ಅನೇಕ ಕಲಾವಿದರು ಹಸ್ತಮೈಥುನದ ಬಗ್ಗೆ ಮಾತನಾಡಿದ್ದಾರೆ. ಕೆಲವು ಸಿನಿಮಾಗಳಲ್ಲಿ ಸ್ತ್ರೀ ಹಸ್ತಮೈಥುನದ ಬಗ್ಗೆ ತೋರಿಸಲಾಗಿದೆ. ಅದ್ರಿಂದ ಸಾಕಷ್ಟು ಪ್ರಯೋಜನವಿದೆ ಎಂದು ತಜ್ಞರೇ ಹೇಳ್ತಾರೆ. ಆದ್ರೆ ಈಗ್ಲೂ ಜನರು ಅದನ್ನು ಒಪ್ಪಿ,ಅಪ್ಪಿಕೊಂಡಿಲ್ಲ. ಅದನ್ನು ನಮ್ಮ ಜೀವನದಿಂದ ದೂರವಿಡಲಾಗಿದೆ.
ಸ್ತ್ರೀ ಹಸ್ತಮೈಥುನ (Masturbation)..ನಮಗೆ ಗೊತ್ತು,ಹೆಸರು ಕೇಳ್ತಿದ್ದಂತೆ ಹುಬ್ಬನ್ನು ಗಂಟು ಹಾಕಿ, ಛೀ ಎನ್ನುತ್ತೀರೆಂದು. ಬಹುತೇಕ ಮಹಿಳೆ (Woman)ಯರು ಹಸ್ತಮೈಥುನ ಮಾಡುವುದಿಲ್ಲ. ಮಾಡಿರುವವರೂ ಒಪ್ಪಿಕೊಳ್ಳುವುದಿಲ್ಲ. ಹಸ್ತಮೈಥುನದ ಬಗ್ಗೆ ಮಾತನಾಡುವ ಧೈರ್ಯವಿಲ್ಲ. ಕಿವಿ (Ears), ಕಣ್ಣು(Eyes) ಮುಚ್ಚಿಕೊಂಡು ಮುಖ ಹಿಂಡುವ ಬದಲು ಶಾಂತವಾಗಿ ಕುಳಿತು ಇದನ್ನು ಓದಿ. ಸ್ತ್ರೀ ಹಸ್ತಮೈಥುನದ ಬಗ್ಗೆ ನಾವೊಂದಿಷ್ಟು ವಿಷ್ಯವನ್ನು ನಿಮಗೆ ಹೇಳ್ತೆವೆ.
ಮಹಿಳೆಯರು ಎಷ್ಟು ಬಾರಿ ಹಸ್ತಮೈಥುನ ಮಾಡಿಕೊಳ್ಳುತ್ತಾರೆ?
ಕೆಲ ಮಹಿಳೆಯರು ಹಸ್ತಮೈಥುನ ಮಾಡಿಕೊಳ್ತಾರೆಂಬ ಸಂಗತಿ ನಿಮಗೆ ತಿಳಿದಿದೆ. ಹಾಗಂತ, ಮಹಿಳೆಯರು ಎಷ್ಟು ಬಾರಿ ಹಸ್ತಮೈಥುನ ಮಾಡಿಕೊಳ್ಳುತ್ತಾರೆ ಎಂಬುದಕ್ಕೆ ಸ್ಪಷ್ಟ ಉತ್ತರವಿಲ್ಲ. ಏಕೆಂದರೆ ಕೆಲವರು ಈವರೆಗೂ ಅದನ್ನು ಪ್ರಯತ್ನಿಸಿಲ್ಲ. ಕೆಲವರು ವರ್ಷದಲ್ಲಿ ಒಮ್ಮೆ ಅಥವಾ ಎರಡು ಬಾರಿ ಪ್ರಯತ್ನಿಸಿದ್ದಾರೆ. ಹಾಗಾಗಿ ಎಷ್ಟು ಬಾರಿ ಎಂಬುದಕ್ಕೆ ಸ್ಪಷ್ಟ ಉತ್ತರವಿಲ್ಲ. ವಾರದಲ್ಲಿ ಒಮ್ಮೆ ಹಸ್ತಮೈಥುನ ಮಾಡಿಕೊಳ್ಳುವವರೂ ಇದ್ದಾರೆ.
