ವಿಶ್ವದ ಮೋಸ್ಟ್ ಬ್ಯೂಟಿಫುಲ್ ಮಹಿಳೆ ಲಿಸ್ಟ್ ಬಹಿರಂಗ, ಟಾಪ್ 10 ಪಟ್ಟಿಯಲ್ಲಿ ಏಕೈಕ ಬಾಲಿವುಡ್ ನಟಿ!

By Chethan Kumar  |  First Published Jul 26, 2024, 11:00 AM IST

ವಿಶ್ವದ ಅತ್ಯಂತ ಸುಂದರ ಮಹಿಳೆಯರ ಯಾರು? ಈ ವರ್ಷದ ಪಟ್ಟಿ ಬಿಡುಗಡೆಯಾಗಿದೆ.  ಹಲವು ಮಾನದಡಂಗಳನ್ನಿಟ್ಟುಕೊಂಡು ಗೋಲ್ಡನ್ ರೇಶಿಯೋ ಈ ಪಟ್ಟಿ ಬಿಡುಗಡೆ ಮಾಡಿದೆ. ಟಾಪ್ 10 ಪಟ್ಟಿಯಲ್ಲಿ ಬಾಲಿವುಡ್ ನಟಿ ಕಾಣಿಸಿಕೊಂಡಿದ್ದಾರೆ.


ಮುಂಬೈ(ಜು.26) ಪ್ರಸಕ್ತ ವರ್ಷದ ವಿಶ್ವದ ಅತ್ಯಂತ ಸುಂದರ ಮಹಿಳೆ ಪಟ್ಟಿಯನ್ನು ಗೋಲ್ಡನ್ ರೇಶಿಯೋ ಬಿಡುಗಡೆ ಮಾಡಿದೆ. ಬಾಹ್ಯ ಸೌಂದರ್ಯ ಮಾತ್ರವಲ್ಲ, ಹಲವು ಆಯಾಮ ಹಾಗೂ ಮಾನದಂಡಗಳನ್ನಿಟ್ಟುಕೊಂಡು ಈ ಪಟ್ಟಿ ತಯಾರಿಸಲಾಗಿದೆ. ಈ ಪೈಕಿ ವಿಶ್ವದ ಮೋಸ್ಟ್ ಬ್ಯೂಟಿಫುಲ್ ಮಹಿಳೆ ಅನ್ನೋ ಕಿರೀಟ ನಟಿ ಅನ್ಯ ಟೇಲರ್ ಜಾಯ್ ಪಾಲಾಗಿದೆ. ಟೆಲಿವಿಶನ್ ಮೂಲಕ ಆರಂಭಗೊಂಡ ಲಂಡನ್ ಮೂಲದ ಈ ನಟಿಗೆ ಅಭಿನಂದನೆಗಳ ಮಹಾ ಪೂರವೇ ಹರಿದು ಬಂದಿದೆ. ವಿಶೇಷ ಈ ಟಾಪ್ 10 ಪಟ್ಟಿಯಲ್ಲಿ ಏಕೈಕ ಬಾಲಿವುಡ್ ನಟಿ ಕಾಣಿಸಿಕೊಂಡಿದ್ದಾರೆ.

ಟಾಪ್ 10 ಪಟ್ಟಿಯಲ್ಲಿ ಹಾಲಿವುಡ್ ಸೇರಿದಂತೆ ಹಲವು ಸಿನಿಮಾ, ಮಾಡೆಲ್ ಕ್ಷೇತ್ರದ ಸುಂದರ ಮಹಿಳೆಯರು ಕಾಣಿಸಿಕೊಂಡಿದ್ದಾರೆ. ಈ ಪೈಕಿ 9ನೇ ಸ್ಥಾನದಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್ ಸ್ಥಾನ ಪಡೆದಿದ್ದಾರೆ. ಗೋಲ್ಡನ್ ರೇಶಿಯೋ ಲಿಸ್ಟ್‌ನಲ್ಲಿ ಅಲಿಯಾ ಭಟ್ ಶೇಕಡಾ 91.14 ರೇಟಿಂಗ್ ಪಡೆಯುವ ಮೂಲಕ 9ನೇ ಸ್ಥಾನದಲ್ಲಿದ್ದಾರೆ.

Tap to resize

Latest Videos

ಮಿಸ್ ವರ್ಲ್ಡ್ ಆಗೋಕು ಮುಂಚೆಯೇ ಐಶ್ವರ್ಯಾ ರೈಗಿತ್ತು ಸಿನಿ ಆಫರ್ಸ್!

