ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಅನಗತ್ಯ ಗರ್ಭಧಾರಣೆ ಅಪಾಯ ಹೆಚ್ಚಿರುತ್ತದೆ. ಅದನ್ನು ತಡೆಯಲು ಮಹಿಳೆಯರು ಗರ್ಭನಿರೋಧಕದ ಮೊರೆ ಹೋಗ್ತಾರೆ. ನೀವೂ ಈ ಮಾತ್ರೆ ಸೇವನೆ ಮಾಡ್ತಿದ್ದರೆ ಇಲ್ಲಿರುವ ಮಾಹಿತಿ ತಿಳಿದಿರಿ.
ಗರ್ಭಧಾರಣೆಯನ್ನು ತಡೆಯುವ ಶಾಶ್ವತ ವಿಧಾನ ಸಂತಾನ ಹರಣ ಶಸ್ತ್ರಚಿಕಿತ್ಸೆ. 35 ವರ್ಷದ ನಂತ್ರ ಗರ್ಭಧಾರಣೆ ಅಪಾಯಕಾರಿ ಎನ್ನುವ ಕಾರಣಕ್ಕೆ ಕೆಲ ಮಹಿಳೆಯರು ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾಗ್ತಾರೆ. ಆದ್ರೆ ಒಮ್ಮೆ ಈ ಚಿಕಿತ್ಸೆಗೆ ಒಳಗಾದ್ಮೇಲೆ ಮತ್ತೆ ಮಕ್ಕಳಾಗೋದಿಲ್ಲ. ಇದೇ ಭಯಕ್ಕೆ ಎರಡು ಮಕ್ಕಳಿರುವ ತಾಯಂದಿರುವ ಕೂಡ ಸಣ್ಣ ವಯಸ್ಸಿನಲ್ಲಿ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಹಿಂದೇಟು ಹಾಕೋದಿದೆ. ಎಷ್ಟೋ ಬಾರಿ ಒಂದು ಮಕ್ಕಳಿದ್ದಾರೆ ಎನ್ನುವ ಕಾರಣ 40 ದಾಟುವವರೆಗೂ ಕೆಲ ವೈದ್ಯರು ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಪ್ಪಿಗೆ ನೀಡೋದಿಲ್ಲ. ಶಾಶ್ವತ ಪರಿಹಾರ ಇಲ್ಲವಾದ ಕಾರಣ ಅನಗತ್ಯ ಗರ್ಭಧಾರಣೆ ತಡೆಯಲು ಮಹಿಳೆಯರು ಗರ್ಭನಿರೋಧಕ ಮಾತ್ರೆಯ ಮೊರೆ ಹೋಗ್ತಾರೆ. ಗರ್ಭನಿರೋಧಕ ಮಾತ್ರೆಯಲ್ಲಿ ಅನೇಕ ಅಡ್ಡಪರಿಣಾಮಗಳಿವೆ. ಗರ್ಭನಿರೋಧಕ ಮಾತ್ರೆ ಸೇವನೆ ಮಾಡುವ ಮಹಿಳೆ, ತಿಂಗಳಲ್ಲಿ ಎಷ್ಟು ಬಾರಿ ಮಾತ್ರೆ ತೆಗೆದುಕೊಳ್ಳಬೇಕು ಎಂಬ ಮಾಹಿತಿ ಹೊಂದಿರಬೇಕು. ಹಾಗೆಯೇ ಆಕೆ ಸೇವನೆ ಮಾಡ್ತಿರುವ ಮಾತ್ರೆ ಬಗ್ಗೆ ಸಂಪೂರ್ಣವಾಗಿ ತಿಳಿದಿರಬೇಕು.
