Decoration Ideas: ಕಪಾಟಿನ ಹಳೆ ಬಟ್ಟೆಗೆ ನೀಡಿ ಹೊಸ ರೂಪ

By Suvarna NewsFirst Published Oct 3, 2022, 12:25 PM IST
Highlights

ಮನೆ ಅಂದ್ಮೇಲೆ ಒಂದಿಷ್ಟು ಬೇಡದ ವಸ್ತುಗಳಿರುತ್ತವೆ. ಅದ್ರಲ್ಲಿ ಬಟ್ಟೆ ಕೂಡ ಸೇರಿದೆ. ಟೈಟ್ ಆಗ್ತಿದೆ, ಸ್ವಲ್ಪ ಬಣ್ಣ ಬಿಟ್ಟಿದೆ, ಕಲೆಯಾಗಿದೆ ಹೀಗೆ ನಾನಾ ಕಾರಣಕ್ಕೆ ಕೆಲವರು ಬಟ್ಟೆ ಎಸೆದ್ರೆ ಮತ್ತೆ ಕೆಲವರು ಅದನ್ನು ಹಾಗೆ ಇಟ್ಟುಕೊಂಡಿರ್ತಾರೆ. ಹೊರೆ ಎನ್ನಿಸುವ ಈ ಬಟ್ಟೆಯನ್ನು ನೀವು ಹೀಗೂ ಬಳಕೆ ಮಾಡಬಹುದು.
 

ಈಗಿನ ದಿನಗಳಲ್ಲಿ ಜನರು ಒಂದು ಬಟ್ಟೆಯನ್ನು ನಾಲ್ಕೈದು ಬಾರಿ ಧರಿಸಿದ್ರೆ ಹೆಚ್ಚು. ದುಬಾರಿ ಬೆಲೆ ಕೊಟ್ಟು ಬಟ್ಟೆ ಖರೀದಿ ಮಾಡಿರ್ತಾರೆ. ಅದನ್ನು ಒಂದು ಬಾರಿ ಧರಿಸಿ ಕಪಾಟಿನಲ್ಲಿ ಇಡ್ತಾರೆ. ಇನ್ನ ಕೆಲ ಬಟ್ಟೆಗಳನ್ನು 10-15 ಬಾರಿ ಧರಿಸಿದ್ರೂ ಅದು ಹಾಳಾಗಿರೋದಿಲ್ಲ. ಆದ್ರೆ ಅದನ್ನು ಧರಿಸೋಕೆ ಮನಸ್ಸಿರೋದಿಲ್ಲ. ಹೀಗೆ ನಾನಾ ಕಾರಣಕ್ಕೆ ಅನೇಕ ಬಟ್ಟೆ ಕಪಾಟಿನ ಮೂಲೆ ಸೇರಿರುತ್ತದೆ. ಪ್ರತಿಯೊಬ್ಬರ ಮನೆಯಲ್ಲೂ ಹಳೆಯ, ಬಳಸದ ಬಟ್ಟೆ ಗಂಟು ಇದ್ದೇ ಇರುತ್ತೆ. ಆ ಬಟ್ಟೆಗಳನ್ನು ಹಾಗೆಯೇ ಕಸ ಮಾಡಿ ಇಟ್ಟುಕೊಳ್ಳುವ ಬದಲು ಅದನ್ನು ನೀವು ಮರು ಬಳಕೆ ಮಾಡಬಹುದು. ನಾವಿಂದು ಹಳೆ ಬಟ್ಟೆಯಲ್ಲಿ ಏನೆಲ್ಲ ಮಾಡಬಹುದು ಎಂಬುದನ್ನು ನಿಮಗೆ ಹೇಳ್ತೇವೆ.

