Woman
ಕೆಲ ಮಹಿಳೆಯರು ರಾತ್ರಿ ಬ್ರಾ ಧರಿಸಿ ಮಲಗುತ್ತಾರೆ. ಆದ್ರೆ ಇದು ಆರೋಗ್ಯಕ್ಕೆ ತುಂಬಾ ಅಪಾಯಕಾರಿ ಅಭ್ಯಾಸವಾಗಿದೆ. ಇದು ಹಲವು ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ರಾತ್ರಿ ಬ್ರಾ ಧರಿಸಿ ಮಲಗೋದ್ರಿಂದ ಆಗೋ ತೊಂದರೆಗಳೇನು?
ಬ್ರಾ ಧರಿಸಿ ಮಲಗುವುದ್ರಿಂದ ಸ್ತನ ಕ್ಯಾನ್ಸರ್ ಅಪಾಯ ಹೆಚ್ಚಿರುತ್ತದೆ ಎಂದು ಸಂಶೋಧನೆಯೊಂದರಿಂದ ತಿಳಿದುಬಂದಿದೆ.
ಬ್ರಾಗಳು, ವಿಶೇಷವಾಗಿ ಅಂಡರ್‌ವೈರ್‌ಗಳು ರಕ್ತ ಪರಿಚಲನೆಯ ಮೇಲೆ ಪರಿಣಾಮ ಬೀರುತ್ತವೆ. ವೈರ್ ಸ್ತನ ಪ್ರದೇಶದ ಸುತ್ತಲಿನ ಸ್ನಾಯುಗಳನ್ನು ಸಂಕುಚಿತಗೊಳಿಸುತ್ತದೆ ಮತ್ತು ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ.
ರಾತ್ರಿ ಟೈಟ್ ಬ್ರಾ ಧರಿಸಿ ಮಲಗುವುದ್ರಿಂದ ಗಾಳಿ ಸರಿಯಾಗಿ ಆಡುವುದಿಲ್ಲ. ಇದು ತುರಿಕೆಗೆ ಕಾರಣವಾಗುತ್ತದೆ. ಚರ್ಮ ಒಣಗಲು ಶುರುವಾಗುತ್ತದೆ.
ಮಲಗುವಾಗ ಬ್ರಾ ಧರಿಸುವುದು ಅಸ್ವಸ್ಥತೆಯನ್ನು ಉಂಟುಮಾಡಬಹುದು. ಇದು ನಿದ್ರೆಗೆ ಅಡ್ಡಿಪಡಿಸಬಹುದು. ಕ್ರಮೇಣ ನಿದ್ರಾಹೀನತೆಯ ಸಮಸ್ಯೆ ಕಾಡಬಹುದು.
ರಾತ್ರಿ ಬಿಗಿಯಾದ ಬ್ರಾ ಧರಿಸಿ ಮಲಗುವುದರಿಂದ ಎದೆ ಭಾಗದಲ್ಲಿ ಕಪ್ಪು ಕಲೆಗಳು ಕಾಣಿಸಿಕೊಳ್ಳುವ ಸಾಧ್ಯತೆಯಿರುತ್ತದೆ. ಹಾಗೆ ಸ್ತನದ ಗಾತ್ರ ಸಹ ಹೀಗೆ ಮಾಡುವುದರಿಂದ ಹೆಚ್ಚಾಗುವುದಿಲ್ಲ.