ವಾರ್ಡ್ರೋಬ್ ತುಂಬಾ ಬಟ್ಟೆ ಇರುತ್ತೆ. ಆದ್ರೆ ಯಾವುದೂ ಧರಿಸೋಕೆ ಯೋಗ್ಯವಾಗಿರಲ್ಲ. ಒಂದು ಬಟ್ಟೆಗೆ ಬಣ್ಣ ತಾಗಿದ್ರೆ ಮತ್ತೊಂದು ಬಟ್ಟೆ ಬಣ್ಣ ಹೋಗಿರುತ್ತದೆ. ಇದನ್ನೆಲ್ಲ ಏನ್ ಮಾಡೋದು ಅನ್ನೋರು ಈ ಟ್ರಿಕ್ಸ್ ಬಳಸಿ.
ಒಂದೋ ಎರಡೋ ಬಾರಿ ಹಾಕಿರುವ ಬಟ್ಟೆ (Clothes) ಅದು. ಆಗ್ಲೇ ಬಣ್ಣ (Color) ಮಾಸಿರುತ್ತದೆ. ಹೊಸ ಡ್ರೆಸ್ (Dress) ಆದ್ರೂ ಧರಿಸೋಕೆ ಆಗಲ್ಲ. ವಾರ್ಡ್ರೋಬ್ (Wardrobe) ನಲ್ಲಿ ಇಂಥ ಅನೇಕ ಬಟ್ಟೆಗಳಿರುತ್ತವೆ. ಕೆಲವು ಬಾರಿ ಒಂದಕ್ಕೊಂದು ಬಣ್ಣ ತಾಗಿ ಬಟ್ಟೆ ಲುಕ್ ಹೋಗಿರುತ್ತದೆ. ಬಟ್ಟೆಯನ್ನು ಪದೇ ಪದೇ ಒಗೆಯುವುದ್ರಿಂದ ಅಥವಾ ಬಟ್ಟೆ ಒಗೆಯುವಾಗ ನಾವು ಮಾಡುವ ತಪ್ಪಿನಿಂದಾಗಿ ಈ ಎಲ್ಲ ಸಮಸ್ಯೆ ನಮ್ಮನ್ನು ಕಾಡುತ್ತದೆ. ಬಣ್ಣ ಮಾಸಿರುವ ಬಟ್ಟೆಗಳನ್ನು ಮನೆ (Home) ಯಲ್ಲಿಯೇ ಹೊಸದಾಗಿ ಮಾಡ್ಬಹುದು. ಮಸುಕಾದ ಬಟ್ಟೆಗಳಿಗೆ ಮತ್ತೆ ಹೊಳಪು (Brightness) ನೀಡ್ಬಹುದು. ಅದಕ್ಕೆ ಕೆಲವು ಸುಲಭ ಮಾರ್ಗಗಳಿವೆ. ಈ ಟ್ರಿಕ್ಸ್ ಬಳಸುವ ಮೂಲಕ ಮೂಲೆ ಸೇರಿದ್ದ ಬಟ್ಟೆಗಳನ್ನು ಮತ್ತೆ ಧರಿಸಲು ಯೋಗ್ಯ ಮಾಡಿಕೊಳ್ಳಬಹುದು. ಮನೆಯಲ್ಲಿ ಬಟ್ಟೆಗೆ ಮತ್ತೆ ಹೊಳಪು ನೀಡೋದು ಹೇಗೆ ಅನ್ನೋದನ್ನು ಇಂದು ತಿಳಿಯೋಣ.
ಮನೆಯಲ್ಲಿರುವ ಬಣ್ಣ ಮಾಸಿದ ಬಟ್ಟೆಗೆ ಹೀಗೆ ನೀಡಿ ಹೊಳಪು :
ಬಟ್ಟೆಗೆ ಬಣ್ಣ ನೀಡಲು ಉಪ್ಪು (Salt) : ಅನೇಕ ಬಟ್ಟೆ ನೋಡಲು ತುಂಬಾ ಸುಂದರವಾಗಿ ಕಾಣುತ್ತದೆ. ಆದ್ರೆ ಅದನ್ನು ಕ್ಲೀನ್ ಮಾಡುವಾಗ್ಲೇ ಅದ್ರ ಅಸಲಿಯತ್ತು ತಿಳಿಯೋದು. ಬಟ್ಟೆಗೆ ಹಾಕಿದ ಬಣ್ಣ ನೀರಿನಲ್ಲಿ ಕರಗಿ ಬರ್ತಿರುತ್ತದೆ. ಇದ್ರಿಂದ ಬಟ್ಟೆ ಬಣ್ಣ ಮಾಸುತ್ತದೆ. ನೀವು ಬಟ್ಟೆಯ ಬಣ್ಣ ಹೋಗದಂತೆ ರಕ್ಷಿಸಬೇಕೆಂದ್ರೆ ಉಪ್ಪನ್ನು ಬಳಸಬಹುದು. ಬಟ್ಟೆ ಒಗೆಯುವಾಗ ಅದು ಬಣ್ಣ ಬಿಡ್ತಿದೆ ಅನ್ನಿಸಿದ್ರೆ ಒಂದು ಬಕೆಟ್ ನೀರಿನಲ್ಲಿ ಅರ್ಧ ಚಮಚ ಉಪ್ಪನ್ನು (Salt) ಬೆರೆಸಿ. ಈ ಉಪ್ಪು ನೀರಿನಿಂದ ಬಟ್ಟೆಗಳನ್ನು ತೊಳೆಯಿರಿ. ಇದ್ರಿಂದ ಬಟ್ಟೆಯ ಬಣ್ಣ ನೀರಿನಲ್ಲಿ ಕರಗುವುದಿಲ್ಲ. ಬಟ್ಟೆಗೆ ಬಣ್ಣ ಇರುವುದ್ರಿಂದ ಬಟ್ಟೆ ಹೊಸದಾಗಿ ಉಳಿಯುತ್ತದೆ.
