Viral Video: ಬೈಕ್‌ನಲ್ಲಿ ಯುವತಿಯ ಸ್ಟಂಟ್‌, ನೋಡ್ತಿದ್ರೆ ಎದೆ ಝಲ್ ಅನ್ನುತ್ತೆ

Published : Jul 11, 2023, 12:19 PM IST
Viral Video: ಬೈಕ್‌ನಲ್ಲಿ ಯುವತಿಯ ಸ್ಟಂಟ್‌, ನೋಡ್ತಿದ್ರೆ ಎದೆ ಝಲ್ ಅನ್ನುತ್ತೆ

ಸಾರಾಂಶ

ಬೈಕ್‌ ಸ್ಟಂಟ್‌ಗಳು ನೋಡಲು ಅದ್ಭುತವಾಗಿರುತ್ತವೆ ಮತ್ತು ರೋಮಾಂಚನಕಾರಿಯಾಗಿವೆ. ಆದರೆ ಸಾಮಾನ್ಯವಾಗಿ ಹುಡುಗರು ಬೈಕ್ ಸ್ಟಂಟ್ ಮಾಡೋದನ್ನು ನೀವು ನೋಡಿರಬಹುದು. ಆದ್ರೆ ಇಲ್ಲೊಬ್ಬ ಲೇಡಿ ಮಾಡಿರೋ ಸ್ಟಂಟ್ ನೋಡಿದ್ರೆ ಎದೆ ಝಲ್ ಅನ್ನುತ್ತೆ..

ಹೆಣ್ಣು ಅಬಲೆಯಲ್ಲ, ಸಬಲೆ ಎಂದು ಮೊದಲಿನಿಂದಲೇ ಹೇಳಿಕೊಂಡು ಬರಲಾಗ್ತಿದೆ. ಇದನ್ನು ಅದೆಷ್ಟೋ ಮಹಿಳೆಯರು ಸಾಬೀತುಪಡಿಸಿದ್ದಾರೆ ಸಹ. ಹಿಲ್ ಕ್ಲೈಬಿಂಗ್‌, ಹೆವಿ ಮೋಟಾರ್ ವೆಹಿಕಲ್ ಡ್ರೈವಿಂಗ್ ಮೊದಲಾದವುಗಳನ್ನು ಮಾಡುವ ಮೂಲಕ ಮಹಿಳೆಯರು ಸಹ ಎಂಥಾ ಅಡ್ವೆಂಚರ್‌ನ್ನು ಮಾಡಬಲ್ಲರು ಎಂಬುದನ್ನು ಸಾಬೀತುಪಡಿಸಿದ್ದಾರೆ. ಮೊದಲೆಲ್ಲಾ ಹೆಣ್ಣು ಮಕ್ಕಳು ಗಾಡಿ ಓಡಿಸೋಕೆ ಭಯಪಡುತ್ತಿದ್ದರು. ಆದರೆ ಈಗ ಯಾವುದೇ ಅಳುಕಿಲ್ಲದೆ ಬೈಕ್‌, ಕಾರುಗಳನ್ನು ಓಡಿಸುತ್ತಾರೆ. ಹಾಗೆಯೇ ಇಲ್ಲೊಬ್ಬ ಯುವತಿಯ ವಿಚಾರ ಆಕೆಯ ಸಾಹಸೀ ಚಟುವಟಿಕೆಗಳಿಂದ ವೈರಲ್ ಆಗ್ತಿದೆ. 

