ಎಗ್‌ಪ್ರೀಜ್‌ಗೆಂದು ಡಾಕ್ಟರ್ ಬಳಿ ಹೋದ ನಟಿಗೆ ಶಾಕ್‌: ಎಗ್‌ಪ್ರೀಜ್ ಮಾಡಲು ಬಯಸಿದ್ರೆ ಯಾವ ಏಜ್ ಬೆಸ್ಟ್?

Published : Aug 31, 2025, 02:30 PM IST
Egg freezing

ಸಾರಾಂಶ

ಬಾಲಿವುಡ್ ನಟಿ ಸೋಹಾ ಅಲಿಖಾನ್ ಅವರು ತಮ್ಮ ಪಾಡ್‌ಕಾಸ್ಟ್‌ನಲ್ಲಿ ಎಗ್ ಫ್ರೀಜಿಂಗ್ ಬಗ್ಗೆ ಮಾತನಾಡಿದ್ದು, ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ.

ನವದೆಹಲಿ: ಇಂದಿನ ಯುವ ದಂಪತಿಗಳ ಪ್ರಮುಖವಾದ ಸಮಸ್ಯೆ ಸಹಜವಾಗಿ ಮಕ್ಕಳಾಗದಿರುವುದು. ಅನೇಕ ಮಕ್ಕಳಾಗದ ದಂಪತಿಗಳು ಈಗ ಐವಿಎಫ್ ಮೊರೆ ಹೋಗುತ್ತಿದ್ದು, ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆಯಲು ಮುಂದಾಗುತ್ತಾರೆ. ಹೀಗಾಗಿ ಬಾಲಿವುಡ್ ನಟಿ ಸೋಹಾ ಅಲಿಖಾನ್ ಅವರು ತಮ್ಮ ಪಾಡ್‌ಕಾಸ್ಟ್ 'ಆಲ್ ಎಬೌಟ್ ಹರ್'ನಲ್ಲಿ ಈ ವಿಚಾರದ ಬಗ್ಗೆ ಸ್ತ್ರೀರೋಗತಜ್ಞೆ ಡಾ. ಕಿರಣ್ ಕೊಯೆಲ್ಹೋ ಹಾಗೂ ಬಾಡಿಗೆ ತಾಯಿ ಮೂಲಕ ಮಕ್ಕಳ ಪಡೆದ ಬಾಲಿವುಡ್ ನಟಿ ಮಾಜಿ ನೀಲಿಚಿತ್ರಗಳ ತಾರೆ ಸೋಹಾ ಅಲಿಖಾನ್ ಜೊತೆ ಈ ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದು, ಈ ಪಾಡ್‌ಕಾಸ್ಟ್ ಪ್ರೊಮೋ ಭಾರಿ ವೈರಲ್ ಆಗ್ತಿದೆ.

ಇತ್ತೀಚೆಗೆ ಬಹುತೇಕ ಉದ್ಯೋಗಸ್ಥ ಹೆಣ್ಣು ಮಕ್ಕಳು ವಿವಾಹವನ್ನು ಮುಂದೂಡುತ್ತಿದ್ದಾರೆ, ಬಹುತೇಕ ಬದುಕಿನಲ್ಲಿ ಆರ್ಥಿಕವಾಗಿ ಸೆಟಲ್ ಆದ ನಂತರವೇ ಮದುವೆ ಮಕ್ಕಳು ಮಾಡಿಕೊಳ್ಳಬೇಕು ಎಂಬ ಯೋಚನೆ ಈಗ ಯುವತಿಯರಲ್ಲೂ ಇದೆ ಆದರೆ ತಾಯಿಯಾಗುವುದಕ್ಕೆ ವಯಸ್ಸಿನ ಮಿತಿ ಇದೆ. ಒಂದು ವಯಸ್ಸು ದಾಟಿದ ನಂತರ ತಾಯಿಯಾಗುವುದು ಬಹಳ ಕಷ್ಟ. ಇತ್ತೀಚೆಗಂತೂ 20 -25ರ ಹರೆಯದ ಹೆಣ್ಣು ಮಕ್ಕಳಿಗೇನೆ ತಾಯಿಯಾಗುವುದಕ್ಕೆ ಹಲವು ಸಮಸ್ಯೆಗಳಿವೆ. ಹೀಗಿರುವಾಗ ತಮ್ಮೆಲ್ಲಾ ಕನಸಿನ ನಂತರವೇ ತಾವು ತಮ್ಮದೇ ಮಗುವಿಗೆ ತಾಯಿಯಾಗಬೇಕು ಎಂದು ಬಯಸುವವರಿಗೆ ಎಗ್ ಫ್ರೀಜಿಂಗ್ ಒಂದು ಒಳ್ಳೆಯ ಆಯ್ಕೆ ಹೀಗಾಗಿ ಈ ಎಗ್‌ ಫ್ರೀಜಿಂಗ್ ಬಗ್ಗೆ ಯುವ ಸಮೂಹದಲ್ಲಿ ಆಸಕ್ತಿ ಹೆಚ್ಚಾಗುತ್ತಿದೆ. ಈ ಪಾಡ್‌ಕಾಸ್ಟ್‌ನಲ್ಲಿ ಸ್ವತಃ ಸೋಹಾ ಅಲಿಖಾನ್ ಅವರು ಎಗ್‌ ಫ್ರೀಜಿಂಗ್‌ಗೆ ವೈದ್ಯರ ಬಳಿ ಹೋದ ಸಂದರ್ಭದಲ್ಲಿ ತಮಗಾದ ಅನುಭವವನ್ನು ಹೇಳಿಕೊಂಡಿದ್ದಾರೆ. ಅವರ ಮಾತುಗಳು ಕೂಡ ಈ ಎಗ್ ಫ್ರೀಜಿಂಗ್ ಮಾಡಲು ಬಯಸುವವರಿಗೆ ಕೆಲ ಅರಿವನ್ನು ಮೂಡಿಸುತ್ತಿದೆ. ಎಗ್‌ ಫ್ರೀಜಿಂಗ್ ಮಾಡುವುದಾದರೆ ಸರಿಯಾವ ವಯಸ್ಸು ಯಾವುದು ಎಂಬ ಎಲ್ಲಾ ವಿಚಾರಗಳ ಬಗ್ಗೆ ಈ ಪಾಡ್‌ಕಾಸ್ಟ್‌ನಲ್ಲಿ ಚರ್ಚೆ ನಡೆದಿದೆ.

