Real Story: ಬ್ಯಾಡ್ಮಿಂಟನ್ ಕೋಚ್ ಪ್ರೀತಿಗೆ ಬಿದ್ದ ಇಬ್ಬರು ಮಕ್ಕಳ ತಾಯಿಗೆ ಉಭಯ ಸಂಕಟ

Published : Jun 15, 2022, 04:30 PM IST
Real Story: ಬ್ಯಾಡ್ಮಿಂಟನ್ ಕೋಚ್ ಪ್ರೀತಿಗೆ ಬಿದ್ದ ಇಬ್ಬರು ಮಕ್ಕಳ ತಾಯಿಗೆ ಉಭಯ ಸಂಕಟ

ಸಾರಾಂಶ

ಪ್ರೀತಿ ಎಲ್ಲಿ ಬೇಕಾದ್ರೂ ಹುಟ್ಟಬಹುದು. ಅದಕ್ಕೆ ಯಾವುದೇ ಗಡಿಯಿಲ್ಲ. ಆದ್ರೆ ಶುರುವಾದ ಪ್ರೀತಿಯನ್ನು ವ್ಯಕ್ತಪಡಿಸಲು ಎಲ್ಲರಿಂದಲೂ ಸಾಧ್ಯವಿಲ್ಲ. ಅನೇಕ ಬಾರಿ ನಮ್ಮ ಭಾವನೆಗಳನ್ನು ತಡೆ ಹಿಡಿಯಬೇಕಾಗುತ್ತದೆ.   

ಕೆಲವರ ಹಣೆಬರಹವೇ ಹಾಗಿರುತ್ತೆ. ಎಷ್ಟು ಬಯಸಿದ್ರೂ ಪ್ರೀತಿ (Love) ಅವರಿಗೆ ಸಿಗೋದಿಲ್ಲ. ಸಿಕ್ಕ ಪ್ರೀತಿಯಲ್ಲೂ ಶುದ್ಧತೆ ಇರೋದಿಲ್ಲ. ಇದ್ರಿಂದಾಗಿ ನೋವಿನಲ್ಲಿಯೇ ಅವರು ಜೀವನ (Life) ಕಳೆಯಬೇಕಾಗುತ್ತದೆ. ಇಲ್ಲೊಬ್ಬ ಮಹಿಳೆಗೂ ಇದೇ ಆಗಿದೆ. ಪ್ರೀತಿಸಿ ಮದುವೆಯಾದ್ರೂ ಸಂಸಾರ ಸರಿಯಿರಲಿಲ್ಲ. ಗಂಡನ ಪ್ರೀತಿ ಸಿಗದೆ ಆ ಜಂಜಾಟದಿಂದ ಹೊರ ಬಂದ್ರೂ ನೆಮ್ಮದಿಯಿಲ್ಲ. ಮನೆ, ಮಕ್ಕಳ ಮಧ್ಯೆ ಹೋರಾಟ ನಡೆಸ್ತಿದ್ದ ಮಹಿಳೆ ಬಾಳಲ್ಲಿ  ಸಿಕ್ಕ ಪ್ರೀತಿಯ ದೋಣಿಯನ್ನು ಏರಲು ಆಕೆಗೆ ಆಗ್ತಿಲ್ಲ. ಗೊಂದಲದಲ್ಲಿಯೇ ಜೀವನ ನಡೆಸುತ್ತಿರುವ ಮಹಿಳೆ ತನ್ನ ನೋವನ್ನು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾಳೆ. ಅಷ್ಟಕ್ಕೂ ಆಕೆಯದ್ದು ಏನು ಕಥೆ (Story) ಅಂತಾ ನಾವು ಹೇಳ್ತೇವೆ ಓದಿ.

ಪ್ರೀತಿಸಿ ಮದುವೆ (Marriage) ಯಾದ ವ್ಯಕ್ತಿ ಕೈಕೊಟ್ಟ : ಆಕೆಗೆ ಮದುವೆಯಾಗಿದೆ. ಇಬ್ಬರು ಮಕ್ಕಳಿದ್ದಾರೆ. ಕೆಲ ವರ್ಷಗಳ ಹಿಂದೆ ವ್ಯಕ್ತಿಯೊಬ್ಬನನ್ನು ಪ್ರೀತಿಸಿದ್ದಳು. ಮನೆಯವರನ್ನು ಒಪ್ಪಿಸಿ ಮದುವೆ ಕೂಡ ಆಗಿದ್ದಳು. ಆದ್ರೆ ಮದುವೆಯಾದ್ಮೇಲೆ ಗೊತ್ತಾಯ್ತು ಪತಿ ಸ್ವಾರ್ಥಿ ಎಂಬ ಸತ್ಯ. ಪತ್ನಿ ಬಗ್ಗೆ ಸ್ವಲ್ಪವೂ ಪ್ರೀತಿ, ಕಾಳಜಿ ತೋರದ ವ್ಯಕ್ತಿ ಇನ್ನೊಬ್ಬ ಮಹಿಳೆಗಾಗಿ ಈಕೆಯನ್ನು ತೊರೆದಿದ್ದ. 

