700 ರೂ. ಹೂಡಿ ಕೆಲಸ ಶುರುಮಾಡಿದವಳ ಗಳಿಕೆ ಈಗ ಒಂದೂವರೆ ಲಕ್ಷ !

By Suvarna NewsFirst Published Jan 3, 2024, 2:44 PM IST
Highlights

ಮನೆಯಲ್ಲಿ ಕುಳಿತು ಸಮಯ ಹಾಳು ಮಾಡೋ ಬದಲು, ಮನೆ ಕೆಲಸದ ಜೊತೆ ಪಾರ್ಟ್ ಟೈಂ ರೀತಿಯಲ್ಲಿ ಇನ್ನೊಂದು ಕೆಲಸ ಹಿಡಿದುಕೊಂಡ್ರೆ ಎಷ್ಟೋ ಲಾಭವಿದೆ. ಇದ್ರಿಂದ ಮಹಿಳೆ ಸ್ವಾವಲಂಭಿಯಾಗುವ ಜೊತೆಗೆ ಆತ್ಮವಿಶ್ವಾಸ ಬೆಳೆಯುತ್ತದೆ. ಇದಕ್ಕೆ ಈ ಮಹಿಳೆ ಸಾಕ್ಷ್ಯ.
 

ಇಂದು ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಪುರುಷರಿಗೆ ಸರಿಸಮಾನವಾಗಿ ದುಡಿಯುತ್ತಿದ್ದಾರೆ. ಎಲ್ಲ ರಂಗದಲ್ಲಿಯೂ ಸಾಧನೆ ತೋರುತ್ತಿದ್ದಾರೆ. ಅನೇಕ ಕುಟುಂಬಗಳಿಗೆ ಮಹಿಳೆಯೇ ಆಧಾರಸ್ತಂಭವಾಗಿದ್ದಾಳೆ. ಒಂದು ಹೆಣ್ಣು, ಮಗಳಾಗಿ, ಹೆಂಡತಿಯಾಗಿ, ಸೊಸೆಯಾಗಿ ಅನೇಕ ಕರ್ತವ್ಯಗಳನ್ನು ನಿಭಾಯಿಸುತ್ತಿದ್ದಾಳೆ.

ಈಗ ಕಾಲ ಬದಲಾಗಿದೆ, ಮೊದಲಾದರೆ ಮಹಿಳೆ (Woman) ಯರು ಮನೆಯಲ್ಲಿದ್ದುಕೊಂಡು ಮನೆಯ ಕೆಲಸವನ್ನಷ್ಟೇ ಮಾಡಿಕೊಂಡಿರಬೇಕು ಎನ್ನುವ ಭಾವನೆ ಎಲ್ಲರಲ್ಲಿತ್ತು. ಆದರೆ ಈಗ ಹಾಗಲ್ಲ. ಮಹಿಳೆಯರು ಹೊರಗಡೆ ಹೋಗಿಯೂ ದುಡಿಯುತ್ತಿದ್ದಾರೆ ಹಾಗೂ ಸಾಮಾಜಿಕ ಜಾಲತಾಣ (Social Network) ಗಳ ಮೂಲಕವೂ ಹಣ ಗಳಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಅನೇಕ ಮಂದಿ ಮನೆಯಿಂದಲೂ ಹಲವು ರೀತಿಯ ಉದ್ಯೋಗ, ಕಸೂತಿ ಮುಂತಾದವುಗಳನ್ನು ಮಾಡುವುದರ ಮೂಲಕ ಹಣ ಗಳಿಸುತ್ತಿದ್ದಾರೆ.

Latest Videos

ಬ್ಯಾಂಕ್ ಖಾತೆಗಳಲ್ಲಿ ಉಳಿತಾಯ ತಗ್ಗಿಸಿದ ಭಾರತೀಯರು; ಹಾಗಾದ್ರೆ ಹಣವನ್ನು ಏನ್ ಮಾಡಿದ್ರು?

