನುವ ಆಗ್ರಹವೂ ಕೇಳಿ ಬಂದಿದೆ.

 

ಕೊಪ್ಪಳ: ಹಾಸ್ಟೆಲ್‌ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡ್‌ಗೂ ತತ್ವಾರ!

ಪ್ಯಾಡ್‌ ವುಮನ್‌(Pad women) ಎಂದೆ ಖ್ಯಾತಿಯಾಗಿರುವ ಸಂಗೀನಿ ಪಿಂಕ್‌ಪ್ಯಾಡ್‌ ಘಟಕ(SANGINI Sanitary Pad)ದ ಮಾಲೀಕರಾದ ಭಾರತಿ ಗುಡ್ಲಾನೂರು(Bharati Gudlanur) ಅವರು ನಗರಸಭೆಯ ಸಾಮಾನ್ಯ ಸಭೆಯಲ್ಲಿ ಕಾಲವಕಾಶ ಪಡೆದು, ಸ್ಯಾನಿಟರಿ ಪ್ಯಾಡ್‌ ಸಮಸ್ಯೆ ಮತ್ತು ವಿಲೇವಾರಿಗೆ ಇರುವ ಅವಕಾಶಗಳ ಕುರಿತು ಜಾಗೃತಿ ಮೂಡಿಸಿದರು.

ಭಾರತಿ ಗುಡ್ಲಾನೂರು ಅವರು ಮಾಹಿತಿ ನೀಡುತ್ತಿದ್ದಂತೆ ಸಭೆಯಲ್ಲಿದ್ದ ಅಷ್ಟೂಸದಸ್ಯರು ಪಕ್ಷಾತೀತವಾಗಿ ಬೆಂಬಲಿಸಿದರು. ಇದೊಂದು ಅತ್ಯಂತ ಉತ್ತಮ ಯೋಜನೆಯಾಗಿದೆ. ಇದನ್ನು ನಗರಸಭೆ ಕೈಗೆತ್ತಿಕೊಳ್ಳಲು ಸಿದ್ಧವಿದೆ ಎಂದು ಸದಸ್ಯರು ಒಕ್ಕೊರಲಿನಿಂದ ಹೇಳಿದರು.

ಇದಕ್ಕೆ ಸಾಥ್‌ ನೀಡಿರುವ ನಗರಸಭೆ ಅಧ್ಯಕ್ಷೆ ಶಿವಗಂಗಾ ಶಿವರಡ್ಡಿ ಹಿರೇಗೌಡ್ರ ಅವರು ಕೂಡಲೇ ಅಸ್ತು ಎಂದರು. ಇದಕ್ಕೆ ಅಗತ್ಯ ಆರ್ಥಿಕ ನೆರವು ನೀಡಲಾಗುವುದು ಮತ್ತು ನಗರಸಭೆ ವತಿಯಿಂದಲೇ ಸ್ಯಾನಿಟರಿ ಬರ್ನಿಂಗ್‌ ಘಟಕ ಪ್ರಾರಂಭಿಸಲಾಗುವುದು ಎಂದರು.

ವಾರ್ಡವಾರು ಅಥವಾ ಕಸವಿಲೇವಾರಿ ಘಟಕದಲ್ಲಿ:

ಭಾರತಿ ಗುಡ್ಲಾನೂರು ಹಾಗೂ ಆರೋಗ್ಯ ನಿರೀಕ್ಷಕರಿಗೆ ಸಮ್ಮತಿ ನೀಡಿ, ಯೋಜನೆ ಸಿದ್ಧ ಮಾಡಲು ಸೂಚಿಸಲಾಗಿದೆ. ಪ್ರತಿ ವಾರ್ಡಿನಲ್ಲಿಯೂ ಈ ಘಟಕ ಸ್ಥಾಪಿಸಬೇಕೇ ಅಥವಾ ಕಸ ವಿಲೇವಾರಿ ಘಟಕದಲ್ಲಿ ಸ್ಥಾಪಿಸಬೇಕೇ ಎನ್ನುವ ಕುರಿತು ಪರಿಶೀಲನೆ ಮಾಡಲು ಸೂಚಿಸಲಾಗಿದೆ. ವಾರ್ಡ್‌ವಾರು ಸ್ಥಾಪನೆ ಮಾಡಿದರೆ ಪ್ರತ್ಯೇಕ ಸಿಬ್ಬಂದಿ ನಿಯೋಜನೆ ಮಾಡುವುದು ಕಷ್ಟವಾಗುತ್ತದೆ. ಹೀಗಾಗಿ ಕಸ ವಿಲೇವಾರಿ ಘಟಕದಲ್ಲಿಯೇ ದೊಡ್ಡ ಪ್ರಮಾಣದ ಸ್ಯಾನಿಟರಿ ಪ್ಯಾಡ್‌ ಬರ್ನರ್‌ ಘಟಕ ಸ್ಥಾಪಿಸುವುದು ಸೂಕ್ತ ಎನ್ನುವ ಅಭಿಪ್ರಾಯ ಕೇಳಿಬಂದಿದೆ. ಕೊಪ್ಪಳ ನಗರದಲ್ಲಿ ಸ್ಯಾನಿಟರಿ ಪ್ಯಾಡ್‌ ಬರ್ನರ್‌ ಘಟಕ ತಲೆ ಎತ್ತುವುದಂತೂ ಪಕ್ಕಾ ಎನ್ನಲಾಗಿದೆ.