ಸೋಹಾ ಅಲಿಖಾನ್ ಹೇಳಿದ್ದೇನು?

ನನಗೆ ಆಗ 35 ವರ್ಷ ವಯಸ್ಸಾಗಿತ್ತು. ನಾನು ಎಗ್ ಫ್ರೀಜಿಂಗ್ ಮಾಡುವುದಕ್ಕಾಗಿ ಒಬ್ಬರು ಸ್ತ್ರೀರೋಗ ತಜ್ಞರ ಬಳಿ ಹೋಗಿದೆ. ಆಗ ಅವರು ನಿಮಗೆ ಈಗಾಗಲೇ ಸಾಕಷ್ಟು ವಯಸ್ಸಾಗಿದೆ ಎಂದು ಹೇಳಿದರು ಆದರೆ ನೋಡುವುದಕ್ಕೆ ನಾನು ವಯಸ್ಸಾದಂತೆ ಕಾಣ್ತಿರಲಿಲ್ಲ, ಪ್ರತಿಯೊಬ್ಬರು ನೀನು ತುಂಬಾ ಯಂಗ್ ಆಗಿ ಕಾಣಿಸ್ತೀಯಾ ಎಂದು ಹೇಳುತ್ತಿದ್ದರು. ಆದರೆ ಅವರು ನಿಮ್ಮ ಅಂಡಾಣುಗಳು ನಿಮ್ಮ ಮುಖವನ್ನು ನೋಡಲು ಸಾಧ್ಯವಿಲ್ಲ ಎಂದು ಹೇಳಿದರು. (ಅದರರ್ಥನಿಮ್ಮ ಅಂಡಾಣುಗಳು ಮಗುವಾಗಿ ಬದಲಾಗುವುದಿಲ್ಲ, ಫಲವತ್ತತೆ ಇಲ್ಲ ಎಂದು) ಈ ವಿಚಾರ ನನ್ನಲ್ಲಿ ಬಹಳ ಆಳವಾಗಿ ಬೇರೂರಿತ್ತು ಎಂದು ಸೋಹಾ ತಮಗಾದ ಅನುಭವವನ್ನು ಹೇಳಿಕೊಂಡಿದ್ದಾರೆ.

ಎಗ್ ಫ್ರೀಜಿಂಗ್‌ಗೆ ಹಲವು ಅಂಶಗಳು ಮುಖ್ಯವಾಗುತ್ತದೆ. ನಿಮ್ಮ ವಯಸ್ಸು, ಮುಟ್ಟಿನ ಎರಡನೇ ದಿನದ ಸ್ಥಿತಿ, ಆಂಟ್ರಲ್ ಫೋಲಿಕ್ಯುಲರ್ ಎಣಿಕೆ, ಆಂಟಿ-ಮುಲ್ಲೇರಿಯನ್ ಹಾರ್ಮೋನ್ ಇವೆಲ್ಲವನ್ನು ಒಟ್ಟಿಗೆ ಸೇರಿಸಿದಾಗ ಮುಂಬರುವ ವರ್ಷಗಳಲ್ಲಿ ಫಲವತ್ತತೆಯನ್ನು ಊಹಿಸಲು ಸಹಾಯ ಮಾಡುತ್ತದೆ ಎಗ್‌ ಫ್ರೀಜಿಂಗ್‌ಗೆ ಸೂಕ್ತ ವಯಸ್ಸು 28 ರಿಂದ 34 ರ ನಡುವೆ ಇರುತ್ತದೆ ಎಂದು ಪಾಡ್‌ಕಾಸ್ಟ್‌ನಲ್ಲಿ ಹೇಳಲಾಗಿದೆ.

