Kitchen Tips : ತಲೆಯ ಮೇಲೊಂದೇ ಅಲ್ಲ ಅಡಿಗೆಗೂ ಬಳಸ್ಬಹುದು ಈ ಹೂವನ್ನು!

By Suvarna News  |  First Published Jun 13, 2023, 6:19 PM IST

ರುಚಿಯಾದ ಅಡುಗೆ ಆರೋಗ್ಯಕರವಾಗಿರಬೇಕು. ನಮ್ಮ ಸುತ್ತಮುತ್ತ ಸಾಕಷ್ಟು ಗಿಡ, ಬಳ್ಳಿ, ಹೂಗಳಿವೆ. ಅವುಗಳನ್ನು ಬಳಸಿಕೊಂಡೇ ನಾವು ಅತ್ಯುತ್ತಮ ಅಡುಗೆ ತಯಾರಿಸಬಹುದು. ನಾನಾ ಬಗೆಯ ಹೂವಿನಿಂದ ನಾನಾ ಬಗೆಯ ಆಹಾರ ತಯಾರಿಸಬಹುದು.  
 


ಹೂವೆಂದರೆ ಯಾರಿಗೆ ಇಷ್ಟವಾಗೊಲ್ಲ ಹೇಳಿ.. ಅನೇಕ ಬಗೆಯ ಬಣ್ಣಗಳಿಂದ, ಪರಿಮಳಗಳಿಂದ ಕೂಡಿರುವ ಹೂವುಗಳು ಎಲ್ಲರ ಮನಸೂರೆಗೊಳ್ಳುತ್ತವೆ. ಹೆಣ್ಣುಮಕ್ಕಳ, ಮಹಿಳೆಯರ ಮುಡಿಯ ಮೇಲೆ ರಾರಾಜಿಸುವ ಹೂವು ಮುಡಿಯ ಅಂದವನ್ನು ಹೆಚ್ಚಿಸುತ್ತದೆ. ಪೂಜೆ ಪುನಸ್ಕಾರಗಳಲ್ಲೂ ಹೂವಿಗೆ ಮೊದಲ ಸ್ಥಾನ. ಇನ್ನು ಅಲಂಕಾರದಲ್ಲಂತೂ ಹೂವಿಗೆ ಸರಿಸಾಟಿ ಯಾವುದೂ ಇಲ್ಲ. ಮದುವೆ ಮನೆ ಹಾಗೂ ವಿಶೇಷ ಸಂದರ್ಭಗಳಲ್ಲಿ ಹೂವಿನ ಅಲಂಕಾರ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡುತ್ತದೆ.

ಪೂಜೆ (Worship), ಅಲಂಕಾರಗಳಲ್ಲಿ ಬಳಕೆಯಾಗುವ ಹೂವು ಅಡಿಗೆಯಲ್ಲೂ ತನ್ನ ಪರಿಮಳ ಬೀರುತ್ತದೆ. ಹೌದು ಅನೇಕ ಜಾತಿಗ ಹೂ (Flower) ಗಳನ್ನು ರುಚಿಕರವಾದ ಭಕ್ಷ್ಯಗಳು, ಪಾನೀಯಗಳು ಮತ್ತು ಸಿಹಿ ತಿಂಡಿಗಳನ್ನು ತಯಾರಿಸಲು ಬಳಸಲಾಗುತ್ತಿದೆ. ಹಾಗೆ ಅಡಿಗೆಯಲ್ಲಿ ಬಳಸಲಾಗುವ ಕೆಲವು ಹೂವುಗಳು ಇಲ್ಲಿವೆ.