undefined
ಇದು ಸಾಮಾನ್ಯ : ಹಸ್ತಮೈಥುನ ಮಾಡಿಕೊಳ್ತಾರೆಂದ್ರೆ ಅವರನ್ನು ಜನರು ದೂರವಿಡ್ತಾರೆ. ಅವರ ಬಗ್ಗೆ ಅನೇಕ ಮಾತುಗಳು ಕೇಳಿಬರ್ತವೆ. ಮಾನಸಿಕ ಅಸ್ವಸ್ಥ ಎಂದುಕೊಳ್ಳುವವರಿದ್ದಾರೆ. ಆದ್ರೆ ಸ್ತ್ರೀ ಹಸ್ತಮೈಥುನ ಸಾಮಾನ್ಯ. ಯಾವುದೋ ರೋಗಕ್ಕೆ ತುತ್ತಾದವರು ಇದನ್ನು ಮಾಡುವುದಿಲ್ಲ. ಈ ರೀತಿ ಮಾಡುವವರು ಸಹ ಸಾಮಾನ್ಯ ವರ್ಗದಲ್ಲಿ ಬರುತ್ತಾರೆ. ಹಸ್ತಮೈಥುನದಿಂದಲೂ ಅನೇಕ ಪ್ರಯೋಜನವಿದೆ. ಅದನ್ನು ಅರಿತು, ಅಗತ್ಯವಿದ್ದಾಗ ಹಸ್ತಮೈಥುನ ಮಾಡಿಕೊಂಡಲ್ಲಿ ಯಾವುದೇ ತಪ್ಪಿಲ್ಲ ಎನ್ನುತ್ತಾರೆ ತಜ್ಞರು.
Beer For Hair: ಬಿಯರ್ ಬಳಸಿದ್ರೆ ಕೂದಲು ಸಾಫ್ಟ್ ಆಗುತ್ತೆ ಅಂತಾರೆ..ನಿಜಾನ ?
ಸರಾಸರಿ ಎಷ್ಟು ಮಹಿಳೆಯರು ಹಸ್ತಮೈಥುನ ಮಾಡುತ್ತಾರೆ? : ಕೆಲವೊಂದಕ್ಕೆ ನಿಖರ ಉತ್ತರ ನೀಡಲು ಸಾಧ್ಯವಾಗುವುದಿಲ್ಲ. ಕೆಲವೊಂದು ಅಧ್ಯಯನದಿಂದ ಇದನ್ನು ತಿಳಿದುಕೊಳ್ಳುವ ಪ್ರಯತ್ನ ನಡೆದಿದೆ. ಅಧ್ಯಯನದ ಪ್ರಕಾರ ಪುರುಷರು ಮಾತ್ರವಲ್ಲ ಮಹಿಳೆಯರು ಹಸ್ತಮೈಥುನ ಮಾಡಲು ಇಷ್ಟಪಡುತ್ತಾರೆ. ವರದಿಗಳ ಪ್ರಕಾರ, ಸುಮಾರು ಶೇಕಡಾ 40ರಷ್ಟು ಮಹಿಳೆಯರು ಹಸ್ತಮೈಥುನ ಮಾಡಲು ಇಷ್ಟಪಡುತ್ತಾರೆ. ಆದರೆ ಇದು ನಿಖರವಾದ ಅಂಕಿ ಅಂಶವಲ್ಲ.