ಒಂದು ತಿಂಗಳಲ್ಲಿ ಎಷ್ಟು ಬಾರಿ ಗರ್ಭನಿರೋಧಕ (Contraception) ಮಾತ್ರೆ ಸೇವನೆ ಮಾಡ್ಬೇಕು ಗೊತ್ತಾ? : ಒಂದು ತಿಂಗಳಲ್ಲಿ ಗರ್ಭನಿರೋಧಕ ಮಾತ್ರೆ (Pill) ಗಳನ್ನು ಎಷ್ಟು ಬಾರಿ ತೆಗೆದುಕೊಳ್ಳಬಹುದು ಎಂಬುದು ಮಾತ್ರೆಗಳ ಪ್ರಕಾರವನ್ನು ಅವಲಂಬಿಸಿರುತ್ತದೆ. ಈ ಮಾತ್ರೆಗಳಲ್ಲಿ ಎರಡು ವಿಧಗಳಿವೆ. ಒಂದು ಕಾಂಬಿನೇಷನ್, ಮತ್ತೊಂದು ಪ್ರೊಜೆಸ್ಟಿನ್. ಕಾಂಬಿನೇಷನ್ ಮಾತ್ರೆಗಳು ಈಸ್ಟ್ರೊಜೆನ್ (Estrogen) ಮತ್ತು ಪ್ರೊಜೆಸ್ಟಿನ್ ಸಂಶ್ಲೇಷಿತ ಮಿಶ್ರಣವನ್ನು ಹೊಂದಿರುತ್ತವೆ. ಆದರೆ ಪ್ರೊಜೆಸ್ಟಿನ್ ಮಾತ್ರೆಗಳು ಪ್ರೊಜೆಸ್ಟಿನ್ ಅನ್ನು ಮಾತ್ರ ಹೊಂದಿರುತ್ತವೆ. ಹಾಗಾಗಿ ಇದ್ರ ಸೇವನೆ ಮಾಡುವಾಗ ಕೆಲ ಎಚ್ಚರಿಕೆವಹಿಸಬೇಕಾಗುತ್ತದೆ.
undefined
ದಪ್ಪಗಾದ್ರೆ ಕಾಡೋ ಸಮಸ್ಯೆ ಒಂದೆರಡಲ್ಲ, ಯೋನಿ ಸೋಂಕೂ ಬಿಡೋಲ್ಲ
ಕಾಂಬಿನೇಷನ್ ಮಾತ್ರೆ : ಸಾಮಾನ್ಯವಾಗಿ ತಿಂಗಳಲ್ಲಿ 21 ದಿನಗಳ ಕಾಲ ಕಾಂಬಿನೇಷನ್ ಮಾತ್ರೆಯನ್ನು ಮಹಿಳೆ ಸೇವನೆ ಮಾಡಬೇಕಾಗುತ್ತದೆ. ಉಳಿದ 7 ದಿನ ಯಾವುದೇ ಮಾತ್ರೆ ಸೇವನೆ ಮಾಡ್ಬೇಕಾಗಿಲ್ಲ. ಕೆಲವೊಮ್ಮೆ ಈ ಏಳು ದಿನ ಪ್ಲೊಸಿಬೊ ಮಾತ್ರೆ ನೀಡಲಾಗುತ್ತದೆ. ಇದು ಮಾಸಿಕ ಚಕ್ರ ರಚನೆಗೆ ಸಹಕಾರಿಯಾಗಿರುತ್ತದೆ. ಕೆಲವೊಮ್ಮೆ ಕಾಂಬಿನೇಷನ್ ಮಾತ್ರೆಯನ್ನು ಯಾವುದೇ ವಿಶ್ರಾಂತಿ ಇಲ್ಲದೆ ನಿರಂತರವಾಗಿ ಸೇವನೆ ಮಾಡುವಂತೆ ಸಲಹೆ ನೀಡಲಾಗುತ್ತದೆ.
ಪ್ರೊಜೆಸ್ಟಿನ್ ಮಾತ್ರೆ : ಪ್ರೊಜೆಸ್ಟಿನ್ ಮಾತ್ರೆಯನ್ನು ಮಿನಿ ಮಾತ್ರೆ ಎಂದೂ ಕರೆಯಲಾಗುತ್ತದೆ. ಯಾವುದೇ ವಿಶ್ರಾಂತಿಯಿಲ್ಲದೆ ಪ್ರತಿ ದಿನ ಈ ಮಾತ್ರೆಯನ್ನು ಸೇವನೆ ಮಾಡಬೇಕಾಗುತ್ತದೆ. ಕಾಂಬಿನೇಷನ್ ಮಾತ್ರೆಗಳಿಗಿಂತ ಇದು ಭಿನ್ನವಾಗಿದ್ದು, ಮಾಸಿಕ ಚಕ್ರಕ್ಕಾಗಿ ಬೇರೆ ಮಾತ್ರೆ ಸೇವಿಸುವ ಅವಶ್ಯಕತೆ ಇದಕ್ಕೆ ಇರೋದಿಲ್ಲ.
