ಡೈಮಂಡ್ ಡಿಮ್ಯಾಂಡ್ ಮಾಡಿದ ಭ್ರೂಣ, ಲಗ್ಸುರಿ ಬಯಕೆ ಪೂರೈಸಿದ ಅಪ್ಪಂಗೆ ಭೇಷ್ ಎಂದ ನೆಟ್ಟಿಗರು!

By Suvarna News  |  First Published Apr 24, 2024, 4:35 PM IST

ಗರ್ಭ ಧರಿಸಿದವರಿಗೆ ಬಯಕೆ ಸಾಮಾನ್ಯ. ಪತ್ನಿ ಸಣ್ಣಪುಟ್ಟ ವಸ್ತು ಕೇಳಿದ್ರೆ ತಂದ್ಕೊಡಬಹುದು. ಆದ್ರೆ ಈ ಮಹಿಳೆ ಕೇಳಿದ ವಸ್ತು ಕೇಳಿದ್ರೆ ನೀವು ದಂಗಾಗ್ತೀರಾ. ಪತಿ ಮಾತ್ರ ಪತ್ನಿ ಆಸೆ ಈಡೇರಿಸಿದ್ದು, ನೆಟ್ಟಿಗರು ಕಣ್ಣು ಕೆಂಪು ಮಾಡಿದ್ದಾರೆ.
 


ಗರ್ಭಧರಿಸಿದ ಪ್ರತಿಯೊಬ್ಬರಿಗೂ ಏನಾದ್ರೂ ತಿನ್ನಬೇಕು, ಎಲ್ಲಿಗಾದ್ರೂ ಹೋಗ್ಬೇಕು ಎನ್ನುವ ಬಯಕೆ ಇರುತ್ತದೆ. ಅದನ್ನು ಬಸುರಿ ಬಯಕೆ ಎಂದೇ ಕರೆಯಲಾಗುತ್ತದೆ. ಮಾವಿನ ಕಾಯಿ ತಿನ್ನೋದ್ರಿಂದ ಹಿಡಿದು ಗರ್ಭಿಣಿ ಕೇಳಿದ್ದೆಲ್ಲವನ್ನು ಕೊಡಿಸುವ ಪ್ರಯತ್ನವನ್ನು ಆಕೆ ಸಂಬಂಧಿಕರು, ಕುಟುಂಬಸ್ಥರು ಮಾಡ್ತಾರೆ. ಸಾಧ್ಯ ಎನ್ನುವ ಎಲ್ಲವನ್ನು ಗರ್ಭಿಣಿಗೆ ಕೊಡಿಸುವ ಪ್ರಯತ್ನವನ್ನು ಕುಟುಂಬಸ್ಥರು ಮಾಡ್ತಾರೆ. ಆದ್ರೆ ಗರ್ಭಿಣಿ ಎನ್ನುವ ಕಾರಣಕ್ಕೆ ದುಬಾರಿ ವಸ್ತು, ಮನೆ, ಆಭರಣ ಕೇಳಿದ್ರೆ ಅದನ್ನು ತಂದುಕೊಡೋದು ಎಲ್ಲರಿಗೂ ಸಾಧ್ಯವಿಲ್ಲ. ವಜ್ರ – ವೈಡೂರ್ಯ ಕೇಳಿದ್ರೆ ಪತಿಯಾದವನು ತಲೆಸುತ್ತಿ ಬೀಳ್ತಾನೆ. ಆದ್ರೆ ಇಲ್ಲೊಬ್ಬ ಪತಿ ತನ್ನ ಗರ್ಭಿಣಿ ಪತ್ನಿ ಕೇಳಿದ್ದೆಲ್ಲವನ್ನೂ ಕೊಡಿಸಿದ್ದಾನೆ. ಆಕೆ ಕೇಳಿದ್ದು ಕಡಿಮೆ ಬೆಲೆ ವಸ್ತುವಲ್ಲ.ಹೊಟ್ಟೆಯಲ್ಲಿರುವ ಮಗು ವಜ್ರ ಕೇಳ್ತಿದೆ ಎಂದು ಪತ್ನಿ ಹೇಳ್ತಿದ್ದಂತೆ ಆಕೆ ಮುಂದೆ ವಜ್ರದ ಹೊಳೆ ಹರಿಸಿದ್ದಾನೆ ಆಕೆ ಪತಿ. ನಮಗೆ ಈ ಅದೃಷ್ಟ ಎಲ್ಲಿದೆ ಎಂದು ಅನೇಕ ಮಹಿಳೆಯರು ಕೈ ಕೈ ಹಿಸುಕಿಕೊಳ್ತಿದ್ದಾರೆ. 

