ಡ್ರೈಫ್ರೂಟ್ಸ್ ಪೋಷಕಾಂಶಗಳಿಂದ ಸಮೃದ್ಧವಾಗಿರುತ್ತವೆ. ಅವುಗಳ ಸೇವನೆಯಿಂದ ಆರೋಗ್ಯ ವೃದ್ಧಿಸುತ್ತದೆ. ಸದಾ ಶಕ್ತಿಯುತವಾಗಿರಬೇಕು, ಯಾವುದೇ ರೋಗ ಹತ್ತಿರ ಸುಳಿಯಬಾರದು ಎನ್ನುವ ಮಹಿಳೆಯರು ನಿತ್ಯ ಈ ರೂಲ್ಸ್ ಫಾಲೋ ಮಾಡ್ಬೇಕು.
ಮಹಿಳೆ ಮನೆ, ಗಂಡ, ಮಕ್ಕಳು, ಕಚೇರಿ ಎಲ್ಲದರ ಜವಾಬ್ದಾರಿ ಹೊತ್ತು ನಿಭಾಯಿಸುತ್ತಾಳೆ. ಎಲ್ಲ ಕೆಲಸದ ಟೆನ್ಶನ್ ಮಧ್ಯೆ ತನ್ನ ಆರೋಗ್ಯದ ಕಡೆ ಗಮನಕೊಡುವುದನ್ನೇ ಮರೆಯುತ್ತಾಳೆ. ಪಿರಿಯಡ್ಸ್ ಶುರುವಾಗುವ ಆರಂಭವಾದ ದಿನದಿಂದ ಮೊದಲಾಗಿ ತಾಯಿಯಾಗುವ ಹಾಗೂ ಮುಟ್ಟು ನಿಲ್ಲುವ ಅವಧಿಯ ತನಕವೂ ಆಕೆಯಲ್ಲಿ ಅನೇಕ ರೀತಿಯ ಮಾನಸಿಕ ಹಾಗೂ ಶಾರೀರಿಕ ಬದಲಾವಣೆಗಳು ಕಂಡುಬರುತ್ತವೆ.
ಹಾರ್ಮೋನ್ (Hormone) ಗಳಲ್ಲಿ ಬದಲಾವಣೆ, ಕ್ಯಾಲ್ಶಿಯಮ್ ಕೊರತೆ, ಮೂಳೆಗಳ ಸವೆತ, ತೂಕದಲ್ಲಿ ವ್ಯತ್ಯಾಸ ಇಂತಹ ಹತ್ತು ಹಲವು ಸಮಸ್ಯೆ ಆಕೆಯನ್ನು ಕಾಡುತ್ತಲೇ ಇರುತ್ತದೆ. ಹಾಗಾಗಿ ಇಂತಹ ಸಮಸ್ಯೆಗಳನ್ನು ಎದುರಿಸಲು ಮಹಿಳೆಯರು ಹೆಚ್ಚು ಆರೋಗ್ಯವಂತರಾಗಿರುವುದು ಅವಶ್ಯಕ. ಆರೋಗ್ಯ ಚೆನ್ನಾಗಿರಬೇಕಂದ್ರೆ ಆಕೆ ವಿಟಮಿನ್, ಐರನ್, ಓಮೆಗಾ 3, ಫೈಬರ್ ಮುಂತಾದ ಪೌಷ್ಟಿಕಾಂಶ (Nutrition) ಗಳನ್ನು ಹೊಂದಿರುವ ಆಹಾರವನ್ನು ಸೇವಿಸಬೇಕು. ಮಹಿಳೆಯರು ಕೆಲವು ನಟ್ಸ್ (Nuts) ಗಳನ್ನು ರಾತ್ರಿ ನೆನೆಸಿಟ್ಟು ಬೆಳಿಗ್ಗೆ ಅದರ ಸೇವನೆ ಮಾಡಬೇಕು. ಇದರಿಂದ ಅವರಿಗೆ ರಾತ್ರಿ ಚೆನ್ನಾಗಿ ನಿದ್ದೆ ಬರುತ್ತದೆ. ದಿನಪೂರ್ತಿ ಅವರು ಉತ್ಸಾಹದಿಂದ ಇರಬಹುದು. ಇದರಿಂದ ಶರೀರದಲ್ಲಿ ಐರನ್ ಹೆಚ್ಚುತ್ತದೆ ಮತ್ತು ಕೂದಲು, ಚರ್ಮಗಳು ಕೂಡ ಹೊಳಪನ್ನು ಪಡೆಯುತ್ತೆ.