Latest Videos

undefined

ಬೇಸಿಗೆಯಲ್ಲಿ ಕೂಲ್ ಆಗಿರ್ಬೇಕು ಅಂದ್ರೆ ಈ ಮ್ಯಾಂಗೋ ರೆಸಿಪಿ ಮಾಡಿ ಸವಿಯಿರಿ

ಗುಲಾಬಿ ಹೂವು : ಪ್ರೀತಿಯ ಸಂಕೇತವಾದ ಗುಲಾಬಿ ಹೂವು ತನ್ನದೇ ಆದ ವಿಶೇಷ ಪರಿಮಳವನ್ನು ಹೊಂದಿರುತ್ತದೆ. ಕೆಂಪು ಬಣ್ಣದ ಹೊರತಾಗಿ ಬಿಳಿ, ಗುಲಾಬಿ, ಕೇಸರಿ ಮುಂತಾದ ಹತ್ತು ಹಲವು ಬಣ್ಣದ ಗುಲಾಬಿಗಳು ಇರುತ್ತವೆ. ಗುಲಾಬಿ ಹೂವಿನಿಂದ ಮಾಡಿದ ರೋಸ್ ವಾಟರ್ ಒಂದು ಸೌಂದರ್ಯವರ್ಧಕವಾಗಿದೆ. 

ದೇವರಿಗೆ ಶೃಂಗಾರ ಮಾಡುವ ಗುಲಾಬಿ ಹೂಗಳನ್ನು ಅಡುಗೆ ಮನೆಯಲ್ಲಿ ಕೂಡ ಬಳಸುತ್ತಾರೆ. ಸಿಹಿ ಖಾದ್ಯಗಳನ್ನು ಶೃಂಗರಿಸಲು ಗುಲಾಬಿ ಹೂಗಳ ಎಸಳುಗಳನ್ನು ಬಳಸಲಾಗುತ್ತೆ. ಇದರ ಜೊತೆಗೆ ಟೀ ಮತ್ತು ಇನ್ನು ಕೆಲವು ಪಾನೀಯಗಳನ್ನು ತಯಾರಿಸಲು ಗುಲಾಬಿ ಹೂಗಳನ್ನು ಉಪಯೋಗಿಸಲಾಗುತ್ತದೆ. ಗುಲಾಬಿಯಿಂದ ತಯಾರಿಸುವ ಗುಲಕಂದ್ ಈಗಾಗಲೇ ಅನೇಕ ಕಡೆಗಳಲ್ಲಿ ಖ್ಯಾತಿ ಪಡೆದಿದೆ.

ಬಾಳೆಕಾಯಿಯ ಹೂವು (Banana Flower) : ಬಾಳೆಕಾಯಿಯ ಬಗ್ಗೆ ಎಲ್ಲರಿಗೂ ತಿಳಿದೇ ಇದೆ.  ಹಳ್ಳಿಗಳಲ್ಲಿ ಇದರ ಬಳಕೆ ಹೆಚ್ಚು. ಬಾಳೆದಿಂಡು, ಬಾಳೆಕಾಯಿ, ಬಾಳೆಹಣ್ಣು ಹಾಗೂ ಹೂಗಳನ್ನು ಅಡಿಗೆಯಲ್ಲಿ ಬಳಸುತ್ತಾರೆ. ದಕ್ಷಿಣ ಭಾರತದಲ್ಲಿ ಬಾಳೆ ಹೂವಿನಿಂದ ಅನೇಕ ಅಡುಗೆಗಳನ್ನು ತಯಾರಿಸುತ್ತಾರೆ. ಬಾಳೆ ಹೂವಿನಿಂದ ಪಲ್ಯವನ್ನು ಮಾಡುತ್ತಾರೆ.

ದಾಸವಾಳದ (Hibiscus) ಹೂವು : ದಾಸವಾಳ ಹೂವು ಸಾಮಾನ್ಯವಾಗಿ ವರ್ಷಪೂರ್ತಿ ದೊರೆಯುತ್ತದೆ. ದಾಸವಾಳದ ಹೂವು ಮತ್ತು ಎಲೆಗಳು ಆರೋಗ್ಯಕ್ಕೆ ಬಹಳ ಒಳ್ಳೆಯದು. ಕೂದಲಿಗೂ ಇದು ಒಳ್ಳೆಯ ಪೋಷಣೆ ನೀಡುತ್ತದೆ. ಇಂತಹ ದಾಸವಾಳವನ್ನು ನಾವು ಅಡಿಗೆಮನೆಯಲ್ಲಿ ಉಪಯೋಗಿಸಿದರೆ ಆರೋಗ್ಯ ಕೂಡ ಚೆನ್ನಾಗಿರುತ್ತೆ. ದಾಸವಾಳ ಹರ್ಬಲ್ ಟೀ ಉತ್ತಮ ಆರೋಗ್ಯವನ್ನು ನೀಡುತ್ತದೆ. ಈ ಹರ್ಬಲ್ ಟೀ ಮಾಡಲು ಒಂದು ಪಾತ್ರೆಯಲ್ಲಿ ಎರಡು ಕಪ್ ನೀರು ಹಾಕಿ ಕುದಿಸಿ. ನೀರು ಚೆನ್ನಾಗಿ ಬಿಸಿಯಾದ ನಂತರ ದಾಸವಾಳದ ಹೂಗಳನ್ನು ನೀರಿಗೆ ಹಾಕಿ 5-7 ನಿಮಿಷಗಳ ಕಾಲ ಮತ್ತೆ ಕುದಿಸಿ ನಂತರ ಸೋಸಿ. ದಾಸವಾಳದ ನೀರಿಗೆ ಸಕ್ಕರೆ, ನಿಂಬು ಮುಂತಾದವುಗಳನ್ನು ಸೇರಿಸಿ ಕುಡಿಯಬಹುದು.