ಜಾಗೃತಿ ಮೂಡಿಸಲು ಕ್ರಮ:

ಇದರ ಜತೆಗೆ ಸಂಗೀನಿ ಪಿಂಕ್‌ ಪ್ಯಾಡ್‌ ಘಟಕದ ವತಿಯಿಂದ ಭಾರತಿ ಗುಡ್ಲಾನೂರು ಹಾಗೂ ಶೀಲಾ ಹಾಲ್ಕುರಿಕೆ ಅವರು ಜಾಗೃತಿ ಮೂಡಿಸುವ ಹೊಣೆ ಹೊತ್ತಿದ್ದಾರೆ. ಸ್ಯಾನಿಟರಿ ಪ್ಯಾಡ್‌ಗಳನ್ನು ಎಲ್ಲೆಂದರಲ್ಲಿ ಎಸೆಯದೇ, ಕವರ್‌ನಲ್ಲಿ ಹಾಕಿ, ಕಸ ಸಂಗ್ರಹ ವಾಹನಗಳು ಬಂದಾಗ ನೀಡಬೇಕು. ಕಸ ಸಂಗ್ರಹಣಾ ವಾಹನದಲ್ಲಿಯೂ ಇದಕ್ಕಾಗಿಯೇ ಪ್ರತ್ಯೇಕ ಬ್ಯಾಗ್‌ಗಳನ್ನು ಇಟ್ಟರೆ ಅದರಲ್ಲಿ ಹಾಕುವ ವ್ಯವಸ್ಥೆ ಮಾಡಬೇಕು ಎಂದು ಅವರು ಮಹಿಳೆಯರಿಗೆ ತಿಳಿ ಹೇಳುತ್ತಿದ್ದಾರೆ. ಬಳಿಕ ಅವುಗಳನ್ನು ಸ್ಯಾನಿಟರಿ ಪ್ಯಾಡ್‌ ಬರ್ನರ್‌ ಘಟಕಗಳಿಗೆ ಒಯ್ಯುವ ವ್ಯವಸ್ಥೆ ಮಾಡಲಾಗುತ್ತದೆ.

ಪಿವಿಆರ್‌ನಲ್ಲಿ ಸ್ಯಾನಿಟರಿ ಪ್ಯಾಡ್​ ಸಿಗದೆ ಮಹಿಳೆಯ ಪರದಾಟ, ಟ್ವೀಟ್ ವೈರಲ್

ಎಷ್ಟುಸಾಮರ್ಥ್ಯ?:

ಕೊಪ್ಪಳ ನಗರದಲ್ಲಿ ಸುಮಾರು 30 ಸಾವಿರ ಮಹಿಳೆಯರು ಇರುವ ಅಂದಾಜು ಮಾಡಲಾಗಿದೆ. ಅಷ್ಟುಸಾಮರ್ಥ್ಯದ ಸ್ಯಾನಿಟರಿ ಪ್ಯಾಡ್‌ ಬರ್ನರ್‌ ಘಟಕ ಸ್ಥಾಪಿಸುವ ಕುರಿತು ಸಹ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಸ್ಯಾನಿಟರಿ ಪ್ಯಾಡ್‌ ಬರ್ನರ್‌ ಘಟಕ ಸ್ಥಾಪಿಸುವುದು ತೀರಾ ಅಗತ್ಯವಾಗಿದ್ದು, ಈ ದಿಸೆಯಲ್ಲಿ ನಗರಸಭೆಯ ವತಿಯಿಂದ ಘಟಕ ಸ್ಥಾಪಿಸುವುದಕ್ಕೆ ನಮ್ಮ ಸಂಪೂರ್ಣ ಸಮ್ಮತಿ ಇದೆ.

ಮಹೇಂದ್ರ ಛೋಪ್ರಾ, ಸದಸ್ಯರು ನಗರಸಭೆ ಕೊಪ್ಪಳ

ಕೊಪ್ಪಳದಲ್ಲಿ ಸ್ಯಾನಿಟರಿ ಪ್ಯಾಡ್‌ ಬರ್ನರ್‌ ಘಟಕ ಸ್ಥಾಪಿಸುವುದಕ್ಕೆ ನಗರಸಭೆ ಸಮ್ಮತಿ ನೀಡಿರುವುದು ಖುಷಿ ತಂದಿದೆ. ಇದು ಆದಷ್ಟುಬೇಗನೆ ಆಗಬೇಕು ಎನ್ನುವುದು ನಮ್ಮ ಹಕ್ಕೊತ್ತಾಯವಾಗಿದೆ.

ಭಾರತಿ ಗುಡ್ಲಾನೂರು ಮಾಲೀಕರು ಸಂಗೀನಿ ಪಿಂಕ್‌ಪ್ಯಾಡ್‌ ಘಟಕ

ಸ್ಯಾನಿಟರಿ ಪ್ಯಾಡ್‌ ಬರ್ನರ್‌ ಘಟಕಕ್ಕೆ ಎಷ್ಟೇ ಖರ್ಚಾದರೂ ಪರವಾಗಿಲ್ಲ. ಅದನ್ನು ಶೀಘ್ರದಲ್ಲಿಯೇ ನಗರಸಭೆ ವತಿಯಿಂದಲೇ ಸ್ಥಾಪಿಸಲಾಗುವುದು.

ಶಿವಗಂಗಾ ಶಿವರಡ್ಡಿ ಹಿರೇಗೌಡ್ರ ಅಧ್ಯಕ್ಷರು ನಗರಸಭೆ ಕೊಪ್ಪಳ

click me!