ಹೆಚ್ಚು ಹಾಲು ಕುಡಿಯೋದ್ರಿಂದ ತಾಯಂದಿರ ಎದೆಹಾಲು ಹೆಚ್ಚುತ್ತಾ?
ಮಹಿಳೆಯರು ಪ್ರತಿ ದಿನ ಇದನ್ನು ಸೇವಿಸಲೇಬೇಕು :
ಒಣಗಿದ ಕಪ್ಪು ದ್ರಾಕ್ಷಿ : ಕಪ್ಪು ದ್ರಾಕ್ಷಿಯಲ್ಲಿ ಎಂಟಿಆಕ್ಸಿಡೆಂಟ್ ಹೆಚ್ಚಿಗೆ ಇರುತ್ತೆ. ಇದು ಚರ್ಮ ಮತ್ತು ಕೂದಲಿಗೆ ಉತ್ತಮ ಆರೋಗ್ಯವನ್ನು ನೀಡುತ್ತದೆ. ದ್ರಾಕ್ಷಿ ಕಬ್ಬಿಣದಿಂದ ಸಮೃದ್ಧವಾಗಿರುವ ಎಲ್-ಅರ್ಜಿನೈನ್ ಅನ್ನು ಹೊಂದಿದೆ. ಇವು ಗರ್ಭಾಶಯ ಮತ್ತು ಅಂಡಾಂಶಯಕ್ಕೆ ರಕ್ತ ಹರಿವು ಸರಾಗವಾಗಲು ಸಹಾಯಮಾಡುತ್ತವೆ. ಗರ್ಭಾಶಯವು ಹೆಣ್ಣಿನ ಅತಿ ಮುಖ್ಯ ಅಂಗಗಳಲ್ಲಿ ಒಂದು. ಹಾಗಾಗಿ ಮಹಿಳೆಯರು ಉತ್ತಮ ಆರೋಗ್ಯವನ್ನು ಹೊಂದಲು ಒಣದ್ರಾಕ್ಷಿಯನ್ನು ಸೇವಿಸಬೇಕು.
ಬಾದಾಮಿ : ಬಾದಾಮಿಯಲ್ಲಿ ಪ್ರೋಟೀನ್, ಫೈಬರ್, ವಿಟಮಿನ್-ಬಿ, ವಿಟಮಿನ್ – ಇ, ಕ್ಯಾಲ್ಶಿಯಮ್, ಕಾಪರ್, ಮೆಗ್ನಿಶಿಯಮ್, ರೈಬೋಪ್ಲೆವಿನ್, ಐರನ್, ಪೊಟ್ಯಾಶಿಯಮ್ ಮತ್ತು ಜಿಂಕ್ ಮುಂತಾದ ಪೋಷಕಾಂಶಗಳು ಹೇರಳವಾಗಿದೆ. ಪ್ರತಿನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿಟ್ಟ ಬಾದಾಮಿಯನ್ನು ತಿನ್ನೋದ್ರಿಂದ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಬಾದಾಮಿ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತೆ ಮತ್ತು ಬುದ್ಧಿಶಕ್ತಿಯನ್ನು ಹೆಚ್ಚಿಸುತ್ತೆ. ಬಾದಾಮಿ ಸೇವನೆಯಿಂದ ಡಯಾಬಿಟೀಸ್ ಅನ್ನು ನಿಯಂತ್ರಣದಲ್ಲಿಡಬಹುದು ಮತ್ತು ಕ್ಯಾನ್ಸರ್ ನಂತಹ ಮಾರಣಾಂತಿಕ ಖಾಯಿಲೆಯನ್ನು ಕಡಿಮೆಗೊಳಿಸಬಹುದು.
