Asianet Suvarna News Asianet Suvarna News

ಸೋಲಿಲ್ಲದ ಸರದಾರ ಪೈಲ್ವಾನ್ ಗಾಮಗೆ ವಿನೂತನ ಗೌರವ ಸಲ್ಲಿಸಿದ Google Doodle

* ದೇಶದ ದಿಗ್ಗಜ ಕುಸ್ತಿಪಟು ಗಾಮ ಪೈಲ್ವಾನ್ ಅವರ 144ನೇ ಹುಟ್ಟುಹಬ್ಬದ ಸಂಭ್ರಮ

* ವೃತ್ತಿ ಜೀವನದಲ್ಲಿ ಸೋಲನ್ನೇ ಕಾಣದ ಪ್ರಖ್ಯಾತ ಕುಸ್ತಿಪಟು ಗಾಮ

* ಗಾಮ ಅವರ ಕುಸ್ತಿ ಹಾಗೂ ಶಿಸ್ತುಬದ್ದ ಜೀವನಕ್ಕೆ ಮಾರುಹೋಗಿದ್ದ ಬ್ರೂಸ್‌ ಲೀ

Google Doodle Celebrates Undefeated Wrestling Champion Gama Pehalwan kvn
Author
Bengaluru, First Published May 22, 2022, 6:04 PM IST

ಬೆಂಗಳೂರು(ಮೇ.22): ಭಾರತ ಸ್ವಾತಂತ್ರ್ಯ ಪೂರ್ವದ ಪ್ರಖ್ಯಾತ ಕುಸ್ತಿಪಟು ಗಾಮ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಗೂಗೂಲ್ ಡೂಡಲ್‌ (Google Doodle) ವಿನೂತನವಾಗಿ ಗೌರವ ಸಲ್ಲಿಸಿದೆ. ಗಾಮ ಅವರ 144ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಗೂಗಲ್ ಭಾರತೀಯ ಕುಸ್ತಿಪಟುವನ್ನು ಸ್ಮರಿಸಿಕೊಂಡಿದೆ. ಕುಸ್ತಿ ಜೀವನದಲ್ಲಿ ಎಂದೆಂದಿಗೂ ಸೋಲೇ ಕಂಡರಿಯದ ವಿಶ್ವ ಕುಸ್ತಿ ಚಾಂಪಿಯನ್‌ ಗ್ರೇಟ್‌ ಗಾಮ (Great Gama) ಅವರಿಗೆ ರುಸ್ತುಂ-ಇ-ಹಿಂದ್ ಎನ್ನುವ ಬಿರುದನ್ನೂ ಸಹ ಹೊಂದಿದ್ದರು. ಭಾರತದ ಈ ದಿಗ್ಗಜ ಕುಸ್ತಿಪಟುವಿನ ಹುಟ್ಟುಹಬ್ಬದ ಸಂದರ್ಭದಲ್ಲಿ Google Doodle ವಿನೂತನವಾಗಿ ಗೌರವ ಸಲ್ಲಿಸಿದೆ. ಆಧುನಿಕ ಜಗತ್ತಿನ ದಿಗ್ಗಜ ಬ್ರೂಸ್‌ ಲೀ (Bruce Lee) ಕೂಡಾ ಪೈಲ್ವಾನ್ ಗಾಮ ಅವರ ಅಭಿಮಾನಿಯಾಗಿದ್ದರು. ಗಾಮ ಅವರ ಅಭ್ಯಾಸ ರೀತಿಗೆ ಸ್ವತಃ ಬ್ರೂಸ್‌ ಲೀ ಮಾರು ಹೋಗಿದ್ದರು ಎಂದು ಗೂಗಲ್ ತಿಳಿಸಿದೆ

ಗಾಮ ಪೈಲ್ವಾನ್‌ 1878ರಲ್ಲಿ ಅಮೃತ್‌ಸರದಲ್ಲಿ ಜನಿಸಿದರು. ಅವರ ಕುಟುಂಬ ಮೂಲತಃ ಕುಸ್ತಿ ಹಿನ್ನೆಲೆ ಹೊಂದಿದ್ದ ಕುಟುಂಬವಾಗಿತ್ತು. ಸೋಲು ಎನ್ನುವುದು ಗಾಮ ಹತ್ತಿರವೂ ಸುಳಿಯಲಿಲ್ಲ. 1910ರಲ್ಲಿ ಅವರು ಭಾರತ ವಿಭಾಗದ ವರ್ಲ್ಡ್‌ ಹೆವಿವೇಟ್‌ ಪ್ರಶಸ್ತಿ ಜಯಿಸಿ ಬೀಗಿದ್ದರು. ಗಾಮ ಅವರ ಅಭ್ಯಾಸ ಹೇಗಿತ್ತು ಎಂದರೆ ತಮ್ಮ 10ನೇ ವಯಸ್ಸಿನಲ್ಲಿಯೇ 500 ಲುಂಗಿಸ್‌ ಹಾಗೂ 500 ಪುಷ್‌ ಅಪ್‌ಗಳನ್ನು ಮಾಡುತ್ತಿದ್ದರು ಎಂದು ಗೂಗಲ್ ತಿಳಿಸಿದೆ. 1888ರಲ್ಲಿ ನಡೆದ ನಡೆದ ಲುಂಗೀಸ್ ಸ್ಪರ್ಧೆಯಲ್ಲಿ ಉಪಖಂಡದ ಸುಮಾರು 400 ಕುಸ್ತಿಪಟುಗಳು ಪಾಲ್ಗೊಂಡಿದ್ದರು. ಈ ಸ್ಪರ್ಧೆಯಲ್ಲಿ ಗಾಮ ಗೆಲುವು ಸಾಧಿಸಿ ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಕೀರ್ತಿಯನ್ನು ಸಂಪಾದಿಸಿದ್ದರು.

