ಸಾಮಾಜಿಕ ಜಾಲತಾಣ ಅನೇಕ ರೀತಿಯಲ್ಲಿ ಜನರ ಸಹಾಯಕ್ಕೆ ಬರ್ತಿದ್ದೆ. ಹುಡುಗಿಯೊಬ್ಬಳು ಟಿಕ್ ಟಾಕ್ ಮೂಲಕ ತನ್ನ ಆರ್ಥಿಕ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾಳೆ. ಒಂದೇ ಒಂದು ವಿಡಿಯೋ ಆಕೆ ದಿಕ್ಕು ಬದಲಿಸಿದೆ.
ಮನೆ ಬಾಡಿಗೆ ಕಟ್ಟಲು ಹಣವಿಲ್ಲ ಎಂದಾಗ ನಾವು ಆಪ್ತರ ಮುಂದೆ ಕೈ ಚಾಚುತ್ತೇವೆ. ಯಾರೂ ಹಣ ನೀಡದ ಸಮಯದಲ್ಲಿ ನಾಲ್ಕು ಕೋಣೆ ಮಧ್ಯೆ ಕುಳಿತು ಕಣ್ಣೀರು ಹಾಕ್ತೇವೆ. ಆದ್ರೆ ಈ ಹುಡುಗಿ ಮನೆ ಬಾಡಿಗೆಗೆ ಹಣವಿಲ್ಲ ಎಂಬ ನೋವನ್ನು ನೆಟ್ಟಿಗರ ಮುಂದೆ ಹಂಚಿಕೊಂಡಿದ್ದಾಳೆ. ಕಣ್ಣೀರಿನ ವಿಡಿಯೋ ಪೋಸ್ಟ್ ಮಾಡಿ ರಾತ್ರೋರಾತ್ರಿ ತನ್ನ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾಳೆ. ಒಂದೇ ಒಂದು ವಿಡಿಯೋ ಆಕೆಯನ್ನು ಪ್ರಸಿದ್ಧಿಗೆ ತಂದಿದೆ. ಜೊತೆಗೆ ಮನೆ ಬಾಡಿಗೆ ಕಟ್ಟಲು ಹಣ ಸಿಕ್ಕಿದೆ.
ಆಕೆ ಅಮೆರಿಕದ (America) ನಿವಾಸಿ. ಹೆಸರು ಕ್ಲೌಡಿಯಾ ಬ್ರೂಕ್ಸ್. ಆಕೆಗೆ ಹಣದ ಸಮಸ್ಯೆ ಕಾಡಿತ್ತು. ಈ ತಿಂಗಳು ಬಾಡಿಗೆ (Rent) ಕಟ್ಟಲು ಹಣವಿರಲಿಲ್ಲ. ಏನು ಮಾಡ್ಬೇಕು ಎಂಬುದು ಆಕೆಗೆ ಗೊತ್ತಾಗಲಿಲ್ಲ. ಯಾರೂ ಆಕೆಯ ಸಹಾಯಕ್ಕೆ ಬರದ ಕಾರಣ, ಕ್ಲೌಡಿಯಾ ಬ್ರೂಕ್ಸ್ ಸಾಮಾಜಿಕ ಜಾಲತಾಣ ಟಿಕ್ ಟಾಕ್ (Tiktok) ಮೊರೆ ಹೋಗಿದ್ದಾಳೆ. ಆದ್ರೆ ಅಲ್ಲೂ ಆಕೆಗೆ ಸೋಲಾಗಿದೆ.
undefined
ಟೀ ಮಾರ್ತಿದ್ದ ವ್ಯಕ್ತಿಯ ಪುತ್ರಿ ಸಿಎ ಪಾಸ್: ಮಗಳ ಸಾಧನೆಗೆ ಭಾವುಕನಾದ ಅಪ್ಪ
ಟಿಕ್ ಟಾಕ್ ಕ್ರಿಯೇಟರ್ ಫಂಡ್‌ನ ಸೇವೆಯೊಂದನ್ನು ಶುರು ಮಾಡಿದೆ. ಅದ್ರಲ್ಲಿ ಕೆಲವೊಂದು ನಿಯಮವಿದೆ. ಈ ಯೋಜನೆಯಡಿ ನಿಮ್ಮ ಟಿಕ್ ಟಾಕ್ ಖಾತೆಯಲ್ಲಿ 10 ಸಾವಿರ ಫಾಲೋವರ್ಸ್ ಇರಬೇಕು. ನಿಮ್ಮ ಒಂದು ವಿಡಿಯೋ 30 ದಿನಗಳಲ್ಲಿ 1 ಲಕ್ಷ ವ್ಯೂವ್ಸ್ ಪಡೆದಿರಬೇಕು. ಈ ಷರತ್ತನ್ನು ನೀವು ಪೂರೈಸಿದರೆ ಟಿಕ್ ಟಾಕ್ ಕ್ರಿಯೇಟರ್ ಫಂಡ್ ಅಡಿ ನಿಮಗೆ ಹಣ ಸಿಗುತ್ತದೆ.
