ಮುಟ್ಟು ನಿಲ್ಲುವ ಸಂದರ್ಭದಲ್ಲಿ ಮಹಿಳೆ ಅನೇಕ ಸಮಸ್ಯೆಗಳನ್ನು ಎದುರಿಸ್ತಾಳೆ. ಹಾರ್ಮೋನ್ ಏರುಪೇರಿನಿಂದಾಗಿ ಕ್ಯಾನ್ಸರ್ ನಂತಹ ರೋಗ ಕಾಡೋದಿದೆ. ಈ ಸಮಯದಲ್ಲಿ ಮಹಿಳೆ ಸದಾ ಕಿರಿಕಿರಿ ಅನುಭವಿಸ್ತಾಳೆ. ಅದ್ರಿಂದ ಮುಕ್ತಿ ಸಿಗ್ಬೇಕೆಂದ್ರೆ ಮಹಿಳೆ ಆರಂಭದಲ್ಲಿಯೇ ಕೆಲ ಆರೋಗ್ಯಕರ ಆಹಾರ ಸೇವನೆ ಮಾಡ್ಬೇಕು.
ಋತುಚಕ್ರದ ಪ್ರಾರಂಭದ ಹಂತ ಹಾಗೂ ಕೊನೆಯ ಹಂತ ಎರಡೂ ಹೆಣ್ಣುಮಕ್ಕಳಿಗೆ ಸತ್ವಪರೀಕ್ಷೆ. ಸರಿಯಾಗಿ ತಿಳಿವಳಿಕೆಯಿಲ್ಲದ ಸಮಯದಲ್ಲಿ ಆರಂಭವಾಗುವ ಮುಟ್ಟಿನ ಸಮಸ್ಯೆ ದೇಹದಲ್ಲಿ ಚೈತನ್ಯ ಇಲ್ಲದಿರುವಾಗ ಕೊನೆಗೊಳ್ಳುತ್ತದೆ. ಹೆಣ್ಣಾದವಳು ಈ ಎರಡೂ ಹಂತಗಳಲ್ಲಿಯೂ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತೀ ಮುಖ್ಯ.
ಮುಟ್ಟು (Periods) ಬಿಡುವ ಅಂದರೆ ಮೆನೊಪಾಸ್ (Menopause) ಸಮಯದಲ್ಲಿ ಕೂಡ ಹಾರ್ಮೋನು (Hormones) ಗಳಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ಈ ಬದಲಾವಣೆಗಳಿಂದ ಮಹಿಳೆಯರು ಹಲವು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸಾಮಾನ್ಯವಾಗಿ 45ರಿಂದ 50 ವರ್ಷ ವಯಸ್ಸಿನಲ್ಲಿ ಋತುಚಕ್ರ ನಿಲ್ಲುತ್ತದೆ. ಹೀಗೆ ನಿಲ್ಲುವ ಮೊದಲು ಅದು ಅನೇಕ ಲಕ್ಷಣಗಳನ್ನು ತೋರಿಸುತ್ತೆ. ಆ ಸಮಯದಲ್ಲಿ ಮಹಿಳೆಯರಲ್ಲಿ ಅಂಡಾಣು ಉತ್ಪತ್ತಿಯಾಗುವುದಿಲ್ಲ ಹಾಗಾಗಿ ಮೆನೊಪಾಸ್ ನಂತರ ಮಹಿಳೆಯರು ಗರ್ಭಿಣಿಯಾಗಲು ಸಾಧ್ಯವಿಲ್ಲ. ಮೆನೊಪಾಸ್ ನ ಮುಂಚಿನ ಸಮಯ ಅಂದರೆ ಪೆರಿಮೆನೊಪಾಸ್ ಅವಧಿಯಲ್ಲಿ ಪೀರಿಯಡ್ಸ್ ಅನಿಯಮಿತವಾಗಿರುತ್ತದೆ. ಇದು ಕೂಡ ಮೆನೊಪಾಸ್ ನ ಒಂದು ಲಕ್ಷಣವೇ ಆಗಿದೆ. ಇದರ ಹೊರತಾಗಿ ಈ ಕೆಳಗಿನ ಲಕ್ಷಣಗಳು ಕೂಡ ಮಹಿಳೆಯರಲ್ಲಿ ಕಂಡುಬರುತ್ತವೆ.