ಬೈಕ್ ಸ್ಟಂಟ್‌ಗಳು ರೋಮಾಂಚನಕಾರಿ ಮತ್ತು ಭಯಾನಕವಾಗಿವೆ. ನುರಿತ ವೃತ್ತಿಪರರು ಡೇರ್-ಡೆವಿಲ್ ಸ್ಟಂಟ್‌ಗಳನ್ನು ಪ್ರದರ್ಶಿಸುತ್ತಾರೆ ಅದು ಎಲ್ಲರನ್ನು ಬೆರಗುಗೊಳಿಸುತ್ತದೆ. ಸಹಜವಾಗಿ, ಆತ್ಮವಿಶ್ವಾಸ, ಸಮರ್ಪಣೆ ಮತ್ತು ಅಭ್ಯಾಸವು ಧೈರ್ಯಶಾಲಿ ಸಾಹಸಗಳನ್ನು (Adventure) ಸಾಧ್ಯವಾಗಿಸುತ್ತದೆ. ಮತ್ತು, ತಂತ್ರಗಳು ಮತ್ತು ಪರಿಪೂರ್ಣ ಸಮಯದೊಂದಿಗೆ, ಸಾಹಸ ಪ್ರದರ್ಶನ ಮಾಡುತ್ತಾರೆ. ಆದರೆ ಕೆಲವೊಮ್ಮೆ ಕೆಲ ರೈಡರ್ಸ್‌ ಸಾಮಾನ್ಯ ರಸ್ತೆಗಳಲ್ಲಿ ವೀಲಿಂಗ್, ಸ್ಟಂಟ್ ಮಾಡುತ್ತಾ ಇತರ ಸವಾರರಿಗೂ ತೊಂದರೆ ಕೊಡುವುದೂ ಇದೆ. ಇಂಥವರಿಗೆ ಪೊಲೀಸರು ಎಚ್ಚರಿಕೆಯನ್ನು (Warning) ಸಹ ನೀಡುತ್ತಾರೆ. 

ಸೀರೆ ಉಟ್ಟುಕೊಂಡೇ ಸ್ಟಂಟ್, ರೋಮಾಂಚನಕಾರಿ ಬ್ಯಾಕ್‌ಫ್ಲಿಪ್ ಮಾಡಿದ ಬ್ಯೂಟಿ!

ನಡು ರಸ್ತೆಯಲ್ಲೇ ಯುವತಿಯ ರೋಮಾಂಚನಕಾರಿ ಬೈಕ್ ಸ್ಟಂಟ್‌
ಸಾಮಾನ್ಯವಾಗಿ ಪುರುಷರು ಈ ರೀತಿ ಬೈಕ್‌ನಲ್ಲಿ ಸಂಚರಿಸುವಾಗ ಸ್ಟಂಟ್ ಮಾಡೋದನ್ನು ನೀವು ನೋಡಿರಬಹುದು. ಮಹಿಳೆಯರೂ ಸಾಹಸ ಪ್ರದರ್ಶಿಸಿದರೂ ಪುರುಷರಿಗೆ (Men) ಹೋಲಿಸಿದರೆ ಈ ಸಂಖ್ಯೆ ತೀರಾ ಕಡಿಮೆ. ಆದರೆ, ರಸ್ತೆಯಲ್ಲಿ ಬೈಕ್ ಸ್ಟಂಟ್ ಮಾಡುವ ಹುಡುಗಿಯನ್ನು ನೀವು ನೋಡಿದ್ದೀರಾ?ಇತ್ತೀಚೆಗೆ, ಸಾಮಾಜಿಕ ಮಾಧ್ಯಮದಲ್ಲಿ (Social media) ಇಂಥಾ ವಿಡಿಯೋವೊಂದು ವೈರಲ್ ಆಗಿದೆ.

