Health Tips: ಮಹಿಳೆಯರಿಗೆ ಹಾರ್ಟ್ ಅಟ್ಯಾಕ್ ಆಗೋದು ಇದೇ ಕಾರಣಕ್ಕೆ..!

By Suvarna News  |  First Published Feb 4, 2022, 9:43 AM IST

ಹಾರ್ಟ್‌ ಅಟ್ಯಾಕ್. ಮನುಷ್ಯನ ಜೀವವನ್ನು ಒಂದೇ ಏಟಿಗೆ ಬಲಿ ತೆಗೆದುಕೊಳ್ಳುವ ಸಾರ್ವಕಾಲಿಕ ಕಾಯಿಲೆ. ಮಕ್ಕಳು, ಪುರುಷರು, ಮಹಿಳೆ (Woman)ಯರೆನ್ನದೆ ಇತ್ತೀಚಿಗೆ ಎಲ್ಲರಲ್ಲೂ ಕಾಣಿಸಿಕೊಳ್ಳುತ್ತಿದೆ. ಅದರಲ್ಲೂ ಮಹಿಳೆಯರಲ್ಲಿ ಹೃದಯಾಘಾತ (Heart Attack)ದ ಅಪಾಯ ಹೆಚ್ಚಾಗ್ತಿರೋದು ಇದೇ ಕಾರಣಕ್ಕೆ.
 


ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಹೃದಯಾಘಾತ (Heart Attack)ದ ಅಪಾಯವು ಕಡಿಮೆಯಾಗಿದೆ. ಆದರೆ, ವಿಶೇಷವಾಗಿ ಋತುಬಂಧಕ್ಕೊಳಗಾದ ವಯಸ್ಸಿನ ಮಹಿಳೆ (Woman)ಯರಲ್ಲಿ, ಋತುಬಂಧದ ನಂತರ ಹೃದ್ರೋಗದ ಸಂಭವವು ಪುರುಷರಂತೆಯೇ ಇರುತ್ತದೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರು ಹೃದಯ ವೈಫಲ್ಯ ಅಥವಾ ಸಾವಿನಿಂದ ಬಳಲುತ್ತಿರುವ ಸಾಧ್ಯತೆ ಶೇಕಡಾ 20ರಷ್ಟಿದೆ. ಮಹಿಳೆಯರಲ್ಲಿ ಹೃದಯಾಘಾತವಾಗಲು ಅವರು ಮಾಡುವ ಈ ಕೆಲವೊಂದು ತಪ್ಪುಗಳು ಕಾರಣವಾಗಬಹುದು.

ಧೂಮಪಾನ
ಅನೇಕ ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದರೆ ಭಾರತೀಯ ಮಹಿಳೆಯರು ಧೂಮಪಾನ (Smoking) ಮಾಡುವ ಪ್ರಮಾಣವು ಕಡಿಮೆ ಪ್ರಮಾಣದಲ್ಲಿದೆ. ಭಾರತದಲ್ಲಿ, ನಗರಗಳಲ್ಲಿ ಮಾತ್ರ ಧೂಮಪಾನ ಮಾಡುವ ಮಹಿಳೆಯರ ಪ್ರಮಾಣವು ಅಧಿಕವಾಗಿದೆ. ಧೂಮಪಾನವು ಹೃದಯ ಮತ್ತು ಶ್ವಾಸಕೋಶದ ಕಾಯಿಲೆ ಸೇರಿದಂತೆ ಅನೇಕ ಆರೋಗ್ಯ ಪರಿಣಾಮಗಳನ್ನು ಹೊಂದಿದೆ. ಧೂಮಪಾನವನ್ನು ಹೃದಯಾಘಾತಕ್ಕೆ ಪ್ರಮುಖ ಅಪಾಯಕಾರಿ ಅಂಶವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಮಹಿಳೆಯರು ಧೂಮಪಾನ ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು.

