ಜೀವನದಲ್ಲಿ ಸಾಧಿಸುವ ಮನಸ್ಸಿದ್ದರೆ ಸಾಕು ಏನು ಬೇಕಾದರೂ ಸಾಧಿಸಬಹುದು ಅನ್ನೋದನ್ನು ಅದೆಷ್ಟೋ ಮಂದಿ ಸಾಬೀತುಪಡಿಸಿದ್ದಾರೆ. ಹಾಗೆಯೇ ಇಲ್ಲೊಬ್ಬ ಮಹಿಳೆ ತನ್ನ ಪುಟ್ಟ ಕಂದಮ್ಮನನ್ನು ಹಿಡಿದುಕೊಂಡು ಝೊಮೆಟೋದಲ್ಲಿ ಫುಡ್ ಡೆಲಿವರಿ ಮಾಡ್ತಿದ್ದು ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಫುಡ್ ಡೆಲಿವರಿ ಆಪ್‌ಗಳು ಅದೆಷ್ಟೋ ಮಂದಿಗೆ ಬದುಕು ಕಟ್ಟಿಕೊಟ್ಟಿವೆ. ಕಾಲೇಜಿಗೆ ಹೋಗುವವರು, ತಿಂಗಳ ಸಂಬಳ ಸಾಕಾಗದವರು ಇಂಥಾ ಫುಡ್ ಆಪ್‌ನಲ್ಲಿ ಪಾರ್ಟ್ ಟೈಂ ಕೆಲಸ ಮಾಡಿ ಜೀವನ ಸಾಗಿಸುತ್ತಾರೆ. ಎಷ್ಟೋ ಜನರ ಪಾಲಿಗೆ ಇಂಥಾ ಫುಡ್ ಆಪ್‌ಗಳು ಜೀವನಕ್ಕೆ ದಾರಿಯಾಗಿವೆ. ವಿಶೇಷ ಚೇತನರು, ಮಹಿಳೆಯರು ಸಹ ಝೊಮೇಟೋ, ಸ್ವಿಗ್ಗಿಯಲ್ಲಿ ಜೀವನ ಮಾಡಿ ಜೀವನ ಕಟ್ಟಿಕೊಳ್ಳುತ್ತಾರೆ. ಇಂಥಾ ಆಸಕ್ತಿದಾಯಕ ವಿಚಾರಗಳು ಆಗಿಂದಾಗೆ ವೈರಲ್ ಆಗುತ್ತಲೇ ಇರುತ್ತವೆ. ಸದ್ಯ ಮಹಿಳೆಯೊಬ್ಬರು ತಮ್ಮ ಪುಟ್ಟ ಮಗುವಿನಿಂದಿಗೆ ಝೊಮೆಟೋ ಫುಡ್ ಡೆಲಿವರಿ ಮಾಡ್ತಿರೋ ವಿಚಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗ್ತಿದೆ.
