ಮನೇಲಿ ಇಲಿ ಕಾಟ ಸಹಿಸೋಕಾಗ್ತಿಲ್ವಾ ? ಮೂಷಿಕದಿಂದ ಮುಕ್ತಿ ಪಡೆಯೋಕೆ ಇಲ್ಲಿದೆ ಸುಲಭ ಉಪಾಯ

Published : Jun 02, 2022, 02:55 PM ISTUpdated : Jun 02, 2022, 02:56 PM IST
ಮನೇಲಿ ಇಲಿ ಕಾಟ ಸಹಿಸೋಕಾಗ್ತಿಲ್ವಾ ? ಮೂಷಿಕದಿಂದ ಮುಕ್ತಿ ಪಡೆಯೋಕೆ ಇಲ್ಲಿದೆ ಸುಲಭ ಉಪಾಯ

ಸಾರಾಂಶ

ಮನೆ (Home)ಯಲ್ಲಿ ಇಲಿ (Rat)ಯೊಂದಿದ್ದರೆ ಸಾಕು, ಮನೆ ಗುಡಿಸಿ, ಗುಂಡಾಂತರವಾಯ್ತು ಅಂತಾನೇ ಅರ್ಥ. ಇಲಿಯೊಂದು ಮನೆಯಲ್ಲಿದ್ದರೆ ಕಸ, ಬಟ್ಟೆ (Dress), ಪಾತ್ರೆ ಎಲ್ಲವನ್ನೂ ಹರಡಿ ರಣಾಂಗಣ ಮಾಡಿಬಿಡುತ್ತದೆ. ಹಾಗಿದ್ರೆ ಮನೆಗೆ ಇಲಿಗಳು ಬರದಿರಲು ಏನು ಮಾಡ್ಬೋದು ?

ಮನೆ (Home) ಅಂದ್ರೆ ಅಲ್ಲಿ ಸಣ್ಣ ಪುಟ್ಟ ಕ್ರಿಮಿಕೀಟಗಳು, ಪ್ರಾಣಿಗಳು ಬಂದೇ ಬರ್ತವೆ. ಇವುಗಳ ಕಾಟ ವಿಪರೀತವಾದಾಗ ಮಾತ್ರ ಗೃಹಿಣಿ (Housewife)ಯರಿಗೆ ಅಸಹನೆ ಮೂಡೋದು ಸಹಜ. ಹೀಗೆ ಕಾಟ ಕೊಡೋದ್ರಲ್ಲಿ ಜಿರಳೆ, ಹಲ್ಲಿ, ಇಲಿ (Rat)ಗಳದು ಎತ್ತಿದ ಕೈ. ಇವುಗಳ ಸಮಸ್ಯೆ ನಿವಾರಿಸೋಕೆ ಹೋಗಿ ಮನೆಮಂದಿಯೆಲ್ಲಾ ಹೈರಾಣಾಗಿ ಹೋಗ್ತಾರೆ. ಹಲ್ಲಿಯೋ ಮನೆಯ ಗೋಡೆಯ ಮೂಲೆ ಮೂಲೆಯಲ್ಲಿದ್ದು ಇರಿಟೇಟ್ ಮಾಡುತ್ತೆ. ಜಿರಳೆಯಂತೂ ಹೇಳೋದೇ ಬೇಡ, ಕಪಾಟು, ವಾರ್ಡ್‌ರೋಬ್‌, ಬಟ್ಟೆ, ಪಾತ್ರೆ ಎಲ್ಲದರ ಮಧ್ಯೆ ನುಗ್ಗಿ ವಾಸನೆ ತಂದು ಬಿಡುತ್ತೆ. ಇನ್ನು ಎಲ್ಲಕ್ಕಿಂತ ದೊಡ್ಡ ಕಾಟ ಇಲಿಗಳದ್ದು.

ಮನೆಯಲ್ಲಿ ಒಂದು ಇಲಿಯುದ್ದರೆ ಸಾಕು, ಎಲ್ಲವನ್ನೂ ಎಳೆದು, ಹರಿದು, ತಿಂದು ಹಾಳು ಮಾಡಿಬಿಟ್ಟಿರುತ್ತದೆ. ಮುಖ್ಯವಾಗಿ ಮನೆಯನ್ನು ಸಂಭಾಳಿಸೋ ಗೃಹಿಣಿಯರು ಈ ಇಲಿಗಳ ಕಾಟದಿಂದ ಕಂಗಾಲಾಗಿ ಹೋಗ್ತಾರೆ.

