ಹೆಣ್ಣು ಮಗು ಜನಿಸಿದ್ರೆ ತಾಯಂದಿರ ಬ್ಯಾಂಕ್‌ ಖಾತೆಗೆ 6,000 ಜಮಾ, ಅರ್ಜಿ ಸಲ್ಲಿಸುವುದು ಹೇಗೆ?

By Vinutha Perla  |  First Published Jun 13, 2023, 12:01 PM IST

ದೇಶದಲ್ಲಿ ಹೆಣ್ಣುಮಕ್ಕಳಿಗಾಗಿ ಉಪಯೋಗವಾಗುವಂತಹಾ ಹಲವು ಯೋಜನೆಗಳು ಜಾರಿಯಲ್ಲಿವೆ. ಈ ಪೈಕಿ ಗರ್ಣಿಯರಿಗಾಗಿಯೇ ವಿಶೇಷ ಯೋಜನೆ ಲಭ್ಯವಿದೆ ಎಂಬುದು ಗಮನಾರ್ಹ. ಈ ಯೋಜನೆಯನ್ನು ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ ಎಂದು ಕರೆಯಲಾಗುತ್ತದೆ. 


ನವದಹಲಿ: ಕೇಂದ್ರ ಸರ್ಕಾರ, ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರ ವರೆಗೆ ಎಲ್ಲರಿಗೂ ಉಪಯೋಗವಾಗುವಂತಹಾ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳಿಗಾಗಿ ಉಪಯೋಗವಾಗುವಂತಹಾ ಹಲವು ಯೋಜನೆಗಳು ಜಾರಿಯಲ್ಲಿವೆ. ಈ ಪೈಕಿ ಗರ್ಣಿಯರಿಗಾಗಿಯೇ ವಿಶೇಷ ಯೋಜನೆ ಲಭ್ಯವಿದೆ ಎಂಬುದು ಗಮನಾರ್ಹ. ಈ ಯೋಜನೆಯನ್ನು ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ ಎಂದು ಕರೆಯಲಾಗುತ್ತದೆ. ಈ ಯೋಜನೆಯಡಿ ಈಗಾಗಲೇ ಲಕ್ಷಾಂತರ ಮಹಿಳೆಯರು ಪ್ರಯೋಜನ ಪಡೆದಿದ್ದಾರೆ.

ಈ ಯೋಜನೆಯೇ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ (PMMVY). ಅದರ ಪ್ರಕಾರ ಎರಡನೇ ಹೆರಿಗೆಯಲ್ಲಿ (Delivery) ಹೆಣ್ಣು ಮಗು ಜನಿಸಿದರೆ ಅರ್ಹರಿಗೆ 6 ಸಾವಿರ ರೂಪಾಯಿ ಧನಸಹಾಯ ನೀಡಲಾಗುತ್ತಿದೆ. ಮಿಷನ್ ಶಕ್ತಿ ಯೋಜನೆಯಡಿಯಲ್ಲಿ ಈ ಕೊಡುಗೆಯನ್ನ ನೀಡುತ್ತಿದೆ. 2ನೇ ಹೆರಿಗೆಯಲ್ಲಿ ಹೆಣ್ಣುಮಗು (Girl child) ಜನಿಸಿದ್ರೆ ಮಿಷನ್ ಶಕ್ತಿ ಯೋಜನೆಯಡಿ ತಾಯಿಗೆ 6 ಸಾವಿರ ರೂಪಾಯಿ ನೀಡುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಇನ್ನು ಅವಳಿ ಮಕ್ಕಳಲ್ಲಿ ಒಬ್ಬರು ಹೆಣ್ಣು ಮಗುವಾಗಿದ್ದರೂ ಸಹ ಈ ಯೋಜನೆ ಅನ್ವಯಿಸುತ್ತದೆ. ಆದ್ರೆ, ಅವಳಿ ಮಕ್ಕಳಿಬ್ಬರೂ ಹೆಣ್ಣು ಮಕ್ಕಳಾದರೂ ತಲಾ 6 ಸಾವಿರ ನೀಡುವುದಿಲ್ಲ. ಕೇವಲ 6 ಸಾವಿರ ನೀಡಲಾಗುವುದು.

