ಡ್ರಗ್ ಮಾಫಿಯಾ, ಹತ್ಯಾಕಾಂಡದಲ್ಲಿ ಬರಿ ಪುರುಷರು ಮಾತ್ರ ವಿಲನ್ ಗಳಿಲ್ಲ. ಕೆಲ ಮಹಿಳೆಯರು ಈ ಜಗತ್ತಿನಲ್ಲಿ ತಮ್ಮ ಆಡಳಿತ ನಡೆಸಿದ್ದಾರೆ. ಐಷಾರಾಮಿ ಬಂಗಲೆಯಲ್ಲಿ ಎರಡು ಗಂಟೆ ಮೇಕಪ್ ಮಾಡ್ತಿದ್ದ ಈ ಮಹಿಳೆ ವಿಶ್ವದ ಖತರ್ನಾಕ್ ಹಂತಕಿ.
ನಾವು ಜನಿಸುವ ದಿನಾಂಕಕ್ಕೂ ನಮ್ಮ ಸ್ವಭಾವಕ್ಕೂ ಸಂಬಂಧವಿಲ್ಲ. ವಿವೇಕಾನಂದ ಜಯಂತಿ ದಿನ ಜನಿಸಿದೋರು ವಿವೇಕಾನಂದರಂತೆ ಆಗ್ತಾರೆ ಎಂದು ನಂಬೋದು ಮೂರ್ಖತನ. ಪ್ರೇಮಿಗಳ ದಿನದಂದು ಜನಿಸಿದವರು ಪ್ರೀತಿಗೆ ಹೆಚ್ಚು ಆದ್ಯತೆ ನೀಡ್ತಾರೆ ಎಂಬುದು ಸಂಪೂರ್ಣ ಸುಳ್ಳು ಎಂಬುದನ್ನು ಈಕೆ ತೋರಿಸಿದ್ದಾಳೆ. ಕೊಕೇನ್ ಗಾಡ್ ಫಾದರ್ ಎಂದೇ ಹೆಸರುಪಡೆದಿದ್ದ ಆಕೆಯನ್ನ ಕೊಕೇನ್ ಕೌಬಾಯ್ ಎಂದೂ ಕರೆಯಲಾಗ್ತಿತ್ತು. ಮಾದಕವಸ್ತು ಕಳ್ಳಸಾಗಣೆಯಿಂದ 157 ಶತಕೋಟಿ ರೂಪಾಯಿಗಳಿಗಿಂತ ಹೆಚ್ಚು ಗಳಿಸಿದ್ದ ವಿಶ್ವದ ಅತ್ಯಂತ ಭಯಾನಕ ಮಹಿಳೆ ಗ್ರಿಸೆಲ್ಡಾ ಬ್ಲಾಂಕೊ ಬಗ್ಗೆ ವಿವರ ಇಲ್ಲಿದೆ.
ಗ್ರಿಸೆಲ್ಡಾ ಬ್ಲಾಂಕೊ (Griselda Blanco) ಯಾರು? : ಗ್ರಿಸೆಲ್ಡಾ ಬ್ಲಾಂಕೊ 1943 ರಲ್ಲಿ ಪ್ರೇಮಿಗಳ ದಿನದಂದು ಜನಿಸಿದ್ದಳು. ಗ್ರಿಸೆಲ್ಡಾ ಬ್ಲಾಂಕೊ ಮೂರನೇ ವಯಸ್ಸಿನಲ್ಲಿರುವಾಗ್ಲೇ ಆಕೆಯ ಮದ್ಯಪಾನಿ ತಾಯಿ ಮಗಳನ್ನು ದೂರ ಮಾಡಿದ್ದಳು. ಗ್ರಿಸೆಲ್ಡಾಳನ್ನು ಅಪರಾಧ ತಡೆ ಕೇಂದ್ರಕ್ಕೆ ಸೇರಿಸಿದ್ದಳು. ಅಪರಾಧಿಗಳ ಜೊತೆ ಬೆಳೆದ ಗ್ರಿಸೆಲ್ಡಾ ಮನಸ್ಸಿನಲ್ಲಿ ಪ್ರೀತಿಗೆ ಬೆಲೆ ಇರಲಿಲ್ಲ. ದ್ವೇಷ, ಕ್ರೂರತ್ವದ ಬಗ್ಗೆಯೇ ಆಕೆ ಆಲೋಚನೆ ಮಾಡ್ತಿದ್ದಳು. ಅಲ್ಲಿದ್ದವರ ಜೊತೆ ಸೇರಿ ಕಳ್ಳತನ (Theft) ಶುರು ಮಾಡಿದ್ದಳು. ತನ್ನ ಹನ್ನೊಂದನೇ ವಯಸ್ಸಿನಲ್ಲಿ ಹತ್ತು ವರ್ಷದ ಬಾಲಕನನ್ನು ಅಪಹರಿಸಿ ಹಣ ಕೇಳಿದ್ದಳು. ಆದ್ರೆ ಹಣ ಸಿಗದ ಕಾರಣ ಆತನಿಗೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಳು. ಇಲ್ಲಿಂದ ಶುರುವಾಯ್ತು ಆಕೆಯ ಕ್ರೂರ ಕೃತ್ಯ. ನಾವು ಫಿಜ್ಜಾ, ಬರ್ಗರ್ ಆರ್ಡರ್ ಮಾಡಿದಂತೆ ಹತ್ಯೆಗೆ ಆರ್ಡರ್ ಮಾಡ್ತಿದ್ದಳು ಈಕೆ. ಹದಿಮೂರನೇ ವಯಸ್ಸಿನಲ್ಲೇ ಗ್ರಿಸೆಲ್ಡಾ ತನ್ನ ಮೊದಲ ಪತಿ, ಬ್ರೋಕರ್ ಮತ್ತು ವಂಚಕ ಕಾರ್ಲೋಸ್ ಟ್ರುಜಿಲ್ಲೊ ಭೇಟಿಯಾದಳು. ಆತನನ್ನು ಮದುವೆಯಾಗಿ ಸಣ್ಣ ವಯಸ್ಸಿನಲ್ಲೇ ಮೂರು ಮಕ್ಕಳನ್ನು ಪಡೆದಳು. ಆದ್ರೆ ಇಬ್ಬರ ಮಧ್ಯೆ ಹೊಂದಾಣಿಕೆ ಆಗಲಿಲ್ಲ. ಗ್ರಿಸೆಲ್ಡಾ ಎಷ್ಟು ಕಟುಕಿ ಅಂದ್ರೆ ತನ್ನ ಪತಿಯನ್ನೂ ಜೀವಂತ ಬಿಡಲಿಲ್ಲ. ಆ ನಂತ್ರ ಆಕೆ ಆಲ್ಬರ್ಟೊ ಬ್ರಾವೋನನ್ನು ಎರಡನೇ ಮದುವೆ ಆದಳು.
undefined
ಮಾಡೋದು ಅಡುಗೆ, ಗಳಿಕೆ ಸಿನಿ ನಟಿಯರಿಗಿಂತಲೂ ಹೆಚ್ಚು! ಈಕೆಗೊಂದು ಸಲಾಂ!
ಎರಡನೇ ಮದುವೆ ಆದ್ಮೇಲೆ ನ್ಯೂಯಾರ್ಕ್ ಗೆ ತೆರಳಿದ್ದ ಗ್ರಿಸೆಲ್ಡಾ 1960ರಲ್ಲಿ ಮಾದಕವಸ್ತು ಕಳ್ಳಸಾಗಣೆ ಶುರು ಮಾಡಿದ್ದಳು. ಆಕೆ ಕುಖ್ಯಾತ ಮೆಡೆಲಿನ್ ಕಾರ್ಟೆಲ್‌ನೊಂದಿಗೆ ತನ್ನ ವ್ಯವಹಾರ ಶುರು ಮಾಡಿದ್ದಳು. ಆದ್ರೆ ಕೆಲ ವರ್ಷಗಳ ನಂತ್ರ ಆಕೆ ಎರಡನೇ ಪತಿ ಆಲ್ಬರ್ಟೊ ಬ್ರಾವೋ, ಮೆಡೆಲಿನ್ ಕಾರ್ಟೆಲ್‌ಗೆ ಮೋಸ ಮಾಡಿದ್ದ. ಇದ್ರಿಂದ ಕೋಪಗೊಂಡ ಗ್ರಿಸೆಲ್ಡ್ 1975ರಲ್ಲಿ ಪತಿಯ ಹತ್ಯೆ ಮಾಡಿದ್ದಳು.