Mother Love: ಮೂರು ವರ್ಷದ ಬಳಿಕ ತಾಯಿ ಮಡಿಲು ಸೇರಿದ ಮಗ
ವಿನೆಗರ್ (Vinegar) ಬಳಸಿ : ಬಟ್ಟೆಗಳನ್ನು ತಾಜಾ ಮತ್ತು ಹೊಳೆಯುವಂತೆ ಮಾಡಲು ವಿನೆಗರ್ ಬಳಸಬಹುದು. ಸೋಪಿನ ಬಳಕೆಯಿಂದ ಬಟ್ಟೆಗಳ ಬಣ್ಣವು ಮಸುಕಾಗುತ್ತದೆ ಮತ್ತು ಬಟ್ಟೆಯು ಹಳೆಯದಾಗಿ ಕಾಣುತ್ತದೆ. ಬಟ್ಟೆಯ ಬಣ್ಣ ಅಲ್ಲಲ್ಲಿ ಅಂಟುತ್ತದೆ. ಬಟ್ಟೆ ಬಣ್ಣ ಹೋಗ್ತಿದೆ ಅನ್ನಿಸಿದ್ರೆ ನೀವು ಬಟ್ಟೆ ತೊಳೆಯುವಾಗ ಸ್ವಲ್ಪ ವಿನೆಗರ್ ಬಳಸಿ. ವಿನೆಗರ್ ಬಟ್ಟೆಯ ಬಣ್ಣ ಮತ್ತು ಹೊಳಪನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
Kitchen Hacks: ದುಂಡಗಿನ ಉಬ್ಬಿದ ಚಪಾತಿ ಬೇಕೆಂದ್ರೆ ಹೀಗೆ ಮಾಡಿ
ಬಟ್ಟೆಯ ಬಣ್ಣ : ಪದೇ ಪದೇ ಒಗೆಯುವ ಮೂಲಕ ಬಟ್ಟೆಯ ಬಣ್ಣ ಸಂಪೂರ್ಣವಾಗಿ ಹೋಗಿದ್ದರೆ ಉಪ್ಪು, ವಿನೆಗರ್ ಬಳಕೆಯಿಂದಲೂ ಬಣ್ಣ ವಾಪಸ್ ತರಲು ಸಾಧ್ಯವಿಲ್ಲ. ಆಗ ನಾವು ಬಟ್ಟೆಯನ್ನು ಎಸೆಯುತ್ತೇವೆ. ಅದರ ಬದಲು ನೀವು ಬಟ್ಟೆಯ ಬಣ್ಣ ಬಳಸಬಹುದು. ಬಟ್ಟೆ ತೊಳೆಯುವಾಗ ಬಟ್ಟೆ ಬಣ್ಣವನ್ನು ಹಾಕಬಹುದು. ಆದ್ರೆ ಇದನ್ನು ಖರೀದಿಮಾಡುವಾಗ ಲೇಬಲ್ ಗೆ ಗಮನ ಕೊಡಲು ಮರೆಯದಿರಿ. ಬಟ್ಟೆಗಳಿಗೆ ಬಣ್ಣವನ್ನು ಅನ್ವಯಿಸುವಾಗ, ಬಣ್ಣವು ಮೂಲ ಬಣ್ಣದಂತೆಯೇ ಇರಬೇಕು ಎಂಬುದನ್ನು ನೆನಪಿನಲ್ಲಿಡಿ.
ಬಟ್ಟೆಗೆ ಅನುಗುಣವಾಗಿ ಬಣ್ಣ ನೀಡಬೇಕು. ಉದಾಹರಣೆಗೆ ಬಟ್ಟೆ ಹತ್ತಿ (Cotton) , ರೇಷ್ಮೆ (Silk) ಅಥವಾ ಉಣ್ಣೆಯಾಗಿದ್ದರೆ ಅಂಥ ಬಟ್ಟೆಗೆ ಬಣ್ಣ ಮಾಡುವಾಗ ಹೆಚ್ಚು ಕಾಳಜಿ ವಹಿಸಬೇಕು.
ಬಟ್ಟೆ ಬಣ್ಣ ಉಳಿಸುವ ಉಪಾಯ : ಯಾವಾಗಲೂ ಬಿಸಿ ನೀರಿ (Hot water) ನಿಂದ ಬಟ್ಟೆ ಒಗೆಯಬೇಡಿ. ಬಟ್ಟೆ ಒಗೆಯಲು ತಣ್ಣೀರು ಬಳಸಬೇಕು.
ಬಿಳಿ ಬಟ್ಟೆಗಳ ಬಣ್ಣವನ್ನು ಕಾಪಾಡಿಕೊಳ್ಳಲು, ಬಟ್ಟೆ ತೊಳೆಯುವಾಗ ನೀವು ಅಡಿಗೆ ಸೋಡಾವನ್ನು ಬಳಸಬಹುದು.
ಬಟ್ಟೆ ಬಣ್ಣ ಹೋಗ್ತಿದೆ ಎಂಬುದು ಗೊತ್ತಾದ್ರೆ ಅದನ್ನು ಎಲ್ಲ ಬಟ್ಟೆ ಜೊತೆ ನೆನೆಹಾಕ್ಬೇಡಿ. ಹಾಗೆಯೇ ಅದನ್ನು ವಾಷಿಂಗ್ ಮಷಿನ್ ನಲ್ಲಿ ಸ್ವಚ್ಛಗೊಳಿಸಬೇಡಿ.