ಭಯಾನಕ ಶಾರ್ಕುಗಳು ಇವಳ ಬಳಿ ಬಂದು ಸಾಕಿದ ನಾಯಿಗಳಂತೆ ಇವಳನ್ನು ಕೊಂಡಾಟ ಮಾಡುತ್ತವೆ. ಈಕೆ ಇಂಥ ನೂರಾರು ಶಾರ್ಕ್‌ಗಳ ಡಾರ್ಲಿಂಗ್! ಕ್ರಿಸ್ಟಿನಾ ಜೆನಾಟೊ ಎಂಬ ಮಹಿಳೆ ದಕ್ಷಿಣ ಅಮೆರಿಕದ ಕರಾವಳಿಯ ಶಾರ್ಕ್‌ಗಳ ಫೇವರಿಟ್! ಇದು ಹೇಗೆ ಸಾಧ್ಯ? ಓದಿ.
ಸಮುದ್ರಕ್ಕಿಳಿಯುವ ಯಾವುದೇ ಡೈವರ್‌ಗಳಿಗೆ ಆಳಸಮುದ್ರದ ಶಾರ್ಕ್‌ಗಳೆಂದರೆ ಜೀವಭಯ. ಅವು ಒಮ್ಮೆ ಬಾಯಿ ತೆರೆದರೆ ಅವುಗಳ ಹಲ್ಲು ನೋಡಿದರೇ ಸಾಕು ಅರ್ಧ ಜೀವ ಹಾರಿ ಹೋಗುತ್ತದೆ. ಇವುಗಳ ಬಾಯಿಗೆ ಸಿಲುಕಿ ಉಳಿದು ಬಂದ ಜೀವಿಗಳೇ ಇಲ್ಲ. ಅಂಥ ಭಯಾನಕ ಶಾರ್ಕುಗಳು ಇವಳ ಬಳಿ ಬಂದು ಸಾಕಿದ ನಾಯಿಗಳಂತೆ ಇವಳನ್ನು ಕೊಂಡಾಟ ಮಾಡುತ್ತವೆ. ಈಕೆ ಇಂಥ ನೂರಾರು ಶಾರ್ಕ್‌ಗಳ ಡಾರ್ಲಿಂಗ್! ಆಕೆ ಅವುಗಳ ಬಾಯಿ ತೆರೆದು ಅಲ್ಲಿ ಸಿಕ್ಕಿಹಾಕಿಕೊಂಡ ಕಬ್ಬಿಣದ ಗಾಳಗಳ ಕೊಕ್ಕೆಗಳನ್ನು ಆ ಹಲ್ಲುಗಳ ಭಯವಿಲ್ಲದೆ ನಾಜೂಕಾಗಿ ಬಿಡಿಸುತ್ತಾಳೆ. ಈ ಮ್ಯಾಜಿಕ್ ಹೇಗೆ ಸಾಧ್ಯವಾಯಿತು?
ಈಕೆ ಕ್ರಿಸ್ಟಿನಾ ಜೆನಾಟೊ. ಇದು ಆಕೆಯ ನಿರ್ಭೀತ ಬದುಕಿನ ಕತೆ. ಮೂರು ದಶಕಗಳಿಂದ ಈಕೆ ದಕ್ಷಿಣ ಅಮೆರಿಕ ಬಳಿಯ ಕ್ಯೂಬಾದ ಕರಾವಳಿಯಿಂದ ದೂರದಲ್ಲಿರುವ ದ್ವೀಪಗಳ ಬಳಿಯಲ್ಲಿ ಸಮುದ್ರದಲ್ಲಿ ಡೈವಿಂಗ್ ಮಾಡುತ್ತಾಳೆ. ಮೀನುಗಾರಿಕೆ ಮಾಡುವವರು ಎಸೆದ ಗಾಳದ ಕೊಕ್ಕೆಗಳು ಶಾರ್ಕ್‌ಗಳ ಬಾಯಿಯಲ್ಲಿ ಸಿಲುಕಿಕೊಂಡು ಅವುಗಳಿಗೆ ಯಮಯಾತನೆ ಕೊಡುತ್ತಿರುತ್ತವೆ. ಅಂಥ ಶಾರ್ಕ್‌ಗಳ್ನು ಹುಡುಕಿ ಅವುಗಳ ಸ್ನೇಹ ಬೆಳೆಸಿ, ಮೆತ್ತಗೆ ಅವುಗಳ ಬಾಯಿಗೆ ಕೈಹಾಕಿ ಅವುಗಳನ್ನು ನಾಜೂಕಾಗಿ ತೆಗೆಯುತ್ತಾಳೆ.