ನೀವು ಎಷ್ಟು ಬಾರಿ ಹಸ್ತಮೈಥುನ ಮಾಡಿಕೊಳ್ಳಬೇಕು? : ಕೆಲವರನ್ನು ಕಾಡುವ ಸಾಮಾನ್ಯ ಪ್ರಶ್ನೆ ಇದು. ಪ್ರತಿಯೊಬ್ಬ ವ್ಯಕ್ತಿಯ ಹಸಿವು ಮತ್ತು ತಿನ್ನುವ ಸಮಯ ಒಂದೇ ಆಗಿರುವುದಿಲ್ಲ, ಹಾಗೆಯೇ ಇಬ್ಬರ ಹಸ್ತಮೈಥುನ ಸಮಯ ಮತ್ತು ಮನಸ್ಸು ಒಂದೇ ಆಗಿರುವುದಿಲ್ಲ. ಕೆಲವರು ಹಸಿವಾದಾಗ ಹೆಚ್ಚು ತಿಂದ್ರೆ ಮತ್ತೆ ಕೆಲವರು ಕಡಿಮೆ ತಿನ್ನುತ್ತಾರೆ. ಹಸ್ತಮೈಥುನದ ವಿಷಯವೂ ಇದಕ್ಕೆ ಹೊರತಾಗಿಲ್ಲ. ಇದು ದೈಹಿಕ ಅಗತ್ಯವಾಗಿದೆ. ಕೆಲವೊಮ್ಮೆ ನೀವು ಅದನ್ನು ಬಯಸುತ್ತೀರಿ, ಕೆಲವೊಮ್ಮೆ ಅಲ್ಲ. ಕೆಲವೊಮ್ಮೆ ನೀವು ತಿಂಗಳುಗಟ್ಟಲೆ ಅದು ಇಲ್ಲದೆ ಬದುಕಬಹುದು ಮತ್ತು ಕೆಲವೊಮ್ಮೆ ಅದು ನಿಮ್ಮನ್ನು ಸದಾ ಕಾಡಬಹುದು. ವಯಸ್ಸು, ನಿಮ್ಮ ಮನಸ್ಥಿತಿ ಆಧಾರದ ಮೇಲೆ ನೀವು ಹಸ್ತಮೈಥುನ ಮಾಡಿಕೊಳ್ಳುತ್ತೀರಿ. ಹೆಚ್ಚು, ಕಡಿಮೆ ಲೆಕ್ಕಾಚಾರ ಇದ್ರಲ್ಲಿ ಬರುವುದಿಲ್ಲ.
ಮಹಿಳೆಯರಿಗೆ ಹಸ್ತಮೈಥುನ ಎಷ್ಟು ಪ್ರಯೋಜನಕಾರಿ? : ಹಸ್ತಮೈಥುನವು ಮಹಿಳೆಯರ ಆರೋಗ್ಯ ಮತ್ತು ಸೌಂದರ್ಯದ ಮೇಲೆ ಪ್ರಭಾವ ಬೀರುತ್ತದೆ.
ಹಸ್ತಮೈಥುನವು ಮುಟ್ಟಿನ ಸಮಯದಲ್ಲಿ ನೋವು ನಿವಾರಕವಾಗಿ ಕೆಲಸ ಮಾಡುತ್ತದೆ. ಸೆಕ್ಸ್ ವೇಳೆ ದೇಹವು ಕೆಲವು ಹಾರ್ಮೋನ್‌ಗಳನ್ನು ಬಿಡುಗಡೆ ಮಾಡುತ್ತದೆ. ಹಸ್ತಮೈಥುನದ ನಂತ್ರವೂ ಈ ಹಾರ್ಮೋನ್ ಬಿಡುಗಡೆಯಾಗುತ್ತದೆ. ಇದು ನೈಸರ್ಗಿಕ ನೋವು ನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ.
ಸ್ವಯಂ ಸಬಲೀಕರಣ : ಹಸ್ತಮೈಥುನವು ಸ್ವಯಂ ಪ್ರೀತಿ. ಅದು ತನ್ನನ್ನು ಪ್ರೀತಿಸಲು ಕಲಿಸದಿರಬಹುದು, ಆದರೆ ಅದು ತನ್ನದೇ ಆದ ಪ್ರಾಮುಖ್ಯತೆಯನ್ನು ಅನುಭವಿಸುವಂತೆ ಮಾಡುತ್ತದೆ.
