ಗಂಡ ವಿಪರೀತ ಕುಡಿದು ಹಿಂಸೆ ಕೊಟ್ರೆ ಹೆಂಡ್ತಿ ಡಿವೋರ್ಸ್ ಕೊಡ್ಬೋದು; ಹೈಕೋರ್ಟ್‌

Published : Aug 16, 2023, 03:46 PM ISTUpdated : Aug 16, 2023, 03:58 PM IST
ಗಂಡ ವಿಪರೀತ ಕುಡಿದು ಹಿಂಸೆ ಕೊಟ್ರೆ ಹೆಂಡ್ತಿ ಡಿವೋರ್ಸ್ ಕೊಡ್ಬೋದು; ಹೈಕೋರ್ಟ್‌

ಸಾರಾಂಶ

ಕುಡಿತ ಅದೆಷ್ಟೋ ಮನೆಯ ನೆಮ್ಮದಿಯನ್ನು ಕೆಡಿಸಿದೆ. ಗಂಡನ ಕುಡಿತದ ಅಭ್ಯಾಸದಿಂದ ಅದೆಷ್ಟೋ ಹೆಂಡ್ತಿ, ಮಕ್ಕಳು ಹಿಂಸೆಯಿಂದ ನರಳುತ್ತಿದ್ದಾರೆ. ಹೀಗಿರುವಾಗ ಛತ್ತೀಸ್‌ಘಡ್ ಹೈಕೋರ್ಟ್‌ ಇವರೆಲ್ಲರೂ ನಿರಾಳವಾಗುವಂಥಾ ತೀರ್ಪೊಂದನ್ನು ನೀಡಿದೆ.

ಮದ್ಯಪಾನ ಅನ್ನೋದು ಕೇವಲ ಒಬ್ಬ ವ್ಯಕ್ತಿಯನ್ನು ಮಾತ್ರ ಹಾಳು ಮಾಡುವುದಲ್ಲ. ಬದಲಿಗೆ ಆತನ ಕುಟುಂಬ, ಫ್ರೆಂಡ್ಸ್, ಬಂಧು-ಬಳಗ ಹೀಗೆ ಹಲವರನ್ನು ತೊಂದರೆಗೊಳಪಡಿಸುತ್ತದೆ. ಹೀಗಾಗಿಯೇ ಮದ್ಯಪಾನ ಹಾನಿಕರ ಎಂದು ಹೇಳುತ್ತಾರೆ. ಒಬ್ಬ ವ್ಯಕ್ತಿಗಿರುವ ಕುಡಿತದ ಚಟದಿಂದಾಗಿ ಅದೆಷ್ಟೋ ಮಂದಿ ಮನೆ, ಆಸ್ತಿ ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಅದೆಷ್ಟೋ ಹೆಣ್ಣುಮಕ್ಕಳು ತಂದೆ, ಗಂಡನ ಕುಡಿತದ ಚಟದಿಂದ ವಿದ್ಯಾಭ್ಯಾಸದಿಂದ ವಂಚಿತರಾಗಿದ್ದಾರೆ. ತಿನ್ನಲು ಆಹಾರವಿಲ್ಲದೆ ಹೈರಾಣಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆ ಬಿಟ್ಟು ಹೋಗಿದ್ದಾರೆ. ಹೀಗೆ ಮದ್ಯಪಾನದಿಂದಾಗಿರೋ ಹಾನಿ ಒಂದೆರಡಲ್ಲ. ಹೀಗಿರುವಾಗ ಛತ್ತೀಸ್‌ಘಡ್ ಹೈಕೋರ್ಟ್‌ ಹೆಣ್ಣುಮಕ್ಕಳೆಲ್ಲರೂ ನಿರಾಳವಾಗುವಂಥಾ ತೀರ್ಪೊಂದನ್ನು ನೀಡಿದೆ.