ನಟಿ ಸೋಹಾ ಅಲಿಖಾನ್‌ಗೆ 7 ವರ್ಷದ ಇನಾಯ ಹೆಸರಿನ ಮಗಳಿದ್ದಾಳೆ, ಸೋಹಾ ಕುನಾಲ್ ಕೇಮು ಅವರನ್ನು ಮದುವೆಯಾಗಿದ್ದು, ತಮ್ಮ 39ನೇ ವಯಸ್ಸಿನಲ್ಲಿ ಮಗಳಿಗೆ ಜನ್ಮ ನೀಡಿದ್ದರು. ಸೋಹಾ ಕೊನೆಯದಾಗಿ ಅಮೇಜಾನ್ ಫ್ರೈಮ್‌ನಲ್ಲಿ ರಿಲೀಸ್ ಆಗಿರುವ ಚಿಚೋರಿ 2 ಸಿನಿಮಾದಲ್ಲಿ ನಟಿಸಿದ್ದಾರೆ. ಹಾಗೆಯೇ ಝೀ ಫೈವ್‌ನಲ್ಲಿ ಪ್ರಸಾರವಾಗುತ್ತಿರುವ ವೆಬ್ ಸಿರೀಸ್ ಕೌನ್ ಬನೇಗಿ ಶಿಕರ್ವಾತಿಯಲ್ಲೂ ಕಾಣಿಸಿಕೊಂಡಿದ್ದಾರೆ.

ಎಗ್ ಫ್ರೀಜಿಂಗ್ ಅಥವಾ ಅಂಡಾಣುಗಳ ಸಂಗ್ರಹಿಸಿಡಲು ಸರಿಯಾದ ವಯಸ್ಸು ಯಾವುದು?

ತಜ್ಞರ ಪ್ರಕಾರ ಅಂಡಾಣುಗಳನ್ನು ಫ್ರೀಜ್ ಮಾಡಲು ಸೂಕ್ತ ವಯಸ್ಸು ಸಾಮಾನ್ಯವಾಗಿ 25 ರಿಂದ 35 ವರ್ಷಗಳಾಗಿವೆ. ಏಕೆಂದರೆ ಈ ಸಮಯದಲ್ಲಿ ಅಂಡಾಣುಗಳ ಗುಣಮಟ್ಟ ಮತ್ತು ಪ್ರಮಾಣವು ಉತ್ತುಂಗದಲ್ಲಿರುತ್ತದೆ., ಭವಿಷ್ಯದಲ್ಲಿ ಗರ್ಭಧಾರಣೆಯ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಈ ವಯಸ್ಸಿನ ನಂತರವೂ ಅಂಡಾಣುಗಳನ್ನು ಫ್ರೀಜ್ ಮಾಡಲು ಸಾಧ್ಯವಾದರೂ, ಅಂಡಾಣುಗಳ ಗುಣಮಟ್ಟ ಕಡಿಮೆ ಇರುತ್ತದೆ ಮತ್ತು ಆನುವಂಶಿಕ ಅಸಹಜತೆಗಳ ಅಪಾಯ ಹೆಚ್ಚು. 35 ವರ್ಷ ವಯಸ್ಸಿನ ನಂತರ, ವಿಶೇಷವಾಗಿ 40 ವರ್ಷ ವಯಸ್ಸಿನ ನಂತರ ಯಶಸ್ಸಿನ ಪ್ರಮಾಣ ಗಮನಾರ್ಹವಾಗಿ ಕಡಿಮೆಯಾಗುತ್ತದೆ.

ಇದನ್ನೂ ಓದಿ: ಡಿವೋರ್ಸ್ ಬಳಿಕ ಮತ್ತೆ ಪ್ರೀತಿಲಿ ಬಿದ್ದ ನಟಿಯ ಮಾಜಿ ಪತಿ: ಭರತ್ ತಖ್ತಾನಿ ಬಾಳಿಗೆ ಬಂದ ಹೊಸ ಚೆಲುವೆ ಯಾರು?

ಇದನ್ನೂ ಓದಿ: ಮಕ್ಕಳ ಪಡೆಯಲು ಸನ್ನಿ ಲಿಯೋನ್ ಬಾಡಿಗೆ ತಾಯ್ತನದ ಮೊರೆ ಹೋಗಿದ್ದೇಕೆ? : ಸನ್ನಿ ಉತ್ತರ ಬಾರಿ ವೈರಲ್

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!
'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!