
ದುಬೈ (Dubai) ರಸ್ತೆಯಲ್ಲಿ ಓಡ್ತಿರುವ ರೋಲ್ಸ್ ರಾಯ್ಸ್ ಘೋಸ್ಟ್ (Rolls-Royce Ghost) ಎಲ್ಲರ ಗಮನ ಸೆಳೆದಿದೆ. ಇದನ್ನು ಯಾವ್ದೋ ವ್ಯಕ್ತಿ ಓಡಿಸ್ತಿಲ್ಲ. ಬದಲಾಗಿ ನಮ್ಮ ದೇಶದ ಸೀರೆಯುಟ್ಟ ಮಹಿಳೆ ಓಡಿಸ್ತಿದ್ದಾರೆ. ಈ ಮಹಿಳಾ ಡ್ರೈವರ್ ಬಗ್ಗೆ ಚರ್ಚೆ ಆಗ್ತಿದೆ. ಬರೀ ದುಬೈ ಮಾತ್ರವಲ್ಲ ಭಾರತ ಕೂಡ ಈ ಮಹಿಳೆ ಬಗ್ಗೆ ಮಾತನಾಡ್ತಿದೆ. ಅಷ್ಟಕ್ಕೂ ಆ ಮಹಿಳೆ ವಯಸ್ಸು 75 ವರ್ಷ. ಹೆಸರು ಮಣಿ ಅಮ್ಮ (Mani Amma). ದುಬೈನಲ್ಲಿ ಸಾಂಪ್ರದಾಯಿಕ ಸೀರೆಯುಟ್ಟು ಐಷಾರಾಮಿ ರೋಲ್ಸ್ ರಾಯ್ಸ್ ಘೋಸ್ಟ್ ಡ್ರೈವ್ ಮಾಡ್ತಿದ್ದಾರೆ. ಮಣಿ ಅಮ್ಮ, ರೋಲ್ಸ್ ರಾಯ್ಸ್ ಘೋಸ್ಟ್ ಓಡಿಸ್ತಿರೋದು ಇಲ್ಲಿ ಹೆಚ್ಚು ಸುದ್ದಿ ಮಾಡಿಲ್ಲ, ಅದ್ರ ಬದಲಾಗಿ ಅವರ ಆತ್ಮವಿಶ್ವಾಸ ಹಾಗೂ ಕೂಲ್ ಡ್ರೈವಿಂಗ್ ಎಲ್ಲರ ಗಮನ ಸೆಳೆದಿದೆ.
ಕೇರಳದಲ್ಲಿ ಮಣಿ ಅಮ್ಮ ಡ್ರೈವಿಂಗ್ ಸ್ಕೂಲ್ ನಡೆಸುತ್ತಿದ್ದಾರೆ. ಕಾರು, ಟ್ರಕ್ , ಫೋರ್ಕ್ಲಿಫ್ಟ್ ಮತ್ತು ಕ್ರೇನ್ ಸೇರಿದಂತೆ ವಿವಿಧ ವಾಹನಗಳನ್ನು ಡ್ರೈವ್ ಮಾಡೋದ್ರಲ್ಲಿ ಮಣಿ ಅಮ್ಮ ಎತ್ತಿದ ಕೈ. ಮಣಿಯಮ್ಮನ ಪ್ರತಿಭೆ ನೋಡಿ ಪ್ರತಿಯೊಬ್ಬರೂ ಅಚ್ಚರಿಗೊಂಡಿದ್ದಾರೆ. ದುಬೈ ಕೇವಲ ಪ್ರವಾಸ, ಮನರಂಜನೆಗೆ ಸೀಮಿತವಾಗಿಲ್ಲ, ಅಲ್ಲಿಯೂ ಹೊಸ ಪ್ರತಿಭೆಗಳನ್ನು ಕಲಿಯಬಹುದು ಎಂಬುದಕ್ಕೆ ಮಣಿ ಅಮ್ಮ ಸ್ಪೂರ್ತಿ.
ವಯಸ್ಸು ಎಷ್ಟೇ ಆಗಿರಲಿ, ಆಸಕ್ತಿ ಇದ್ರೆ ಏನನ್ನು ಬೇಕಾದ್ರೂ ಕಲಿಯಬಹುದು ಎಂಬುದಕ್ಕೆ ಮಣಿಯಮ್ಮ ಉತ್ತಮ ನಿದರ್ಶನ. ಮಣಿ ಅಮ್ಮ ಸ್ಟೋರಿ ಸಾಮಾನ್ಯ ಜನರನ್ನು ಮಾತ್ರವಲ್ಲ ದೊಡ್ಡ ದೊಡ್ಡ ಉದ್ಯಮಿಗಳನ್ನು ಸೆಳೆದಿದೆ. ಪ್ರಮುಖ ಉದ್ಯಮಿ ಆನಂದ್ ಮಹೀಂದ್ರಾ ಕೂಡ ಅವರ ಸ್ಟೋರಿ ಹಂಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮಣಿ ಅಮ್ಮ ವಿಡಿಯೋ ಹಂಚಿಕೊಂಡ ಆನಂದ್ ಮಹೀಂದ್ರಾ ಇದು ಸೋಮವಾರದ ಮೋಟಿವೇಷನ್ ಅಂತ ಬರೆದಿದ್ದಾರೆ. ಜೀವನದ ಕಡೆಗೆ ಮಣಿ ಅಮ್ಮ ಅವರ ಅದಮ್ಯ ಇಚ್ಛಾಶಕ್ತಿಯನ್ನು ಆನಂದ್ ಮಹೀಂದ್ರ ಹೊಗಳಿದ್ದಾರೆ.
ಮಣಿ ಅಮ್ಮ ಅವರ ಈ ವೀಡಿಯೊ ಆನ್ಲೈನ್ನಲ್ಲಿ ಸಾಕಷ್ಟು ಫೇಮಸ್ ಆಗಿದೆ. ಅನೇಕರು ಮಣಿ ಅಮ್ಮ ಕೆಲ್ಸವನ್ನು ಹೊಗಳಿದ್ದಾರೆ. ಜೀವನವನ್ನು ಪೂರ್ಣವಾಗಿ ಬದುಕಲು ಮಣಿ ಅಮ್ಮ ಸ್ಫೂರ್ತಿ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ಅಂತರರಾಷ್ಟ್ರೀಯ ಚಾಲನಾ ಪರವಾನಗಿಯನ್ನು ಹೊಂದಿರುವ ವಿಶ್ವದ ಅತ್ಯಂತ ಹಿರಿಯ ಮಹಿಳೆ ಮಣಿ ಅಮ್ಮ ಎಂದು ಅನೇಕ ಬಳಕೆದಾರರು ಬರೆದಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.