Tap to resize

Latest Videos

undefined

Winter Heart Attacks: ಚಳಿಗಾಲದಲ್ಲಿ ಹೃದಯಾಘಾತ ತಪ್ಪಿಸಲು ಹೀಗೆ ಮಾಡಿ

ವ್ಯಾಯಾಮ
ಮಹಿಳೆಯರು ಅನೇಕ ಕೆಲಸಗಳನ್ನು ಒಬ್ಬಂಟಿಯಾಗಿಯೇ ನಿರ್ವಹಿಸುತ್ತಾರೆ. ಮನೆ, ಕಚೇರಿಯ ಕೆಲಸಗಳನ್ನು ನಿಭಾಯಿಸುತ್ತಾರೆ. ಹೀಗಾಗಿಯೇ ಅವರು ತಮ್ಮ ವ್ಯಾಯಾಮ (Exercise)ದ ದಿನಚರಿಯನ್ನು ಬಿಟ್ಟುಬಿಡುತ್ತಾರೆ. ಪ್ರತಿಯೊಬ್ಬ ಪುರುಷರು ಅಥವಾ ಮಹಿಳೆಯರು ದಿನಕ್ಕೆ ಕನಿಷ್ಠ 30 ನಿಮಿಷಗಳ ಕಾಲ ಮತ್ತು ವಾರದಲ್ಲಿ ಕನಿಷ್ಠ 5 ದಿನಗಳ ಕಾಲ ಮಧ್ಯಮ ಮಟ್ಟದ ವ್ಯಾಯಾಮವನ್ನು ಮಾಡಬೇಕಾಗುತ್ತದೆ. ಹೀಗೆ ಮಾಡದಿದ್ದಾಗ ಮಹಿಳೆಯರಲ್ಲಿ ಹೃದಯಾಘಾತದ ಸಾಧ್ಯತೆ ಹೆಚ್ಚಾಗುತ್ತದೆ.

ಅಧಿಕ ತೂಕ
ಮಹಿಳೆಯರು ತೂಕದ ಬಗ್ಗೆ ಅಸಡ್ಡೆ ಹೊಂದಿರುತ್ತಾರೆ. ಸಮಾಯಾವಕಾಶದ ಕೊರತೆಯಿಂದ ತೂಕ (Weight) ಇಳಿಸಿಕೊಳ್ಳುವ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ. ವಿಶೇಷವಾಗಿ ಮಗುವಿನ ಜನನದ ನಂತರ ಹಲವರಲ್ಲಿ ತೂಕ ಹೆಚ್ಚಾಗುತ್ತದೆ. ಹೃದ್ರೋಗ ಸೇರಿದಂತೆ ಬೊಜ್ಜು ಸಂಬಂಧಿತ ಸಮಸ್ಯೆಗಳನ್ನು ತಡೆಗಟ್ಟಲು ದೇಹದ ತೂಕವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ಅಲ್ಲದೆ, ಈ ರೀತಿಯ ಸ್ಥೂಲಕಾಯತೆಯು ಹೃದಯದ ಕಾಯಿಲೆಗೂ ಕಾರಣವಾಗುತ್ತದೆ. ಸರಿಯಾದ ಆಹಾರ ಸೇವನೆ ಮತ್ತು ದಿನನಿತ್ಯದ ವ್ಯಾಯಾಮದಿಂದ ಸ್ಥೂಲಕಾಯತೆಯನ್ನು ತಪ್ಪಿಸಬೇಕು.

Curd For Health: ಪ್ರತಿದಿನ ಮೊಸರು ಸೇವಿಸಿ, ಹೃದಯಾಘಾತ ಅಪಾಯದಿಂದ ದೂರವಿರಿ..

ನಿದ್ರೆ ಮತ್ತು ಒತ್ತಡ
ಮಹಿಳೆಯರು ಸಾಮಾನ್ಯವಾಗಿ ತಡವಾಗಿ ಮಲಗುತ್ತಾರೆ ಮತ್ತು ಬೇಗನೆ ಏಳುತ್ತಾರೆ. ಹೀಗಾಗಿಯೇ 7 ರಿಂದ 8 ಗಂಟೆಗಳ ನಿದ್ರೆ (Sleep)ಯನ್ನು ಪೂರ್ಣಗೊಳಿಸುವುದಿಲ್ಲ. ಕಡಿಮೆ ನಿದ್ರಿಸುವುದು ಹೃದಯ ಸಂಬಂಧಿತ ಅಪಾಯವನ್ನು ಹೆಚ್ಚಿಸುತ್ತದೆ. ಅದೇ ರೀತಿ ಹೆಚ್ಚಿದ ಮಾನಸಿಕ ಒತ್ತಡ (Pressure)ವೂ ಹೃದಯ ಸಂಬಂಧಿ ಕಾಯಿಲೆಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ. ಮಹಿಳೆಯರು ಈ ಅಂಶಗಳನ್ನು ಕಾಳಜಿ ವಹಿಸಬೇಕು ಮತ್ತು ಅಗತ್ಯವಿದ್ದರೆ ಸಲಹೆ ಅಥವಾ ಚಿಕಿತ್ಸೆಗಾಗಿ ವೈದ್ಯರನ್ನು ಸಂಪರ್ಕಿಸಬೇಕು. ಒತ್ತಡ ಮುಕ್ತವಾಗಿರಲು ಯಾವುದಾದರೊಂದು ರೀತಿಯ ಹವ್ಯಾಸದಲ್ಲಿ ತೊಡಗಿಸಿಕೊಳ್ಳಬಹುದು, ಸಂಗೀತವನ್ನು ಆಲಿಸಬಹುದು, ಯೋಗಾಭ್ಯಾಸ ಮಾಡಬಹುದು.