Thomas Cup ಜಯಿಸಿದ್ದು ಸಣ್ಣ ಸಾಧನೆಯಲ್ಲ; ಭಾರತ ತಂಡವನ್ನು ಗುಣಗಾನ ಮಾಡಿದ ಪ್ರಧಾನಿ ಮೋದಿ

ಇನ್ನು ಗಾಮ ಅವರ ಶಕ್ತಿ ಸಾಮರ್ಥ್ಯ ಹೇಗಿತ್ತೆಂದರೇ, 1902ರಲ್ಲಿ ಗಾಮ ಬರೋಬ್ಬರಿ 1,200 ಕೆಜಿ ತೂಕದ ಕಲ್ಲನ್ನು ಎತ್ತಿ ಇಳಿಸುವ ತಮ್ಮ ಬಲವನ್ನು ಅನಾವರಣ ಮಾಡಿದ್ದರು. ಆ ಕಲ್ಲನ್ನು ಈಗಲೂ ಬರೋಡ ಮ್ಯೂಸಿಯಂನಲ್ಲಿಡಲಾಗಿದೆ ಎಂದು ವರದಿಗಳಲ್ಲಿ ಉಲ್ಲೇಖಿಸಲಾಗಿದೆ. 1927ರಲ್ಲಿ ನಡದ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಚಾಂಪಿಯನ್ ಪಟ್ಟ ಗಳಿಸುವ ಮೂಲಕ ಭಾರತ ಕೀರ್ತಿಯನ್ನು ಜಗತ್ತಿನಾದ್ಯಂತ ರಾರಾಜಿಸುವಂತೆ ಮಾಡಿದ್ದರು. ಈ ಟೂರ್ನಿ ಮುಗಿದ ನಂತರ ಗಾಮಗೆ ಟೈಗರ್ ಎನ್ನುವ ಬಿರುದನ್ನು ನೀಡಲಾಗಿತ್ತು. ಗಾಮ ಅವರ ಅಸಾಧಾರಣ ಸಾಧನೆಯನ್ನು ಗುರುತಿಸಿ ವೇಲ್ಸ್‌ನ ಫ್ರಿನ್ಸ್‌ ಭಾರತಕ್ಕೆ ಭೇಟಿ ನೀಡಿದಾಗ ಭಾರತದ ದಿಗ್ಗಜ ಕುಸ್ತಿಪಟುವಿಗೆ ಬೆಳ್ಳಿ ಗದೆಯನ್ನು ನೀಡಿ ಗೌರವಿಸಿದ್ದರು. 

1947ರಲ್ಲಿ ಭಾರತ ಹಾಗೂ ಪಾಕಿಸ್ತಾನ ವಿಭಜನೆಯ ಸಂದರ್ಭದಲ್ಲಿ ಹಿಂದೂ ಹಾಗೂ ಮುಸ್ಲಿಂ ಸಮುದಾಯದ ನಡುವೆ ಕೊಲೆ-ಸುಲಿಗೆಗಳಾದಾಗ ಗಾಮ ಹಲವಾರು ಹಿಂದುಗಳನ್ನು ಏಕಾಂಗಿಯಾಗಿ ರಕ್ಷಿಸಿದ್ದರು. ಭಾರತ ಹಾಗೂ ಪಾಕಿಸ್ತಾನ ಪ್ರತ್ಯೇಕ ರಾಷ್ಟ್ರಗಳಾದಾಗ ಗಾಮ ತಮ್ಮ ಉಳಿದ ಜೀವನವನ್ನು ಲಾಹೋರ್‌ನಲ್ಲಿ ಕಳೆದರು. ಅಂತಿಮವಾಗಿ ಗಾಮ 1960ರಲ್ಲಿ ಲಾಹೋರ್‌ನಲ್ಲಿ ಕೊನೆಯುಸಿರೆಳೆದರು.

ಗೂಗಲ್‌ನ ಡೂಡಲ್‌ನಲ್ಲಿ ಗಾಮ ಅವರ ಚಿತ್ರವನ್ನು ಅತಿಥಿ ಕಲಾವಿದ ವ್ರಿಂದಾ ಜವೇರಿ ಅವರು ರಚಿಸಿದ್ದಾರೆಂದು ಗೂಗಲ್‌ ತಿಳಿಸಿದೆ. ಗಾಮ ಕೇವಲ ಕುಸ್ತಿ ರಿಂಗ್‌ನಲ್ಲಿ ಅಬ್ಬರಿಸಿದ್ದು ಮಾತ್ರವಲ್ಲದೇ, ದೇಶದ ಸಂಸ್ಕೃತಿಯನ್ನು ಜಗತ್ತಿನಲ್ಲೆಡೆ ಪಸರಿಸಿದ್ದಾರೆಂದು ಗೂಗಲ್ ತಿಳಿಸಿದೆ.
 

Follow Us:
Download App:
  • android
  • ios