ಇತಿಹಾಸ (History) ದ ಪುಟಗಳಲ್ಲಿಯೂ ಸಾಧನೆ ಮಾಡಿದ ಅನೇಕ ಮಹಿಳೆಯರನ್ನು ನಾವು ಕಾಣಬಹುದು. ಒಬ್ಬ ಮಹಿಳೆ ಮನಸ್ಸು ಮಾಡಿದರೆ ಎಂತಹ ಕೆಲಸವನ್ನಾದರೂ ಕಲಿಯಬಹುದು, ಎಂತಹ ಸಾಧನೆಯನ್ನು ಬೇಕಾದರೂ ಮಾಡಬಹುದು ಎನ್ನುವುದಕ್ಕೆ ಅನೇಕ ಉದಾಹರಣೆಗಳಿವೆ. ಅಂತಹ ಮಹಿಳೆಯರು ಅನೇಕ ಗೃಹಿಣಿಯರಿಗೆ ಸ್ಪೂರ್ತಿಯಾಗಿದ್ದಾರೆ. ಅಂತಹುದೇ ಒಬ್ಬ ಸಾಹಸಿ ಮಹಿಳೆಯ ಕುರಿತು ಇಂದು ನಾವು ಹೇಳಲಿದ್ದೇವೆ.

ಗೃಹಿಣಿಯಾಗಿ ಸ್ವಾವಲಂಬಿ ಜೀವನ ನಡೆಸುತ್ತಿರುವ ಮಹಿಳೆ: ಬಸ್ತಿ ಜಿಲ್ಲೆಯ ಕಪ್ತಗಂಜ್ ಬ್ಲಾಕ್ ನ ಮಹಾರಾಗಂಜ್ ಪಟ್ಟಣದ ನಿವಾಸಿಯಾಗಿರುವ ಪಾರ್ವತಿದೇವಿ ಎನ್ನುವವರು ತಮ್ಮ ಕಠಿಣ ಪರಿಶ್ರಮ ಹಾಗೂ ಹೋರಾಟದಿಂದ ಇಂದು ಅನೇಕರಿಗೆ ಸ್ಪೂರ್ತಿಯಾಗಿದ್ದಾರೆ. 10 ವರ್ಷದ ಹಿಂದೆ ಕೇವಲ 700 ರೂಪಾಯಿಗಳಿಂದ ವ್ಯಾಪಾರ ಆರಂಭಿಸಿದ ಇವರು ಇಂದು ಲಕ್ಷ ಲಕ್ಷ ದುಡಿಯುತ್ತಿದ್ದಾರೆ. ಚಿಕ್ಕ ಬಂಡವಾಳದಿಂದ ಆರಂಭವಾದ ಇವರ ಉದ್ಯೋಗ ಇಂದು ಅನೇಕ ಕಡೆ ವ್ಯಾಪಿಸಿದೆ.

ಮನೆ ಕ್ಲೀನ್ ಮಾಡೋವಾಗ ಹಳೆ ಚೀಟಿ ಸಿಕ್ರೆ ಎಸೀಬೇಡಿ, ಮಹಿಳೆಗೆ ಸಿಕ್ತು ಕೋಟಿ ಲಾಟರಿ!

