ಯಪ್ಪಾ..ಮದ್ವೆಯಾದ ನಂತ್ರ ಮಹಿಳೆಯರು ಗೂಗಲ್‌ನಲ್ಲಿ ಇದನ್ನೆಲ್ಲಾ ಸರ್ಚ್ ಮಾಡ್ತಾರಾ?

Published : Dec 20, 2023, 02:49 PM IST
ಯಪ್ಪಾ..ಮದ್ವೆಯಾದ ನಂತ್ರ ಮಹಿಳೆಯರು ಗೂಗಲ್‌ನಲ್ಲಿ ಇದನ್ನೆಲ್ಲಾ ಸರ್ಚ್ ಮಾಡ್ತಾರಾ?

ಸಾರಾಂಶ

ಪ್ರತೀ ಪುರುಷರು ಹಾಗೂ ಮಹಿಳೆಯರು ಎಲ್ಲರೂ ಗೂಗಲ್‌ನಲ್ಲಿ ಹುಡುಕುತ್ತಾರೆ. ಆದ್ರೆ ಮದುವೆಯಾದ ನಂತರ ಮಹಿಳೆಯರು ಗೂಗಲ್ ನಲ್ಲಿ ಯಾವ ರೀತಿಯ ವಿಷಯಗಳನ್ನು ಹುಡುಕುತ್ತಾರೆ ಅನ್ನೋದು ನಿಮ್ಗೊತ್ತಾ? ಈ ಬಗ್ಗೆ ತಿಳಿದ್ರೆ ಪುರುಷರಿಗೆ ಶಾಕ್ ಆಗೋದು ಗ್ಯಾರಂಟಿ.

ಗೂಗಲ್‌ನಲ್ಲಿ ಸಿಗದ ವಿಚಾರಗಳಿಲ್ಲ. ಹೀಗಾಗಿ ಎಲ್ಲರೂ ಯಾವುದೇ ವಿಚಾರ ತಿಳಿಯಬೇಕಾದರೂ ಗೂಗಲ್‌ನಲ್ಲಿ ಹುಡುಕಾಟ ನಡೆಸುತ್ತಾರೆ. ಅಡುಗೆ ಮಾಡುವುದರಿಂದ ಹಿಡಿದು ಯಾವ ರೀತಿಯ ಡ್ರೆಸ್ ಧರಿಸಬೇಕು, ಹೇಗೆ ಪ್ರಪೋಸ್ ಮಾಡ್ಬೇಕು, ಹೆಲ್ತ್‌ ಟಿಪ್ಸ್‌ ಹೀಗೆ ಎಲ್ಲದರ ಬಗ್ಗೆಯೂ ಗೂಗಲ್‌ನಲ್ಲಿ ಮಾಹಿತಿಯಿರುತ್ತದೆ. ಯಾರಲ್ಲೂ ಕೇಳಲು ಸಾಧ್ಯವಿಲ್ಲ ಅನ್ನೋ ರಹಸ್ಯವಾದ, ಮುಜುಗರ ತರವು ವಿಷಯವನ್ನೂ ನಾವು ಗೂಗಲ್‌ನಲ್ಲಿ ಸರ್ಚ್ ಮಾಡಿಕೊಳ್ಳಬಹುದು. ಹೀಗೆ ಪುರುಷರು, ಮಹಿಳೆಯರು ಎಲ್ಲರೂ ಗೂಗಲ್‌ನಲ್ಲಿ ಹುಡುಕುತ್ತಾರೆ. ಆದ್ರೆ ಮದುವೆಯಾದ ನಂತರ ಮಹಿಳೆಯರು ಗೂಗಲ್ ನಲ್ಲಿ ಯಾವ ರೀತಿಯ ವಿಷಯಗಳನ್ನು ಹುಡುಕುತ್ತಾರೆ ಅನ್ನೋದು ನಿಮ್ಗೊತ್ತಾ?

ಹುಡುಗರು ಸಾಮಾನ್ಯವಾಗಿ ಗೂಗಲ್‌ನಲ್ಲಿ ಹುಡುಗಿಯರ (Girls) ಬಗ್ಗೆ, ಲೈಂಗಿಕ ಜೀವನದ ಬಗ್ಗೆ ಹುಡುಕಾಟ ನಡೆಸುತ್ತಾರೆ. ಆದರೆ ಇದರ ಹೊರತಾಗಿ, ಮದುವೆಯ ನಂತರ ಮಹಿಳೆಯರು ಗೂಗಲ್‌ನಲ್ಲಿ ಯಾವ ರೀತಿಯ ವಿಷಯಗಳನ್ನು ಹುಡುಕುತ್ತಾರೆ ಎಂದು ನಿಮಗೆ ತಿಳಿದಿದೆಯೇ? ಹೌದು, ಮದುವೆಯ (Marriage) ನಂತರ ಮಹಿಳೆಯರು ಸಣ್ಣ ವಿಷಯಗಳಿಗೂ ಗೂಗಲ್ ಸಹಾಯ ಪಡೆಯುತ್ತಾರೆ ಅನ್ನೋದು ಅಧ್ಯಯನದಿಂದ ತಿಳಿದುಬಂದಿದೆ. ಅದರಲ್ಲೂ ಮದುವೆಯ ನಂತರ ಮಹಿಳೆಯರು (Woman) ಗೂಗಲ್ ನಲ್ಲಿ ಏನೆಲ್ಲಾ ಸರ್ಚ್ ಮಾಡುತ್ತಾರೆ ಎಂದು ತಿಳಿದರೆ ನಗು ತಡೆಯಲಾಗದು.