ಗ್ರಿಸೆಲ್ಡ್ , ನಿಧಾನವಾಗಿ ತನ್ನ ಕಳ್ಳಸಾಗಣೆಯನ್ನು ಕ್ಯಾಲಿಫೋರ್ನಿಯಾ, ಫ್ಲೋರಿಡಾ ಮತ್ತು ನ್ಯೂಯಾರ್ಕ್ ಸೇರಿದಂತೆ ಅಮೆರಿಕದ ಬಹುತೇಕ ಎಲ್ಲಾ ನಗರಗಳಲ್ಲಿ ವಿಸ್ತರಿಸಿದ್ದಳು. ಪ್ರತಿ ತಿಂಗಳು ಸುಮಾರು 50 ಕೋಟಿ ರೂಪಾಯಿ ಗಳಿಸುತ್ತಿದ್ದಳು. ಕೊಕೇನ್ ಸಾಗಣೆ ಸುಲಭವಾಗಲಿ ಎನ್ನುವ ಕಾರಣಕ್ಕೆ ಗ್ರಿಸೆಲ್ಡ್ ಒಳ ಉಡುಪು ಕಂಪನಿಯನ್ನು ಖರೀದಿ ಮಾಡಿದ್ದಳು. ಒಳ ಉಡುಪು ಪೆಟ್ಟಿಗೆಯಲ್ಲಿ ಕೊಕೇನ್ ಸಾಗಣೆಯಾಗ್ತಿತ್ತು. ವ್ಯಾಪಾರ ಬೆಳೆಯುತ್ತಿದ್ದಂತೆ ಆಸೆ ಹೆಚ್ಚಾಯ್ತು. ತನಗೆ ಅಡ್ಡಿ ಮಾಡ್ತಿದ್ದವರನ್ನು ಮುಲಾಜಿಲ್ಲದೆ ಕೊಲೆ ಮಾಡಲು ಶುರು ಮಾಡಿದ್ದಳುಯ ಗ್ರಿಸೆಲ್ಡ್. ಕ್ಯಾಲಿಫೋರ್ನಿಯಾದಲ್ಲಿ ದೊಡ್ಡ ಅರಮನೆಯಲ್ಲಿ ವಾಸವಾಗಿದ್ದ ಗ್ರಿಸೆಲ್ಡ್ ಮನೆ ವಜ್ರ ಮತ್ತು ಆಭರಣಗಳಿಂದ ಅಲಂಕರಗೊಂಡಿತ್ತು.
700 ರೂ. ಹೂಡಿ ಕೆಲಸ ಶುರುಮಾಡಿದವಳ ಗಳಿಕೆ ಈಗ ಒಂದೂವರೆ ಲಕ್ಷ !
ವಿಶ್ವದ ದುಬಾರಿ ಬೆಲೆಯ ವಸ್ತುಗಳನ್ನು ಹೊಂದಿದ್ದ ಗ್ರಿಸೆಲ್ಡ್, ಮೇಕಪ್ ಮಾಡಲು 2 ಗಂಟೆ ತೆಗೆದುಕೊಳ್ಳುತ್ತಿದ್ದಳು. 1978 ರಲ್ಲಿ ಗ್ರಿಸೆಲ್ಡ್ ಡ್ರಗ್ ಸ್ಮಗ್ಲರ್ ಡಾರಿಯೊ ಸೆಪುಲ್ವೆಡಾನನ್ನು ಮದುವೆ ಆದ್ಲು. ಮದುವೆ ವೇಳೆ ತಪ್ಪು ಮಾಡಿದ್ದ ಎಂಟು ಸ್ಟ್ರಿಪ್ಪರ್ ಗಳನ್ನು ಕೊಂದಿದ್ದ ಈಕೆ, ಎರಡು ವರ್ಷದ ಮಕ್ಕಳನ್ನೂ ಬಿಡಲಿಲ್ಲ. 2,000ಕ್ಕೂ ಹೆಚ್ಚು ಕೊಲೆಗಳನ್ನು ಮಾಡಿಸಿದ್ದ ಗ್ರಿಸೆಲ್ಡಾ ತನ್ನ ಮಗ ಆಸ್ತಿ ಕೇಳಿದ ಎನ್ನುವ ಕಾರಣಕ್ಕೆ ಆತನ ಹತ್ಯೆ ಮಾಡಿದ್ದಳು. 1985ರಲ್ಲಿ ಪೊಲೀಸ್ ಕೈಗೆ ಸಿಕ್ಕಿಬಿದ್ದು ಇಪ್ಪತ್ತು ವರ್ಷ ಜೈಲು ಶಿಕ್ಷೆ ಅನುಭವಿಸಿ ವಾಪಸ್ ಬಂದ ಗ್ರಿಸೆಲ್ಡಾಳನ್ನು 2012ರಲ್ಲಿ ಹತ್ಯೆ ಮಾಡಲಾಯ್ತು.