Cleaning Tips: ಕಿಚನ್ ಕ್ಯಾಬಿನೆಟ್ ಹ್ಯಾಂಡಲ್ ಕ್ಲೀನ್ ಮಾಡೋಕೆ ಇಲ್ಲಿದೆ ಸುಲಭ ಟಿಪ್ಸ್

ಕೆಲವೊಬ್ಬರು ಬೋನನ್ನಿಟ್ಟು ಅದರಲ್ಲೇನಾದರೂ ಆಹಾರ (Food)ವನ್ನು ಇಟ್ಟು ಇಲಿ ಹಿಡೀತಾರೆ. ಇನ್ನು ಕೆಲವರು ಬಲೆ ಹಾಕ್ತಾರೆ, ರ್ಯಾಟ್‌ ಪಾಯಿಸನ್‌ಗಳನ್ನು ಟ್ರೈ ಮಾಡ್ತಾರೆ. ಆದ್ರೆ ಇದೆಲ್ಲಕ್ಕಿಂತ ಸುಲಭ ಉಪಾಯ ಇನ್ನೊಂದಿದೆ ಗೊತ್ತಾ ? ಇಲಿಗಳಿಗೆ ಬಾಳೆಹಣ್ಣು (Banana) ಅಂದ್ರೆ ಆಗಿ ಬರಲ್ವಂತೆ. ಹೀಗಾಗಿ ಮನೇಲಿ ನೀವು ಬಾಳೆಹಣ್ಣು ತಂದಿಟ್ಟುಕೊಂಡ್ರೆ ಸಾಕು ನೀವು, ಮತ್ತೆ ಇಲಿಗಳ ಬಗ್ಗೆ ಭಯಪಡಬೇಕಿಲ್ಲ. ಹೌದು, ಇಲಿಗಳ ದೊಡ್ಡ ಶತ್ರು ಬಾಳೆಹಣ್ಣು. ಅದ್ಯಾಕೆ ? ಇಲಿಗಳಿಗೆ ಬಾಳೆಹಣ್ಣು ಅಂದ್ರೆ ಯಾಕೆ ಆಗಲ್ಲ ತಿಳಿಯೋಣ ಬನ್ನಿ. 

ಇಲಿಗಳು ಬಾಳೆಹಣ್ಣಿಗೆ ಏಕೆ ಹೆದರುತ್ತವೆ?
ಸಂಶೋಧನೆಯ ಪ್ರಕಾರ, ಬಾಳೆಹಣ್ಣಿನ ಪರಿಮಳವು ಇಲಿಗೆ ಒತ್ತಡವನ್ನುಂಟು ಮಾಡುತ್ತದೆ. ಕ್ವಿಬೆಕ್‌ನ ಮಾಂಟ್ರಿಯಲ್‌ನಲ್ಲಿರುವ ಮೆಕ್‌ಗಿಲ್ ವಿಶ್ವವಿದ್ಯಾನಿಲಯದ ಸಂಶೋಧಕರು ನಡೆಸಿದ ಸಂಶೋಧನೆಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ. ಇದರಲ್ಲಿ ಸಂಶೋಧಕರು ಇಲಿಗಳಲ್ಲಿ ಒತ್ತಡದ ಹಾರ್ಮೋನುಗಳನ್ನು ಪತ್ತೆಹಚ್ಚಿದರು. ಇದು ಯಾವ ರೀತಿ ಬಾಳೆಹಣ್ಣಿನ ಪರಿಮಳವನ್ನು ಇಲಿಗಳಿಗೆ ಕಿರಿಕಿರಿಯುಂಟು ಮಾಡುತ್ತದೆ ಎಂಬುದನ್ನು ಬಹಿರಂಗ ಪಡಿಸಿದರು.

Life Hacks: ಇರುವೆಗಳ ಕಾಟ ತಪ್ಪಿಸೋದು ಹೇಗೆ?

ಇಲಿಗಳ ಮೂತ್ರದಲ್ಲಿ ಎನ್-ಪೆಂಟೈಲ್ ಅಸಿಟೇಟ್ ಎಂಬ ಸಂಯುಕ್ತದಿಂದಾಗಿ, ಇಲಿಗಳಲ್ಲಿ ಹಾರ್ಮೋನ್ ಬದಲಾವಣೆಗಳು ಪ್ರಚೋದಿಸಲ್ಪಡುತ್ತವೆ ಎಂದು ವಿಜ್ಞಾನಿಗಳು ಸಂಶೋಧನೆಯಲ್ಲಿ ಕಂಡು ಕೊಂಡಿದ್ದಾರೆ. ಈ ಸಂಯುಕ್ತದಿಂದಾಗಿ, ಬಾಳೆಹಣ್ಣುಗಳು ವಿಶೇಷ ಪರಿಮಳವನ್ನು ಹೊಂದಿರುತ್ತವೆ.

