
ತಮ್ಮ ಸಾಧನೆ ಮೂಲಕ ಅನೇಕರು ಯುವಜನತೆಗೆ ಸ್ಪೂರ್ತಿಯಾಗ್ತಾರೆ. ಇದಕ್ಕೆ ಮಹಾರಾಷ್ಟ್ರದ ಕಿರಣ್ ಕೂರ್ಮಾವರ್ ಕೂಡ ಹೊರತಾಗಿಲ್ಲ. ಮಹಾರಾಷ್ಟ್ರ ಮೂಲಕ 27 ಮೂಲಕ ಕಿರಣ್ ಕೂರ್ಮಾವರ್ ಮಾಡಿದ ಕೆಲಸ ಅಸಂಖ್ಯಾತ ಯುವಕರಿಗೆ, ವಿಶೇಷವಾಗಿ ಮಹಿಳೆಯರಿಗೆ ಸ್ಫೂರ್ತಿಯಾಗಿದೆ. ಕಿರಣ್ ಕೂರ್ಮಾವರ್ ಮಾಡಿದ ಕೆಲಸದ ಬಗ್ಗೆ ನಾವಿಂದು ನಿಮಗೆ ಮಾಹಿತಿ ನೀಡ್ತೇವೆ.
ಕಿರಣ್ ಕೂರ್ಮಾವರ್ (Kiran Kurmavar,) ಯಾರು? : ಮಹಾರಾಷ್ಟ್ರ (Maharashtra) ದ ಗಡ್‌ಚಿರೋಲಿ ಜಿಲ್ಲೆಯ ಸಿರೊಂಚಾ ತಹಸಿಲ್‌ನ ದೂರದ ಗ್ರಾಮವಾದ ರೇಗುಂತಾದಲ್ಲಿ ಜನಿಸಿದ ಯುವತಿ ಕಿರಣ್ ಕೂರ್ಮಾವರ್. ಕೋಷ್ಟಿ ಸಮುದಾಯದ ಕಿರಣ್ ಗೆ 27 ವರ್ಷ. ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಇಲ್ಲದ ಕುಟುಂಬದಿಂದ ಬಂದಿದ್ದರೂ, ಕಿರಣ್ ಉನ್ನತ ಶಿಕ್ಷಣ (Education) ವನ್ನು ಮುಂದುವರಿಸಲು ಮತ್ತು ತನ್ನ ಕುಟುಂಬವನ್ನು ಬೆಂಬಲಿಸಲು ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಯುಕೆಗೆ ಹೋಗುವ ಅವಕಾಶವನ್ನು ಕಿರಣ್ ಪಡೆದಿದ್ದಾರೆ. ಸೆಪ್ಟೆಂಬರ್‌ನಲ್ಲಿ ಪ್ರಾರಂಭವಾಗುವ ಒಂದು ವರ್ಷದ ಪೂರ್ಣ ಸಮಯದ ಇಂಟರ್ನ್ಯಾಷನಲ್ ಮಾರ್ಕೆಟಿಂಗ್ ಮ್ಯಾನೇಜ್‌ಮೆಂಟ್ ಎಂಎಸ್‌ಸಿ ಕೋರ್ಸ್‌ಗೆ ಪ್ರತಿಷ್ಠಿತ ಯುಕೆ ವಿಶ್ವವಿದ್ಯಾನಿಲಯದಲ್ಲಿ ಕಿರಣ್ ಪ್ರವೇಶವನ್ನು ಪಡೆದುಕೊಂಡಿದ್ದಾರೆ.
ಮಹಿಳೆಯರು ರಾತ್ರಿ ಬ್ರಾ ತೆಗೆದು ಮಲಗಬೇಕು ಅನ್ನೋದ್ಯಾಕೆ?
ಕಿರಣ್ ಅವರ ಪ್ರಯಾಣವು ನಿಜವಾಗಿಯೂ ಸ್ಪೂರ್ತಿದಾಯಕವಾಗಿದೆ. ಗ್ರಾಮೀಣ ಪ್ರದೇಶ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಹಿಡಿತ ಸಾಧಿಸಲು ಹೋರಾಡುತ್ತಿರುವ ಜಾಗದಲ್ಲಿ ಕಿರಣ್ ಒಂದು ಹಂತಕ್ಕೆ ಸಾಧಿಸಿ ತೋರಿಸಿದ್ದಾರೆ. ಆದ್ರೆ ಅವರ ಮುಂದಿನ ಹಾದಿ ಮತ್ತಷ್ಟು ಸವಾಲಿನಿಂದ ಕೂಡಿದೆ. ಕಿರಣ್, ತನ್ನ ಗುರಿಗಳನ್ನು ಸಾಧಿಸಲು, ಪುರುಷ ಪ್ರಧಾನ ವೃತ್ತಿಯಾದ ಟ್ಯಾಕ್ಸಿ ಡ್ರೈವರ್ ಕೆಲಸ ಮಾಡಿದ್ದಾರೆ. ತಮ್ಮ ಹಳ್ಳಿಯಿಂದ ಬೀಡಿನ ತಾಲೂಕಿಗೆ ಪ್ರಯಾಣಿಕರನ್ನು ಸಾಗಿಸುವ ಕೆಲಸ ಮಾಡುತ್ತಿದ್ದರು. ಏಕಲವ್ಯ ಕಾರ್ಯಾಗಾರದ ತರಗತಿಗಳಿಗೆ ಹಾಜರಾಗುವ ಉದ್ದೇಶದಿಂದ ಅವರು ಟ್ಯಾಕ್ಸಿ ಡ್ರೈವರ್ ಕೆಲಸ ಮಾಡುತ್ತಿದ್ದರು. ಏಕಲವ್ಯ ಕಾರ್ಯಾಗಾರ, ಅಂಚಿನಲ್ಲಿರುವ ಸಮುದಾಯಗಳ ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ಪ್ರವೇಶವನ್ನು ಪಡೆಯಲು ನೆರವಾಗುವ ನಿಟ್ಟಿನಲ್ಲಿ ಕೆಲಸ ಮಾಡುತ್ತವೆ. ಆರಂಭದಲ್ಲಿ ಕಿರಣ್ ಕ್ಯಾಬ್ ನಲ್ಲಿ ಕುಳಿತುಕೊಳ್ಳಲು ಜನರು ಹಿಂದೇಟು ಹಾಕ್ತಿದ್ದರಂತೆ. ಮಹಿಳೆ ಚಾಲಕಿ ಟ್ಯಾಕ್ಸಿಯನ್ನು ಇಷ್ಟಪಟ್ಟಿರಲಿಲ್ಲವಂತೆ. ದಿನ ಕಳೆದಂತೆ ಕಿರಣ ತಮ್ಮ ಡ್ರೈವಿಂಗ್ ಸಾಮರ್ಥ್ಯ ತೋರಿಸಿದ ಕಾರಣ ಜನರು ಅವರ ಟ್ಯಾಕ್ಸಿ ಏರಲು ಶುರು ಮಾಡಿದ್ದರಂತೆ.