ಇಬ್ಬರು ಮಕ್ಕಳಿಗಾಗಿ ಜೀವನ : ಪತಿಯಿಂದ ವಿಚ್ಛೇದನ ಪಡೆದು, ಮೋಸ ಹೋದ ಕ್ಷಣವನ್ನು ಮರೆಯಲು ಪ್ರಯತ್ನ ಮಾಡ್ತಾ ಇಬ್ಬರು ಮಕ್ಕಳಿಗಾಗಿ ಮಹಿಳೆ ಜೀವನ ನಡೆಸುತ್ತಿದ್ದಾಳೆ. ಮಕ್ಕಳಿಬ್ಬರು ತಾಯಿಯನ್ನು ಅತಿಯಾಗಿ ಪ್ರೀತಿಸ್ತಾರೆ. ಮಕ್ಕಳಿಗಾಗಿಯೇ ಜೀವನ ಮುಡುಪಿಟ್ಟ ಮಹಿಳೆ ಎಲ್ಲವನ್ನೂ ಅವರಿಗೆ ಧಾರೆ ಎರೆದಿದ್ದಾಳೆ. 

ಹುಡುಗಿಯರಾದರೆ ಏನಾದರೂ ಕೊಡಬಹುದು, ಹುಡಗರಿಗೇನು ಗಿಫ್ಟ್ ಕೊಡೋದು?

ಕೋಚಿಂಗ್ ಮಾಸ್ಟರ್ ಮೇಲೆ ಪ್ರೀತಿ : ನೀರಸ ಬದುಕು ನಡೆಸುತ್ತಿದ್ದ ಮಹಿಳೆ ಬಾಳಲ್ಲಿ ವರ್ಷದ ಹಿಂದೆ ಬೆಳಕೊಂದು ಮೂಡಿದೆ. ಆಕೆಯ ಕಿರಿಯ ಮಗಳಿಗೆ ಬ್ಯಾಡ್ಮಿಂಟನ್ ಅಂದ್ರೆ ಪಂಚಪ್ರಾಣ. ಅದ್ರಲ್ಲಿ ಹೆಚ್ಚಿನ ಆಸಕ್ತಿಯಿರುವ ಕಾರಣ ಮಗಳನ್ನು ಬ್ಯಾಡ್ಮಿಂಟನ್ ಅಕಾಡೆಮಿಗೆ ಸೇರಿಸಿದ್ದಾಳೆ. 7ನೇ ವರ್ಷದಿಂದಲೇ ಬ್ಯಾಡ್ಮಿಂಟನ್ ಕಲಿಯಲು ಮಗಳು ಆಸಕ್ತಿ ತೋರಿಸಿದ್ದಳಂತೆ. ಅಲ್ಲಿ ಮಗಳ ಕೋಚ್ ಒಬ್ಬರ ಪರಿಚಯ ಮಹಿಳೆಗೆ ಆಗಿದೆ. ಇಬ್ಬರು ಆಗಾಗ ಮಾತನಾಡ್ತಿದ್ದರಂತೆ. ಕಟುಮಸ್ತಾದ ದೇಹ ಹಾಗೂ ನಗು ಮುಖದ ಕೋಚ್ ಸ್ವಭಾವ ಮಹಿಳೆಯನ್ನು ಸೆಳೆದಿದೆ. ಆರಂಭದಲ್ಲಿ ಸಹಜವಾಗಿ ಮಾತನಾಡ್ತಿದ್ದವಳಿಗೆ ಪ್ರತಿ ದಿನ ಅವರನ್ನು ನೋಡ್ಬೇಕೆಂಬ ಬಯಕೆ ಶುರುವಾಗಿದೆ. ಇದೇ ಕಾರಣಕ್ಕೆ ಆಕೆ ಮಗಳನ್ನು ಕರೆತರುವ ನೆಪದಲ್ಲಿ ಕೋಚ್ ಜೊತೆ ಮಾತನಾಡಲು ಶುರು ಮಾಡಿದ್ದಾಳೆ. ಆಕೆಗೆ ತಿಳಿಯದೆ ಕೋಚ್ ಮೇಲೆ ಪ್ರೀತಿ ಹುಟ್ಟಿದೆ.

