ಐವಿಎಫ್ ಸಹಾಯವಿಲ್ಲದೇ 66ನೇ ವಯಸ್ಸಿನಲ್ಲಿ 10ನೇ ಮಗುವಿಗೆ ಜನ್ಮ ನೀಡಿದ ಮಹಿಳೆ

ಜರ್ಮನಿಯ ಅಲೆಕ್ಸಾಂಡ್ರಾ ಹಿಲ್ಡೆಬ್ರಾಂಡ್ 66ನೇ ವಯಸ್ಸಿನಲ್ಲಿ 10ನೇ ಮಗುವಿಗೆ ಜನ್ಮ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

Berlin Woman gives birth to 10th child at 66 without IVF help

ಬರ್ಲಿನ್‌: 25ರಿಂದ 30 ವರ್ಷದ ಹೆಣ್ಣು ಮಕ್ಕಳಿಗೇ ಈಗ ಸಹಜವಾಗಿ ಮಕ್ಕಳಾಗದಂತಹ ಕಾಲಘಟ್ಟದಲ್ಲಿ ನಾವಿದ್ದೇವೆ. ಯಾರನ್ನು ಕೇಳಿದರು ಬಹುತೇಕ ಹೆಣ್ಣು ಮಕ್ಕಳು ಪಿಸಿಒಡಿ ಪಿಸಿಒಎಸ್‌ ಮುಂತಾದ ಋತುಚಕ್ರದ ಸಮಸ್ಯೆಗಳಿಂದ ಬಳಲುತ್ತಿರುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ಇಂತಹ ಸಮಸ್ಯೆಗಳಿದ್ದಾಗ ನೈಸರ್ಗಿಕವಾಗಿ ಮಕ್ಕಳಾಗುವುದಕ್ಕೆ ತುಸು ಕಷ್ಟವಾಗುತ್ತದೆ. ಅನೇಕರು ಇದೇ ಕಾರಣಕ್ಕೆ ಸಾಕಷ್ಟು ಚಿಕಿತ್ಸೆ ಪಡೆಯುತ್ತಿದ್ದು, ಐವಿಎಫ್ ಅಥವಾ ಇನ್ ವಿಟ್ರೊ ಫರ್ಟಿಲೈಸೇಶನ್‌ ಚಿಕಿತ್ಸೆ ನೀಡುವ ಆಸ್ಪತ್ರೆಗಳು ಹೆಣ್ಣು ಮಕ್ಕಳ ಈ ಸಮಸ್ಯೆಯನ್ನೇ ವರವಾಗಿಸಿಕೊಂಡು ಲಕ್ಷ ಲಕ್ಷ ದುಡ್ಡು ಮಾಡುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಇಲ್ಲೊಬ್ಬರು ಮಹಿಳೆ ತಮ್ಮ 66ನೇ ವಯಸ್ಸಿನಲ್ಲಿ ಯಾವುದೇ ಐವಿಎಫ್ ತಂತ್ರಜ್ಞಾನದ ಸಹಾಯವಿಲ್ಲದೇ ಮಗುವಿಗೆ ಜನ್ಮ ನೀಡಿ ಅಚ್ಚರಿ ಮೂಡಿಸಿದ್ದಾರೆ. ಅಂದಹಾಗೆ 66ನೇ ವಯಸ್ಸಿನಲ್ಲಿ ಹುಟ್ಟಿದ ಮಗು ಮಹಿಳೆಯ 10ನೇ ಮಗು ಎಂಬುದು ಇನ್ನೂ ಅಚ್ಚರಿಯ ವಿಚಾರ.