ಬೋಧನಾ ವೆಚ್ಚಕ್ಕೆ ಮನೆ ಅಡಮಾನ ಇಡಲು ಸಿದ್ಧ : ಕೆಲಸ ಮತ್ತು ಓದು ಎರಡರ ಸವಾಲುಗಳಿಗೆ ಹೆದರದ ಕಿರಣ್ ವಿದೇಶದಲ್ಲಿ ಅಧ್ಯಯನ ಮಾಡಲು ನಿರ್ಧರಿಸಿದ್ದಾರೆ. ಅದಕ್ಕೆ ಸಾಕಷ್ಟು ತಯಾರಿ ನಡೆಸಿ ಕೊನೆಗೂ ಯುಕೆ ವಿಶ್ವವಿದ್ಯಾನಿಲಯದಲ್ಲಿ ಪ್ರವೇಶ ಪಡೆದಿದ್ದಾರೆ. ವಿಶ್ವವಿದ್ಯಾನಿಲಯದ ಪ್ರವೇಶ ಪತ್ರ 2023-24 ರ ಬೋಧನಾ ಶುಲ್ಕ 28 ಲಕ್ಷಕ್ಕಿಂತ ಸ್ವಲ್ಪ ಕಡಿಮೆ ಇದೆ. ಕಿರಣ್ ಮತ್ತು ಅವರ ಕುಟುಂಬ ಪ್ರಸ್ತುತ ವಿದ್ಯಾರ್ಥಿವೇತನ ಆಯ್ಕೆಗಳು ಮತ್ತು ಹಣಕಾಸಿನ ಸಹಾಯವನ್ನು ಅನ್ವೇಷಿಸುತ್ತಿದ್ದಾರೆ. ಕಿರಣ್ ತನ್ನ ಕನಸುಗಳನ್ನು ನನಸಾಗಿಸಲು ಮತ್ತು ತನ್ನ ಶಿಕ್ಷಣವನ್ನು ಮುಂದುವರಿಸಲು ನಿರ್ಧರಿಸಿದ್ದಾರೆ. ಅವರ ತಂದೆ ರಮೇಶ್ ಕೂರ್ಮಾವರ್ ತನ್ನ ಮಗಳ ಓದಿಗಾಗಿ ಮನೆಯನ್ನು ಅಡಮಾನ ಇಡಲು ಸಹ ಸಿದ್ಧರಾಗಿದ್ದಾರೆ.
ಶಕ್ತಿ ಯೋಜನೆ ಎಫೆಕ್ಟ್ : ಮಹಿಳಾ ರೋಗಿಗಳಿಗೆ ಹೊಸ ಶಕ್ತಿ!
ರಮೇಶ್ ಕೂರ್ಮಾವರ್ ಟ್ಯಾಕ್ಸಿ ಚಾಲಕರಾಗಿದ್ದರಂತೆ. ಅವರಿಗೆ ಅಪಘಾತದ ನಂತರ ಕಿರಣ್ ಚಾಲನೆ ಮಾಡಲು ಪ್ರಾರಂಭಿಸಿದ್ದರು. ಕುಟುಂಬವನ್ನು ಬೆಂಬಲಿಸಿದ ಕಿರಣ್ ಓದನ್ನು ಮುಂದುವರೆಸಲು ಮುಂದಾಗಿದ್ದಾರೆ.
ಕಿರಣ್, ಯುಕೆ ವಿಶ್ವವಿದ್ಯಾನಿಲಯದಲ್ಲಿ ಪ್ರವೇಶ ಪಡೆಯುವ ಮೊದಲು ಸಾಕಷ್ಟು ತಯಾರಿ ನಡೆಸಿದ್ದಾರೆ. ಏಕಲವ್ಯ ವರ್ಕ್‌ಶಾಪ್‌ನಲ್ಲಿ ವಿದೇಶದಲ್ಲಿ ಓದುತ್ತಿರುವ ವಿಶಾಲ್ ಠಾಕ್ರೆ ಅವರನ್ನು ಭೇಟಿಯಾಗಿ, ಅವರಿಂದ ಸಾಕಷ್ಟು ಮಾರ್ಗದರ್ಶನ ಪಡೆದಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.