ಅಯ್ಯೋ ವಿಧಿಯೇ..ಎದೆ ಹಾಲು ಗಂಟಲಲ್ಲಿ ಸಿಲುಕಿ ನವಜಾತ ಶಿಶು ಸಾವು

By Vinutha PerlaFirst Published Feb 18, 2023, 12:52 PM IST
Highlights

ನವಜಾತ ಶಿಶುವಿನ ಆರೋಗ್ಯಕ್ಕೆ ತುಂಬಾ ಮುಖ್ಯವಾದುದು ತಾಯಿಯ ಎದೆಹಾಲು. ತಾಯಿಯ ಎದೆಹಾಲಿನಿಂದಲೇ ಮಕ್ಕಳು ಆರೋಗ್ಯಯುತವಾಗಿ ಬೆಳೆಯುತ್ತಾರೆ. ಆದ್ರೆ ದುರಂತ ಅಂದ್ರೆ ಇಲ್ಲೊಂದೆಡೆ ತಾಯಿಯ ಎದೆಹಾಲು ಗಂಟಲಿನಲ್ಲಿ ಸಿಲುಕಿ ಮಗುವೊಂದು ಸಾವನ್ನಪ್ಪಿದೆ.

ಮಾತೃತ್ವ ಎಂಬುದು ಒಂದು ಅದ್ಭುತ ಅನುಭವ. ಪುಟ್ಟದೊಂದು ಜೀವವನ್ನು ತಿಂಗಳುಗಳ ಕಾಲ ಗರ್ಭದೊಳಗಿಟ್ಟು ಹೆಣ್ಣು ಅದಕ್ಕೆ ಜೀವ ನೀಡುವ ಪರಿಯೇ ಅದ್ಭುತ. ಆದರೆ ಪುಟ್ಟ ಮಕ್ಕಳ ಆರೋಗ್ಯ ತುಂಬಾ ಸೂಕ್ಷ್ಮವಾಗಿರುತ್ತದೆ. ಅದರಲ್ಲೂ ನವಜಾತ ಶಿಶುವಿನ ಆರೋಗ್ಯದ ಬಗ್ಗೆ ಅತಿಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಮಗುವಿನ ಆರೋಗ್ಯಕ್ಕೆ ತಾಯಿಯ ಎದೆಹಾಲು ಅಮೃತ. ಜಗತ್ತಿನ ಯಾವ ಇತರ ಔಷಧವೂ ಇದಕ್ಕೆ ಸರಿಸಾಟಿಯಾಗಲಾರದು. ತಾಯಿಯ ಹಾಲಿನಲ್ಲಿ ಮಗುವಿನ ದೇಹಕ್ಕೆ ಬೇಕಾಗುವ ಅಷ್ಟೂ ಪೋಷಕಾಂಶಗಳಿವೆ.. ಹಾಗಾಗಿಯೇ ನವಜಾಶ ಶಿಶುವಿಗೆ ಸ್ತನ್ಯಪಾನ ಮಾಡುವುದು ಕಡ್ಡಾಯವೆಂದು ವೈದ್ಯರು ಸೂಚಿಸುತ್ತಾರೆ. ಆದರೆ ಮಕ್ಕಳ ಪಾಲಿಗೆ ಅಮೃತವಾಗಿರುವ ಎದೆಹಾಲಿನಿಂದ ಪುಟ್ಟ ಕಂದಮ್ಮನ ಜೀವವೇ ಹೋಗುತ್ತದೆಯೆಂದರೆ. ನಂಬಲು ಕಷ್ಟ. ಆದರೆ ಹೀಗೊಂದು ಘಟನೆ ಕೇರಳದ ಕಾಸರಗೋಡಿನಲ್ಲಿ ನಡೆದಿದೆ.