ಶಾರ್ಕ್‌ಗಳೇ ಯಾಕೆ ಇಂಥ ಸಂಕಷ್ಟಕ್ಕೆ ಒಳಗಾಗುತ್ತವೆ. ಯಾಕೆಂದರೆ ಅವುಗಳ ಬಾಯಿ ದೊಡ್ಡದು. ಇವು ತಮ್ಮ ಎದುರಿಗೆ ಸಿಕ್ಕ ಯಾವುದೇ ಜೀವಿಯನ್ನು ನುಂಗಿ ಹಸಿವು ತಣಿಸಿಕೊಳ್ಳಲು ಮುಂದಾಗುತ್ತವೆ. ದೊಡ್ಡ ಮೀನುಗಾರಿಕೆ ಹಡಗುಗಳ ಬಲೆಗಳಿಗೆ, ಕೊಕ್ಕೆಗಳಿಗೆ ಇವು ಸಿಕ್ಕಿಹಾಕಿಕೊಳ್ಳುವುದು ಬಲು ಬೇಗ. ಕೆಲವು ಶಾರ್ಕ್‌ಗಳು ಬಾಯಿಯಲ್ಲಿ ಮುರಿದ ಗಾಳದ ಕೊಕ್ಕೆಯೊಂದಿಗೆ ಹೇಗೋ ಪಾರಾಗಿಬಿಡುತ್ತವೆ. ಆದರೆ ಇವು ಅವುಗಳಿಗೆ ಯಮಯಾತನೆ ಕೊಡುತ್ತವೆ. ಇಂಥ ಸಂಕಷ್ಟದಲ್ಲಿರುವ ಶಾರ್ಕ್‌ಗಳಿಗೆ ನೆರವಾಗಲು ಜೆನಾಟೋ ನಿರ್ಧರಿಸಿದಳು.
"ಫಾಗ್ಗಿ ಐ" ಎಂಬ ಕೆರಿಬಿಯನ್ ರೀಫ್ ಶಾರ್ಕ್‌ನಿಂದ ಮೊದಲ ಬಾರಿಗೆ ಜೊನಾಟೋ ಕೊಕ್ಕೆಯನ್ನು ತೆಗೆದಳಂತೆ. ಅದೂ ಸಮುದ್ರದಾಳದಲ್ಲೇ. ಆ ಕೊಕ್ಕೆ ಆ ಶಾರ್ಕ್‌ನ ದವಡೆಗೆ ಹೊರಗಿನಿಂದ ಚುಚ್ಚಿಕೊಂಡಿತ್ತು. ಮೊದಲು ಜೊನಾಟೋ ಆ ಶಾರ್ಕ್‌ನ ಸುತ್ತಮುತ್ತ ಓಡಾಡಿದಳು. ಅದು ಅವಳನ್ನು ಘಾಸಿಪಡಿಸಲಿಲ್ಲ. ಆದರೆ ಹತ್ತಿರಕ್ಕೂ ಬಿಟ್ಟುಕೊಳ್ಳಲಿಲ್ಲ. ನಿಧಾನವಾಗಿ ಒಂದು ದಿನ ಶಾರ್ಕ್ ಇವಳ ಪಕ್ಕದಲ್ಲಿ ಬಂತು. ಜೊನಾಟೊ ಮೆತ್ತಗೆ ಅದನ್ನು ಹಿಡಿದುಕೊಂಡಳು. ನಾಜೂಕಾಗಿ ಅದಕ್ಕೆ ಚುಚ್ಚಿಕೊಂಡಿದ್ದ ಕೊಕ್ಕೆಯನ್ನು ಬಿಡಿಸಿದಳು.
ಇದಾಗಿ ಮೂರು ದಿನಗಳ ನಂತರ ಅದೇ ಶಾರ್ಕ್, ಇನ್ನೊಂದು ಶಾರ್ಕನ್ನು ಕರೆದುಕೊಂಡು ಇವಳ ಬಳಿಗೆ ಬಂದಿತು! ಈ ಶಾರ್ಕ್‌ನ ದವಡೆಯೊಳಗೆ ಕೊಕ್ಕೆ ಚುಚ್ಚಿಕೊಂಡಿತ್ತು. ನಿಧಾನವಾಗಿ ಎರಡೂ ಆಕೆಯ ಸುತ್ತ ಸುಳಿದಾಡಿದವು. ಜೊನಾಟೊಗೆ ಇದು ಗೊತ್ತಾಯಿತು. ಆಕೆ ಇನ್ನೊಂದು ಶಾರ್ಕನ್ನು ಸವರುತ್ತಾ ತನ್ನ ಕೆಲಸ ಶುರು ಮಾಡಿದಳು. 30 ನಿಮಿಷಗಳ ಕಾಲ ಒದ್ದಾಡಿದ ಬಳಿಕ ಕೊಕ್ಕೆ ಹೊರಬಂತು. ಆಕೆ ಅಕ್ಷರಶಃ ಅವಳ ಪೂರ್ತಿ ತೋಳನ್ನು ಅವಳ ಬಾಯಿಯ ಕೆಳಗೆ ಮೊಣಕೈಯವರೆಗೆ ತಳ್ಳಿ ಈ ಕೊಕ್ಕೆಯನ್ನು ಹೊರತೆಗೆದಳು. ಶಾರ್ಕ್ ಕೈಯನ್ನು ಕತ್ತರಿಸಿ ನುಂಗಬಹುದು ಎಂಬ ಭಯ ಕೊಂಚ ಇದ್ದುದು ನಿಜ. ಆದರೆ ಹಾಗೇನೂ ಆಗಲಿಲ್ಲ!
