ಸಂಭೋಗ ಆರೋಗ್ಯಕ್ಕೆ ಒಳ್ಳೆಯದು. ಸೆಕ್ಸ್ ವೇಳೆ ಅನೇಕ ಹಾರ್ಮೋನ್ ಬಿಡುಗಡೆಯಾಗುತ್ತದೆ. ಅದ್ರಲ್ಲೂ ಮಹಿಳೆಯರಲ್ಲಿ ಲೈಂಗಿಕ ಕ್ರಿಯ ನಂತ್ರ ಅನೇಕ ಬದಲಾವಣೆಯಾಗುತ್ತದೆ. ನಾವಿಂದು ಮಹಿಳೆ ದೇಹದಲ್ಲಿ ಏನೆಲ್ಲ ತಾತ್ಕಾಲಿಕ ಬದಲಾವಣೆ ಆಗುತ್ತೆ ಎಂಬುದನ್ನು ಹೇಳ್ತೇವೆ.
ಲೈಂಗಿಕ ಸಂಬಂಧದಿಂದ ದೇಹದಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ಸೆಕ್ಸ್ ಬರೀ ಪರಾಕಾಷ್ಠೆಗೆ ಸೀಮಿತವಾಗಿಲ್ಲ. ಲೈಂಗಿಕ ಸಂಬಂಧ ಬೆಳೆಸುವುದ್ರಿಂದ ಹಾರ್ಮೋನ್ ಬದಲಾವಣೆ ಜೊತೆಗೆ ದೇಹದ ಮೇಲೆ ಅನೇಕ ಪರಿಣಾಮಗಳನ್ನು ನೀವು ಕಾಣಬಹುದು. ದೈಹಿಕ ಸಂಬಂಧ ಆರೋಗ್ಯವನ್ನು ಕಾಪಾಡುತ್ತದೆ. ಲೈಂಗಿಕ ಸಂಬಂಧ ದೇಹದ ಮೇಲೆ ತಾತ್ಕಾಲಿಕ ಹಾಗೂ ಶಾಶ್ವತ ಎರಡೂ ಪರಿಣಾಮವನ್ನು ಬೀರುತ್ತದೆ. ದೈಹಿಕ ಸಂಬಂಧದ ನಂತ್ರ ಮಹಿಳೆಯರ ದೇಹದಲ್ಲಿ ಯಾವ ರೀತಿ ಬದಲಾವಣೆಯಾಗುತ್ತದೆ ಎಂಬುದನ್ನು ನಾವಿಂದು ಹೇಳ್ತೇವೆ.
ದೈಹಿಕ ಸಂಬಂಧ (Physical Relationship ) ದ ನಂತ್ರ ಮಹಿಳೆ ದೇಹದಲ್ಲಾಗುತ್ತೆ ಈ ಎಲ್ಲ ಬದಲಾವಣೆ :
ಸಂತೋಷ (Happiness) ದಲ್ಲಿ ಹೆಚ್ಚಳ : ಲೈಂಗಿಕ ಸಂಬಂಧ ಸಿರೊಟೋನಿನ್, ಎಂಡಾರ್ಫಿನ್ ಮತ್ತು ಆಕ್ಸಿಟೋಸಿನ್ ನಂತಹವ ಎಲ್ಲಾ ಸಂತೋಷದ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತವೆ. ಈ ಎಲ್ಲಾ ಹಾರ್ಮೋನುಗಳು ಲೈಂಗಿಕ ಕ್ರಿಯೆಯ ಮೊದಲು, ಲೈಂಗಿಕ ಕ್ರಿಯೆಯ ವೇಳೆ ಮತ್ತು ನಂತರ ನಮ್ಮ ದೇಹದಲ್ಲಿ ಬಿಡುಗಡೆಯಾಗುತ್ತವೆ. ಈ ಹಾರ್ಮೋನುಗಳು ಮನಸ್ಸನ್ನು ಆವರಿಸುತ್ತವೆ. ಮನಸ್ಸು ಹಗುರವಾದ ಅನುಭವವಾಗುತ್ತದೆ. ಒತ್ತಡ ಕಡಿಮೆಯಾಗುತ್ತದೆ. ಆರಾಮದಾಯಕ ಮತ್ತು ಪ್ರೀತಿ ಮಹಿಳೆಯರಲ್ಲಿ ಹೆಚ್ಚಾಗುತ್ತದೆ.