ಗರ್ಭದಲ್ಲಿರುವ ಮಗು ವಜ್ರ (Diamond) ಕೇಳ್ತಿದೆ ಎಂದು ಹೇಳಿದ ಮಹಿಳೆ ಹೆಸರು ಲಿಂಡಾ ಆಂಡ್ರೇಡ್. ಮೂಲತಃ ಅಮೆರಿಕಾ (America) ದವಳು. ಆಕೆ ತನ್ನ ಪತಿ ರಿಕಿ ಆಂಡ್ರೇಡ್ ಜೊತೆ ಯುಎಇ (UAE) ಯಲ್ಲಿ ವಾಸವಾಗಿದ್ದಾಳೆ. ಲಿಂಡಾ ಕೆಲ ದಿನಗಳ ಹಿಂದಷ್ಟೆ ಮಗಳಿಗೆ ಜನ್ಮ ನೀಡಿದ್ದಾಳೆ. ಲಿಂಡಾ ತಾನು ಗರ್ಭ ಧರಿಸಿದ ಸಮಯದಲ್ಲಿ ಏನಾಯ್ತು ಎಂಬುದನ್ನು ವಿಡಿಯೋ ಮೂಲಕ ತಿಳಿಸಿದ್ದಾಳೆ. ಗರ್ಭಧಾರಣೆ ಸಮಯ ಅತ್ಯಂತ ರೋಮಾಂಚನಕಾರಿಯಾಗಿತ್ತು ಎಂದು ಲಿಂಡಾ ಹೇಳಿದ್ದಾಳೆ. 

Tap to resize

Latest Videos

ಗರ್ಲ್ಸ್ ಟ್ರಿಪ್ ಗೆ ಹೋಗಿ ಬಂದವಳೇ ಪತಿಗೆ ಡಿವೋರ್ಸ್ ನೀಡಿದ್ಲು! ಆಗಿದ್ದೇನು ಅಲ್ಲಿ?

ಲಿಂಡಾ ಗರ್ಭಿಣಿಯಾಗಿದ್ದಾಗ ಯಾವುದೇ ವಿಟಮಿನ್ ಮಾತ್ರೆಗಳನ್ನು ತೆಗೆದುಕೊಳ್ತಿರಲಿಲ್ಲ. ಆಕೆ ಫೈವ್ ಸ್ಟಾರ್ ಹೊಟೇಲ್ ನಲ್ಲಿ ವಾಸವಾಗಿದ್ದಳು. ಆಕೆ ಮನೆಯಲ್ಲಿದ್ದಾಗ ಹೊಟ್ಟೆಯಲ್ಲಿರುವ ಮಗು ಒದೆಯುತ್ತಿತ್ತಂತೆ. ಮಗು ಸುತ್ತಾಡಲು ಬಯಸ್ತಿದೆ ಎಂಬುದನ್ನು ತಿಳಿದುಕೊಂಡ ಲಿಂಡಾ ಪ್ರವಾಸಕ್ಕೆ ಪ್ಲಾನ್ ಮಾಡಿದ್ಲು. ಹಾಗಾಗಿಯೇ ಲಿಂಡಾ ಮಾಲ್ಡೀವ್ಸ್ ಪ್ರವಾಸಕ್ಕೆ ಹೋಗಿದ್ದಳು. 

ಲಿಂಡಾ ಪ್ರಕಾರ ಆಕೆ ಬಳಿ ಸಾಕಷ್ಟು ಆಭರಣವಿದೆ. ಆದ್ರೆ ಆಕೆ ಹೊಟ್ಟೆಯಲ್ಲಿರುವ ಮಗು ದುಬಾರಿ ಆಭರಣ ಕೇಳಿತ್ತು. ಮಗುವಿಗಾಗಿ ನೀವು ದುಬಾರಿ ಆಭರಣ ಖರೀದಿಸಬೇಕಾಗುತ್ತೆ. ಮಗು ವಜ್ರ ಕೇಳ್ತಿದೆ ಎಂದು ಲಿಂಡಾ ಪತಿಗೆ ಹೇಳಿದ್ದಳಂತೆ. ಸ್ವಲ್ಪವೂ ಬೇಸರಪಟ್ಟುಕೊಳ್ಳದ ಲಿಂಡಾ ಪತಿ, ವಜ್ರದ ಆಭರಣ ತಂದಿದ್ದರಂತೆ.

