
ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಎನ್ನುವುದು ಸರ್ವೇ ಸಾಮಾನ್ಯ ಎನ್ನುವಂತಾಗಿಬಿಟ್ಟಿದೆ. ಇದಕ್ಕೆ ಇಂಥದ್ದೇ ಕಾರಣ ಎಂದು ಹೇಳುವುದು ಕಷ್ಟ ಆಗುವಷ್ಟರ ಮಟ್ಟಿಗೆ ವಿವಿಧ ರೀತಿಯ ಕ್ಯಾನ್ಸರ್ಗಳು ಜನರ ಜೀವನದೊಳಕ್ಕೆ ಹೊಕ್ಕಿ ಬಿಟ್ಟಿದೆ. ಆಸ್ಪತ್ರೆಗಳಲ್ಲಿ ಅದರಲ್ಲಿಯೂ ಹೆಚ್ಚಾಗಿ ಕ್ಯಾನ್ಸರ್ ಆಸ್ಪತ್ರೆಗಳಿಗೆ ಹೋಗಿ ನೋಡಿದರೆ ಪುಟ್ಟ ಪುಟಾಣಿಗಳಿಂದ ಹಿಡಿದು ವಯೋ ವೃದ್ಧರವರೆಗೆ ಕ್ಯಾನ್ಸರ್ ಪೀಡಿತರಾಗಿ ನಲುಗುತ್ತಿರುವುದನ್ನು ನೋಡಿದರೆ ಕರುಳು ಚುರುಕ್ ಎನ್ನುವಂಥ ಸನ್ನಿವೇಶ ಇರುತ್ತದೆ. ಇದಕ್ಕೆ ಆಹಾರ, ಜೀವನ ಕ್ರಮ, ವಾತಾವರಣ... ಹೀಗೆ ಏನೇನೋ ಕಾರಣ ಕೊಟ್ಟರೂ, ಸದ್ದಿಲ್ಲದೇ ಅವರಿಸುವ ಅತ್ಯಂತ ಭೀಕರ ರೋಗ ಇದಾಗಿದೆ.
ಅದರಲ್ಲಿಯೂ ಹೆಚ್ಚಾಗಿ ಮಹಿಳೆಯರಲ್ಲಿ ಸ್ತನದ ಕ್ಯಾನ್ಸರ್ (Breast cancer) ಕಾಣಿಸಿಕೊಳ್ಳುತ್ತಿದೆ. ಇದು ಮಹಿಳೆಯರಿಗೆ ಮಾತ್ರವಲ್ಲದೇ ಪುರುಷರಲ್ಲಿಯೂ ಕಂಡು ಬರುತ್ತಿರುವ ಉದಾಹರಣೆಗಳು ಇವೆಯಾದರೂ ಬ್ರೆಸ್ಟ್ ಕ್ಯಾನ್ಸರ್ ವಿಷಯಕ್ಕೆ ಬರುವುದಾದರೆ ಇದು ಮಹಿಳೆಯರಲ್ಲಿ ಹೆಚ್ಚು. ಸಾಮಾನ್ಯವಾಗಿ ಸ್ತನಗಳಲ್ಲಿ ಗಡ್ಡೆಗಳಾಗುತ್ತಿವೆಯೇ ಎನ್ನುವುದನ್ನು ಪರಿಶೀಸುತ್ತಿರಿ ಎನ್ನುತ್ತಾರೆ ವೈದ್ಯರು. ಗಡ್ಡೆಗಳು ಇದ್ದ ಮಾತ್ರಕ್ಕೆ ಅದು ಕ್ಯಾನ್ಸರೇ ಹೌದು ಎನ್ನಲಾಗದು. ಗಡ್ಡೆ ಬರಲು ಬೇರೆ ಬೇರೆಯದ್ದೂ ಕಾರಣ ಇದ್ದಿರಬಹುದು. ಕೆಲವೊಮ್ಮೆ ಅತಿಯಾದ ಉಷ್ಣಕ್ಕೂ ಗಡ್ಡೆ ಕಾಣಿಸಿಕೊಳ್ಳಬಹುದು. ಆದರೆ ಇದು ಕ್ಯಾನ್ಸರ್ ಗಡ್ಡೆಯೂ ಆಗಿರಬಹುದು ಎನ್ನುವುದು ಅಷ್ಟೇ ನಿಜ.
ಅದರ ಹೊರತಾಗಿಯೂ ಐದು ಲಕ್ಷಣಗಳು ಸ್ತನಗಳಲ್ಲಿ ಕಾಣಿಸಿಕೊಂಡರೆ ಗಾಬರಿಯಾಗದೇ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ಆ ಐದು ಲಕ್ಷಣಗಳನ್ನು ಕಿತ್ತಳೆ ಹಣ್ಣಿಗೆ ಹೋಲಿಕೆ ಮಾಡಿ, ಅದರ ಬಗ್ಗೆ ವಿವರಣೆ ನೀಡಿದ್ದಾರೆ ಖ್ಯಾತ ವೈದ್ಯೆ. ಅದರ ವಿವರ ಹೀಗಿದೆ. ಮುಟ್ಟಾದ ಒಂದು ವಾರಗಳ ಬಳಿಕ ಈ ಕೆಳಗೆ ಹೇಳಿದ್ದನ್ನು ಚೆಕ್ ಮಾಡಬೇಕು. ಯಾವುದೇ ವ್ಯತ್ಯಾಸ ಕಂಡರೆ ತಕ್ಷಣ ವೈದ್ಯರು ಸಂಪರ್ಕಿಸಬೇಕು ಎಂದು ಅವರು ಹೇಳಿದ್ದಾರೆ (ಸುದ್ದಿಯ ಕೊನೆಯಲ್ಲಿ ವಿಡಿಯೋ ಇದೆ)
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.