ನಿದ್ರೆ ಮತ್ತು ಅರೆ ನಿದ್ರಾವಸ್ಥೆಯ ಭಾವನೆ : ಮೊದಲೇ ಹೇಳಿದಂತೆ ಇದು ತಾತ್ಕಾಲಿಕ ಭಾವನೆಯಾಗಿದೆ. ಅಂದ್ರೆ ಲೈಂಗಿಕ ಸಂಬಂಧ ಬೆಳೆಸಿದ ನಂತರ ಕೆಲ ಕಾಲ ಮಹಿಳೆಯರು ನಿದ್ರೆ ಅಥವಾ ಅರೆ ನಿದ್ರಾವಸ್ಥೆ ಭಾವನೆ ಎದುರಿಸುತ್ತಾರೆ. ಲೈಂಗಿಕ ಸಂಬಂಧ ಬೆಳೆಸಿದ ಕೆಲ ಸಮಯದ ನಂತ್ರ ಮಹಿಳೆಯರ ಹೃದಯ ಬಡಿತ ಸಾಮಾನ್ಯ ಸ್ಥಿತಿಗೆ ಮರಳುತ್ತದೆ. ಬಿಪಿ ನಾರ್ಮಲ್ ಆಗುತ್ತದೆ. ಆಗ ದೇಹ ಹಗುರಗೊಂಡ ಅನುಭವವಾಗುತ್ತದೆ. ಸ್ನಾಯುಗಳು ಸಾಮಾನ್ಯ ಸ್ಥಿತಿಗೆ ಮರಳುತ್ತವೆ. ಆದ್ರೆ ಪರಾಕಾಷ್ಠೆ (Climax) ಯ ಸಮಯದಲ್ಲಿ ಮತ್ತು ನಂತರ ಬಿಡುಗಡೆಯಾಗುವ ರಾಸಾಯನಿಕಗಳ ಬದಲಾವಣೆಯಿಂದ ನಿದ್ರೆ ಬರುವ ಸಾಧ್ಯತೆ ಹೆಚ್ಚಿರುತ್ತದೆ.
ಏರಿಕೆಯಾಗುವ ಹೃದಯ (Heart) ಬಡಿತ : ಲೈಂಗಿಕ ಕ್ರಿಯೆ ವೇಳೆ ರಕ್ತದ ಹರಿವು ಹೆಚ್ಚಾಗುತ್ತದೆ. ಹೃದಯ ವೇಗವಾಗಿ ಬಡಿದುಕೊಳ್ಳುತ್ತದೆ.
ತೇವವಾಗುವ ಯೋನಿ (Vagina) : ಇದು ಕೂಡ ತಾತ್ಕಾಲಿಕ ಬದಲಾವಣೆ. ಉತ್ತೇಜನಗೊಳ್ಳುತ್ತಿದ್ದಂತೆ ಯೋನಿ ತೇವವಾಗಲು ಪ್ರಾರಂಭವಾಗುತ್ತದೆ. ಸೆಕ್ಸ್ ಗೆ ಮೊದಲು ಮಾತ್ರವಲ್ಲದೆ ಅದರ ನಂತರವೂ ನೀವು ತೇವವನ್ನು ಅನುಭವಿಸುತ್ತೀರಿ. ಆಹಾರ, ಮುಟ್ಟಿನ ದಿನಾಂಕ ಹಾಗೂ ಜೀವನ ಶೈಲಿ ಮೇಲೆ ಇದು ಬದಲಾಗುತ್ತದೆ.