ಎದೆಹಾಲು ಗಂಟಲಿನೊಳಗೆ ಸಿಲುಕಿ ವಾಂತಿ ಮಾಡಿಕೊಂಡ ಮಗು
ನವಜಾತ ಶಿಶುವೊಂದು ತಾಯಿಯ ಎದೆಹಾಲು (Breastmilk) ಕುಡಿಯುವಾಗ ಹಾಲು ಗಂಟಲಿನೊಳಗೆ ಸಿಲುಕಿ ಮೃತಪಟ್ಟಿದೆ.  ಕೇರಳದ ಕಾಸರಗೋಡು ಜಿಲ್ಲೆಯ ಬದಿಯಡ್ಕದಲ್ಲಿ ಎದೆ ಹಾಲು ಗಂಟಲಲ್ಲಿ ಸಿಲುಕಿ ಹಸುಗೂಸು (Infant) ಸಾವನ್ನಪ್ಪಿದೆ. ಎದೆಹಾಲು ಗಂಟಲಲ್ಲಿ ಸಿಲುಕಿ ಅಬ್ದುಲ್‌ ರಹ್ಮಾನ್‌-ತಾಹಿರಾ ದಂಪತಿಯ 25 ದಿನದ ಮಗು ಸಾವಿಗೀಡಾಗಿದೆ. ಉಕ್ಕಿನಡ್ಕ ನಿವಾಸಿ ಮಗು ಸಾವಿಗೀಡಾಗಿದೆ. ಫೆ. 16ರಂದು ಮಗುವಿಗೆ ಎದೆ ಹಾಲು ಉಣಿಸುತ್ತಿದ್ದಾಗ ಹಾಲು ಗಂಟಲಲ್ಲಿ ಸಿಲುಕಿಕೊಂಡು ಮಗು ಅಸ್ವಸ್ಥಗೊಂಡಿತು. ಕೂಡಲೇ ಮಗುವನ್ನು ಬದಿಯಡ್ಕ ಸರಕಾರಿ ಆಸ್ಪತ್ರೆಗೂ (Government hospital) ಆ ಬಳಿಕ ಕಾಸರಗೋಡು ಜನರಲ್‌ ಆಸ್ಪತ್ರೆಗೂ ತಲುಪಿಸಿದರೂ ಜೀವ ರಕ್ಷಿಸಲು ಸಾಧ್ಯವಾಗಲಿಲ್ಲ. ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹೆರಿಗೆಯ ನಂತರ ವಿಪರೀತ ಮದ್ಯ ಸೇವಿಸ್ತಿದ್ದ ಮಹಿಳೆ, ಎದೆಹಾಲು ಕುಡಿದ ಎರಡು ತಿಂಗಳ ಮಗು ಸಾವು!

ಸ್ತನ್ಯಪಾನವು ಮಕ್ಕಳ ಆರೋಗ್ಯಕ್ಕೆ ಅತ್ಯುತ್ತಮವಾಗಿದೆ
ಅತ್ಯುತ್ತಮ ಬೆಳವಣಿಗೆ, ಅಭಿವೃದ್ಧಿ ಮತ್ತು ಆರೋಗ್ಯವನ್ನು ಸಾಧಿಸಲು ಮಗುವಿನ ಮೊದಲ ಆರು ತಿಂಗಳವರೆಗೆ ಶಿಶುಗಳಿಗೆ ಪ್ರತ್ಯೇಕವಾಗಿ ಹಾಲುಣಿಸಲು ವಿಶ್ವಾದ್ಯಂತ ತಾಯಂದಿರಿಗೆ ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡುತ್ತದೆ. ಅದರ ನಂತರ, ಅವರಿಗೆ ಪೌಷ್ಟಿಕ ಪೂರಕ ಆಹಾರಗಳನ್ನು ನೀಡಬೇಕು ಮತ್ತು ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರೆಗೆ ಸ್ತನ್ಯಪಾನವನ್ನು ಮುಂದುವರಿಸಬೇಕು ಎಂದು ತಿಳಿಸುತ್ತದೆ. ವ್ಯವಸ್ಥಿತ ವಿಮರ್ಶೆಯ ಆವಿಷ್ಕಾರಗಳು ಶಿಶುಗಳಿಗೆ ಆರು ತಿಂಗಳವರೆಗೆ ವಿಶೇಷವಾಗಿ ಸ್ತನ್ಯಪಾನ ಮಾಡಿಸುವಂತೆ ಸೂಚಿಸುತ್ತದೆ. ಆ ನಂತರ ಮಿಶ್ರ ಹಾಲುಣಿಸುವಿಕೆಯನ್ನು ಸೂಚಿಸುತ್ತದೆ. ಎಂದರೆ ಹಾಲು ಜೊತೆಗೆ ಇತರ ಕೆಲವು ಆಹಾರಗಳನ್ನು ಸಹ ನೀಡಬಹುದು ಎಂದು ಸಲಹೆ ನೀಡುತ್ತದೆ.