Kitchen Tips : ಸೌತೆಕಾಯಿ ಕಹಿ ಹೋಗಲಾಡಿಸಲು ಇಲ್ಲಿದೆ ಸುಲಭದ ಪರಿಹಾರ

ಕಮಲದ (Lotus) ಹೂವು : ದೊಡ್ಡ ದೊಡ್ಡ ಕೆರೆಗಳಲ್ಲಿ ಅರಳುವ ಸುಂದರವಾದ ಕಮಲದ ಹೂವುಗಳಿಂದ ರುಚಿಕರವಾದ ಶರಬತ್ ಗಳನ್ನು ತಯಾರಿಸಬಹುದು. ಕಮಲದ ಹೂವಿನ ಶರಬತ್ ತಯಾರಿಸಲು ಮೊದಲು ನೀವು ನೀರನ್ನ ಚೆನ್ನಾಗಿ ಕುದಿಸಿಕೊಳ್ಳಿ. ನೀರು ಬಿಸಿಯಾದ ನಂತರ ಗ್ಯಾಸ್ ಆರಿಸಿ ಕಮಲದ ಹೂವುಗಳನ್ನು ನೀರಿಗೆ ಹಾಕಿ 2 ಗಂಟೆಗಳ ಕಾಲ ಮುಚ್ಚಿಡಿ. ಎರಡು ಗಂಟೆ ಕಳೆದ ಮೇಲೆ ನೀರನ್ನು ಸೋಸಿ ಫ್ರಿಜ್ ನಲ್ಲಿಡಿ. ಕಮಲದ ನೀರು ತಣ್ಣಗಾದ ಮೇಲೆ ನೀವು ಸಕ್ಕರೆ ಬೆರೆಸಿ ಸರ್ವ್ ಮಾಡಬಹುದು.

ನುಗ್ಗೇಕಾಯಿಯ (Drum Stick) ಹೂವು : ನುಗ್ಗೇಕಾಯಿಯ ಹೂವಿನಿಂದ ಪಲ್ಯವನ್ನು ತಯಾರಿಸಬಹುದು. ಪಲ್ಯವನ್ನು ತಯಾರಿಸಲು ಮೊದಲು ಹೂವನ್ನು ಬೇಯಿಸಿ ಇಟ್ಟುಕೊಳ್ಳಿ. ಒಂದು ಬಾಣಲೆಗೆ ಎಣ್ಣೆ ಹಾಕಿ ಈರುಳ್ಳಿ ಹಾಕಿ ಹುರಿಯಿರಿ ನಂತರ ಅದಕ್ಕೆ ಟೊಮೆಟೋ ಹಾಕಿ ಮಸಾಲೆಯನ್ನು ಹಾಕಿ ಹುರಿಯಿರಿ. ಕೊನೆಯಲ್ಲಿ ಬೇಯಿಸಿದ ನುಗ್ಗೆ ಹೂವನ್ನು ಸೇರಿಸಿ ಕೊತ್ತುಂಬರಿ ಸೊಪ್ಪನ್ನು ಹಾಕಿದರೆ ಪಲ್ಯ ಸಿದ್ಧವಾಗುತ್ತದೆ.
 

click me!