ಆ ದಿನದಿಂದ ಬಳಿಕ ಆ ಕೆರಿಬಿಯನ್ ಕೊಲ್ಲಿಯಲ್ಲಿ ಶಾರ್ಕ್‌ಗಳು ಅವಳ ಫ್ರೆಂಡ್ಸೇ ಆಗಿಬಿಟ್ಟವು. ಅವಳಿಂದ ಗುಣವಾದ ಶಾರ್ಕ್‌ಗಳು ಇತರ ಶಾರ್ಕ್‌ಗಳನ್ನೂ ಅವಳ ಕಡೆಗೆ ಕರೆತಂದವು. ಇದೊಂದು ಪ್ರಕೃತಿಯ ವಿಸ್ಮಯವೇ ಸರಿ. ಮೊದಲ ಶಾರ್ಕ್ ಯಾವಾಗಲೂ ಇವಳ ಬಳಿ ಮುದ್ದಾಟ ಮಾಡಿಸಿಕೊಳ್ಳಲು ಇಷ್ಟಪಡುತ್ತದೆ. ಈಕೆಯ ಬಳಿ ಬಂದು ಒರಗುತ್ತದೆ. ಈಕೆಯ ಮಡಿಲಲ್ಲಿ ಬಂದು ತಟ್ಟಲು ಬಿಡುತ್ತಾಳೆ.
ಇದು ನಿಜವಾಗಿಯೂ ಶಾರ್ಕ್‌ಗಳ ಸಂಪೂರ್ಣ ವರ್ತನೆಯ ಬದಲಾವಣೆಯಾಗಿತ್ತು. ಜೊನಾಟೊ ಈ "ಬುದ್ಧಿವಂತ" ಪ್ರಾಣಿಗಳೊಂದಿಗೆ ನಿಕಟ ಸಂಬಂಧವನ್ನು ರೂಪಿಸಿಕೊಂಡಳು. ಅವುಗಳು ಸಹಾಯಕ್ಕಾಗಿ ಆಕೆಯನ್ನು ಹುಡುಕಲು ಪ್ರಾರಂಭಿಸಿದವು. ಈಕೆ ಆಕ್ಸಿಜನ್ ಸಿಲಿಂಡರ್ ಕಟ್ಟಿಕೊಂಡು ಗಂಟೆಗಟ್ಟಲೆ ಸಮುದ್ರದಲ್ಲಿ ಮುಳುಗುತ್ತಾಳೆ. ಶಾರ್ಕ್‌ಗಳು ಹೇಗೋ ಆಕೆಯನ್ನು ಹುಡುಕಿಕೊಂಡು ಬರುತ್ತವೆ. ಎಲ್ಲ ಶಾರ್ಕ್‌ಗಳಿಗೆ ಈಕೆ ಸಹಾಯ ಮಾಡುತ್ತಾಳೆ. ಪ್ರಧಾನವಾಗಿ ಕೆರಿಬಿಯನ್ ರೀಫ್ ಶಾರ್ಕ್‌ಗಳು ಮತ್ತು ನರ್ಸ್ ಶಾರ್ಕ್‌ಗಳು. ಆದರೆ ಟೈಗರ್ ಶಾರ್ಕ್‌ಗಳು ಮತ್ತು ಬುಲ್ ಶಾರ್ಕ್‌ಗಳಂತಹ ದೊಡ್ಡ ಜಾತಿಗಳ ಜೊತೆಗೆ ಒಡನಾಟ ತುಸು ಕಷ್ಟ. ಅದಕ್ಕೆ ಕಾರಣ ಅವುಗಳ ಮೆಗಾ ಗಾತ್ರ. ಆದರೆ ಅಸಾಧ್ಯವೇನಲ್ಲ.
ನೋಡೋದಕ್ಕೆ 20ರ ಹುಡುಗಿಯಂತಿರೋ ಈ ಕೋಟ್ಯಾಧಿಪತಿ ಬ್ಯೂಟಿಗೆ 27 ವರ್ಷದ ಮಗ ಇದ್ದಾನಂತೆ!
