
ಹೆಣ್ಣುಮಕ್ಕಳ ತಲೆಯಲ್ಲಿ ಹೇನು ಆಗೋದು ಸಾಮಾನ್ಯ. ಉದ್ದ ಕೂದಲಿದ್ದಾಗ, ತಲೆ ಸ್ನಾನ ಮಾಡಿ ಕೂದಲು ಒಣಗದಿದ್ದಾಗ ಹೇನು ಉಂಟಾಗುತ್ತದೆ. ಇಲ್ಲದಿದ್ದರೆ ಸಹಜವಾಗಿ ಮಕ್ಕಳು ಶಾಲೆಯಲ್ಲಿ ಇತರ ವಿದ್ಯಾರ್ಥಿನಿಯರ ಜೊತೆ ಬೆರೆಯುವ ಕಾರಣ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಹೀಗೆ ಆದಾಗ ಸಾಮಾನ್ಯವಾಗಿ ಪೋಷಕರು ಹೇನು ಸಾಯಿಸೋ ಎಣ್ಣೆನೋ, ಶಾಂಪೂನೋ ಬಳಸಿ ಹೇನು ಕಡಿಮೆ ಮಾಡೋಕೆ ಟ್ರೈ ಮಾಡ್ತಾರೆ. ಇನ್ನೂ ಕೆಲ ತಾಯಂದಿರು ಕೈಯಲ್ಲೇ ತಲೆಯಿಂದ ಹೇನು ತೆಗೆದು ಸಾಯಿಸಿ ಬಿಡ್ತಾರೆ. ಕ್ರಮೇಣ ಹೇನಿನ ಸಮಸ್ಯೆ ಕಡಿಮೆಯಾಗುತ್ತಾ ಹೋಗುತ್ತೆ. ಆದ್ರೆ ಇಲ್ಲೊಬ್ಬ ತಾಯಿಯಿದ್ದಾಳೆ ಆಕೆ ತನ್ನ ಮಗಳ ತಲೆಯಿಂದ ಹೇನು ತೆಗೆಯೋಕೆ ಜಪ್ಪಯ್ಯಾ ಅಂದ್ರೂ ಒಪ್ತಿಲ್ಲ. ನಾನು ಸಸ್ಯಾಹಾರಿ ಅಂತಿದ್ದಾಳೆ.
ತಲೆಯಲ್ಲಿರೋ ಹೇನನ್ನು ತೆಗೆದು ಸಾಯಿಸೋಕೆ ಒಪ್ತಿಲ್ಲ ಸಸ್ಯಾಹಾರಿ ತಾಯಿ
ಆಸ್ಟ್ರೇಲಿಯಾದಲ್ಲಿ, ತಾಯಿ (Mother)ಯೊಬ್ಬಳು , ಮಗಳ ತಲೆಯಲ್ಲಿರೋ ಹೇನನ್ನು ತೆಗೆದು ಸಾಯಿಸೋಕೆ ಒಪ್ತಿಲ್ಲ. ಯಾಕೆಂದರೆ ನಾನು ಸಸ್ಯಾಹಾರಿ, ಹಾಗೆಲ್ಲಾ ಮಾಡಲ್ಲ ಅಂದಿರೋದು ಎಲ್ಲೆಡೆ ಚರ್ಚೆಯನ್ನು ಹುಟ್ಟು ಹಾಕಿದೆ. ಸಸ್ಯಾಹಾರಿ (Vegetarian) ಜೀವನಶೈಲಿಗೆ ಒಗ್ಗಿಕೊಂಡಿರುವ ನಾನು ಯಾವುದೇ ಜೀವಿ (Insects)ಗಳಿಗೆ ಹಾನಿಯನ್ನುಂಟು ಮಾಡಲು ಬಯಸುವುದಿಲ್ಲ ಎಂದು ಮಹಿಳೆ ಹೇಳುತ್ತಾರೆ. ಇದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಗಳು ಹೇನಿನ (Lice) ಸಮಸ್ಯೆಯಿಂದ ಬಳಲುತ್ತಿದ್ದಾಳೆ. ಆದರೆ ತಾಯಿ ವಿಚಿತ್ರ ವಾದವನ್ನು ಮುಂದಿಟ್ಟುಕೊಂಡು ಆಕೆಗೆ ತೊಂದರೆ ಮಾಡುತ್ತಿದ್ದಾಳೆ ಎಂದು ಜನರು ಹೀಯಾಳಿಸುತ್ತಿದ್ದಾರೆ.
