ಗರ್ಭಾವಸ್ಥೆಯಲ್ಲಿ ಮಹಿಳೆಯರ ದೇಹದಲ್ಲಿ ಅನೇಕ ರೀತಿಯ ಬದಲಾವಣೆಗಳು ಸಂಭವಿಸುತ್ತವೆ. ಪ್ರಗ್ನೆನ್ಸಿಯ ಕೊನೆಯ ತಿಂಗಳಲ್ಲಿ ಸ್ತನ ಮಸಾಜ್ ಮಾಡಲು ವೈದ್ಯರು ಶಿಫಾರಸು ಮಾಡುತ್ತಾರೆ. ಏಕೆಂದು ತಿಳಿಯೋಣ.
ಮಹಿಳೆ ಗರ್ಭಿಣಿಯಾಗಿದ್ದಾಗ, ಆಕೆಯ ದೇಹದಲ್ಲಿ ಅನೇಕ ಬದಲಾವಣೆಗಳು ಕಂಡುಬರುತ್ತವೆ. ಈ ಅವಧಿಯಲ್ಲಿ, ಹಾರ್ಮೋನ್, ದೈಹಿಕ ಮತ್ತು ಭಾವನಾತ್ಮಕ ಮಟ್ಟದಲ್ಲಿ ಅನೇಕ ಏರಿಳಿತಗಳು ಕಂಡು ಬರುತ್ತವೆ. ಮಹಿಳೆಯು ಗರ್ಭಾವಸ್ಥೆಯ ಕೊನೆಯ ತಿಂಗಳಲ್ಲಿದ್ದಾಗ, ವೈದ್ಯರು ಹೆಚ್ಚಾಗಿ ಸ್ತನ ಮಸಾಜ್ ಮಾಡಿಕೊಳ್ಳಲು ಸಲಹೆ ನೀಡುತ್ತಾರೆ. ಗರ್ಭಾವಸ್ಥೆಯ ಕೊನೆಯ ತಿಂಗಳು ಬಹಳ ವಿಶೇಷವಾಗಿದೆ. ಈ ಸಮಯದಲ್ಲಿ ಮಹಿಳೆಯ ದೇಹವು ಮಗುವಿಗೆ ಜನ್ಮ ನೀಡಲು ತಯಾರಿ ನಡೆಸುತ್ತದೆ. ತಜ್ಞರ ಪ್ರಕಾರ, ಸ್ತನ ಮಸಾಜ್ ಅನೇಕ ಪ್ರಯೋಜನಗಳನ್ನು ಹೊಂದಿದೆ. ಅದೇನೆಂದು ತಿಳಿಯೋಣ..
ಒತ್ತಡ ನಿವಾರಣೆ
ಗರ್ಭಾವಸ್ಥೆಯ ಕೊನೆಯ ದಿನಗಳಲ್ಲಿ ಸ್ತನಗಳ ಮೇಲೆ ಹೆಚ್ಚಿನ ಒತ್ತಡವಿರುತ್ತದೆ. ಎದೆಯ ಸ್ನಾಯುಗಳು ಮತ್ತು ಅಂಗಾಂಶಗಳಲ್ಲಿ ಒತ್ತಡ ಮತ್ತು ಊತವಿರುತ್ತದೆ.ಅಂತಹ ಪರಿಸ್ಥಿತಿಯಲ್ಲಿ, ಸ್ತನಗಳನ್ನು ಲಘುವಾಗಿ ಮಸಾಜ್ ಮಾಡುವುದು ತುಂಬಾ ಪ್ರಯೋಜನಕಾರಿಯಾಗಿದೆ. ಮಸಾಜ್ ಸ್ತನಗಳ ಸ್ನಾಯುಗಳಲ್ಲಿನ ನೋವು ಮತ್ತು ಒತ್ತಡವನ್ನು ನಿವಾರಿಸುತ್ತದೆ.
undefined
ಜನವರಿಯಲ್ಲಿ ಈ ರಾಶಿಗಳ ಲವ್ ಸಕ್ಸಸ್, ಜೀವನ ಸಂಗಾತಿಯ ಭೇಟಿಯಿಂದ ಫುಲ್ ಖುಷ್
ಹಾಲಿನ ಉತ್ಪಾದನೆ
ಸ್ತನ ಮಸಾಜ್‌ನಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ. ಇದರಿಂದ ಸ್ತನಗಳು ಸಾಕಷ್ಟು ಹಾಲು ಉತ್ಪಾದಿಸಲು ಸಿದ್ಧವಾಗುತ್ತವೆ. ಹೆರಿಗೆಯ ನಂತರ ಸ್ತನ್ಯಪಾನಕ್ಕಾಗಿ ಸ್ತನಗಳನ್ನು ಸಂಪೂರ್ಣವಾಗಿ ಸಿದ್ಧಪಡಿಸುವುದು ಸಹ ಮುಖ್ಯವಾಗಿದೆ.