ಗರ್ಭಾವಸ್ಥೆಯಲ್ಲಿ ನಾನು ಸಾಕಷ್ಟು ಹಣ ಖರ್ಚು ಮಾಡಿದ್ದೇನೆ ಎಂದು ಲಿಂಡಾ ಹೇಳಿದ್ದಾಳೆ. ಲಿಂಡಾಗೆ ಕೂದಲು ಕ್ಲೀನ್ ಮಾಡಲು ಸಾಧ್ಯವಾಗ್ತಿರಲಿಲ್ಲವಂತೆ. ಹಾಗಾಗಿ ಆಕೆ ಪ್ರತಿ ದಿನ ಕೇಶ ವಿನ್ಯಾಸಕರ ಬಳಿ ಹೋಗ್ತಿದ್ದಳು. ಮಗುವಿನ ತೂಕ ಹೆಚ್ಚಾಯ್ತಾ ಹೋದಂತೆ ವ್ಯಾಯಾಮ ಅನಿವಾರ್ಯವಾಗಿತ್ತು. ಪ್ರತಿ ದಿನ 20,000 ಹೆಜ್ಜೆ ಹಾಕ್ತಿದ್ದಳು. ದುಬೈ ಮಾಲ್ ಸುತ್ತಲು, ವ್ಯಾಯಾಮ ಮಾಡಲು ಹಾಗೂ ಟ್ರಕ್ಕಿಂಗ್ ಗೆ ಹೋಗಲು ಆಕೆ ಇಷ್ಟಪಡ್ತಿದ್ದಳು. 

ನನ್ನ ಪತಿ ನನ್ನನ್ನು ತುಂಬಾ ಪ್ರೀತಿ ಮಾಡ್ತಾನೆ. ಸಂಬಂಧ ಮುರಿದುಕೊಳ್ಳೋದು ಆತನಿಗೆ ಇಷ್ಟವಿರಲಿಲ್ಲ. ಹಾಗಾಗಿ ಗರ್ಭಾವಸ್ಥೆಯಲ್ಲಿ ಏನು ಕೇಳ್ತಿದ್ದೆ ಎಲ್ಲವನ್ನೂ ನೀಡ್ತಿದ್ದ. ಉಡುಗೊರೆ, ಬಟ್ಟೆ, ಆಭರಣ, ಪ್ರವಾಸ, ಹೂಗುಚ್ಛವನ್ನು ನೀಡಿದ್ದ ಪತಿ, ಗರ್ಭಾವಸ್ಥೆಯಲ್ಲಿ ನಾನು ಸುಂದರವಾಗಿ ಕಾಣ್ಬೇಕು ಎನ್ನುವ ಕಾರಣಕ್ಕೆ ಸೌಂದರ್ಯ ಚಿಕಿತ್ಸೆಗೆ ಹಣ ಖರ್ಚು ಮಾಡಿದ್ದ ಎಂದು ಲಿಂಡಾ ಹೇಳಿದ್ದಾಳೆ. 

Celebrity Parenting: ಒಬ್ಬಳಿಗೆ ಫೀಡ್ ಮಾಡುವಾಗ ಇನ್ನೊಬ್ಬಳು ಅಳ್ತಿದ್ಲು, ಹುಚ್ಚಿಯಂತಾಗ್ತಿದ್ದೆ ಒಮ್ಮೊಮ್ಮೆ

ಲಿಂಡಾ ವಿಡಿಯೋಕ್ಕೆ ಅನೇಕರು ಕಮೆಂಟ್ ಮಾಡಿದ್ದಾರೆ. ಅನೇಕರು ಲಿಂಡಾ ಹೇಳಿಕೆಯನ್ನು ಖಂಡಿಸಿದ್ದಾರೆ. 500 ರೀತಿಯಲ್ಲಿ ನಮ್ಮನ್ನು ಲಿಂಡಾ ಬಡವರನ್ನಾಗಿ ಮಾಡಿದ್ದಾಳೆ ಎಂದು ಒಬ್ಬರು ಬರೆದಿದ್ದಾರೆ. ಇನ್ನೊಬ್ಬರು ನಿಮ್ಮ ಮೇಲೆ ನಮಗೆ ಹೊಟ್ಟೆಕಿಚ್ಚಾಗ್ತಿದೆ ಎಂದು ಕಮೆಂಟ್ ಮಾಡಿದ್ದಾರೆ.  

click me!