ಸೈನಿಕರ ಜೊತೆ ಮಲಗಿದ್ರೆ ಮಾತ್ರ ಆಹಾರ, ಸೆಕ್ಸಿಗಾಗಿ ಸರತಿ ಸಾಲಿನಲ್ಲಿ ನಿಲ್ಬೇಕು ಮಹಿಳೆಯರು!

By Roopa Hegde  |  First Published Jul 22, 2024, 6:05 PM IST

ಸೂಡಾನ್ ನಲ್ಲಿ ಮಹಿಳೆಯರನ್ನು ಕಿತ್ತು ತಿನ್ನಲಾಗ್ತಿದೆ. ಸೈನಿಕರ ಕ್ರೌರ್ಯ ಮುಗಿಲುಮುಟ್ಟಿದೆ. ರಣಹದ್ದಿನಂತೆ ಮಹಿಳೆಯರ ಮೇಲೆ ಸೈನಿಕರು ಎರಗುತ್ತಿದ್ದಾರೆ. ಸೆಕ್ಸ್, ಸೈನಿಕರ ದೇಹ ತಣಿಸಿದ್ರೆ ಮಹಿಳೆಯರ ಹೊಟ್ಟೆ ತುಂಬಿಸ್ತಿದೆ.  


ಅಂತರ್ಯುದ್ಧ ಪೀಡಿತ ಸೂಡಾನ್‌ನಲ್ಲಿ ಹೃದಯ ವಿದ್ರಾವಕ ಘಟನೆಗಳು ನಡೆಯುತ್ತಿವೆ. ಸೂಡಾನ್‌ನ ಓಮ್‌ದುರ್‌ಮನ್‌ ನಗರದಲ್ಲಿ ಮಹಿಳೆಯರು ಬದುಕಲು ಹೆಣಗಾಡುತ್ತಿದ್ದಾರೆ. ಹೊಟ್ಟೆ ತುಂಬಿಸಿಕೊಳ್ಳಲು ಸೈನಿಕರ ಜೊತೆ ಮಲಗುವ ಸ್ಥಿತಿ ನಿರ್ಮಾಣವಾಗಿದೆ. ಹೊಟ್ಟೆ ಹಸಿವು, ಬಾಯಾರಿಕೆಯಾದ್ರೂ ಸೈನಿಕರ ಜೊತೆ ಲೈಂಗಿಕ ಕ್ರಿಯೆ ನಡೆಸಬೇಕು. ಅದಾದ್ಮೇಲೆ ಮಹಿಳೆಯರಿಗೆ ಆಹಾರ, ನೀರು ಸೇರಿದಂತೆ ಅಗತ್ಯ ವಸ್ತು ಸಿಗ್ತಿದೆ.    

ಸೂಡಾನ್ (Sudan) ಸೈನಿಕರು ಸಂಭೋಗದ ನಂತರವೇ ಆಹಾರ (Food) ಮತ್ತು ನೀರನ್ನು ನೀಡುವುದಾಗಿ ತಾಕೀತು ಮಾಡ್ತಿದ್ದಾರೆ ಎಂದು ಅಲ್ಲಿನ ಮಹಿಳೆಯರು ಆರೋಪಿಸಿದ್ದಾರೆ. ಊಟ, ನೀರು ಬಯಸುವ ಮಹಿಳೆಯರು ಮೊದಲು ಸರತಿ ಸಾಲಿನಲ್ಲಿ ನಿಲ್ಲಬೇಕು. ನಂತ್ರ ಸೈನಿಕರ ಜೊತೆ ಶಾರೀರಿಕ ಸಂಬಂಧ ಬೆಳೆಸಬೇಕು. ಸೂಡಾನ್ ಅಂತರ್ಯುದ್ಧ (Civilwar) ಮಹಿಳೆಯರನ್ನು ಈ ದುಸ್ಥಿತಿಗೆ ತಳ್ಳಿದೆ.  ಅಲ್ಲಿನ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ಜನರಿಗೆ ಹೊತ್ತಿನ ಊಟ ಸಿಗ್ತಿಲ್ಲ. 