ಸೈನ್ಸ್ ಅಡ್ವಾನ್ಸಸ್ ಜರ್ನಲ್‌ನಲ್ಲಿ ಪ್ರಕಟವಾದ ಸಂಶೋಧನೆಯ ಹಿರಿಯ ಲೇಖಕ ಜೆಫ್ರಿ ಮೊಗಿಲ್, ಇದು ನಮಗೆ ಆಶ್ಚರ್ಯಕರವಾಗಿತ್ತು, ಏಕೆಂದರೆ ನಾವು ಯಾವುದರ ಕುರಿತಾಗಿಯೋ ಪ್ರಯೋಗ ಮಾಡುತ್ತಿದ್ದಾಗ, ಇಲಿಗೆ ಬಾಳೆಹಣ್ಣಿನ ಪರಿಮಳ ಆಗಿ ಬರಲ್ಲ ಎಂದು ತಿಳಿಯಿತು ಎಂದಿದ್ದಾರೆ. ಮತ್ತೊಂದು ಪ್ರಯೋಗಕ್ಕಾಗಿ, ನಮ್ಮ ಪ್ರಯೋಗಾಲಯದಲ್ಲಿ ನಾವು ಗರ್ಭಿಣಿ ಇಲಿಗಳನ್ನು ಹೊಂದಿದ್ದೇವೆ ಮತ್ತು ನಮ್ಮ ವಿದ್ಯಾರ್ಥಿಯೊಬ್ಬರು ಬಾಳೆಹಣ್ಣಿನ ಪರಿಮಳದಿಂದ ಇಲಿಗಳು ವಿಚಿತ್ರವಾಗಿ ವರ್ತಿಸಲು ಪ್ರಾರಂಭಿಸಿರುವುದನ್ನು ಗಮನಿಸಿದರು ಎಂದರು.

ಗಂಡು ಇಲಿಗಳು ತಮ್ಮ ಅನುವಂಶಿಕ ಸಾಮರ್ಥ್ಯವನ್ನು ಹೆಚ್ಚಿಸಲು ಶಿಶುಹತ್ಯೆಯಂತಹ ಆಕ್ರಮಣದಲ್ಲಿ ತೊಡಗುತ್ತಾರೆ ಎಂದು ಸಂಶೋಧಕರು ಬರೆದಿದ್ದಾರೆ. ಗರ್ಭಿಣಿ ಮತ್ತು ಹಾಲುಣಿಸುವ ಇಲಿಗಳು ತಮ್ಮ ಮರಿಗಳನ್ನು ಈ ಸಂಭಾವ್ಯ ಪರಭಕ್ಷಕಗಳಿಂದ ರಕ್ಷಿಸಲು ತಮ್ಮ ದೇಹದಿಂದ ರಾಸಾಯನಿಕಗಳನ್ನು ಹೊರಸೂಸುತ್ತವೆ. ಈ ಮೂಲಕ ಇಲಿಗಳಿಗೆ ತಮ್ಮಿಂದ ದೂರವಿರುವಂತೆ ಸಂದೇಶ ನೀಡುತ್ತವೆ ಎಂದಿದ್ದಾರೆ. 

Kitchen Hacks : ಪ್ರಯೋಜನಕ್ಕಿಲ್ಲವೆಂದು ಟೀ ಬ್ಯಾಗ್ ಎಸೆಯಬೇಡಿ, ಹೀಗ್ಮಾಡಿ..

ಇಲಿ ಮೂತ್ರ (Urine)ದಲ್ಲಿನ ರಾಸಾಯನಿಕಗಳು ಇಲಿಗಳಲ್ಲಿ ಒತ್ತಡದ ಮಟ್ಟವನ್ನು ಹೆಚ್ಚಿಸಿರುವುದನ್ನು ನೋಡಿದ ನಂತರ, ಸಂಶೋಧಕರು ರಾಸಾಯನಿಕವು ಬೇರೆಡೆಯಿಂದ ಬಂದರೆ ಇಲಿಗಳು ಅದೇ ರೀತಿ ವರ್ತಿಸುತ್ತವೆಯೇ ಎಂದು ಆಶ್ಚರ್ಯಪಟ್ಟರು. ಸಂಶೋಧಕರು ಬಾಳೆ ಎಣ್ಣೆಯನ್ನು ತಂದು ಹತ್ತಿಗೆ ಹಚ್ಚಿದರು. ಈ ಹತ್ತಿಯನ್ನು ಇಲಿಗಳ ಬೋನಿಗೆ ಹಾಕಿದನು. ಇದರ ಪರಿಮಳವು ಮೂತ್ರದಂತೆಯೇ ಇಲಿಗಳಲ್ಲಿ ಒತ್ತಡದ ಮಟ್ಟವನ್ನು ಗಣನೀಯವಾಗಿ ಹೆಚ್ಚಿಸಿತು ಎಂದು ತಿಳಿದುಬಂದಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಸಾಲೆ ಪೌಡರ್ ಮಾಡುವಾಗ ಸ್ವಲ್ವೇ ಸ್ವಲ್ಪ ಅಕ್ಕಿ ಸೇರಿಸಿ, ಅಡುಗೆ ರುಚಿ ಡಬ್ಬಲ್ ಆಗುತ್ತೆ
sculptor makeup: ಹುಡುಗರೇ ಆಹಾ ಚೂಪಾದ ಮೂಗು ಎಂಥಾ ಬ್ಯೂಟಿ ಅಂತ ಮರುಳಾಗದಿರಿ ಜೋಕೆ..!