Hair Care : ಕೊಳಕಿನ ಕಾರಣ ಬಿಟ್ಟು, ತಲೇಲಿ ಹೇನು ಆಗೋಕೆ ಬೇರೆ ಕಾರಣವಿದ್ಯಾ?
ಯಾವುದೇ ಪ್ರಾಣಿಯನ್ನು ಹಿಂಸಿಸುವುದಿಲ್ಲ ಎಂದು ಪಟ್ಟು
ಈ ಬಗ್ಗೆ ಹುಡುಗಿಯ ಸ್ನೇಹಿತೆ ಮಾಹಿತಿ ನೀಡಿದ್ದಾಳೆ. ಭೇಟಿಯ ಸಮಯದಲ್ಲಿ, ಹುಡುಗಿ ನಿರಂತರವಾಗಿ ತನ್ನ ತಲೆಯನ್ನು ಕೆರೆದುಕೊಳ್ಳುವುದನ್ನು ಗಮನಿಸಿದಳು. ನೋಡಿದಾಗ ಆಕೆಯ ತಲೆ ತುಂಬಾ ಹೇನಿರುವುದು ಕಂಡು ಬಂತು. ತಕ್ಷಣ ಆಕೆ ವಿಚಾರವನ್ನು ಹುಡುಗಿಯ ಪೋಷಕರಿಗೆ ತಿಳಿಸಿದ್ದಾಳೆ. ಆ ಬಗ್ಗೆ ತಿಳಿದ ಪೋಷಕರು, ಮುಖ್ಯವಾಗಿ ತಾಯಿ ಹೇನನ್ನು ಸಾಯಿಸದಿರಲು ನಿರ್ಧರಿಸಿದರು. 'ನಾನು ಹೇನನ್ನು ಕೈಯಾರೆ ಸಾಯಿಸಲು ಬಯಸುವುದಿಲ್ಲ. ಯಾಕೆಂದರೆ ನಾನು ಯಾವುದೇ ಪ್ರಾಣಿಯನ್ನು ಹಿಂಸಿಸುವುದಿಲ್ಲ. ಅದು ಪುಟ್ಟದಾಗಿರಲಿ ಅಥವಾ ದೊಡ್ಡದಾಗಿರಲಿ' ಎಂದು ಮಹಿಳೆ ಹೇಳಿದ್ದಾರೆ. ಬದಲಿಗೆ ಹೇನನ್ನು ಸಾಯಿಸುವ ಎಣ್ಣೆಯನ್ನು ಬಳಸುತ್ತೇನೆ ಎಂದು ತಿಳಿಸಿದ್ದಾರೆ.
ಮಹಿಳೆಯ ನಿಲುವಿಗೆ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು, 'ನಿಮ್ಮ ಅತಿಯಾದ ಸಸ್ಯಾಹಾರಿ ನಿಲುವಿನಿಂದ ಮಗಳ ಆರೋಗ್ಯ ಹಾಳಾಗುವುದು ಖಂಡಿತ' ಎಂದಿದ್ದಾರೆ, ಇನ್ನೊಬ್ಬರು 'ಈ ರೀತಿ ಆಹಾರದ ಕುರಿತು ಅನಾವಶ್ಯಕ ಚರ್ಚೆಯ ಅಗತ್ಯವಿದೆಯೇ' ಎಂದು ಪ್ರಶ್ನಿಸಿದ್ದಾರೆ. ಮತ್ತೆ ಕೆಲವರು ಆಕೆಯನ್ನು ಕ್ರೂರಿ ತಾಯಿ ಎಂದು ಕರೆದಿದ್ದಾರೆ.
ಹೇನು ಕಚ್ಚಿಯೇ ಸತ್ತಳು 12ರ ಹುಡುಗಿ: ಪೋಷಕರು ಜೈಲಿಗೆ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.