ಕೋಚ್ ಜೀವನದಲ್ಲಿ ಆಗಿದ್ದೇನು ? : ಸದಾ ಮಗಳ ಭವಿಷ್ಯದ ಬಗ್ಗೆ ಮಾತನಾಡ್ತಿದ್ದವಳು ಒಂದು ದಿನ ಕೋಚ್ ಜೀವನದ ಬಗ್ಗೆ ಕೇಳಿದ್ದಾಳೆ. ಕೋಚ್ ಪತ್ನಿ ಸಾವನ್ನಪ್ಪಿದ್ದು, ಮಕ್ಕಳಿಗೆ ಕೋಚಿಂಗ್ ನೀಡೋ ಮೂಲಕ ನೋವು ಮೆರೆಯುತ್ತಿದ್ದೇನೆಂದು ಕೋಚ್ ಹೇಳಿದ್ದಾರೆ. ಇದಾದ್ಮೇಲೆ ಕೋಚ್ ಮೇಲೆ ಮತ್ತಷ್ಟು ಪ್ರೀತಿ ಹೆಚ್ಚಾಗಿದೆ. ಒಂದೊಂದು ನೆಪ ಮಾಡಿಕೊಂಡು ಕೋಚ್ ಭೇಟಿ ಮಾಡ್ತಿದ್ದವಳನ್ನು ಒಂದು ದಿನ ಟೀಗೆ ಕರೆದಿದ್ದಾರೆ.

Relationship Tips: ಸಂಗಾತಿಗೆ ಮೋಸ ಮಾಡಿದ್ರಾ? ಹೀಗೆ ಕ್ಷಮೆ ಕೇಳ್ಬೋದು

ಮಗಳ ಜೊತೆ ಟೀಗೆ ಹೋದ ಮಹಿಳೆ, ಮಗಳ ಕಾರಣಕ್ಕಾಗಿಯೇ ತನ್ನ ಪ್ರೀತಿಯನ್ನು ಹೇಳದೆ ವಾಪಸ್ ಬಂದಿದ್ದಾಳೆ. ಮರುದಿನ ಇಬ್ಬರೂ ಡಿನ್ನರ್ ಪ್ಲಾನ್ ಮಾಡಿದ್ದಾರೆ. ಅಲ್ಲಿ ಕೂಡ ಕೋಚ್ ಸ್ವಭಾವ ಆಕೆಯನ್ನು ಆಕರ್ಷಿಸಿದೆ. ಅವರ ಜೊತೆ ಕಳೆದ ಸ್ವಲ್ಪ ಸಮಯ ಆಕೆಗೆ ನೆಮ್ಮದಿ ನೀಡಿದೆ. ಆದ್ರೆ ಪ್ರೀತಿ ವಿಚಾರ ಹೇಳಿದ್ರೆ ಮಗಳ ಭವಿಷ್ಯ ಹಾಳಾಗ್ಬಹುದು ಎಂಬ ಭಯ ಈಕೆಯನ್ನು ಕಾಡ್ತಿದೆ. ಮಗಳು ಬ್ಯಾಡ್ಮಿಂಟನ್ ನಲ್ಲಿ ಉತ್ತಮ ಪ್ರದರ್ಶನ ನೀಡ್ತಿದ್ದಾಳೆ. ಒಂದ್ವೇಳೆ ತಾಯಿ, ಕೋಚ್ ಪ್ರೀತಿಗೆ ಬಿದ್ದಿದ್ದಾಳೆ ಎಂಬುದು ಗೊತ್ತಾಗಿ, ಮಗಳು ನನ್ನ ಮೇಲೆ ಮುನಿಸಿಕೊಂಡ್ರೆ ಎಂಬ ಆತಂಕ ಆಕೆಗಿದೆ. ಚಂಚಲವಾಗ್ತಿರುವ ಮನಸ್ಸನ್ನು ನಿಗ್ರಹಿಸುವುದು ಹೇಗೆ ಎಂಬ ಚಿಂತೆಯಲ್ಲಿದ್ದಾಳೆ ಮಹಿಳೆ.  

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಸಾಲೆ ಪೌಡರ್ ಮಾಡುವಾಗ ಸ್ವಲ್ವೇ ಸ್ವಲ್ಪ ಅಕ್ಕಿ ಸೇರಿಸಿ, ಅಡುಗೆ ರುಚಿ ಡಬ್ಬಲ್ ಆಗುತ್ತೆ
sculptor makeup: ಹುಡುಗರೇ ಆಹಾ ಚೂಪಾದ ಮೂಗು ಎಂಥಾ ಬ್ಯೂಟಿ ಅಂತ ಮರುಳಾಗದಿರಿ ಜೋಕೆ..!