ಸ್ತನ – ಜನನಾಂಗದಲ್ಲಿ ಬದಲಾವಣೆ : ಸಂಭೋಗದ ವೇಳೆ ದೇಹದಾದ್ಯಂತ ರಕ್ತದ ಹರಿವು ಹೆಚ್ಚಾಗುತ್ತದೆ. ವಿಶೇಷವಾಗಿ ಎರೋಜೆನಸ್ ಪ್ರದೇಶಗಳಲ್ಲಿ ರಕ್ತದ ಹರಿವು ಹೆಚ್ಚಾಗುತ್ತದೆ. ಇದ್ರಿಂದ ಸ್ತನ ಮತ್ತು ಜನನಾಂಗ ಊದಿಕೊಳ್ಳುತ್ತದೆ.
ಸಿಸೇರಿಯನ್ ಬೇಡ, ನಾರ್ಮಲ್ ಡೆಲಿವರಿ ಆಗಲಿ; ಈ ಟಿಪ್ಸ್ ಫಾಲೋ ಮಾಡಿ, ಸುಲಭ ಹೆರಿಗೆ ಮಾಡಿಕೊಳ್ಳಿ.
ತಜ್ಞರು ಹೇಳೋದೇನು ? : ಲೈಂಗಿಕ ಸಂಬಂಧ ದಂಪತಿಗೆ ಅತ್ಯಗತ್ಯ. ವಿಶೇಷವಾಗಿ ಮಹಿಳೆಯರಿಗೆ ಇದು ವಿಶ್ರಾಂತಿ ನೀಡುತ್ತದೆ ಎಂದು ತಜ್ಞರು ಹೇಳ್ತಾರೆ. ಹಾಗೆಯೇ ಸೆಕ್ಸ್ ಮಹಿಳೆಯರ ಒತ್ತಡವನ್ನು ಕಡಿಮೆ ಮಾಡುತ್ತದೆ. ಒಳ್ಳೆ ನಿದ್ರೆಗೆ ಇದು ಬಹಳ ಪ್ರಯೋಜನಕಾರಿ ಎನ್ನುತ್ತಾರೆ ತಜ್ಞರು. ಲೈಂಗಿಕ ಕ್ರಿಯೆ, ಪಾಲುದಾರರ ಮಧ್ಯೆ ಸಂಬಂಧ ಗಟ್ಟಿಗೊಳಿಸುತ್ತದೆ. ಲೈಂಗಿಕ ಸಂಬಂಧ ಭಾವನಾತ್ಮಕವಾಗಿ ಹಾಗೂ ದೈಹಿಕವಾಗಿ ದಂಪತಿಯನ್ನು ಒಂದು ಮಾಡುತ್ತದೆ. ಸ್ನಾಯುಗಳನ್ನು ಬಲಪಡಿಸುವ ಮೂಲಕ ಲೈಂಗಿಕ ಕ್ರಿಯೆ ದೇಹಕ್ಕೆ ವ್ಯಾಯಾಮವನ್ನು ನೀಡುತ್ತದೆ ಎಂದು ತಜ್ಞರು ಹೇಳ್ತಾರೆ.
ಪ್ರಸವ ನಂತರ ಕಾಡುವ ಗ್ಯಾಸ್ಟಿಕ್ ಸಮಸ್ಯೆ! ಸರಳ ಪರಿಹಾರ ಮಾಡಿ ನೋಡಿ!
ಆದ್ರೆ ಸೆಕ್ಸ್ ಕೆಲವು ಬಾರಿ ಕೆಲವರಿಗೆ ಸಮಸ್ಯೆ ತರುತ್ತದೆ. ಸಂಭೋಗದ ನಂತ್ರ ಮೈಗ್ರೇನ್ ಮತ್ತು ತಲೆನೋವು ಸೇರಿದಂತೆ ಆರೋಗ್ಯ ಸಮಸ್ಯೆ ಹೆಚ್ಚಾಗುವ ಸಾಧ್ಯತೆಯಿರುತ್ತದೆ. ಹಾಗೆಯೇ ಯೋನಿಯಲ್ಲಿ ಕೆಲ ಸಮಸ್ಯೆ ಕಾಣಿಸಿಕೊಳ್ಳುವುದಿದೆ. ಯೋನಿ ಊದಿಕೊಳ್ಳುವುದು ಅಥವಾ ಕೆಂಪಾಗುವುದನ್ನು ಕಾಣಬಹುದು.