ಪತಿ (Husband) ತನ್ನ ಕರ್ತವ್ಯವನ್ನು ನಿರ್ವಹಿಸುವ ಬದಲು ಮಿತಿಮೀರಿದ ಮದ್ಯಪಾನದಲ್ಲಿ (Drinking) ತೊಡಗಿದರೆ, ಅದು ಅವನ ಮಕ್ಕಳು ಸೇರಿದಂತೆ ಅವನ ಹೆಂಡತಿ ಮತ್ತು ಕುಟುಂಬಕ್ಕೆ ಮಾನಸಿಕ ಕ್ರೌರ್ಯ (Mental cruelty)ವನ್ನು ನೀಡುತ್ತದೆ. ಹೀಗಾಗಿ ಪತ್ನಿಯ ಕುಡಿತದಿಂದ ವಿಪರೀತ ತೊಂದರೆಯನ್ನು ಅನುಭವಿಸಿದರೆ ಪತ್ನಿ (wife) ವಿಚ್ಛೇದನ ನೀಡಬಹುದು ಎಂದು ಹೈಕೋರ್ಟ್‌ ಹೇಳುತ್ತದೆ. ನ್ಯಾಯಮೂರ್ತಿಗಳಾದ ಗೌತಮ್ ಭಾದುರಿ ಮತ್ತು ಸಂಜಯ್ ಅಗರವಾಲ್ ಅವರು ಗಂಡನ ಕುಡಿತದಿಂದ ಕ್ರೌರ್ಯವಾದರೆ ಮಹಿಳೆ ತನ್ನ ಮದುವೆಯನ್ನು ತೊರೆಯಬಹುದು ಎಂದು ಸೂಚಿಸಿದೆ.

ಸಮ್ಮತಿ ಸೆಕ್ಸ್ ನಂತರ ಅತ್ಯಾಚಾರ ಆರೋಪ ಮಾಡುವಂತಿಲ್ಲ: ಹೈಕೋರ್ಟ್ ಮಹತ್ವದ ಹೇಳಿಕೆ

ಮಕ್ಕಳ ಫೀಸ್ ಕಟ್ಟದೆ, ಮನೆಯ ಅಗತ್ಯ ಪೂರೈಸದೆ ಕುಡಿಯುವ ಗಂಡ
ಪಾಯಲ್ ಶರ್ಮಾ ಮತ್ತು ಉಮೇಶ್ ಶರ್ಮಾ ಎಂಬವರ ಪ್ರಕರಣವನ್ನು ಕೋರ್ಟ್ ವಿಚಾರಣೆ ನಡೆಸುತ್ತಿತ್ತು. ಈ ಸಂದರ್ಭದಲ್ಲಿ ಪತಿ ತನ್ನ ಹೆಂಡತಿ ಮತ್ತು ಮಕ್ಕಳ ಕಾಳಜಿ ವಹಿಸುತ್ತಿಲ್ಲ ಎಂಬುದನ್ನು ಕೋರ್ಟ್ ಗಮನಿಸಿದೆ. 'ಹೆಂಡತಿಯು ತನ್ನ ಮನೆಯ ಅಗತ್ಯಗಳಿಗಾಗಿ ಮತ್ತು ತನ್ನ ಮಕ್ಕಳನ್ನು ಉತ್ತಮ ಶಿಕ್ಷಣ ಮತ್ತು ಜೀವನವನ್ನು ನೀಡಲು ಗಂಡನ ಮೇಲೆ ಅವಲಂಬಿತರಾಗಿರುವುದು ತುಂಬಾ ಸಹಜ, ಪತಿ ತನ್ನ ಜವಾಬ್ದಾರಿಯನ್ನು ನಿರ್ವಹಿಸುವ ಬದಲು ಮಿತಿಮೀರಿದ ಕುಡಿತದ ಚಟಕ್ಕೆ ತೊಡಗಿದರೆ, ಅದು ಕುಟುಂಬವನ್ನು ಹದಗೆಡಿಸುತ್ತದೆ. ಈ ಸ್ಥಿತಿಯು ಸಹಜವಾಗಿಯೇ ಹೆಂಡತಿ ಮತ್ತು ಮಕ್ಕಳು ಸೇರಿದಂತೆ ಇಡೀ ಕುಟುಂಬಕ್ಕೆ ಮಾನಸಿಕ ಕ್ರೌರ್ಯಕ್ಕೆ ಕಾರಣವಾಗುತ್ತದೆ' ಎಂದು ಪೀಠ ಹೇಳಿದೆ.

ಪತಿಯಿಂದ ಕ್ರೌರ್ಯದಿಂದ ಕುಟುಂಬದಲ್ಲಿ ಅನೇಕ ಸಮಸ್ಯೆಗಳಾಗಿತ್ತು ಎಂದು ನ್ಯಾಯಾಲಯ ಗಮನಿಸಿದೆ. ಮದ್ಯ ಸೇವಿಸಿ ಅಮಲಿನಲ್ಲಿ ಪತಿ ಪತ್ನಿಯ ಮೇಲೆ ದೌರ್ಜನ್ಯ ಎಸಗುತ್ತಿದ್ದ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ. ಮದ್ಯವನ್ನು ಖರೀದಿಸಲು ಗೃಹೋಪಯೋಗಿ ವಸ್ತುಗಳನ್ನು ಮಾರಾಟ ಮಾಡುವ ಮಟ್ಟಕ್ಕೆ ಪರಿಸ್ಥಿತಿ ಉಲ್ಬಣಗೊಂಡಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. 