ಸಾಮಾನ್ಯವಾಗಿ ಯುವತಿಯರು ಸ್ಕೂಟಿ, ಕಾರ್ ಒಡಿಸೋದು ಅಂದ್ರೆ ಸಾಕು ಎಲ್ಲರೂ ಲೇವಡಿ ಮಾಡೋದನ್ನು ನೋಡಬಹುದು. ಕಾಲಲ್ಲೇ ಬ್ರೇಕ್ ಹಾಕ್ತಾರೆ, ಬೇಕಾಬಿಟ್ಟಿ ಓಡಿಸ್ತಾರೆ ಅಂತೆಲ್ಲಾ ಮಹಿಳೆಯರನ್ನು ದೂರುತ್ತಾರೆ. ಆದ್ರೆ ಈ ವಿಡಿಯೋದಲ್ಲಿ ಯುವತಿಯೊಬ್ಬಳು ಸಖತ್ತಾಗಿ ಬೈಕ್ ಸ್ಟಂಟ್ ಮಾಡಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿದೆ.  ವೈರಲ್ ಆಗಿರುವ ವಿಡಿಯೋದಲ್ಲಿ ಯುವತಿಯೊಬ್ಬಳು ಬೈಕ್ ಓಡಿಸುತ್ತಿರುವುದನ್ನು ಕಾಣಬಹುದು. ಇದ್ದಕ್ಕಿದ್ದಂತೆ, ಆಕೆ ಬೈಕು ಮೇಲೆ ನಿಂತು ಫ್ರಂಟ್ ವೀಲ್ ಎತ್ತುತ್ತಾಳೆ. ತನ್ನ ಸಾಹಸವನ್ನು ಮುಂದುವರೆಸುತ್ತಾ ಓಡುತ್ತಿರುವ ಬೈಕಿನಲ್ಲಿ ಜಿಗಿಯುತ್ತಾಳೆ. ಹಸ್ನಾ ಜರೂರಿ ಹೈ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.

ನಡುರಸ್ತೆಯಲ್ಲಿ ಸ್ಕೂಟಿ ಮೇಲೆ ಬ್ಯೂಟಿಯ ಯೋಗಾಯೋಗ: ವಿಡಿಯೋ ವೈರಲ್

ಹಲವಾರು ಬಳಕೆದಾರರು ಅಪಾಯಕಾರಿ (Dangerous) ಸಾಹಸಗಳನ್ನು ಪ್ರದರ್ಶಿಸಿದ್ದಕ್ಕಾಗಿ ಹುಡುಗಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ, ಇತರರು ಆಕೆಯ ಧೈರ್ಯ ಮತ್ತು ಕೌಶಲ್ಯಗಳನ್ನು ಶ್ಲಾಘಿಸಿದ್ದಾರೆ. ಇದೇ ವೇಳೆ ಇನ್ನು ಕೆಲವರು ಬೈಕ್ ಸವಾರಿಯ ತಮ್ಮ ವೈಯಕ್ತಿಕ ಅನುಭವವನ್ನೂ ಹಂಚಿಕೊಂಡಿದ್ದಾರೆ. ಅದೇನೆ ಇರ್ಲಿ, ನೋಡೋಕೆ ಸೂಪರ್ ಅನಿಸಿದ್ರೂ ಇಂಥಾ ಸ್ಟಂಟ್ ತುಂಬಾ ಅಪಾಯಕಾರಿಯೂ ಹೌದು. ವೃತ್ತಿಪರ ಮತ್ತು ಸುಶಿಕ್ಷಿತ ಜನರು ಮಾತ್ರ ಇಂತಹ ಅಪಾಯಕಾರಿ ಸಾಹಸಗಳನ್ನು ಮಾಡಬಹುದು. ಹೀಗಾಗಿ ನೀವು ಇಂಥಾ ಅಪಾಯಕಾರಿ ಸಾಹಸಗಳನ್ನು ಖಂಡಿತವಾಗಿಯೂ ಪ್ರಯತ್ನಿಸಬೇಡಿ.

ಬೈಕಲ್ಲೇ ಬೃಹದಾಕಾರದ ಕಲ್ಲಿನ ಬೆಟ್ಟವೇರಿ ಬೈಕರ್ ಸಾಹಸ : ವಿಡಿಯೋ ವೈರಲ್

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸೋನಿಯಾ ಗಾಂಧಿ ಮೊದಲ ಬಾರಿಗೆ ಇಂದಿರಾ ಗಾಂಧಿಯನ್ನು ಭೇಟಿಯಾದಾಗ ಏನಾಗಿತ್ತು?
ಮಹಿಳಾ ನೌಕರರಿಗೆ ಬ್ಯಾಡ್ ನ್ಯೂಸ್: ಮುಟ್ಟಿನ ರಜೆಗೆ ಹೈಕೋರ್ಟ್ ತಡೆ: ಸರ್ಕಾರದ ಆದೇಶಕ್ಕೆ ಹಿನ್ನಡೆ?