
ಬೊಜ್ಜು ವಿಶ್ವದೆಲ್ಲೆಡೆ ಹೆಚ್ಚಿನವರನ್ನು ಕಾಡುತ್ತಿರುವ ಸಮಸ್ಯೆ. ಬೊಜ್ಜು ಬಂದರೆ ಉಂಟಾಗೋ ಸಮಸ್ಯೆಗಳು ಒಂದೆರಡಲ್ಲ. ಆರೋಗ್ಯ ಸಮಸ್ಯೆಗಳು ಒಂದು ಕಡೆ ಆದ್ರೆ ಸಾಮಾಜಿಕ ಸಮಸ್ಯೆಗಳು ಸಾಕಷ್ಟಿವೆ. ಶಾಪಿಂಗ್ ಮಾಡಾಣ ಅಂತ ಬಟ್ಟೆ ಅಂಗಡಿಗೆ ಹೋದರೆ ಸರಿ ಹೊಂದುವ ಡ್ರೆಸ್‌ಗಳು ಸಿಗಲ್ಲ. ಕೆಲವೆಡೆ ಸಿಕ್ಕರೂ ಬಹಳ ಕಡಿಮೆ ಆಯ್ಕೆಗೆ ಅವಕಾಶ ಇರುತ್ತೆ. ಅಲ್ಲಿ ಇರೋ ಕೆಲವೇ ಕೆಲವನ್ನು ಇಷ್ಟಾನಿಷ್ಟಗಳ ಗೊಡವೆ ಇಲ್ಲದೇ ಖರೀದಿಸಬೇಕು ಇಲ್ಲಾಂದರೆ ಮೆಟೀರಿಯಲ್ ಖರೀದಿಸಿ ದುಬಾರಿ ಬೆಲೆಗೆ ಡಿಸೈನರ್ ಹತ್ರ ಹೊಲಿಸಿಕೊಳ್ಳಬೇಕು. ಇನ್ನೊಂದೆಡೆ ಆರೋಗ್ಯ ಸಮಸ್ಯೆಗಳೂ ಸಾಕಷ್ಟಿರುತ್ತವೆ. ಬಿಪಿ, ಶುಗರ್‌ನಿಂದ ಹಿಡಿದು ಏನೇನೋ ಹೆಸರು ಹೇಳಲೂ ಕಷ್ಟವಾಗೋ ಸಮಸ್ಯೆಗಳೆಲ್ಲ ಅಟಕಾಯಿಸಿಕೊಂಡು ಬಿಡುತ್ತವೆ. ಹೋದಲ್ಲಿ ಬಂದಲ್ಲಿ ಕಿಚಾಯಿಸೋದು, ತಮಾಷೆ ಮಾಡೋದೆಲ್ಲ ಕಾಮನ್. ಇಲ್ಲೊಬ್ಬ ಅಮೆರಿಕನ್ ಸೋಷಿಯಲ್ ಇನ್‌ಫ್ಲುಯೆನ್ಸರ್ ಫ್ಲೈಟಲ್ಲಿ ದಪ್ಪಗಿರೋರಿಗೆ ಎಕ್ಸ್‌ಟ್ರಾ ಸೀಟು ನೀಡಬೇಕು ಅಂತ ಕ್ಯಾಂಪೇನ್ ಶುರು ಮಾಡಿದ್ದಾಳೆ. ಇದಕ್ಕೆ ನೆಟ್ಟಿಗರಿಂದ ಏನೇನೆಲ್ಲ ಕಮೆಂಟ್ ಬರ್ತಿದೆ.
ಜೇಲಿನ್ ಚೇನಿ ಅಂತ ಈಕೆಯ ಹೆಸರು. ಈಕೆಯ ವಾಷಿಂಗ್‌ಟನ್‌ನಲ್ಲಿ ಒಂದು ಬದಲಾವಣೆಗಾಗಿ ಪಿಟಿಷನ್ ಸಲ್ಲಿಸಿದ್ದಾರೆ. ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಕ್ಯಾಂಪೇನ್ ಸಹ ಶುರು ಮಾಡಿದ್ದಾಳೆ. ಈಕೆಯ ಹೊಸ ಡಿಮ್ಯಾಂಡ್ ಅನೇಕರು ಹುಬ್ಬೇರಿಸೋ ಹಾಗೆ ಮಾಡಿದೆ. ಫ್ಲೈಟ್‌ನಲ್ಲಿ ಬಹಳ ಮಂದಿ ದಪ್ಪಗಿರೋರು ಪ್ರಯಾಣಿಸುತ್ತಾರೆ. ಅವರಿಗೆ ಫ್ಲೈಟ್‌ನಲ್ಲಿರೋ ಸೀಟ್‌ನಲ್ಲಿ ಕಂಫರ್ಟೇಬಲ್ ಆಗಿ ಕೂರೋದಕ್ಕೆ ಆಗೋದಿಲ್ಲ. ಕೊಂಚ ಆಚೀಚೆ ಜರಗಿದರೂ ಆಚೀಚಿನವರಿಗೆ ತೊಂದರೆ. ಎಲ್ಲೇ ಹೋದರೂ ಏನೇ ಮಾಡಿದರೂ ಒಂದಿಲ್ಲೊಂದು ಸಮಸ್ಯೆ. ಈ ಕಾರಣಕ್ಕೆ ಎಷ್ಟೋ ಮಂದಿ ಆತ್ಮವಿಶ್ವಾಸದ ಕೊರತೆಯನ್ನು ಅನುಭವಿಸೋದೂ ಇದೆ. ಒಳಗೊಳಗೇ ಗಿಲ್ಟ್, ಖಿನ್ನತೆಯಂಥಾ ಸಮಸ್ಯೆ ಆವರಿಸೋದೂ ಇದೆ. ಇದೆಲ್ಲವನ್ನೂ ಮನಸ್ಸಲ್ಲಿಟ್ಟುಕೊಂಡು ಫ್ಲೈಟಲ್ಲಿ ಪ್ಲಸ್ ಸೈಸ್ ಇರೋರಿಗೆ ಎಕ್ಸ್ಟ್ರಾ ಸೀಟು ಕೊಡಿ ಅಂತ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿದ್ದಾಳೆ. ಅಷ್ಟೇ ಅಲ್ಲ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಕ್ಯಾಂಪೇನ್ ಶುರು ಹಚ್ಕೊಂಡಿದ್ದಾಳೆ. ಇದು ದಪ್ಪಗಿರೋರಿಗೆ ಬಲ ನೀಡಿದರೆ ಉಳಿದವರಿಗೆ ಆಡಿಕೊಳ್ಳಲು ಹೊಸ ವಿಷಯ ಸಿಕ್ಕಂತಾಗಿದೆ.
