Home Care: ಮನೆಯ ಈ ಭಾಗ ಕ್ಲೀನ್ ಮಾಡೋಕೆ ಹೆಚ್ಚಿನವರು ಮರೀತಾರೆ, ನೀವು?

Suvarna News   | Asianet News
Published : Feb 03, 2022, 05:15 PM IST
Home Care: ಮನೆಯ ಈ ಭಾಗ ಕ್ಲೀನ್ ಮಾಡೋಕೆ ಹೆಚ್ಚಿನವರು ಮರೀತಾರೆ, ನೀವು?

ಸಾರಾಂಶ

ಸ್ವಚ್ಛತೆ ದೈನಂದಿನ ದೊಡ್ಡ ಕಾರ್ಯಗಳಲ್ಲೊಂದು. ಮಹಿಳೆಯರ ಬಹಳಷ್ಟು ಸಮಯ ಬೇಡುವುದು ಈ ಕೆಲಸವೇ. ಅಡುಗೆಗಿಂತ ಹೆಚ್ಚು ಸಮಯ ಸ್ವಚ್ಛತೆಗೇ ಬೇಕಾಗುತ್ತದೆ. ಆದರೂ ದೈನಂದಿನ ಸ್ವಚ್ಛತೆಯಲ್ಲಿ ಕೆಲವು ವಸ್ತು ಅಥವಾ ಸ್ಥಳಗಳು ಬಿಟ್ಟುಹೋಗುವುದುಂಟು. ಅವುಗಳ ಕುರಿತಾಗಿಯೂ ಎಚ್ಚರಿಕೆ ವಹಿಸುವುದು ಅಗತ್ಯ.  

ದಿನವೂ ಮನೆ(Home)ಯನ್ನು ಸ್ವಚ್ಛ(Clean)ಗೊಳಿಸಲೇಬೇಕು. ಇಲ್ಲವಾದರೆ, ಧೂಳು (Dust), ಕಸ ತುಂಬಿಕೊಳ್ಳುತ್ತದೆ. ಸ್ವಚ್ಛತೆಯ ಕೆಲಸ ಅಥವಾ ಉಸ್ತುವಾರಿ ಸಾಮಾನ್ಯವಾಗಿ ಮಹಿಳೆ(Woman)ಯರದ್ದೇ. ಹಾಲ್ (Hall), ರೂಮುಗಳು, ಅಡುಗೆ ಮನೆ (Kitchen), ಡೈನಿಂಗ್ ಹಾಲ್ (Dining Hall), ದೇವರ ಕೋಣೆ, ಬಾಲ್ಕನಿ, ಎದುರಿನ ಸಿಟೌಟ್, ಮೆಟ್ಟಿಲುಗಳು (Steps)...ಹೀಗೆ ಎಷ್ಟೆಲ್ಲ ಸ್ಥಳಗಳನ್ನು ದಿನವೂ ಸ್ವಚ್ಛಗೊಳಿಸಲೇಬೇಕಾಗಿರುತ್ತದೆ. ಆದರೂ ಅಲ್ಲಲ್ಲಿ ಕೆಲವು ಕಡೆ ಚೊಕ್ಕ ಮಾಡುವುದು  ಮರೆತುಹೋಗಬಹುದು. ಅಥವಾ ಬೇರೆ ಸ್ಥಳಗಳಿಗೆ ದೊರೆತಷ್ಟು ಆದ್ಯತೆ ದೊರೆಯದಿರಬಹುದು. ಆದರೆ, ಅವುಗಳನ್ನು ಸ್ವಚ್ಛವಿರಿಸುವುದು ಸಹ ಅತ್ಯಂತ ಅಗತ್ಯ.
ಕೋವಿಡ್ ನಂತರದ ದಿನಗಳಲ್ಲಿ ಮನೆಯ ಸ್ವಚ್ಛತೆಯ ಬಗ್ಗೆ ಮಹಿಳೆಯರು ಹಿಂದಿಗಿಂತ ಹೆಚ್ಚು ಗಮನ ನೀಡುತ್ತಿದ್ದಾರೆ. ಆದರೂ ಕೆಲವೊಮ್ಮೆ ಅವರ ದೃಷ್ಟಿಗೆ ನಿಲುಕದೆ ಮರೆತುಹೋಗುವ ಕೆಲವು ಮುಖ್ಯವಾದ ಸ್ಥಳ ಅಥವಾ ವಸ್ತುಗಳಿವೆ. 

