Kannada

ರಸಭರಿತವಾದ ಮತ್ತು ಸಿಹಿಯಾದ ಮಾವಿನಹಣ್ಣುಗಳನ್ನು ಅಡುಗೆಯಲ್ಲಿ ಹಲವು ರೀತಿಗಳಲ್ಲಿ ಬಳಸಿಕೊಳ್ಳಬಹುದು. ಮ್ಯಾಂಗೋ ರೋಲ್‌ನಿಂದ ಹಿಡಿದು ಮಾಕ್‌ಟೈಲ್‌ ವರೆಗೆ ನೀವು ಮಾವಿನಿಂದ ತಯಾರಿಸದಬಹುದಾದ ಹಲವು ತಿನಿಸುಗಳಿವೆ.

Kannada

ಮಾವಿನ ಗ್ವಾಕಮೋಲ್

ಅವಕಾಡೊಗಳು, ನಿಂಬೆ ರಸ, ಬೆಳ್ಳುಳ್ಳಿಯನ್ನು ಸೇರಿಸಿ ಮಾವಿನ ಗ್ವಾಕಮೋಲ್ ತಯಾರಿಸಬಹುದು. ಇದನ್ನು ಟ್ಯಾಕೋಸ್ ಮತ್ತು ನ್ಯಾಚೋಸ್‌ನೊಂದಿಗೆ ತಿನ್ನಬಹುದು.

Image credits: others
Kannada

ಸುಟ್ಟ ಮಾವಿನ ಸಲ್ಸಾ

ಮಾವಿನ ಸಾಲ್ಸಾವನ್ನು ಈರುಳ್ಳಿ, ಟೊಮ್ಯಾಟೊ ಮತ್ತು ಸುಟ್ಟ ಮಾವಿನಹಣ್ಣುಗಳನ್ನು ಬಳಸಿ ತಯಾರಿಸುತ್ತಾರೆ. ಮೀನು ಕರಿ, ಟ್ಯಾಕೋಸ್, ನ್ಯಾಚೋಸ್ ಮತ್ತು ಚಿಕನ್ ಮೇಲೋಗರದೊಂದಿಗೆ ಇದನ್ನು ಸವಿಯಬಹುದು.

Image credits: others
Kannada

ಮಾವಿನ ಸುಶಿ ರೋಲ್

ಈ ರುಚಿಕರವಾದ ರೋಲ್ ತಾಜಾ ಮಾವು ಮತ್ತು ಅವಕಾಡೊ ಸ್ಲೈಸ್ ಹಾಗೂ ಕತ್ತರಿಸಿದ ಕೆಂಪು ಮೆಣಸುಗಳನ್ನು ಹೊಂದಿದೆ. ತಿನ್ನಲು ಖಾರ ಮತ್ತು ಸಿಹಿಯಾಗಿ ರುಚಿಯಾಗಿರುತ್ತದೆ.

Image credits: others
Kannada

ಮಾವಿನ ಗ್ರಿಲ್‌ ರೆಸಿಪಿ

ಈ ಕೋಮಲ, ರಸಭರಿತವಾದ, ಸುಟ್ಟ ಮಾವು ರೆಸಿಪಿಯನ್ನು ಗ್ರಿಲ್‌ನಲ್ಲಿ ತಯಾರಿಸಲಾಗುತ್ತದೆ. ಮಾವು ಸುಟ್ಟು ಇನ್ನಷ್ಟು ಮೆತ್ತಗಾಗುವ ಕಾರಣ ಇದರ ರುಚಿ ಬಾಯಲ್ಲಿ ನೀರೂರುವಂತೆ ಇರುತ್ತದೆ.

Image credits: others
Kannada

ಮಾವಿನ ಮಾರ್ಗರಿಟಾ

ಮಸಾಲೆಯುಕ್ತ ಮಾವಿನ ಮಾರ್ಗರಿಟಾ ಬೇಸಿಗೆಯಲ್ಲಿ ಎಲ್ಲರೂ ಇಷ್ಟಪಡಬಹುದಾದ ಪಾನೀಯ. ಈ ಮಾಕ್‌ಟೈಲ್ ಮೆಣಸಿನ ಪುಡಿಯ ಖಾರ ಮತ್ತು ಸಿಹಿ ಮಾವಿನ ಮಿಶ್ರಣವನ್ನು ಹೊಂದಿದೆ.

Image credits: others

ಬೆಂಗಳೂರಲ್ಲಿ ಬಾಯಲ್ಲಿ ನೀರೂರಿಸೋ ಮೈಸೂರ್‌ಪಾಕ್ ಸಿಗೋ ಸ್ಥಳಗಳಿವು

ಅಕ್ಕಿ ಅಸಲಿಯೋ, ನಕಲಿಯೋ ತಿಳಿದುಕೊಳ್ಳುವುದು ಹೇಗೆ?

ಬ್ರೇಕ್‌ಫಾಸ್ಟ್‌ಗೆ ಈ ಹಣ್ಣನ್ನು ಅಪ್ಪಿತಪ್ಪಿಯೂ ತಿನ್ಬೇಡಿ

ಚಪಾತಿ ರೌಂಡ್ ಆಗ್ಬೇಕು ಅಂದ್ರೆ ಹೀಗ್ ಮಾಡಿ