ಮಸಾಜ್ ಮಾಡುವಾಗ, ಸ್ತನಗಳಿಂದ ಆಕ್ಸಿಟೋಸಿನ್ ಎಂಬ ಹಾರ್ಮೋನ್ ಬಿಡುಗಡೆಯಾಗುತ್ತದೆ. ಈ ಹಾರ್ಮೋನ್ ಹಾಲು ಉತ್ಪಾದನೆ ಮತ್ತು ಹಾಲಿನ ಹರಿವನ್ನು ಉತ್ತೇಜಿಸುತ್ತದೆ. ಇದರ ಹೊರತಾಗಿ, ಮಸಾಜ್ ಮಾಡುವುದರಿಂದ ಸ್ತನ ತೊಟ್ಟುಗಳ ಸುತ್ತಲೂ ಇರುವ ಅರೋಲಾ ಸಿದ್ಧವಾಗುತ್ತದೆ. ಇದರಿಂದ ಮಗುವಿಗೆ ಹಾಲುಣಿಸಲು ಸುಲಭವಾಗುತ್ತದೆ. ಹೀಗಾಗಿ, ಸ್ತನಗಳನ್ನು ಮಸಾಜ್ ಮಾಡುವುದರಿಂದ ಮಗುವಿಗೆ ಸಾಕಷ್ಟು ಪ್ರಮಾಣದಲ್ಲಿ ಹಾಲುಣಿಸಬಹುದು. ಇದು ತಾಯಿ ಮತ್ತು ಮಗುವಿಗೆ ತುಂಬಾ ಪ್ರಯೋಜನಕಾರಿಯಾಗಿದೆ.
ಹೆರಿಗೆ ನೋವನ್ನು ಕಡಿಮೆ ಮಾಡುತ್ತದೆ
ಹೆರಿಗೆಯ ಸಮಯದಲ್ಲಿ ಮಹಿಳೆಯರು ಹೆಚ್ಚು ನೋವನ್ನು ಅನುಭವಿಸುತ್ತಾರೆ. ಸ್ತನ ಮಸಾಜ್ ಮೂಲಕ ಬಿಡುಗಡೆಯಾಗುವ ಎಂಡಾರ್ಫಿನ್ ಹಾರ್ಮೋನುಗಳು ಹೆರಿಗೆ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಅದಕ್ಕಾಗಿಯೇ ವೈದ್ಯರು ಸಾಮಾನ್ಯವಾಗಿ ಹೆರಿಗೆಯ ಮೊದಲು ಸ್ತನ ಮಸಾಜ್ ಅನ್ನು ಶಿಫಾರಸು ಮಾಡುತ್ತಾರೆ.
ನನ್ ಗಂಡನೂ ನಿಮ್ ಹಾಗೆ ಹೇಳ್ಬೋದು ಎನ್ನೋ ಮೂಲಕ ಮದ್ವೆ ಹಿಂಟ್ ಕೊಟ್ರಾ ರಶ್ಮಿಕಾ ಮಂದಣ್ಣ?
ಒತ್ತಡ ಮತ್ತು ಆಯಾಸ ನಿವಾರಣೆ
ಗರ್ಭಾವಸ್ಥೆಯ ಕೊನೆಯ ದಿನಗಳಲ್ಲಿ, ಮಹಿಳೆಯರು ಹೆಚ್ಚು ಒತ್ತಡ ಮತ್ತು ಆಯಾಸವನ್ನು ಅನುಭವಿಸುತ್ತಾರೆ. ಮಸಾಜ್ ವಿಶ್ರಾಂತಿ ನೀಡುತ್ತದೆ ಮತ್ತು ಒತ್ತಡ ಮತ್ತು ಆಯಾಸವನ್ನು ಕಡಿಮೆ ಮಾಡುತ್ತದೆ.