ಮಗುವನ್ನು ದೇಹಕ್ಕೆ ಬೆಲ್ಟ್‌ನಲ್ಲಿ ಸಿಕ್ಕಿಸಿಕೊಂಡು ಫುಡ್ ಡೆಲಿವರಿ
ಝೊಮಾಟೊ ಡೆಲಿವರಿ ಏಜೆಂಟ್ ಆಗಿರುವ ಮಹಿಳೆ (Woman) ಅಂಬೆಗಾಲಿಡುವ ಮಗುವನ್ನು ತನ್ನ ದೇಹಕ್ಕೆ ಬೆಲ್ಟ್‌ನಲ್ಲಿ ಸಿಕ್ಕಿಸಿಕೊಂಡು ಗ್ರಾಹಕರಿಗೆ ಆಹಾರವನ್ನು ತಲುಪಿಸುವ ವಿಡಿಯೋ ನೋಡಿ ನೆಟ್ಟಿಗರು ದಂಗಾಗಿದ್ದಾರೆ. ತನ್ನ ಮಗು (Baby)ವನ್ನು ನೋಡಿಕೊಳ್ಳಲು ಹಗಲಿರುಳು ಶ್ರಮಿಸುವ ಮಹಿಳೆಯ ಕ್ರಮವನ್ನು ಇಂಟರ್‌ನೆಟ್ ಶ್ಲಾಘಿಸಿದೆ. ಹಲವರು ಹಣ ಸಂಪಾದಿಸಲು ಇತರ ಕೆಟ್ಟ ಮಾರ್ಗಗಳನ್ನು ಆಶ್ರಯಿಸುವ ಬದಲು ಮಹಿಳೆಯ ಕೆಲಸ ಮಾಡುವ ಉತ್ಸಾಹ ಮತ್ತು ದೃಢತೆಯನ್ನು ಶ್ಲಾಘಿಸಿದ್ದಾರೆ. ಅನೇಕರು ಮಹಿಳೆಯ ಕಾರ್ಯವನ್ನು ಮೆಚ್ಚಿಕೊಂಡಿದ್ದಾರೆ. ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.
ಮೋಟಾರೀಕೃತ ಗಾಲಿಕುರ್ಚಿಯಲ್ಲಿ ಫುಡ್ ಡೆಲಿವರಿ, ಇಂಥವರೇ ನಮ್ಮ ಹೀರೋಸ್ ಎಂದ ಝೊಮೇಟೋ
ಸೋಷಿಯಲ್ ಮೀಡಿಯಾದಲ್ಲಿ ತಾಯಿಯ ವಿಡಿಯೋ ವೈರಲ್
ವೈರಲ್ ಆಗಿರುವ ವಿಡಿಯೋಗೆ ಮನಮುಟ್ಟುವ ಶೀರ್ಷಿಕೆಯನ್ನು (Heading) ಸಹ ನೀಡಲಾಗಿದೆ. 'ಇದನ್ನು ನೋಡಿ ನನಗೆ ತುಂಬಾ ಸ್ಫೂರ್ತಿಯಾಯಿತು. ಝೊಮೆಟೋ ಡೆಲಿವರಿ ಮಾಡುವ ಮಹಿಳೆ ತನ್ನ ಇಬ್ಬರು ಮಕ್ಕಳೊಂದಿಗೆ ಇಡೀ ದಿನ ಬಿಸಿಲಿನಲ್ಲಿ ಕಳೆಯುತ್ತಾಳೆ. ಒಬ್ಬ ವ್ಯಕ್ತಿಯು ಬಯಸಿದರೆ, ಅವನು ಏನು ಬೇಕಾದರೂ ಮಾಡಬಹುದು ಎಂಬುದನ್ನು ನಾವು ಕಲಿಯಬೇಕು' ಎಂದು ಶೀರ್ಷಿಕೆ ನೀಡಿ ವಿಡಿಯೋವನ್ನು ಶೇರ್ ಮಾಡಲಾಗಿದೆ.
'ಅಂತಹ ಡೆಲಿವರಿ ಏಜೆಂಟ್‌ಗಳಿಗೆ ಸಹಾಯ ಮಾಡಿದ್ದಕ್ಕಾಗಿ ಮತ್ತು ಅವರಿಗೆ ಹಣ ಗಳಿಸಲು ಅವಕಾಶವನ್ನು ಒದಗಿಸಿದ್ದಕ್ಕಾಗಿ ಝೊಮಾಟೊಗೆ ಧನ್ಯವಾದಗಳು' ಎಂದು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಎರಡನೇ ಬಳಕೆದಾರರು, 'ಇದು ತುಂಬಾ ಸ್ಪೂರ್ತಿದಾಯಕವಾಗಿದೆ. ಯಾವುದೇ ಸಂದರ್ಭಗಳಿರಲಿ, ನಾವು ಕಷ್ಟಪಟ್ಟು ಕೆಲಸ ಮಾಡಬೇಕು ಎಂಬುದನ್ನು ತಿಳಿಸುತ್ತದೆ' ಎಂದು ಬರೆದಿದ್ದಾರೆ.