Viral Video: ರಸ್ತೆ ಬದಿಯಲ್ಲಿ ವಿಶಿಷ್ಟ ಮೊಮೊ ಮಾಡಿ ಫೇಮಸ್ ಆದ ಹುಡುಗಿ
ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಹೊಸ ಚರ್ಚೆ ಶುರುವಾಗಿದೆ. ಎಕ್ಸ್ಟ್ರಾ ಸೀಟು(Extra seat) ಯಾಕೆ, ಇಡೀ ಪ್ಲೇನ್ ಇಟ್ಕೊಳ್ಳಬಹುದಲ್ವಾ ಅಂತ ಕೆಲವರು ಕೇಳಿದರೆ, ಕೆಲವರು ಹೆಲ್ತಿಯಾಗಿರಿ, ಫಿಟ್ ಆಗಿರಿ, ಅದು ಬಿಟ್ಟು ಹೀಗೆಲ್ಲ ಹೇಳೋದು ತಪ್ಪು ಅನ್ನೋ ಮಾತು ಹೇಳಿದ್ದಾರೆ. ಬೊಜ್ಜನ್ನು ಪ್ರಮೋಟ್ ಮಾಡೋದನ್ನು ನಿಲ್ಲಿಸಿ ಅನ್‌ಹೆಲ್ದೀ ಲೈಫ್‌ಸ್ಟೈಲ್ ಗೆ ಬೈ ಹೇಳಿ ಅಂತ ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ಅಪಹಾಸ್ಯ ಆಡುತ್ತ ಕಾರ್ಗೋ ಏರ್‌ಲಿಫ್ಟ್ ಮಾಡಿಸಿ ಅನ್ನೋ ಮಾತು ಹೇಳಿದ್ದಾರೆ. ಒಂದಿಷ್ಟು ಜನ ಇದರ ಬದಲಿಗೆ ಫ್ರೀ ಜಿಮ್(Free Gym) ವ್ಯವಸ್ಥೆ ಮಾಡಲು ಮನವಿ ಮಾಡಿದ್ದರೆ ಚೆನ್ನಾಗಿರುತ್ತೆ ಎಂದಿದ್ದಾರೆ. ಒಬ್ಬರಂತೂ ಹಿಲೇರಿಯಸ್ ಆಗಿ, 'ಬರೀ ಎಕ್ಸ್‌ಟ್ರಾ ಸೀಟಷ್ಟೇ ಸಾಕಾ, ದೊಡ್ಡ ಡೋರ್ ಹಾಕಿಸೋದು ಬೇಡ್ವಾ ಅನ್ನೋ ಮಾತನ್ನೂ ಹೇಳಿದ್ದಾರೆ.
ಈ ವಿಚಿತ್ರ ಮನವಿಗೆ ಪಾಸಿಟಿವ್ ಆಗಿ ರಿಪ್ಲೈ(Reply) ಮಾಡಿದವರು ಬಹಳ ಕಡಿಮೆ. ಹೆಚ್ಚಿನವರು ನೆಗೆಟಿವ್ ಆಗಿ ಅಪಹಾಸ್ಯ ಮಾಡುವ ಕಮೆಂಟ್‌ಗಳನ್ನೇ(Comment) ಹೇಳಿದ್ದಾರೆ. ಇದರ ಜೊತೆಗೆ ಈಕೆಯ ಮುಂದಿನ ನಡೆ ಏನು ಅನ್ನೋದು ಕುತೂಹಲ ಮೂಡಿಸಿದೆ.
ಮಹಿಳಾ ಬ್ರೂಸ್ ಲೀ, ಅನುಚಿತ ವರ್ತನೆ ತೋರಿದ ಗ್ರಾಹಕರಿಗೆ ತಕ್ಕ ಶಾಸ್ತಿ,ವಿಡಿಯೋ ವೈರಲ್!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.