ಆರೋಗ್ಯ ತಪಾಸಣೆ
ದಿನನಿತ್ಯದ ಆರೋಗ್ಯ ತಪಾಸಣೆಗಳನ್ನು ಮಹಿಳೆಯರು ಹೆಚ್ಚಾಗಿ ತಪ್ಪಿಸುತ್ತಾರೆ. ಇದು ಮಧುಮೇಹ, ಅಧಿಕ ರಕ್ತದೊತ್ತಡ ಮುಂತಾದ ಆಧಾರವಾಗಿರುವ ಕಾಯಿಲೆಯ ಸ್ಥಿತಿಗಳ ಅಸಮರ್ಪಕ ನಿರ್ವಹಣೆಗೆ ಕಾರಣವಾಗುತ್ತದೆ. ಸರಿಯಾದ ರೋಗನಿರ್ಣಯ ಮತ್ತು ಕಾಯಿಲೆಗಳ ಸರಿಯಾದ ಸಮಯೋಚಿತ ಚಿಕಿತ್ಸೆಗಾಗಿ ದಿನನಿತ್ಯದ ತಪಾಸಣೆ ಅತ್ಯಗತ್ಯ.
ರೋಗಲಕ್ಷಣಗಳನ್ನು ನಿರ್ಲಕ್ಷಿಸುವುದು.

ಹೃದಯಾಘಾತದಿಂದ ಉಂಟಾಗುವ ರೋಗಲಕ್ಷಣಗಳು ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ವಿಭಿನ್ನವಾಗಿರಬಹುದು ಮತ್ತು ವಿಲಕ್ಷಣವಾಗಿರಬಹುದು. ಹೃದಯಾಘಾತವು ಕೇವಲ ಉಸಿರಾಟದ ತೊಂದರೆ, ವಾಕರಿಕೆ, ವಾಂತಿ, ಬೆವರುವಿಕೆ ಇತ್ಯಾದಿಯಾಗಿ ಕಾಣಿಸಿಕೊಳ್ಳದಿರಬಹುದು. ಎದೆ ನೋವಿನಂತಹ ವಿಶಿಷ್ಟ ಲಕ್ಷಣಗಳು ಇಲ್ಲದಿರಬಹುದು. ಇದು ಮಹಿಳೆಯರು ತಕ್ಷಣದ ವೈದ್ಯಕೀಯ ಸಲಹೆಯನ್ನು ಪಡೆಯದಿರುವಿಕೆಗೆ ಕಾರಣವಾಗುತ್ತದೆ, ಇದು ಹೃದಯ ಸ್ನಾಯುಗಳಿಗೆ ಗಮನಾರ್ಹ ಹಾನಿಯನ್ನುಂಟುಮಾಡುತ್ತದೆ. 

ಹೀಗಾಗಿ ಮಹಿಳೆಯರು ತಮ್ಮ ಜೀವನಶೈಲಿಯನ್ನು ಸುಧಾರಿಸಿಕೊಳ್ಳಬೇಕು. ಪ್ರತಿ ನಿತ್ಯ ವ್ಯಾಯಾಮ ಮಾಡಿ ತೂಕ ಇಳಿಸಿಕೊಳ್ಳಬೇಕು. ಆರೋಗ್ಯಕ್ಕೆ ಅಗತ್ಯವಾದಷ್ಟು ನಿದ್ದೆ ಮಾಡಬೇಕು. ಒತ್ತಡವನ್ನು ಕಡಿಮೆಗೊಳಿಸಲು ಯತ್ನಿಸಬೇಕು. ಧೂಮಪಾನ ಮಾಡಲೇಬಾರದು. ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡುತ್ತಿರಬೇಕು.

click me!