Latest Videos

undefined

ಮಹಿಳೆಯರ ಉಚಿತ ಪ್ರಯಾಣಕ್ಕೆ ಗುಡ್‌ ನ್ಯೂಸ್: ದಾಖಲೆಯ ಜೆರಾಕ್ಸ್ ಪ್ರತಿ, ಡಿಜಿಲಾಕರ್‌ನಲ್ಲಿರೋ ಸಾಫ್ಟ್‌ಕಾಪಿ ತೋರ್ಸಿದ್ರೂ ಸಾಕು

ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಗೆ ಸೇರುವುದು ಹೇಗೆ?
ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಾಗ್ತಿದ್ದು, ಈ ಸಂಖ್ಯೆಯನ್ನ ಹೆಚ್ಚಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಯತ್ನಿಸುತ್ತಿವೆ. ಇದರ ಭಾಗವಾಗಿ ಕೇಂದ್ರ ಈ ಯೋಜನೆಯನ್ನು ಘೋಷಣೆ ಮಾಡಿದೆ. ಗರ್ಭಿಣಿಯರು ಮತ್ತು ಶಿಶುಗಳ ಕಲ್ಯಾಣ ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಮಹಿಳೆಯರು (Woman) https://wcd.nic.in/schemes/pradhan-mantri-matru-vandana-yojana ವೆಬ್‌ಸೈಟ್ ಮೂಲಕ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಲಿಂಕ್ ಮೂಲಕ ನೀವು ನೇರವಾಗಿ ಸ್ಕೀಮ್ ವೆಬ್‌ಸೈಟ್‌ಗೆ ಹೋಗಬೇಕು. ಇಲ್ಲಿ ಹೆಸರು, ಮಾಹಿತಿ ನೋಂದಾಯಿಸಿಕೊಂಡು ಲಾಗಿನ್ ಆಗಬೇಕು. ಆಶಾ ಕಾರ್ಯಕರ್ತೆಯರು ಸಹಾಯದಿಂದಲೂ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಯೋಜನೆಗೆ ಸೇರಲು ಬೇಕಾದ ಅರ್ಹತೆಗಳೇನು?
ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಗೆ ಸೇರಲು ಕೆಲವು ಅರ್ಹತೆಗಳಿವೆ. ಈ ಯೋಜನೆಯು ಎಲ್ಲಾ ಗರ್ಭಿಣಿಯರಿಗೆ (Pregnant) ಅನ್ವಯಿಸುತ್ತದೆ. ಮೊದಲ ವಿತರಣೆಗೆ ಮಾತ್ರ ಯೋಜನೆ ಅಡಿಯಲ್ಲಿ ಹಣ ಬರುತ್ತದೆ. ಈ ಯೋಜನೆಯನ್ನು ಎಲ್ಲಾ ರಾಜ್ಯಗಳಲ್ಲಿ ಜಾರಿಗೊಳಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಿ ಉದ್ಯೋಗ ಮಾಡುವವರಿಗೆ ಈ ಯೋಜನೆ ಅನ್ವಯಿಸುವುದಿಲ್ಲ. ಅಂದರೆ ಮಹಿಳೆಯರು ಸರ್ಕಾರಿ ಕೆಲಸ ಮಾಡುತ್ತಿದ್ದರೆ ಯೋಜನೆಗೆ ಸೇರಲು ಸಾಧ್ಯವಾಗುವುದಿಲ್ಲ.

ಗೃಹಜ್ಯೋತಿ ಯೋಜನೆ ಎಲ್ಲ ಪ್ರಶ್ನೆಗಳಿಗೂ ಇಲ್ಲಿವೆ ಉತ್ತರ: ಹೊರ ರಾಜ್ಯದವರಿಗೂ ಸಿಗುತ್ತೆ ಫ್ರೀ ವಿದ್ಯುತ್

ಅರ್ಹರಿಗೆ ಹಣ ಹೇಗೆ ದೊರೆಯುತ್ತದೆ?
ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ. ಆದರೆ, ಈ ಹಣ ಒಂದೇ ಬಾರಿ ಬರುವುದಿಲ್ಲ. ಮಹಿಳೆಯರ ಬ್ಯಾಂಕ್ ಖಾತೆಗೆ ಕಂತುಗಳಲ್ಲಿ ಹಣ ಜಮೆ ಮಾಡಲಾಗುತ್ತದೆ. ಒಟ್ಟು ಮೂರು ಕಂತುಗಳಲ್ಲಿ ಹಣ ಜಮೆಯಾಗುತ್ತದೆ.

click me!