ಕ್ರಿಸ್ಟೀನಾ ಕೆಲಸ ಹುಡುಗಾಟದ್ದೇನಲ್ಲ. ಅಪಾಯವೂ ಇದೆ. ಹೀಗಾಗಿ ಆಕೆಯ ಕುಟುಂಬದವರಿಗೇ ಇದು ಇಷ್ಟವಿಲ್ಲ. ಆದರೆ ಆಕೆ ಇದಕ್ಕಾಗಿ ತನ್ನ ಜೀವವನ್ನೇ ಮುಡಿಪಾಗಿಟ್ಟಿದ್ದಾಳೆ. ಕಳೆದ 20 ವರ್ಷಗಳಲ್ಲಿ ಈಕೆ 300ಕ್ಕೂ ಅಧಿಕ ಕೊಕ್ಕೆಗಳನ್ನು ಆಕೆ ಶಾರ್ಕ್‌ಗಳಿಂದ ತೆಗೆದಿದ್ದಾಳೆ. ಪ್ರತಿದಿನ ಇದಕ್ಕಾಗಿ ಆಕೆ ಸಮುದ್ರದಲ್ಲಿ ಮುಳುಗುತ್ತಾಳೆ. ಶಾರ್ಕ್‌ಗಳು ಈಕೆಯನ್ನು ತನ್ನ ಫ್ಯಾಮಿಲಿಯಲ್ಲಿ ಒಬ್ಬಳಂತೆ ಭಾವಿಸಿವೆ. ಶಾರ್ಕ್‌ಗಳಿಗೆ ಭಾವನೆಗಳಿವೆ ಎಂಬುದು ಈಕೆ ಖಚಿತ ಅಭಿಮತ. ಈಕೆ ಸಮುದ್ರದಲ್ಲಿ ಎಲ್ಲಿ ಹೋದರೂ ಶಾರ್ಕ್‌ಗಳು ಈಕೆಯನ್ನು ಪ್ರೀತಿಯಿಂದ ಸ್ವಾಗತಿಸುತ್ತವೆ. ಆಕೆಯನ್ನು ಬಿಟ್ಟು ಹೋಗಲೂ ನಿರಾಕರಿಸುತ್ತವಂತೆ!
ಹಾಲುಣಿಸುವ ತಾಯಂದಿರು ತಿನ್ನಲೇಬೇಕಾದ 6 ಹಣ್ಣುಗಳು
ಪ್ರತಿ ವರ್ಷ ವಿಶ್ವದ ಮೀನುಗಾರಿಕೆಯಲ್ಲಿ ಕಾಲುಭಾಗದಷ್ಟು ಮೀನುಗಾರಿಕೆ ಸಾಧನಗಳು ಸಮುದ್ರದಲ್ಲಿ ಕಳೆದುಹೋಗುತ್ತವೆ. ಇದು ಆಳ ಸಮುದ್ರದ ಶಾರ್ಕ್‌ಗಳಿಗೆ ಡೆಡ್ಲೀ ಆಗುತ್ತವೆ. ಪ್ರತಿ ವರ್ಷ ಶೇಕಡಾ ಆರು ಪ್ರತಿಶತ ಮೀನುಗಾರಿಕಾ ಬಲೆಗಳು, ಶೇಕಡಾ ಒಂಬತ್ತು ಎಲ್ಲಾ ಬಲೆಗಳು ಮತ್ತು ಶೇಕಡಾ 29 ರಷ್ಟು ಎಲ್ಲಾ ಲೈನ್‌ಗಳು ಸಾಗರಗಳಲ್ಲಿ ಕಳೆದುಹೋಗುತ್ತವೆ ಅಥವಾ ತ್ಯಜಿಸಲ್ಪಡುತ್ತವೆ. ಇವುಗಳು ಇವು ಸಮುದ್ರ ಪ್ಲಾಸ್ಟಿಕ್ ಮಾಲಿನ್ಯದ ಅತ್ಯಂತ ಮಾರಕ ರೂಪ. ಬಲೆಗಳು ಮೀನುಗಳ ಬಳಲಿಕೆ ಅಥವಾ ಉಸಿರುಗಟ್ಟುವಿಕೆಯಿಂದ ಸಾವಿಗೆ ಕಾರಣವಾಗುತ್ತದೆ. ಬಿಸಾಡಲಾದ ಬಲೆಗಳು, ದಾರಗಳು ಮತ್ತು ಹಗ್ಗಗಳು ಈಗ ಗ್ರೇಟ್ ಪೆಸಿಫಿಕ್ ಕಸದ ರಾಶಿಯ ಸುಮಾರು 46 ಪ್ರತಿಶತದಷ್ಟು ಇವೆ. ಇವು ಶಾರ್ಕ್‌ಗಳಿಗೆ ಅತ್ಯಂತ ಮಾರಕವಾಗಿ ಪರಿಣಮಿಸಿವೆಯಂತೆ.