ಸುಳ್ಳು ರೇಪ್ ಕೇಸ್ ಹಾಕಿ ಆತನನ್ನೇ ಮದ್ವೆಯಾದ ಯುವತಿಗೆ ದಂಡ ವಿಧಿಸಿದ ಹೈಕೋರ್ಟ್‌

ದಂಪತಿಗೆ ಇಬ್ಬರು ಮಕ್ಕಳಿದ್ದರೂ, ಪತಿ ಅವರ ಶಾಲಾ ಶುಲ್ಕವನ್ನು ಪಾವತಿಸಿಲ್ಲ. ಇದಕ್ಕಾಗಿ ಹಣ ಕೇಳಿದಾಗ ಪತಿ, ಪತ್ನಿಗೆ ನಿಂದನೆ ಮತ್ತು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಕೌಟುಂಬಿಕ ನ್ಯಾಯಾಲಯದ ವಿಚಾರಣೆಯ ಸಂದರ್ಭದಲ್ಲಿ ಪತಿ ಈ ಆರೋಪಗಳ ಕುರಿತು ಪತ್ನಿಯನ್ನು ಪ್ರಶ್ನಿಸದ ಕಾರಣ, ಈ ಆರೋಪಗಳನ್ನು ಸ್ವೀಕರಿಸಲಾಗಿದೆ ಎಂದು ಹೈಕೋರ್ಟ್ ಪರಿಗಣಿಸಿದೆ.'ಹೆಂಡತಿಯ ನಡವಳಿಕೆಯು ಅವಳು ಮದುವೆಯನ್ನು ಉಳಿಸಲು ಪ್ರಯತ್ನಿಸಿದಳು ಎಂದು ತೋರಿಸುತ್ತದೆ. ಹಿಂದಿನ ಸಂದರ್ಭದಲ್ಲಿ ಅತಿಯಾದ ಮದ್ಯಪಾನದ ಆಧಾರದ ಮೇಲೆ ವಿಚ್ಛೇದನ ಕೋರಿ ಸಲ್ಲಿಸಿದ ಅರ್ಜಿಯನ್ನು ಪತಿ ತನ್ನ ನಡವಳಿಕೆಯನ್ನು (Behaviour) ಸರಿಪಡಿಸುವ ಭರವಸೆಯ ಮೇರೆಗೆ ಆಕೆ ಹಿಂತೆಗೆದುಕೊಂಡಿದ್ದಳು' ಎಂದು ಪೀಠವು ಹೇಳಿದೆ.

ಎಲ್ಲಾ ಅವಲೋಕನಗಳನ್ನು ನಡೆಸಿ ಪೀಠವು ಇಬ್ಬರ ನಡುವಿನ ವಿವಾಹ (Marriage)ವನ್ನು ಅನೂರ್ಜಿತಗೊಳಿಸಿತು.. ಜೀವನಾಂಶವಾಗಿ ಪತ್ನಿಗೆ ಮಾಸಿಕ 15,000 ರೂ. ನೀಡುವಂತೆಯೂ ಪತಿಗೆ ಕೋರ್ಟ್‌ ಆದೇಶಿಸಿದೆ. ಪತ್ನಿ ಪರ ವಕೀಲ ಬರುಣ್ ಕುಮಾರ್ ಚಕ್ರವರ್ತಿ ವಾದ ಮಂಡಿಸಿದ್ದರು. ಪತಿಯ ಪರ ಯಾರೂ ವಾದ ಮಾಡಲ್ಲಿಲ್ಲ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸೋನಿಯಾ ಗಾಂಧಿ ಮೊದಲ ಬಾರಿಗೆ ಇಂದಿರಾ ಗಾಂಧಿಯನ್ನು ಭೇಟಿಯಾದಾಗ ಏನಾಗಿತ್ತು?
ಮಹಿಳಾ ನೌಕರರಿಗೆ ಬ್ಯಾಡ್ ನ್ಯೂಸ್: ಮುಟ್ಟಿನ ರಜೆಗೆ ಹೈಕೋರ್ಟ್ ತಡೆ: ಸರ್ಕಾರದ ಆದೇಶಕ್ಕೆ ಹಿನ್ನಡೆ?