ಹಳೆ ಬಟ್ಟೆ (Old Clothes) ಹೀಗೆ ಮರುಬಳಕೆ (Recycling) ಮಾಡಿ: 
ಹರಿದ ಜೀನ್ಸ್ (Jeans) ಗೆ ಹೊಸ ರೂಪ:
ಮಕ್ಕಳಿಂದ ಹಿಡಿದು ವಯಸ್ಸಾದ ಮಹಿಳೆಯವರೆಗೆ ಎಲ್ಲರೂ ಈಗ ಜೀನ್ಸ್ ಧರಿಸ್ತಾರೆ. ಮನೆಯಲ್ಲಿ ಜೀನ್ಸ್ ಇದ್ದೇ ಇರುತ್ತೆ. ಕೆಲ ಜೀನ್ಸ್ ಅಲ್ಲಿ, ಇಲ್ಲಿ ಹರಿದಿರುತ್ತದೆ. ಅದನ್ನು ತೊಡಲು ಕೆಲವರು ಇಷ್ಟಪಡುವುದಿಲ್ಲ. ಜೀನ್ಸ್ ನ ಕಾಲಿನ ಕಡೆ ಹರಿದಿದ್ದರೆ ನೀವು ಯಾವುದೇ ವೆಚ್ಚವಿಲ್ಲದೆ ಮನೆಯಲ್ಲಿಯೇ ನೀವು ಸುಲಭವಾಗಿ ಶಾರ್ಟ್ಸ್ ಮಾಡಬಹುದು. ಹಳೆಯ ಪ್ಯಾಂಟ್‌ಗಳನ್ನು ಕತ್ತರಿಸಿ ಹೊಸ ಜೀನ್ಸ್ ಶಾರ್ಟ್ಸ್ ತಯಾರಿಸಬಹುದು. ಮನೆಯಲ್ಲಿ ಅಥವಾ ಮನೆಯ ಹೊರಗೆ ಹೋಗುವಾಗ್ಲೂ ನೀವು ಇದನ್ನು ಧರಿಸಬಹುದು.

ಹಳೆ ಸೀರೆಯನ್ನು ಮೇಜಿಗೆ ಹಾಕಿ : ಸೀರೆ ಹಳೆಯದಾಗಿದ್ದರೆ ಅಥವಾ ಅದಕ್ಕೆ ಸಣ್ಣಪುಟ್ಟ ಕಲೆಯಾಗಿದ್ದರೆ ಸೀರೆಯನ್ನು ಉಡಲು ಸಾಧ್ಯವಾಗುವುದಿಲ್ಲ. ನಿಮ್ಮ ಮನೆಯಲ್ಲೂ ಇಂಥ ಸೀರೆಗಳಿದ್ದರೆ ಅದನ್ನು ಟೇಬಲ್ ಮೇಲೆ ಹಾಕಲು ಬಳಸಬಹುದು. ಚಂದದ ಸೀರೆಯನ್ನು ಕತ್ತರಿಸಿ ಟೇಬಲ್ ಕ್ಲಾತ್ ನಂತೆ ನೀವು ಬಳಸಬಹುದು.

Recipe Tips : ರುಚಿ ರುಚಿ, ಉಬ್ಬಿದ ಪೂರಿ ತಯಾರಿಸೋದು ಹೀಗೆ

ಚೂಡಿದಾರದಲ್ಲಿ ತಯಾರಿಸಿ ಕುಶನ್ ಕವರ್: ಮನೆಯಲ್ಲಿರುವ ಚೂಡಿದಾರವನ್ನು ನೀವು ಕುಶನ್ ಕವರ್ ಆಗಿ ಬಳಸಬಹುದು. ಇದು ಒಳ್ಳೆ ಲುಕ್ ನೀಡುತ್ತದೆ. ಒಂದು ಚೂಡಿದಾರದಲ್ಲಿ ನೀವು ಸುಮಾರು ನಾಲ್ಕು ಕುಶನ್ ಕವರ್ ತಯಾರಿಸಬಹುದು. 

ಡೋರ್ಮ್ಯಾಟ್ (Door Mat) ಗೆ ಹಳೆ ಬಟ್ಟೆ : ಡೋರ್ ಮ್ಯಾಟ್ ಪ್ರತಿಯೊಬ್ಬರ ಮನೆಯಲ್ಲೂ ಇದ್ದೇ ಇರುತ್ತೆ. ನೀವು ಹಳೆ ಬಟ್ಟೆಯನ್ನೆಲ್ಲ ಸೇರಿಸಿ ಡೋರ್ ಮ್ಯಾಟ್ ತಯಾರಿಸಬಹುದು. ಯುಟ್ಯೂಬ್ (Youtube) ನಲ್ಲಿ ಡೋರ್ ಮ್ಯಾಟ್ ತಯಾರಿಸೋದು ಹೇಗೆ ಎನ್ನುವ ಬಗ್ಗೆ ಸಾಕಷ್ಟು ವಿಡಿಯೋಗಳಿವೆ. ಅದನ್ನ  ನೋಡಿ, ಹಳೆ ಬಟ್ಟೆಯಲ್ಲಿ ನೀವೂ ಡೋರ್ ಮ್ಯಾಟ್ ತಯಾರಿಸಿ.