Women Health: ಮುಟ್ಟಾದಾಗ ಬೇಗ ಬೆಳೆಯುತ್ತೆ ಓವೆರಿಯನ್ ಸಿಸ್ಟ್
ಖರ್ಜೂರ : ಖರ್ಜೂರದಲ್ಲಿ ಸೆಲೆನಿಯಮ್, ಮ್ಯಾಂಗನೀಸ್, ಮ್ಯಾಗ್ನೀಶಿಯಂ ಮತ್ತು ಕಾಪರ್ ಅಂಶ ಹೆಚ್ಚಿನ ಪ್ರಮಾಣದಲ್ಲಿದೆ. ನೆನೆಸಿದ ಖರ್ಜೂರ ಸೇವನೆಯಿಂದ ಶರೀರಕ್ಕೆ ಅಗಾಧ ಪ್ರಮಾಣದ ಶಕ್ತಿ ದೊರೆಯುತ್ತದೆ. ನಿದ್ರಾಹೀನತೆಯ ಸಮಸ್ಯೆಯನ್ನು ದೂರಮಾಡುವುದರ ಜೊತೆಗ ಮೂಳೆಗಳನ್ನೂ ಬಲಪಡಿಸುತ್ತದೆ.
ಪಿಸ್ತಾ : ಪಿಸ್ತಾ ಬೀಜದಲ್ಲಿ ಫೈಬರ್, ಪ್ರೋಟೀನ್, ವಿಟಮಿನ್ ಬಿ6, ಹೆಲ್ದಿ ಫ್ಯಾಟ್ ಮುಂತಾದ ಪೌಷ್ಠಿಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿದೆ. ಪಿಸ್ತಾ ಸೇವಿಸುವುದರಿಂದ ಕಣ್ಣು ಮತ್ತು ಕರುಳಿನ ಆರೋಗ್ಯ ಉತ್ತಮವಾಗಿರುತ್ತದೆ. ರಾತ್ರಿ ಪಿಸ್ತಾ ಬೀಜಗಳನ್ನು ತಿನ್ನುವುದರಿಂದ ನಿದ್ರೆಯೂ ಚೆನ್ನಾಗಿ ಬರುತ್ತದೆ. ಕರುಳಿನ ಕ್ಯಾನ್ಸರ್ ಅನ್ನು ಕಡಿಮೆಗೊಳಿಸುವ ಶಕ್ತಿ ಪಿಸ್ತಾ ಬೀಜದಲ್ಲಿದೆ.
ಅಖ್ರೊಟ್ : ಎಂಟಿಆಕ್ಸಿಡೆಂಟ್ ಮತ್ತು ಓಮೆಗಾ-3 ಫ್ಯಾಟಿ ಎಸಿಡ್ ಅಂಶವು ಅಖ್ರೊಟ್ ನಲ್ಲಿದೆ. ಇದು ಮೆದುಳಿನ ಆರೋಗ್ಯ ಮತ್ತು ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ. ಅಖ್ರೊಟ್ ಶರೀರದ ಊತವನ್ನು ಕಡಿಮೆಮಾಡುತ್ತದೆ.
ಡ್ರೈ ಫ್ರೂಟ್ಸ್ ಗಳನ್ನು ನೆನೆಸಿಟ್ಟೇ ಏಕೆ ತಿನ್ನಬೇಕು? : ಆಯುರ್ವೇದದ ಪ್ರಕಾರ, ಡ್ರೈ ಫ್ರೂಟ್ಸ್ ಆರೋಗ್ಯಕರ ಕೊಬ್ಬು, ಪ್ರೋಟೀನ್ ಮತ್ತು ನಾರಿನಂಶವನ್ನು ಹೊಂದಿರುವುದರಿಂದ ಇವುಗಳನ್ನು ಜೀರ್ಣಿಸಿಕೊಳ್ಳುವುದು ಕಷ್ಟ. ನಟ್ಸ್ ಗಳು ಹೆಚ್ಚು ಉಷ್ಣವಾದ್ದರಿಂದ ಅದನ್ನು ತಿನ್ನುವ ಮೊದಲು ಅದನ್ನು 6-8 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಬೇಕು. ನೆನೆಸಿಡುವುದರಿಂದ ಅವು ಶರೀರಕ್ಕೆ ಹೆಚ್ಚು ಉಷ್ಣವಾಗುವುದಿಲ್ಲ ಮತ್ತು ಅವುಗಳಲ್ಲಿರುವ ಟ್ಯಾನಿನ್ ಅಂಶವು ದೂರವಾಗುತ್ತವೆ. ಇದರಿಂದ ನಟ್ಸ್ ಗಳನ್ನು ಜೀರ್ಣಿಸಿಕೊಳ್ಳುವುದು ಸುಲಭವಾಗುತ್ತದೆ. ನೆನೆಸುವುದರ ಬದಲು ನೀವು ಅವುಗಳನ್ನು ಹುರಿದು ಕೂಡ ಸೇವಿಸಬಹುದು.