ಹೆಂಡತಿಯನ್ನು ಖುಷಿಯಾಗಿಡಬೇಕು ಅಂದ್ರೆ ಮಲಗೋ ಮುಂಚೆ ಈ ಮೂರು ಕೆಲ್ಸ ಮಾಡಬೇಕು!

ಗಂಡನ ಇಷ್ಟಗಳ ಬಗ್ಗೆ ಹುಡುಕಾಟ
ಗೂಗಲ್ ಡೇಟಾ ಪ್ರಕಾರ, ಅನೇಕ ವಿವಾಹಿತ ಮಹಿಳೆಯರು ತಮ್ಮ ಪತಿಗೆ (Husband) ಸಂಬಂಧಿಸಿದ ಅನೇಕ ವಿಷಯಗಳನ್ನು ಗೂಗಲ್‌ನಲ್ಲಿ ಹುಡುಕುತ್ತಾರೆ. ಮಹಿಳೆಯರು ತಮ್ಮ ಗಂಡನ ಆದ್ಯತೆಗಳ ಬಗ್ಗೆ ಗೂಗಲ್‌ನಲ್ಲಿ ಹೆಚ್ಚು ಹುಡುಕುತ್ತಾರೆ. ಪ್ರತಿಯೊಬ್ಬ ಮಹಿಳೆಯೂ ತನ್ನ ಪತಿಗೆ ಏನು ಇಷ್ಟ ಮತ್ತು ಇಷ್ಟಪಡುವುದಿಲ್ಲ ಎಂಬುದನ್ನು ತಿಳಿಯಲು ಖಂಡಿತವಾಗಿಯೂ ಪ್ರಯತ್ನಿಸುತ್ತಾಳೆ. ಕೆಲವು ಮಹಿಳೆಯರು ತಮ್ಮ ಗಂಡನ ಬಗ್ಗೆ ಇತರರನ್ನು ಕೇಳಲು ಸಾಧ್ಯವಿಲ್ಲದಂತಹ ಪ್ರಶ್ನೆಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುತ್ತಾರೆ. ಕೆಲವು ವಿಷಯಗಳನ್ನು ಈ ರೀತಿಯ ವರ್ತನೆಯ ಪುರುಷರಿಗೆ ಏನಿಷ್ಟ ಎಂದು ಗೂಗಲ್‌ನಲ್ಲಿ ಸರ್ಚ್‌ ಮಾಡುತ್ತಾರೆ.
 
ಗಂಡನನ್ನು ಗುಲಾಮನನ್ನಾಗಿ ಮಾಡುವುದು ಹೇಗೆ?
ಇದು ನಿಜವಾಗಿಯೂ ತಮಾಷೆಯಾಗಿದೆ. ಆದರೆ ಕೆಲವರು ಮದುವೆಯ ನಂತರ ತಮ್ಮ ಗಂಡನನ್ನು ಗುಲಾಮರನ್ನಾಗಿ ಮಾಡುವ ಮಾರ್ಗಗಳನ್ನು ತಿಳಿದುಕೊಳ್ಳಲು ಬಯಸುತ್ತಾರೆ. ಕೆಲವು ಮಹಿಳೆಯರು ಇಂತಹ ವಿಷಯಗಳಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಇದಲ್ಲದೆ, ಮದುವೆಯ ನಂತರ, ಪತಿ ಯಾವಾಗಲೂ ಸಂತೋಷವಾಗಿರಲು ಏನು ಮಾಡಬೇಕೆಂದು ಚಿಂತಿಸುತ್ತಾರೆ. ಅಂತಹ ಮಹಿಳೆಯರು ತಮ್ಮ ಪತಿಯನ್ನು ಸಂತೋಷಪಡಿಸಲು ವಿಶೇಷ ಅಡುಗೆ (Cooking)ಯನ್ನು ತಯಾರಿಸುವುದು ಮಾತ್ರವಲ್ಲದೆ ಅವರಿಗೆ ವಿವಿಧ ಉಡುಗೊರೆ ಆಯ್ಕೆಗಳನ್ನು ಸಹ ಕಂಡುಕೊಳ್ಳುತ್ತಾರೆ.