ಬಡತನ ಮನುಷ್ಯನಿಗೆ ಬದುಕುವ ದಾರಿ ಕಲಿಸುತ್ತದೆ. ಕೆಲವರು ಬಡತನಕ್ಕೆ ಹೆದರಿ ಆತ್ಮಹತ್ಯೆ ಮುಂತಾದ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಪಾರ್ವತಿದೇವಿಯವರು ತಮಗೆ ಬಂದ ಕಷ್ಟಕ್ಕೆ ಹೆದರದೇ ಧೈರ್ಯವಾಗಿ ಮುನ್ನುಗ್ಗಿ ಚಿಕ್ಕದಾದ ವ್ಯಾಪಾರವನ್ನು ಆರಂಭಿಸಿದರು. ಆರ್ಥಿಕ ಪರಿಸ್ಥಿತಿ ತೀರ ಕಳಪೆಯಾಗಿದ್ದ ಕಾರಣ ಅವರು 10 ವರ್ಷದ ಹಿಂದೆ ಕೇವಲ 700 ರೂಪಾಯಿಯನ್ನು ಬಳಸಿ ಮಹಿಳೆಯರ ಬಟ್ಟೆಗಳನ್ನು ಹೊಲಿಯಲು ಆರಂಭಿಸಿದರು. ಮೊದಲು ಇವರು ಪಿಕೊ, ಫಾಲ್, ಬ್ಲೌಸ್, ಚಳಿಗಾಲಕ್ಕೆ ಬೇಕಾಗುವಂತಹ ಬಟ್ಟೆಗಳು ಹಾಗೂ ಟೆಡ್ಡಿ ಬೇರ್, ಹೂವು ಮುಂತಾದವುಗಳನ್ನು ತಯಾರಿಸಲು ಆರಂಭಿಸಿದರು. ಇದರ ಹೊರತಾಗಿ ಇವರು ಮದುವೆ ಮುಂತಾದ ಸಮಾರಂಭಗಳಿಗೆ ಮೆಹಂದಿ ಕೂಡ ಹಾಕುತ್ತಾರೆ. ಅವರ ಕೆಲಸದ ಮೇಲೆ ಅವರಿಗಿರುವ ಶ್ರದ್ಧೆ ಹಾಗೂ ಅವರ ಕಠಿಣ ಪರಿಶ್ರಮದ ಪರಿಣಾಮವಾಗಿ ಅವರು ಇಂದು ಒಂದು ದಿನಕ್ಕೆ ಐದು ಸಾವಿರ ರೂಪಾಯಿ ದುಡಿಯುತ್ತಿದ್ದಾರೆ. ಈ ಮೂಲಕ ಅವರು ಒಬ್ಬ ಮಹಿಳೆ ಮನೆಯನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಜೊತೆಗೆ ಉದ್ಯೋಗದಲ್ಲೂ ಉತ್ತುಂಗವನ್ನೇರಬಹುದು ಎಂಬುದನ್ನು ತೋರಿಸಿದ್ದಾರೆ. ಅನೇಕ ಮಹಿಳೆಯರಿಗೆ ಸ್ಪೂರ್ತಿಯಾಗಿದ್ದಾರೆ.

ತಮ್ಮ ವ್ಯಾಪಾರ (Business)ದ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುವ ಪಾರ್ವತಿಯವರು, ನಾನು ಇಂದಿಗೂ ಮನೆಯ ಕೆಲಸದ ಜೊತೆಗೆ ಉದ್ಯೋಗವನ್ನು ಮಾಡುತ್ತಿದ್ದೇನೆ. ಇದರಿಂದ ನನಗೆ ಉತ್ತಮ ಲಾಭವೂ ಆಗುತ್ತಿದೆ. ಇಂದು ನನ್ನ ಬಳಿ ಹಲವು ಆರ್ಡರ್‌ಗಳಿವೆ. ಅದನ್ನು ಪೂರ್ಣಗೊಳಿಸಲು ನನಗೆ ಸಮಯದ ಕೊರತೆಯಾಗುತ್ತಿದೆ  ಎಂದಿದ್ದಾರೆ. ಈ ಉದ್ಯೋಗ ನನಗೆ ಸ್ವಾವಲಂಬಿ ಜೀವನ ನಡೆಸಲು ಸಹಾಯ ಮಾಡಿದೆ. ಹಾಗಾಗಿ ನಾನು ಈಗ ಇತರ ಮಹಿಳೆಯರಿಗೂ ಇದರ ಕುರಿತು ತರಬೇತಿ ನೀಡುತ್ತಿದ್ದೇನೆ. ನನ್ನಂತೆಯೇ ಉಳಿದ ಮಹಿಳೆಯರು ಕೂಡ ಸ್ವಾವಲಂಬಿ ಜೀವನ ನಡೆಸಲಿ ಎನ್ನುವುದು ನನ್ನ ಉದ್ದೇಶ ಎಂದು ಪಾರ್ವತಿದೇವಿ ಹೇಳಿದ್ದಾರೆ.

click me!