Women Health : ಐವಿಎಫ್ ಮಾಡಿಸಿಕೊಂಡ್ರೆ ಹೆಣ್ಣನ್ನು ಕಾಡ್ಬಹುದು ಈ ಸಮಸ್ಯೆ
ಗರ್ಭನಿರೋಧಕ ಮಾತ್ರೆ ಸೇವನೆಯನ್ನು ಯಾವಾಗ ಬಿಡಬೇಕು? : ನಿಮ್ಮ ವಯಸ್ಸು 55 ರ ಗಡಿದಾಟಿದ್ದರೆ ನೀವು ಗರ್ಭನಿರೋಧಕ ಮಾತ್ರೆ ಸೇವನೆಯನ್ನು ಬಿಡಬಹುದು. ಯಾಕೆಂದ್ರೆ ಈ ವಯಸ್ಸಿನ ನಂತ್ರ ಗರ್ಭಧಾರಣೆ ಸಾಧ್ಯತೆ ಬಹಳ ಅಪರೂಪ. ಸುರಕ್ಷತೆ ದೃಷ್ಟಿಯಿಂದ ಮಹಿಳೆಯರು 50ನೇ ವಯಸ್ಸಿನಲ್ಲಿಯೇ ಕಾಂಬಿನೇಷನ್ ಮಾತ್ರೆ ಸೇವನೆ ನಿಲ್ಲಿಸೋದು ಸೂಕ್ತ.
ಗರ್ಭನಿರೋಧಕ ಮಾತ್ರೆಯಿಂದಾಗುವ ಅಡ್ಡಪರಿಣಾಮಗಳು : ದೀರ್ಘಕಾಲ ಯಾವುದೇ ಗರ್ಭನಿರೋಧಕ ಮಾತ್ರೆ ಸೇವನೆ ಮಾಡೋದು ಸೂಕ್ತವಲ್ಲ. ಗರ್ಭನಿರೋಧಕ ಮಾತ್ರೆ ಸೇವನೆ ಮಾಡೋದ್ರಿಂದ ಅನೇಕ ಅಡ್ಡಪರಿಣಾಮಗಳುಂಟಾಗುತ್ತವೆ. ವಾಕರಿಕೆ, ಸ್ತನ ಮೃದುತ್ವ ಅಥವಾ ಊತ, ಅನಿಯಮಿತ ಮುಟ್ಟು, ಅತಿಯಾದ ರಕ್ತಸ್ರಾವ, ತಲೆನೋವು, ಮನಸ್ಥಿತಿ ಬದಲಾವಣೆ, ಖಿನ್ನತೆ ಸೇರಿದಂತೆ ಅನೇಕ ಸಮಸ್ಯೆಗಳು ನಿಮ್ಮನ್ನು ಕಾಣಿಸಿಕೊಳ್ಳುತ್ತವೆ.
ವೈದ್ಯರ ಸಲಹೆ ಮುಖ್ಯ : ಗರ್ಭನಿರೋಧಕ ಮಾತ್ರೆ ಸೇವನೆ ಮಾಡುವ ಮಹಿಳೆ ಮೊದಲು ವೈದ್ಯರನ್ನು ಭೇಟಿಯಾಗ್ಬೇಕು. ಅವರ ಸಲಹೆ ಮೇರೆಗೆ ಮಾತ್ರೆ ಸೇವನೆ ಮಾಡ್ಬೇಕು. ವೈದ್ಯರು ನೀಡಿದ ಮಾತ್ರೆಯನ್ನು ಒಂದೇ ಸಮನೆ ತೆಗೆದುಕೊಳ್ಳಬೇಡಿ. ಆರು ತಿಂಗಳಿಗೊಮ್ಮೆ ಪರೀಕ್ಷೆಗೆ ಒಳಗಾಗುವುದು ಮುಖ್ಯ. ಧೂಮಪಾನ ಮಾಡುತ್ತಿರುವ ಮಹಿಳೆಯರು ಗರ್ಭನಿರೋಧಕ ಮಾತ್ರೆ ಸೇವನೆ ಮಾಡಿದ್ರೆ ರಕ್ತ ಹೆಪ್ಪುಗಟ್ಟುವ ಅಪಾಯವಿರುತ್ತದೆ. ಹಾಗಾಗಿ ವೈದ್ಯರ ಸಲಹೆಯಿಲ್ಲದೆ ಮಾತ್ರೆ ಸೇವನೆ ಮಾಡಬೇಡಿ.