ಹುಟ್ಟುವ ಮಗುವಿನ ಆರೋಗ್ಯ, ಸಂತೋಷಕ್ಕಾಗಿ ಗರ್ಭಿಣಿಯರು ಈ ಮಂತ್ರ ಹೇಳಿ..
• ಶರೀರದಲ್ಲಿ ಅತಿಯಾದ ಬೆವರು (ಹಾಟ್ ಫ್ಲ್ಯಾಷ್)
• ಯೋನಿ ಶುಷ್ಕತೆ
• ಕೀಲು ನೋವು
• ತಲೆ ನೋವು
• ನಿದ್ರಾಹೀನತೆ
• ತೂಕದಲ್ಲಿ ಬದಲಾವಣೆ
• ಮಾನಸಿಕ ಸ್ಥಿತಿಯಲ್ಲಿ ಬದಲಾವಣೆ
ಪೆರಿಮೆನೊಪಾಸ್ ಲಕ್ಷಣಗಳಿಂದ ಹೀಗೆ ಮುಕ್ತಿ ಪಡೆಯಿರಿ : ಮುಟ್ಟು ನಿಲ್ಲುವ ಸಮಯದಲ್ಲಿ ಮಹಿಳೆಯರ ಶರೀರದಲ್ಲಿ ಹಾಗೂ ಮಾನಸಿಕ ಸ್ಥಿತಿಯಲ್ಲಾಗುವ ಬದಲಾವಣೆಗಳಿಂದ ಅವರ ನಿತ್ಯದ ಜೀವನದಲ್ಲಿ ಅನೇಕ ತೊಂದರೆಗಳಾಗುತ್ತದೆ. ದೇಹದಲ್ಲಿ ಸುಸ್ತು ಇರುವುದರಿಂದ ಮನೆ, ಕಚೇರಿಯ ಕೆಲಸಗಳನ್ನು ನಿಭಾಯಿಸುವುದು ಕೂಡ ಅವರಿಗೆ ಕಷ್ಟವಾಗುತ್ತದೆ. ಇಂತಹ ತೊಂದರೆಗಳಿಂದ ದೂರವಾಗಲು ಮಹಿಳೆಯರು ತಮ್ಮ ಆಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಮಹಿಳೆಯರು ಗೋಧಿ ರೊಟ್ಟಿಯ ಬದಲು ಸೋಯಾ ಹಿಟ್ಟಿನ ರೊಟ್ಟಿಯನ್ನು ಸೇವಿಸುವುದರಿಂದ ಪೆರಿಮೆನೊಪಾಸ್ ಲಕ್ಷಣಗಳಿಂದ ಮುಕ್ತಿ ಪಡೆಯಬಹುದು.