Latest Videos

undefined

ವಡಾಪಾವ್ ಬಳಿಕ ಇದೀಗ ಬೀದಿ ಬದಿಯಲ್ಲಿ ಪರೋಟ ಗರ್ಲ್ ಪ್ರತ್ಯಕ್ಷ, ಜನವೋ ಜನ!

ಒಮ್‌ದುರ್‌ಮನ್‌ನಲ್ಲಿ ಅಂತರ್ಯುದ್ಧ ಶುರುವಾಗ್ತಿದ್ದಂತೆ ಅನೇಕರು ಪಲಾಯನ ಮಾಡಿದ್ದಾರೆ. ಆದ್ರೆ ಇದು ಸಾಧ್ಯವಾಗದ ಎರಡು ಡಜನ್‌ಗಿಂತಲೂ ಹೆಚ್ಚು ಮಹಿಳೆಯರು ಸೈನಿಕರ ಕ್ರೌರ್ಯಕ್ಕೆ ಬಲಿಯಾಗ್ತಿದ್ದಾರೆ. ನಿತ್ಯ ಸತ್ತು ಬದುಕುತ್ತಿದ್ದಾರೆ. ಜೀವ ಉಳಿಸಿಕೊಳ್ಳಲು ಅವರು ಸೈನಿಕರಿಗೆ ಶರಣಾಗಿದ್ದಾರೆ.  

ಸೈನಿಕರು ತಮ್ಮ ಲೈಂಗಿಕ (Sex) ಬಯಕೆ ತೀರಿಸಿಕೊಳ್ಳಲು ಮಹಿಳೆಯರನ್ನ ಸಾಲಿನಲ್ಲಿ ನಿಲ್ಲಿಸ್ತಾರೆ. ದೇಹ ತಣಿದ ಮೇಲೆ ಸೈನಿಕರು ಸ್ವಲ್ಪ ಪ್ರಮಾಣದ ಆಹಾರವನ್ನು ಮಹಿಳೆಯರಿಗೆ ನೀಡ್ತಿದ್ದಾರೆ.  ಫ್ಯಾಕ್ಟರಿ ಏರಿಯಾಗಳಲ್ಲೇ ಇಂಥ ಘಟನೆ ಹೆಚ್ಚಾಗಿ ನಡೆಯುತ್ತಿದೆ. ಫ್ಯಾಕ್ಟರಿ ಮೇಲೆ ದಾಳಿ ನಡೆಸಿದ ಸೈನಿಕರು ಅಪಾರ ಪ್ರಮಾಣದ ಆಹಾರ ಪದಾರ್ಥಗಳನ್ನು ಸಂಗ್ರಹಿಸಿಟ್ಟಿದ್ದಾರೆ ಎಂದು ಮಾಧ್ಯಮಗಳಿಗೆ ಮಹಿಳೆಯರು ಹೇಳಿದ್ದಾರೆ. 

ವೃದ್ಧ ಪೋಷಕರು ಮತ್ತು ಮಕ್ಕಳನ್ನು ಪೋಷಿಸಲು ಆಹಾರ ಅನಿವಾರ್ಯ. ಸೈನಿಕರೊಂದಿಗೆ ಲೈಂಗಿಕ ಕ್ರಿಯೆಯನ್ನು ಹೊರತುಪಡಿಸಿ ಬೇರೆ ದಾರಿಯಿಲ್ಲ ಎಂದು ಅನೇಕ ಮಹಿಳೆಯರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. 