ಮುಂಬೈನಲ್ಲಿದ್ದು, ಬೆಂಗಳೂರಿನಿಂದ ಬಿರಿಯಾನಿ ಆರ್ಡರ್ ಮಾಡಿದ ಯುವತಿ, ಬಿಲ್ ಭರ್ತಿ 2500 ರೂ.!
ವಿಡಿಯೋಗೆ ಪ್ರತಿಕ್ರಿಯಿಸಿ ಮಹಿಳೆಗೆ ನೆರವಾದ ಝೊಮೇಟೊ ಸಂಸ್ಥೆ
ವೈರಲ್ ಆಗಿರುವ ವೀಡಿಯೊದಲ್ಲಿ, ಡೆಲಿವರಿ ಏಜೆಂಟ್ ತನ್ನ ಆರ್ಡರ್‌ನ್ನು ತಲುಪಿಸಲು ಗ್ರಾಹಕರ (Customer) ಮನೆ ಬಾಗಿಲಲ್ಲಿ ನಿಂತಿರುವುದನ್ನು ನಾವು ನೋಡಬಹುದು. ಅವರು ತಮ್ಮ ಪುಟ್ಟ ಹೆಣ್ಣು ಮಗುವನ್ನು ಎದೆಗೆ ಕಟ್ಟಿಕೊಂಡು ಓಡಾಡುತ್ತಿದ್ದಾರೆ. ಕ್ಲಿಪ್ ತುಂಬಾ ವೈರಲ್ ಆಗಿದ್ದು, ಝೊಮೇಟೊ ವಿಡಿಯೋಗೆ ಪ್ರತಿಕ್ರಿಯಿಸಿ ಮಹಿಳೆಗೆ ಸಹಾಯ ಹಸ್ತ ಚಾಚಿದೆ.
ಫುಡ್ ಬ್ಲಾಗರ್‌ವೊಬ್ಬರು ವಿಡಿಯೋವನ್ನು ಶೇರ್ ಮಾಡಿದ್ದು, ಲಕ್ಷಾಂತರ ವೀವ್ಸ್ ಪಡೆದುಕೊಂಡಿದೆ. ಚಿಕ್ಕ ಮಗುವಿಗಾಗಿ ಕಷ್ಟಪಟ್ಟು ಕೆಲಸ ಮಾಡುವ ಮಹಿಳೆಯ ನಿರ್ಧಾರವನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಶ್ಲಾಘಿಸಿದ್ದಾರೆ. ದುಡಿದು ತಿನ್ನಬೇಕೆಂಬ ಮನಸ್ಸಿದ್ದವರು ಎಷ್ಟು ಕಷ್ಟವಾದರೂ, ಹೇಗಿದ್ದರೂ ದುಡಿದು ತಿನ್ನುತ್ತಾರೆ ಎಂಬುದಕ್ಕೆ ಸಾಕ್ಷಿಯಾಗಿದೆ. ಕೈ ಕಾಲು ಗಟ್ಟಿಯಿದ್ದರೂ ಕಳ್ಳತನ ಮಾಡುವುದು, ಭಿಕ್ಷೆ ಬೇಡುವುದು, ಇನ್ನೊಬ್ಬರಿಗೆ ಮೋಸ ಮಾಡಿ ಬದುಕುವವರ ಮಧ್ಯೆ ಪುಟ್ಟ ಕಂದಮ್ಮನನ್ನು ಕಟ್ಟಿಕೊಂಡು ದುಡೀತಿರೋ ಮಹಿಳೆಗೆ ನಿಜಕ್ಕೂ ಹ್ಯಾಟ್ಸಾಪ್ ಹೇಳಲೇಬೇಕು.