ಹೀಗೆ 66ನೇ ವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡಿ ಅಚ್ಚರಿಗೊಳಿಸಿದ ಮಹಿಳೆಯ ಹೆಸರು ಅಲೆಕ್ಸಾಂಡ್ರಾ ಹಿಲ್ಡೆಬ್ರಾಂಡ್ ಜರ್ಮನ್ ಮೂಲದ ಈ ಮಹಿಳೆ ಮಾರ್ಚ್ 10ರಂದು ಬರ್ಲಿನ್‌ನಲ್ಲಿ ತಮ್ಮ 10ನೇ ಮಗುವಿಗೆ ಜನ್ಮ ನೀಡಿದ್ದಾರೆ.  ವಯಸ್ಸನ್ನು ಮೀರಿ ತಡವಾಗಿ  ಗರ್ಭಾಧರಿಸುವುದರಿಂದ ಉಂಟಾಗುವ ಅಪಾಯಗಳ ಹೊರತಾಗಿಯೂ ಅವರ ಆರೋಗ್ಯಕರ ಜೀವನಶೈಲಿ ಮತ್ತು ಕುಟುಂಬ ಸದಸ್ಯರ ಬೆಂಬಲವು ಅವರಿಗೆ ಸುಗಮವಾಗಿ ಹೆರಿಗೆ ಆಗಲು ಸಹಾಯ ಮಾಡಿತ್ತು. ಬರ್ಲಿನ್‌ನ ಚಾರಿಟ್ ಆಸ್ಪತ್ರೆಯಲ್ಲಿ ಅವರು ಫಿಲಿಪ್ ಹೆಸರಿನ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.  ಮಗು ಮೂರು ಕೇಜಿ 175 ಗ್ರಾಂ (7 Pound 13 ounce) ಇದ್ದಿದ್ದರಿಂದ ಸಿ ಸೆಕ್ಷನ್ ಮೂಲಕ ಫಿಲಿಪ್ ಜನಿಸಿದ್ದಾನೆ. 

ಕರ್ತವ್ಯದಲ್ಲಿ ಮಡಿದ ಸೈನಿಕ, ಐವಿಎಫ್‌ ಮೂಲಕ 49ನೇ ವರ್ಷದಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ಯೋಧನ ತಾಯಿ!

Latest Videos

ಪ್ರಸ್ತುತ 66 ವರ್ಷದ  ಅಲೆಕ್ಸಾಂಡ್ರಾ ಹಿಲ್ಡೆಬ್ರಾಂಡ್ ಅವರಿಗೆ ಈಗಾಗಲೇ 46 ರಿಂದ 2 ವರ್ಷ ವಯಸ್ಸಿನವರೆಗಿನ 9 ಮಕ್ಕಳಿರುವುದರಿಂದ ಈಗಷ್ಟೇ ಜನಿಸಿದ ಫಿಲಿಪ್‌ಗೆ ಬರೋಬ್ಬರಿ 46 ವರ್ಷದಷ್ಟು ಹಿರಿಯ ಒಡಹುಟ್ಟಿದವರಿದ್ದಾರೆ. ಹೀಗೆ ಇಳಿವಯಸ್ಸಲ್ಲಿ ಮಗುವಿಗೆ ಜನ್ಮ ನೀಡಿದ ಅಲೆಕ್ಸಾಂಡ್ರಾ ಹಿಲ್ಡೆಬ್ರಾಂಡ್ ಸಾಮಾನ್ಯಳಲ್ಲ, ಬಹಳ ಚುರುಕಾಗಿರುವ ಮಹಿಳೆ, ಬರ್ಲಿನ್‌ನ ಚೆಕ್‌ಪಾಯಿಂಟ್ ಚಾರ್ಲಿಯಲ್ಲಿರುವ ವಾಲ್ ಮ್ಯೂಸಿಯಂನ ವ್ಯವಸ್ಥಾಪಕ ಅಧ್ಯಕ್ಷೆ ಮತ್ತು ನಿರ್ದೇಶಕಿಯಾಗಿಯೂ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. 

ಸಾಮಾನ್ಯವಾಗಿ ಇಳಿವಯಸ್ಸು ಬಿಡಿ 45 ರ ನಂತರ ಅಥವಾ ಈಗಾಗಲೇ ಮೊದಲು ಜನಿಸಿದ ಮಕ್ಕಳು ಹರೆಯಕ್ಕೆ ಕಾಲಿರಿಸಿದ ಸಮಯದಲ್ಲಿ ಅಥವಾ ಬಹಳ ಗ್ಯಾಪ್‌ನ ನಂತರ ಮತ್ತೆ ಗರ್ಭಿಣಿಯಾದರೆ ಬಹುತೇಕರು ಗೇಲಿ ಮಾಡುವುದೇ ಹೆಚ್ಚು, ಆದರೆ ಇಲ್ಲಿ ಅಲೆಕ್ಸಾಂಡ್ರಾ ಹಿಲ್ಡೆಬ್ರಾಂಡ್ ಅವರು ಇಳಿವಯಸ್ಸಲ್ಲಿ ಗರ್ಭಿಣಿಯಾಗಿದ್ದಾರೆ ಎಂಬ ವಿಚಾರ ತಿಳಿಯುತ್ತಿದ್ದಂತೆ, 10 ನೇ ಮಗುವಿನ ಆಗಮನದ ಬಗ್ಗೆ ಅವರ ಸಂಬಂಧಿಕರು ಮತ್ತು ಸ್ನೇಹಿತರು ಬಹಳ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರಂತೆ ಖುಷಿ ವ್ಯಕ್ತಪಡಿಸಿದರಂತೆ.