ಉತ್ತಮ ನಿದ್ರೆ : ಅಧ್ಯಯನದ ಪ್ರಕಾರ, ಪರಾಕಾಷ್ಠೆಯ ಸಮಯದಲ್ಲಿ ಆಕ್ಸಿಟೋಸಿನ್ ಮತ್ತು ಪ್ರೊಲ್ಯಾಕ್ಟಿನ್ ಬಿಡುಗಡೆಯಾಗುತ್ತದೆ. ಇದು ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ. ಹಸ್ತಮೈಥುನ ಕೂಡ ಒಳ್ಳೆಯ ನಿದ್ರೆಗೆ ಸಹಕಾರಿ.
ಹಾಳಾಗದ ಸಂಬಂಧ : ಇಲ್ಲಿ ಒಬ್ಬರೇ ಇರುವುದರಿಂದ ಸಂಬಂಧ ಹಾಳಾಗುವುದಿಲ್ಲ. ಸೆಕ್ಸ್ ನಿಂದ ಸಂಗಾತಿಗೆ ಸಂತೋಷ ಸಿಕ್ಕಿಲ್ಲ ಎಂಬ ನೋವು ಕಾಡುವುದಿಲ್ಲ. ಲೈಂಗಿಕ ರೋಗ ಹರಡುವ ಅಪಾಯವಿರುವುದಿಲ್ಲ. ಗರ್ಭಪಾತದ ಅಪಾಯವಿಲ್ಲ.
ತಲೆನೋವು ಮತ್ತು ಮೈಗ್ರೇನ್ : ತೀವ್ರ ತಲೆನೋವು ಮತ್ತು ಮೈಗ್ರೇನ್‌ಗೆ ಹಸ್ತಮೈಥುನವು ತುಂಬಾ ಪ್ರಯೋಜನಕಾರಿಯಾಗಿದೆ. ಹಸ್ತಮೈಥುನವು ಸಂತೋಷದ ಹಾರ್ಮೋನುಗಳನ್ನು ಬಿಡುಗಡೆ ಮಾಡುವುದರಿಂದ ತಲೆನೋವು ಕಡಿಮೆಯಾಗುತ್ತದೆ.
ಖಿನ್ನತೆ ಅಪಾಯ : ಸ್ತ್ರೀ ಹಸ್ತಮೈಥುನದ ಬಗ್ಗೆ ಅನೇಕ ವದಂತಿಯಿದೆ. ಖಿನ್ನತೆ ಕಾಡಬಹುದು ಎನ್ನಲಾಗುತ್ತದೆ. ಆದ್ರೆ ಯಾವುದೇ ವಾಸ್ತವಿಕ ಪುರಾವೆ ಅಥವಾ ವೈಜ್ಞಾನಿಕ ಪುರಾವೆಗಳಿಲ್ಲ.
ಅಯ್ಯೋ ಇರೋ ಒಬ್ಳನ್ನೇ ಮೇಂಟೇನ್ ಮಾಡಕ್ಕಾಗ್ತಿಲ್ಲ ಅನ್ನೋರು ಇಲ್ ಕೇಳಿ
ಹಸ್ತಮೈಥುನದಿಂದ ಲೈಂಗಿಕ ಬಯಕೆಗೆ ಅಡ್ಡಿ ಮಾಡುತ್ತದೆ ಎನ್ನಲಾಗುತ್ತದೆ. ಆದ್ರೆ ಇದು ಪ್ರೀತಿ ಹೆಚ್ಚಿಸುತ್ತದೆ ಎಂದು ತಜ್ಞರು ಹೇಳ್ತಾರೆ. ಹಸ್ತಮೈಥುನವು ಗರ್ಭಿಣಿಯಾಗುವ ನಿಮ್ಮ ಸಾಮರ್ಥ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಹಸ್ತಮೈಥುನಕ್ಕೆ ಅನೇಕ ಆಟಿಕೆಗಳನ್ನು ಬಳಸಲಾಗುತ್ತದೆ.