ಹಳೆ ಸೀರೆಯಲ್ಲಿ ಹೊದಿಕೆ: ಮಾರುಕಟ್ಟೆಯಲ್ಲಿ ಸಾಕಷ್ಟು ವೆರೈಟಿ ರಗ್, ಚಾದರ ಸಿಗುತ್ತದೆ. ಆದ್ರೆ ನೀವು ಸೀರೆಯಲ್ಲಿ ಇದನ್ನು ತಯಾರಿಸಬಹುದು. ನಾಲ್ಕೈದು ಸೇರಿಗಳನ್ನು ಸೇರಿಸಿ ನಿಮಗೆ ಬೇಕಾದ ರೀತಿಯಲ್ಲಿ ಹೊದಿಕೆ, ಗಾದಿ ತಯಾರಿಸಬಹುದು. ಸೀರೆ ಹೊದಿಕೆ ಬೇಸಿಗೆಯಲ್ಲಿ ತಂಪಾಗಿಯೂ ಚಳಿಗಾಲದಲ್ಲಿ ಬೆಚ್ಚಗಿನ ಅನುಭವವನ್ನೂ ನೀಡುತ್ತದೆ. ಹಾಗೆ ಅದ್ರ ಗಾದಿಯನ್ನು ತಯಾರಿಸಿ ನೀವು ಬಳಸಬಹುದು. 

Kitchen Hacks : ಫ್ರಿಡ್ಜ್ ನಲ್ಲಿ ಈ ದ್ರವ ಆಹಾರವನ್ನು ಅಪ್ಪಿತಪ್ಪಿಯೂ ಇಡ್ಬೇಡಿ

ಹಳೆ ಬಟ್ಟೆ ಬ್ಯಾಗ್ : ಈಗಿನ ದಿನಗಳಲ್ಲಿ ಜನರು ಆಕರ್ಷಕ ಬ್ಯಾಗ್ ಗಳನ್ನು ಇಷ್ಟಪಡ್ತಾರೆ. ಮಾರುಕಟ್ಟೆಯಲ್ಲಿ ಸಾಕಷ್ಟು ವೆರೈಟಿ ಬ್ಯಾಗ್ ಲಭ್ಯವಿದೆ. ಆದ್ರೆ ಅದಕ್ಕೆ ಹಣ ನೀಡಬೇಕು. ಸರ್ಕಾರ ಪ್ಲಾಸ್ಟಿಕ್ ಕವರ್ ಬ್ಯಾನ್ ಮಾಡಿದೆ. ಹಾಗಾಗಿ ಪ್ರತಿಯೊಬ್ಬರೂ ಮಾರುಕಟ್ಟೆಗೆ ಹೋಗುವ ಸಮಯದಲ್ಲಿ ಬ್ಯಾಗ್ ಹಿಡಿದು ಹೋಗ್ಬೇಕು. ನೀವು ಇದಕ್ಕೆ ಬಟ್ಟೆ ಬ್ಯಾಗ್ ಬಳಸಬಹುದು. ನೀವು ಮಾರುಕಟ್ಟೆಗೆ ಹೋಗಲು ನಿಮ್ಮ ಮನೆಯಲ್ಲಿರುವ ಹಳೆ ಬಟ್ಟೆಯಿಂದ ಬ್ಯಾಗ್ ತಯಾರಿಸಿ ಅದನ್ನು ಕೊಂಡೊಯ್ಯಬಹುದು. ಇದನ್ನು ವಾಶ್ ಮಾಡುವುದು ಕೂಡ ಸುಲಭ.
 

click me!