•    ಬಾಗಿಲುಗಳ ನಾಬ್ (Door Nob), ಹಿಡಿಕೆ, ಸ್ವಿಚ್, ಸರಳುಗಳು, ರಿಮೋಟ್
ಮನೆಯಲ್ಲಿ ಅತ್ಯಂತ ಹೆಚ್ಚು ಸ್ಪರ್ಶಕ್ಕೆ ಒಳಗಾಗುವ ವಸ್ತುಗಳೆಂದರೆ ಇವೇ ಆಗಿವೆ. ಡೋರ್ ನಾಬ್, ಡೋರ್ ಹ್ಯಾಂಡಲ್ (Handle), ಸ್ವಿಚ್ (Switch), ಗ್ರಿಲ್ಸ್ (Grills), ಮುಖ್ಯದ್ವಾರ, ಅದರ ಮುಂದಿರುವ ಕಬ್ಬಿಣದ ಗೇಟ್ (Gate), ರಿಮೋಟ್...ಹೀಗೆ ದೈನಂದಿನ ಸ್ವಚ್ಛತಾ ಕಾರ್ಯಕ್ಕೆ ಇವುಗಳನ್ನು ಅಳವಡಿಸಿಕೊಳ್ಳಲು ಮರೆತುಹೋಗುತ್ತದೆ. ನೀವು ಒಂದು ದಿನ ರೂಮಿನ ನೆಲವನ್ನು ಕ್ಲೀನ್ ಮಾಡದಿದ್ದರೂ ಪರವಾಗಿಲ್ಲ. ಆದರೆ, ಮನೆಮಂದಿಯೆಲ್ಲ ಅತಿ ಹೆಚ್ಚು ಸ್ಪರ್ಶಿಸುವ ಈ ವಸ್ತುಗಳನ್ನು ದಿನವೂ ಕ್ಲೀನ್ ಮಾಡಿ. ಅವುಗಳಿಗೆ ಸೋಂಕುನಿವಾರಕ ವೈಪ್ಸ್ (Disinfectant Wipes), ಆಂಟಿಬ್ಯಾಕ್ಟೀರಿಯಲ್ ಸೊಲ್ಯೂಷನ್ (Anti Bacterial Solution) ಸಿಂಪಡಿಸಿದರೂ ಸಾಕು. ದಿನವೂ ಬಟ್ಟೆಯಿಂದ ಉಜ್ಜಿಯೇ ಕ್ಲೀನ್ ಮಾಡಬೇಕೆಂದಿಲ್ಲ. ಯುನಿಸೆಫ್ (UNISEF) ಪ್ರಕಾರ, ಸೋಂಕುನಿವಾರಕ ಉತ್ಪನ್ನಗಳಲ್ಲಿ ಶೇ.70ರಷ್ಟು ಆಲ್ಕೋಹಾಲ್ (Alcohol) ಅಂಶ ಇರಬೇಕು. ವಿನೆಗರ್ ಹಾಗೂ ಇತರ ನೈಸರ್ಗಿಕ ಉತ್ಪನ್ನಗಳು ಅಷ್ಟಾಗಿ ಪ್ರಯೋಜನಕ್ಕೆ ಬರುವುದಿಲ್ಲ. 

Valentines Day: ಗಿಫ್ಟ್ ಕೊಟ್ರೆ ಪ್ರೀತಿ ಹೆಚ್ಚಾಗುತ್ತಾ ?

•    ಲಾಂಡ್ರಿಗೆ ಕಳಿಸುವ ಬ್ಯಾಗ್ (Bag) ಅಥವಾ ಬಾಸ್ಕೆಟ್
ನೀವು ಲಾಂಡ್ರಿಗೆ ಬಟ್ಟೆ ಕಳಿಸುತ್ತೀರಿ ಎಂದಾದರೆ, ಅವುಗಳನ್ನು ತೆಗೆದುಕೊಂಡು ಹೋಗುವ ಬ್ಯಾಗ್ ಅಥವಾ ಬಾಸ್ಕೆಟ್ ಅನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದು ಅಗತ್ಯ. ಒಂದು ಬಟ್ಟೆಯ ಬ್ಯಾಗ್ ನಲ್ಲಿ ಕೊಳೆ ಬಟ್ಟೆಗಳನ್ನು ಕೊಂಡೊಯ್ಯುವುದು ಇನ್ನೊಂದು ಬಟ್ಟೆಯ ಬ್ಯಾಗ್ ನಲ್ಲಿ ಶುಚಿಯಾದ ಬಟ್ಟೆಗಳನ್ನು ತರುವ ಅಭ್ಯಾಸ ಮಾಡಿಕೊಂಡರೆ ಒಳಿತು. ಏಕೆಂದರೆ, ತೆಗೆದುಕೊಂಡು ಹೋಗುವುದೂ ಒಂದೇ ಬ್ಯಾಗ್, ತರುವುದೂ ಒಂದೇ ಆದರೆ, ಕೀಟಾಣು ಅಥವಾ ಸೋಂಕು ಅಲ್ಲಿಯೇ ಉಳಿದುಕೊಂಡು ಶುಚಿಯಾದ ಬಟ್ಟೆಯನ್ನೂ ಆವರಿಸುತ್ತವೆ. 