ನಡು ವಯಸ್ಸಿನ ಹೆಣ್ಣು ಬೇರೊಬ್ಬನೊಂದಿಗೆ ಹೋಗೋದು ಲೈಂಗಿಕ ಆಸೆಗೋಸ್ಕರನಾ?

ಗಂಡನನ್ನು ಮೆಚ್ಚಿಸುವುದು ಹೇಗೆ?
ಗಂಡಂದಿರು ಮಾತ್ರವಲ್ಲ, ಹೆಂಡತಿಯರೂ ಸಹ ತಮ್ಮ ಗಂಡನ ಬಗ್ಗೆ ಸಾಕಷ್ಟು ಬಾರಿ ಯೋಚಿಸುತ್ತಾರೆ. ಗಂಡನನ್ನು ಹೇಗೆ ಮೆಚ್ಚಿಸಬೇಕು, ಮಗುವನ್ನು ಹೊಂದಲು ಯಾವ ತಿಂಗಳು ಸೂಕ್ತವಾಗಿದೆ ಎಂಬಂಥಾ ಅನೇಕ ವಿಷಯಗಳನ್ನು ಹುಡುಕುತ್ತಾರೆ. ಮಾತ್ರವಲ್ಲ, ಗಂಡನ ಜೊತೆ ಜಗಳವಾಡದೆ ಹೇಗಿರುವುದು ಎಂದು ಸಹ ಗೂಗಲ್‌ನಲ್ಲಿ ಸಾಕಷ್ಟು ಸರ್ಚ್ ಮಾಡುತ್ತಾರೆ. 
 
ವೃತ್ತಿಗೆ ಸಂಬಂಧಿಸಿದ ಪ್ರಶ್ನೆಗಳು
ಮದುವೆಯ ನಂತರ ಹೆಣ್ಣಿನ ಜೀವನ ಬಹಳಷ್ಟು ಬದಲಾಗುತ್ತದೆ. ಒಂದು ರೀತಿಯಲ್ಲಿ, ವೃತ್ತಿಯು ಅವರಿಗೆ ಎರಡನೇ ಆಯ್ಕೆಯಾಗುತ್ತದೆ. ಅನೇಕ ಮಹಿಳೆಯರು ಮದುವೆಯ ನಂತರ ತಮ್ಮ ಜೀವನ (Life)ವನ್ನು ಹೇಗೆ ನಡೆಸಬೇಕೆಂದು ಗೂಗಲ್‌ನಲ್ಲಿ ಹುಡುಕುತ್ತಾರೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. 
 
ಅತ್ತೆಯನ್ನು ಖುಷಿಯಾಗಿಟ್ಟುಕೊಳ್ಳುವುದು ಹೇಗೆ?
ಕೆಲವು ಮಹಿಳೆಯರು ತಮ್ಮ ಗಂಡನ ಕುಟುಂಬದ ಜೊತೆ ಹೇಗೆ ವರ್ತಿಸಬೇಕು ಎಂದು ತಿಳಿಯಲು ಬಯಸುತ್ತಾರೆ. ಕಡಿಮೆ ಸಮಯದಲ್ಲಿ ಕುಟುಂಬದ ಭಾಗವಾಗುವುದು ಹೇಗೆ ಎಂದು ತಿಳಿಯಲು ಗೂಗಲ್‌ ಸಹಾಯವನ್ನು ಪಡೆದುಕೊಳ್ಳುತ್ತಾರೆ. ತಮ್ಮ ಕುಟುಂಬದ ಜವಾಬ್ದಾರಿಯನ್ನು ಹೇಗೆ ಪೂರೈಸಬೇಕು ಎಂಬ ಕುತೂಹಲವೂ ಅವರಲ್ಲಿರುತ್ತದೆ. ಅದನ್ನೂ ತಿಳಿದುಕೊಳ್ಳಲು ಯತ್ನಿಸುತ್ತಾರೆ. ಇದಲ್ಲದೆ, ಕೆಲವು ಮಹಿಳೆಯರು ತಮ್ಮ ಅತ್ತೆ (Mother in law)ಯನ್ನು ಸಂತೋಷವಾಗಿರಿಸುವುದು ಹೇಗೆ ಎಂದು ಗೂಗಲ್‌ನಲ್ಲಿ ಹುಡುಕಾಡುತ್ತಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸೋನಿಯಾ ಗಾಂಧಿ ಮೊದಲ ಬಾರಿಗೆ ಇಂದಿರಾ ಗಾಂಧಿಯನ್ನು ಭೇಟಿಯಾದಾಗ ಏನಾಗಿತ್ತು?
ಮಹಿಳಾ ನೌಕರರಿಗೆ ಬ್ಯಾಡ್ ನ್ಯೂಸ್: ಮುಟ್ಟಿನ ರಜೆಗೆ ಹೈಕೋರ್ಟ್ ತಡೆ: ಸರ್ಕಾರದ ಆದೇಶಕ್ಕೆ ಹಿನ್ನಡೆ?