ಕ್ಲೌಡಿಯಾ ಬ್ರೂಕ್ಸ್ ಗೆ ಈ ಫಂಡ್ ಹಣ ಸಿಗಲು ಸಾಧ್ಯವಿರಲಿಲ್ಲ. ಕಾರಣ ಆಕೆ ಬಳಿ ಬರೀ 25 ಫಾಲೋವರ್ಸ್ ಇದ್ದರು. ಇದ್ರಿಂದ ಮತ್ತಷ್ಟು ನೋವನುಭವಿಸಿದ ಕ್ಲೌಡಿಯಾ ಬ್ರೂಕ್ಸ್, ಮನೆ ಕಟ್ಟಲು ಹಣವಿಲ್ಲ ಎಂಬ ನೋವನ್ನು ಅಳ್ತಾ ವಿಡಿಯೋ ಮಾಡಿ ಅದನ್ನು ಟಿಕ್ ಟಾಕ್ ಗೆ ಪೋಸ್ಟ್ ಮಾಡಿದ್ದಾಳೆ. ನನಗೆ ಏನು ಮಾಡ್ಬೇಕು ತಿಳಿಯುತ್ತಿಲ್ಲ. ಬಾಡಿಗೆ ಕಟ್ಟಲು ಹಣವಿಲ್ಲ. ಟಿಕ್ ಟಾಕ್ ಕ್ರಿಯೇಟರ್ಸ್ ನಿಧಿಯಿಂದ ಹಣಪಡೆಯೋಣ ಅಂದ್ರೆ ಅಷ್ಟೊಂದು ಫಾಲೋವರ್ಸ್ ಇಲ್ಲ ಎಂದು ವಿಡಿಯೋದಲ್ಲಿ ಕ್ಲೌಡಿಯಾ ಬ್ರೂಕ್ಸ್ ಹೇಳಿದ್ದಾಳೆ.
ಕ್ಲೌಡಿಯಾ ಬ್ರೂಕ್ಸ್ ಈ ವಿಡಿಯೋ ಪೋಸ್ಟ್ ಮಾಡಿದ್ದೇ ತಡ, ಈ ವಿಡಿಯೋ ಆಕೆ ನಿರೀಕ್ಷೆ ಮೀರಿ ಪ್ರಸಿದ್ಧಿ ಪಡೆದಿದೆ. 25 ಇದ್ದ ಫಾಲೋವರ್ಸ್ ಸಂಖ್ಯೆ 34 ಸಾವಿರಕ್ಕೆ ಏರಿದೆ. ಕ್ಲೌಡಿಯಾ ಬ್ರೂಕ್ಸ್ ಅಳುತ್ತಿರುವ ಇದೊಂದು ವಿಡಿಯೋ 41 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ಈ ವೈರಲ್ ವಿಡಿಯೋ ಕ್ಲೌಡಿಯಾ ಬ್ರೂಕ್ಸ್ ಗೆ ನೆಮ್ಮದಿ ನೀಡಿದೆ. ಯಾಕೆಂದ್ರೆ ಆಕೆ ಟಿಕ್ ಟಾಕ್ ಕ್ರಿಯೇಟರ್ಸ್ ಫಂಡ್ ಪಡೆಯಲು ಅರ್ಹತೆ ಪಡೆದಿದ್ದಾಳೆ. ಯಾವುದೇ ಟಿಕ್ ಟಾಕ್ ಬಳಕೆದಾರರು ಆಕೆಗೆ ಹಣ ನೀಡಿಲ್ಲ. ಆದ್ರೆ ಆಕೆ ಫಾಲೋವರ್ಸ್ ಸಂಖ್ಯೆ ಹೆಚ್ಚು ಮಾಡಿದ್ದು ಹಾಗೂ ಹೆಚ್ಚು ವೀಕ್ಷಣೆ ಪಡೆದ ಕಾರಣ, ಟಿಕ್ ಟಾಕ್ ಅದಕ್ಕೆ ಹಣ ನೀಡ್ತಿದೆ.
ಮುಖೇಶ್ ಅಂಬಾನಿಯ ಇಬ್ಬರೂ ಸೊಸೆಯಂದಿರ ರಹಸ್ಯ ಈಗ ಬಟಾಬಯಲು!
ಕ್ರಿಯೇಟರ್ ಫಂಡ್‌ಗಳು ಪ್ರತಿ 1000 ವೀಕ್ಷಣೆಗಳಿಗೆ 4 ಸೆಂಟ್ಸ್ ವರೆಗೆ ಹಣ ನೀಡುತ್ತದೆ. 1 ಮಿಲಿಯನ್ ವೀಕ್ಷಣೆಗಳಿಗೆ 40 ಡಾಲರ್ ಅಂದ್ರೆ 3300 ರೂಪಾಯಿವರೆಗೆ ಸಿಗುತ್ತದೆ. ಕ್ಲೌಡಿಯಾ ಬ್ರೂಕ್ಸ್‌ಗೆ ಈ ಅಳುವಿನ ವಿಡಿಯೋ ಅದೃಷ್ಟ ತಂದಿದೆ. ಮನೆ ಬಾಡಿಗೆ ಕಟ್ಟಲು ನೆರವಾಗಿದೆ. ಕ್ಲೌಡಿಯಾ ಬ್ರೂಕ್ಸ್ ನೋಡಿದ ಜನರು, ತಾವೂ ಒಂದಲ್ಲ ಒಂದು ದಿನ ಫಾಲೋವರ್ಸ್ ಸಂಖ್ಯೆ ಹೆಚ್ಚಿಸಿಕೊಳ್ಳಬೇಕು. ರಾತ್ರೋರಾತ್ರಿ ಪ್ರಸಿದ್ಧಿಗೆ ಬರಬೇಕು ಎನ್ನುತ್ತಿದ್ದಾರೆ.