Valentines Day: ಮನೆಯಲ್ಲೇ ದಿನವನ್ನು ವಿಶೇಷವಾಗಿಸುವುದು ಹೇಗೆ?

•    ಅಡುಗೆ ಮನೆಯ ಸಿಂಕ್ (Sink)
ಸಿಂಕ್ ಕ್ಲೀನ್ ಮಾಡಲು ಬಹುತೇಕ ಯಾರೂ ಮರೆಯುವುದಿಲ್ಲ. ಆದರೆ, ಸಾಮಾನ್ಯವಾಗಿ ಪಾತ್ರೆಗಳನ್ನು ತೊಳೆದಾದ ಬಳಿಕ ಯಾವುದಾದರೂ ಕ್ಲೀನಿಂಗ್ ಪೌಡರ್ ಅಥವಾ ಸೊಲ್ಯೂಷನ್ ಹಾಕಿ ಬ್ರಷ್ ನಿಂದ ಉಜ್ಜಿ ಹಾಗೇ ನೀರು ಬಿಟ್ಟು ಕ್ಲೀನ್ ಮಾಡುವ ಅಭ್ಯಾಸ ಕಂಡುಬರುತ್ತದೆ. ಆದರೆ, ಅಡುಗೆ ಮನೆಯ ಸಿಂಕ್ ಅಥವಾ ಪಾತ್ರೆ ತೊಳೆಯುವ ಸಿಂಕ್ ಗೆ ಇಷ್ಟು ಮಾತ್ರದ ಸ್ವಚ್ಛತೆ ಸಾಕಾಗುವುದಿಲ್ಲ. ಹೆಚ್ಚಿನ ಎಚ್ಚರಿಕೆ ಬೇಕಾಗುತ್ತದೆ. ಏಕೆಂದರೆ, ಅಡುಗೆ ಮನೆಯ ಸಿಂಕ್ ಆಗಿರಲಿ ಅಥವಾ ಪಾತ್ರೆ ತೊಳೆಯುವ ಸಿಂಕ್ ಆಗಿರಲಿ, ಎರಡರಲ್ಲೂ ಅತಿ ಹೆಚ್ಚು ಪ್ರಮಾಣದಲ್ಲಿ ಬ್ಯಾಕ್ಟೀರಿಯಾ ವೃದ್ಧಿಯಾಗುತ್ತವೆ. ಪೈಪ್ ನಲ್ಲೂ ಆಹಾರ ಸಿಕ್ಕಿಕೊಳ್ಳದಂತೆ ದಿನವೂ ಬ್ಲೀಚಿಂಗ್ (Bleaching) ಬೆರೆತ ದ್ರಾವಣವನ್ನು ಬಳಕೆ ಮಾಡಬೇಕು. ದಿನಕ್ಕೊಮ್ಮೆಯಾದರೂ ಗಟ್ಟಿ ಬ್ರಿಸಲ್ಸ್ ಇರುವ ಬ್ರಷ್ ಬಳಸಿ ಚೆನ್ನಾಗಿ ಉಜ್ಜಬೇಕು. ರಾತ್ರಿ ಸಮಯದಲ್ಲಿ ಬಿಸಿನೀರು (Hot Water) ಮತ್ತು ಉಪ್ಪು (Salt) ಸೇರಿಸಿ ಸಿಂಕಿಗೆ ಹಾಕಬೇಕು. ಬಳಕೆ ಮಾಡದೆ ಹಾಗೆಯೇ ಬಿಡಬೇಕು. ಇಷ್ಟೆಲ್ಲ ಎಚ್ಚರಿಕೆ ತೆಗೆದುಕೊಂಡರೂ ಸಿಂಕಿನಲ್ಲಿ ಅತಿ ಹೆಚ್ಚು ಪ್ರಮಾಣದ ಬ್ಯಾಕ್ಟೀರಿಯಾ ವೃದ್ಧಿಯಾಗುತ್ತಲೇ ಇರುತ್ತವೆ. ಹೀಗಾಗಿ, ಸಿಂಕಿನ ಬಳಿ ಆಹಾರ ವಸ್ತುಗಳನ್ನು ಇಡಬಾರದು. 
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!
'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!