ಎದೆ ಹಾಲುಣಿಸುವಾಗ ಮೊಬೈಲ್ ಬಳಸ್ತೀರಾ? ಎಚ್ಚರ..ಇದು ಮಗುವಿನ ಆರೋಗ್ಯಕ್ಕೆ ಡೇಂಜರ್
ಸೋಯಾ ಹಿಟ್ಟಿನಲ್ಲಿ ಐಸೊಪ್ಲೇವೊನ್ (ಫೈಟೊಸ್ಟ್ರೊಜೆನ್)ಅಧಿಕವಾಗಿದೆ. ಇದು ಯೋನಿಯ ಶುಷ್ಕತೆ ಮತ್ತು ಬಿಸಿ ಹೊಳಪಿನಂತಹ ಪೆರಿಮೆನೊಪಾಸ್ ಲಕ್ಷಣಗಳನ್ನು ನಿವಾರಿಸುತ್ತೆ. ಇದರಿಂದ ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ. ಸೋಯಾಬೀನ್ ಖನಿಜ ಸಾಂದ್ರತೆಯನ್ನು ಹೆಚ್ಚಿಸುತ್ತದೆ ಮತ್ತು ಋತುಬಂಧಕ್ಕೊಳಗಾದ ಮಹಿಳೆಯರಲ್ಲಿ ಆಸ್ಟಿಯೊಪೆರೋಸಿಸ್ ಸಮಸ್ಯೆಯನ್ನು ಕಡಿಮೆಮಾಡುತ್ತೆ. ಸೋಯಾಬೀನ್ ನಲ್ಲಿ ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ರಂಜಕದಂತಹ ಖನಿಜಗಳಿಂದ ಸಮೃದ್ಧವಾಗಿದೆ. ಹಾಗಾಗಿ ಮಹಿಳೆಯರು ಸೋಯಾಬೀನ್ ಹಿಟ್ಟಿನ ರೊಟ್ಟಿಯನ್ನು ಸೇವಿಸುವುದು ಉತ್ತಮ. ಇದರಿಂದ ಋತುಬಂಧದ ಸಮಯದಲ್ಲಿ ಉಂಟಾಗುವ ಕೀಲು ನೋವು, ಮಂಡಿ ನೋವುಗಳ ತೊಂದರೆಯಿಂದ ದೂರವಿರಬಹುದು.
ಸೋಯಾಬೀನ್ ರೊಟ್ಟಿ ಮಾಡುವ ವಿಧಾನ :
ಸೋಯಾ ರೊಟ್ಟಿಗೆ ಬೇಕಾಗುವ ಸಾಮಗ್ರಿ
1 ಕಪ್ ಸೋಯಾ ಹಿಟ್ಟು, 1 ಕಪ್ ನೀರು, 1 ಚಮಚ ತುಪ್ಪ, ½ ಚಮಚ ಗೋಧಿ ಹಿಟ್ಟು, ಉಪ್ಪು
ಸೋಯಾ ರೊಟ್ಟಿ ತಯಾರಿಸುವ ವಿಧಾನ
• ಮೊದಲು ಒಂದು ಬಾಣಲೆಯಲ್ಲಿ ನೀರು ಹಾಕಿ ಅದನ್ನು ಕುದಿಸಿ.
• ನೀರು ಕುದಿದ ನಂತರ ಅದಕ್ಕೆ ಉಪ್ಪು ಮತ್ತು ತುಪ್ಪವನ್ನು ಹಾಕಿ.
• ನಂತರ ಸೋಯಾ ಹಿಟ್ಟನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಬಾಣಲೆಯನ್ನು ಮುಚ್ಚಳದ ಸಹಾಯದಿಂದ ಮುಚ್ಚಿ.
• ಗ್ಯಾಸ್ ಆಫ್ ಮಾಡಿ 10 ನಿಮಿಷ ಹಿಟ್ಟನ್ನು ಹೊಂದಿಕೊಳ್ಳಲು ಬಿಡಿ.
• ಹತ್ತು ನಿಮಿಷದ ಬಳಿಕ ಮಿಶ್ರಣವನ್ನು ಬೇರೆ ಪಾತ್ರೆಗೆ ಹಾಕಿ ಅದಕ್ಕೆ ಗೋಧಿ ಹಿಟ್ಟನ್ನು ಸೇರಿಸಿ ಚೆನ್ನಾಗಿ ಕಲಸಿ.
• ನಂತರ ಉಂಡೆಗಳನ್ನಾಗಿ ಮಾಡಿ ಲಟ್ಟಿಸಿ ಬೇಯಿಸಿದರೆ ಆರೋಗ್ಯಕರ ಸೋಯಾ ಹಿಟ್ಟಿನ ರೊಟ್ಟಿ ತಿನ್ನಲು ಸಿದ್ಧ.