ಮಕ್ಕಳಲ್ಲಿ ಜಠರಗರುಳಿನ ಸೋಂಕಿನ ಅಪಾಯ ಕಡಿಮೆ
ಆರು ತಿಂಗಳ ಕಾಲ ಹಾಲುಣಿಸಿದಲ್ಲಿ ಮಕ್ಕಳಲ್ಲಿ ಜಠರಗರುಳಿನ ಸೋಂಕಿನ ಅಪಾಯ ಕಡಿಮೆಯಾಗುತ್ತದೆ. ಜನನದ ನಂತರ ಹೆಚ್ಚು ವೇಗವಾಗಿ ತಾಯಿಯ ತೂಕ ನಷ್ಟವಾಗುತ್ತದೆ. ಮುಟ್ಟಿನ ಅವಧಿಗಳ ವಿಳಂಬವಾಗುವುದಿಲ್ಲ, ಇತರ ಸೋಂಕುಗಳು ಅಥವಾ ಅಲರ್ಜಿಯ ಕಾಯಿಲೆಗಳ ಅಪಾಯ ಕಡಿಮೆಯಿರುತ್ತದೆ ಎಂದು ತಿಳಿಸಲಾಗಿದೆ. WHO ಹೊಸ ಸಂಶೋಧನಾ ಸಂಶೋಧನೆಗಳನ್ನು ನಿಕಟವಾಗಿ ಅನುಸರಿಸುತ್ತದೆ ಮತ್ತು ನಿಯತಕಾಲಿಕವಾಗಿ ಶಿಫಾರಸುಗಳನ್ನು ಮರು-ಪರಿಶೀಲಿಸುವ ಪ್ರಕ್ರಿಯೆಯನ್ನು ಹೊಂದಿದೆ.

Breast Feeding, ಕ್ಯಾನ್ಸರ್ ಬಗ್ಗೆ ಇರಲಿ ತುಸು ಎಚ್ಚರ, ಮರೀಬೇಡಿ ಆರೋಗ್ಯದ ಕಾಳಜಿ

 

ಮಕ್ಕಳಿಗೆ ಆರು ತಿಂಗಳ ಕಾಲ ಎದೆಹಾಲು ಕೊಡಬೇಕು ಯಾಕೆ ?
ತಾಯಿ ಹಾಲು ಆರು ತಿಂಗಳವರೆಗೆ ಅಗತ್ಯವಿರುವ ಸಾಕಷ್ಟು ಕ್ಯಾಲೊರಿಗಳನ್ನು ಹೊಂದಿರುತ್ತದೆ. ಶಿಶುಗಳು ನಿರ್ದಿಷ್ಟ ಪ್ರಮಾಣದ ದ್ರವವನ್ನು ಮಾತ್ರ ಸೇವಿಸಬಹುದು. ಅವರು 800 ಮಿಲಿ ದ್ರವಗಳನ್ನು ಸೇವಿಸಬಹುದು ಎಂದು ಹೇಳಲಾಗಿದೆ- ನೀವು ಅವರಿಗೆ 100 ಮಿಲಿ ನೀರನ್ನು ನೀಡಿದರೆ, ಅವರು 100 ಮಿಲಿ ಹಾಲಿನಲ್ಲಿರುವ ಕ್ಯಾಲೊರಿಗಳನ್ನು ಕಳೆದುಕೊಳ್ಳುತ್ತಾರೆ ಎಂದು ಡಾ ವರ್ಮಾ ಹೇಳುತ್ತಾರೆ.

click me!