ಅಂಬಾನಿ ಮಗಳ ಐವಿಎಫ್ ಕತೆ; ಸಿರಿವಂತರಾದರೇನು, ಮಕ್ಕಳಾಗಲೂ ಬೇಕು ಯೋಗ!

ಮಗು ಫಿಲಿಪ್‌ನ ಗರ್ಭಾಧಾರಣೆಯ ವೇಳೆ ನನಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ, ಎಲ್ಲವೂ ಯೋಜಿಸಿದಂತೆ ನಡೆಯಿತು ಎಂದು ಅಲೆಕ್ಸಾಂಡ್ರಾ ಹಿಲ್ಡೆಬ್ರಾಂಡ್ ಹೇಳಿದ್ದಾರೆ. ಆರೋಗ್ಯಕರ ಜೀವನಶೈಲಿಯನ್ನು ನಡೆಸುತ್ತಿರುವುದೇ ವೃದ್ಧಾಪ್ಯದಲ್ಲೂ ನನ್ನನ್ನು ಸದೃಢವಾಗಿ ಮತ್ತು ಸಕ್ರಿಯವಾಗಿರಿಸಿದೆ. ನಾನು ತುಂಬಾ ಆರೋಗ್ಯಕರವಾಗಿ ತಿನ್ನುತ್ತೇನೆ, ನಿಯಮಿತವಾಗಿ ಒಂದು ಗಂಟೆ ಈಜುತ್ತೇನೆ ಮತ್ತು ಎರಡು ಗಂಟೆಗಳ ಕಾಲ ನಡೆಯುತ್ತೇನೆ ಎಂದು ಅವರು ಹೇಳಿಕೊಂಡಿದ್ದಾರೆ. ಅವರ ಈ ಅಭ್ಯಾಸಗಳು ಅವರ ಒಟ್ಟಾರೆ ಯೋಗಕ್ಷೇಮ ಯಶಸ್ವಿ ಗರ್ಭಧಾರಣೆಗೆ ಕಾರಣವಾಗಿವೆ ಎಂದು ತೋರುತ್ತದೆ.

ಇಳಿವಯಸ್ಸಿನ ಗರ್ಭಧಾರಣೆಯ ಬಗ್ಗೆ ವೈದ್ಯಕೀಯ ದೃಷ್ಟಿಕೋನ

66ನೇ ವಯಸ್ಸಿನಲ್ಲಿ ಗರ್ಭಧಾರಣೆಯು ಹೆಚ್ಚಿನ ಅಪಾಯಕಾರಿ ಅಂಶಗಳನ್ನು ಒಳಗೊಂಡಿರುವುದರಿಂದ ಅಲೆಕ್ಸಾಂಡ್ರಾ ಪ್ರಕರಣವು ಅಸಾಮಾನ್ಯ ಪ್ರಕರಣವಾಗಿದೆ. 50 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಅಕಾಲಿಕ ಜನನ, ಹೃದಯ ಕಾಯಿಲೆ, ಅಧಿಕ ರಕ್ತದೊತ್ತಡ ಮತ್ತು ಹಿಂದಿನ ಸಿಸೇರಿಯನ್ ತೊಂದರೆಗಳಿಂದ ಉಂಟಾಗುವ ತೊಡಕುಗಳು ಸೇರಿದಂತೆ ಹಲವು ತೊಡಕುಗಳನ್ನು ಎದುರಿಸುವ ಸಾಧ್ಯತೆಯಿದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಅದೇನೇ ಇರಲಿ, ನವತರುಣಿಯರಿಗೂ ಮಕ್ಕಳಾಗದ ಕಾಲಘಟ್ಟದಲ್ಲಿ ನಾವಿರುವಾಗ ಈ ಮಹಿಳೆ ಮೊಮ್ಮಗನ ಆಟವಾಡಿಸುವಂತಹ ಇಳಿವಯಸ್ಸಿನಲ್ಲಿ 10ನೇ ಮಗುವಿಗೆ ಜನ್ಮ ನೀಡಿರುವುದು ಕಡಿಮೆ ಸಾಧನೆಯೇನು ಅಲ್ಲ. ಈ ಸುದ್ದಿಯ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ.

vuukle one pixel image
click me!