ವಿಶ್ವದ ಅತ್ಯಂತ ಸುಂದರ ಮಹಿಳೆಯರ ಲಿಸ್ಟ್
ಅನ್ಯ ಟೇಲರ್ ಜಾಯ್ (ಶೇ.99.66 ರೇಟಿಂಗ್ಸ್)
ಝೆಂಡೆಯಾ( ಶೇ.94.37 ರೇಟಿಂಗ್ಸ್)
ಬೆಲ್ಲಾ ಹದೀದ್(ಶೇ.94.35  ರೇಟಿಂಗ್ಸ್)
ಮಾರ್ಗೋಟ್ ರೋಬಿ( ಶೇ.93.43 ರೇಟಿಂಗ್ಸ್)
ಸಾಂಗ್ ಹೈ ಕ್ಯೋ(ಶೇ. 92.67 ರೇಟಿಂಗ್ಸ್)
ಬೆಯಾನ್ಸ್(ಶೇ. 92.04 ರೇಟಿಂಗ್ಸ್
ಟೇಲರ್ ಸ್ವಿಫ್ಟ್( ಶೇ. 91.64 ರೇಟಿಂಗ್ಸ್)
ಝಾಂಗ್ ಝಿಯಿ(ಶೇ. 91.51 ರೇಟಿಂಗ್ಸ್)
ಆಲಿಯಾ ಭಟ್ (ಶೇ. 91.14 ರೇಟಿಂಗ್ಸ್
ನಾಜಾನಿನ್ ಬೊನಿಯಾಡಿ( ಶೇ. 90.89 ರೇಟಿಂಗ್ಸ್)

ಅಮೆರಿಕದ ಖ್ಯಾತ ನಟಿ ಜೆಂಡೆಯಾ ಮ್ಯಾರಿ ಸ್ಟಾರ್ಮರ್ 94.37 ಶೇಕಡಾ ರೇಟಿಂಗ್ಸ್ ಮೂಲಕ 2ನೇ ಸ್ಥಾನದಲ್ಲಿದ್ದಾರೆ. ಇತ್ತೀಚೆಗೆ ಗೋಲ್ಡನ್ ಗ್ಲೋಬ್ ಹಾಗೂ ಪ್ರೈಮ್‌ಟೈಮ್ ಎಮ್ಮಿ ಅವಾರ್ಡ್ ಪಡೆದ ಖ್ಯಾತಿಗೆ ಝೆಂಡೆಯಾ ಪಾತ್ರರಾಗಿದ್ದಾರೆ. ಅಮೆರಿಕದ ಖ್ಯಾತ ಸಿಂಗರ್, ಸದಾ ಸುದ್ದಿಯಲ್ಲಿರುವ ಟೇಲರ್ ಸ್ವಿಫ್ಟ್ 7ನೇ ಸ್ಥಾನದಲ್ಲಿದ್ದಾರೆ. 

ಸೌಂದರ್ಯವೇ ಮುಳುವಾಯ್ತುಈ ಹೆಣ್ಣಿಗೆ, ಪ್ರಪೋಸ್ ಮಾಡ್ತಿಲ್ಲ ಒಬ್ಬೇ ಒಬ್ಬ ಹುಡುಗ!

ಗೋಲ್ಡನ್ ರೇಶಿಯೋ 
ಸೌಂದರ್ಯವನ್ನು ಅಲೆಯಲು ಗ್ರೀಕ್‌ನಲ್ಲಿ ಕಂಡುಕೊಂಡು ಪುರಾತನ ವಿಧಾನವೇ ಗೋಲ್ಡನ್ ರೇಶಿಯೋ. ಸೌಂದರ್ಯ, ಎತ್ತರ, ಮಾತು, ದೇಹ ಸೇರಿದಂತೆ ಹಲವು ಅಂಶಗಲನ್ನು ಪರಿಣಿಸಿ ಹೆಣ್ಣಿನ ಸೌಂದರ್ಯವನ್ನು ಅಲೆಯಲಾಗುತ್ತದೆ. ಇದೇ ಪಾರ್ಮುಲಾವನ್ನು ಲಿಯಾನಾರ್ಡೋ ಡಾ ವಿನ್ಸಿ ಚನ್ನ ಆರ್ಟ್ ವರ್ಕ್‌ಗೆ ಇದೇ ಲೆಕ್ಕಾಚಾರ ಅನುಸರಿಸುತ್ತಿದ್ದರು.

 

click me!