ಕಳೆದ ವರ್ಷ ಏಪ್ರಿಲ್ 15 ರಂದು ರಾಷ್ಟ್ರವ್ಯಾಪಿ ಅಂತರ್ಯುದ್ಧ ಶುರುವಾಗಿದೆ. ಸುಡಾನ್ ಸಶಸ್ತ್ರ ಪಡೆಗಳು (SAF) ಮತ್ತು ಅರೆಸೇನಾ ಕ್ಷಿಪ್ರ ಬೆಂಬಲ ಪಡೆಗಳ (RSF) ನಡುವೆ ಯುದ್ಧ ನಡೆಯುತ್ತಿದೆ. ಭೌಗೋಳಿಕ ದೃಷ್ಟಿಕೋನದಿಂದ ಸುಡಾನ್ ಬಹಳ ಮುಖ್ಯ. ಸುಡಾನ್,  ಅರಬ್ ದೇಶಗಳು ಮತ್ತು ಆಫ್ರಿಕನ್ ದೇಶಗಳ ನಡುವೆ ಇದೆ. ಇದು ಇಸ್ಲಾಮಿಕ್ ದೇಶವಾಗಿದ್ದು, ಜನಸಂಖ್ಯೆ ಶೇಕಡಾ 90 ರಷ್ಟು ಮುಸ್ಲಿಮರಿದ್ದಾರೆ. ಒಂದು ಕಡೆ ಆರ್ಮಿ ಜನರಲ್ ಅಬ್ದೆಲ್ ಫತ್ತಾಹ್ ಅಲ್ ಬುರ್ಹಾನ್, ಇನ್ನೊಂದು ಬದಿಯಲ್ಲಿ ದೇಶದ ಎರಡನೇ ಶ್ರೇಯಾಂಕದ ನಾಯಕ ಮತ್ತು ಆರ್‌ಎಸ್‌ಎಫ್‌ನ ನಾಯಕ, ಜನರಲ್ ಹಮ್ದಾನ್ ದಗಾಲೊ ಯುದ್ಧವನ್ನು ಮುನ್ನಡೆಸುತ್ತಿದ್ದಾರೆ.  

ಅಬ್ದೆಲ್ ಫತ್ತಾಹ್ ಅಲ್ ಬುರ್ಹಾನ್ ಮತ್ತು ಜನರಲ್ ಹಮ್ದಾನ್ ದಗಾಲೊ ಇಬ್ಬರೂ ಒಂದು ಕಾಲದಲ್ಲಿ ಸಹೋದ್ಯೋಗಿಗಳಾಗಿದ್ದರು.   2021 ರಲ್ಲಿ ದಂಗೆಯನ್ನು ಇವರಿಬ್ಬರು ಮುನ್ನಡೆಸಿದ್ದರು. ಈಗ ಇಬ್ಬರ ನಡುವೆ ಅಧಿಕಾರಕ್ಕಾಗಿ ಹೋರಾಟ ಭುಗಿಲೆದ್ದಿದೆ. 

ಸ್ತನ ಕಸಿ ಶಸ್ತ್ರಚಿಕಿತ್ಸೆ ವೀಡಿಯೋ ವೈರಲ್: ವೈದ್ಯರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಮಹಿಳೆ

ಯುದ್ಧದಲ್ಲಿ ಸೈನಿಕರ ಕ್ರೌರ್ಯ ಹೆಚ್ಚಾಗಿದೆ. ಮಹಿಳೆಯರ ಮೇಲೆ ನಿರಂತರ ಅತ್ಯಾಚಾರ ನಡೆಯುತ್ತಿದೆ. ಸೈನಿಕರು ಆಹಾರ ಮತ್ತು ನೀರಿನ ವಿಚಾರ ಮುಂದಿಟ್ಟುಕೊಂಡು ಮಹಿಳೆಯರನ್ನು ಹಿಂಸಿಸಲು ಶುರು ಮಾಡಿದ್ದಾರೆ. ಸೂಡಾನ್ ಅಂತರ್ ಯುದ್ಧದಲ್ಲಿ  ಇಲ್ಲಿಯವರೆಗೆ, 15,000 ಕ್ಕೂ ಹೆಚ್ಚು ಜನರು ಅಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. 10,000 ಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ. ಅನೇಕರು ಸೂಡಾನ್ ಬಿಟ್ಟಿದ್ದಾರೆ. ಇಲ್ಲಿನ ಯುದ್ಧ ಜನರನ್ನು ಹೀನಾಯ ಸ್ಥಿತಿಗೆ ತಳ್ಳಿದೆ. ಜನರು ಆಹಾರ, ಇಂಧನ, ನೀರು, ಔಷಧ ಮತ್ತು ವಿದ್ಯುತ್‌ನ ತೀವ್ರ ಕೊರತೆಯನ್ನು ಎದುರಿಸುತ್ತಿದ್ದಾರೆ.  

click me!