ಮಹಿಳಾ ವೈಟರ್ ಜೊತೆ ಅನುಚಿತವಾಗಿ ನಡೆದುಕೊಂಡಿದ್ದಾರೆ. ಆರಂಭದಲ್ಲಿ ತಾಳ್ಮೆಯಿಂದ ಇದ್ದ ವೈಟ್ರೆಸ್ ಇಬ್ಬರು ಗ್ರಾಹಕರಿಗೆ ತಕ್ಕ ಶಾಸ್ತಿ ಮಾಡಿದ್ದಾಳೆ. ಹಲ್ಲೆ ಮುಂದಾದ ಇಬ್ಬರನ್ನೂ ಬ್ರೂಸ್ ಲೀ ರೀತಿ ಹೊಡೆದೋಡಿಸಿದ್ದಾಳೆ. ಈ ವಿಡಿಯೋ ವೈರಲ್ ಆಗಿದೆ.
ನವದೆಹಲಿ(ಏ.17): ಮಹಿಳೆ, ಮಕ್ಕಳ ಮೇಲೆ ಪ್ರತಿ ದಿನ ಕಿರುಕುಳ, ದೌರ್ಜನ್ಯಗಳು ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಗಂಭೀರ ಪ್ರಕರಣಗಳು ಬೆಳಕಿಗೆ ಬರುತ್ತದೆ. ಮತ್ತೆ ಕೆಲ ಪ್ರಕರಣಗಳಲ್ಲಿ ದೂರು ದಾಖಲಾಗುತ್ತದೆ. ಇನ್ನು ಹಲವು ಪ್ರಕರಣಗಳು ಯಾರಿಗೂ ತಿಳಿಯದೇ ಮುಚ್ಚಿಹೋಗುತ್ತದೆ. ಇದೀಗ ರೆಸ್ಟೋರೆಂಟ್ ಒಂದರಲ್ಲಿ ಮಹಿಳಾ ವೈಟ್ರೆಸ್ ಮೇಲೆ ಅನುಚಿತವಾಗಿ ವರ್ತಿಸಿದ ಇಬ್ಬರು ಗ್ರಾಹಕರಿಗೆ ತಕ್ಕಾ ಶಾಸ್ತಿ ಮಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ನೆಟ್ಟಿಗರು ಈಕೆಗೆ ಮಹಿಳಾ ಬ್ರೂಸ್ ಲಿ ಎಂದು ಹೆಸರಿಟ್ಟಿದ್ದಾರೆ. ಬ್ರೂಸ್ ಲಿ ಚಿತ್ರದಲ್ಲಿ ಕಾಣಸಿಗುವ ಮಾರ್ಷಲ್ ಆರ್ಟ್ಸ್ ದೃಶ್ಯ ಕೌಶಲ್ಯವನ್ನು ಈಕೆ ಪ್ರದರ್ಶಿಸಿದ್ದಾಳೆ. ಈಕೆಯ ಪಂಚ್ ಹಾಗೂ ಕಿಕ್‌ಗೆ ಒಬ್ಬ ನೆಲಕ್ಕುರುಳಿದರೆ,ಮತ್ತೊರ್ವ ಕಾಲ್ಕಿತ್ತಿದ್ದಾನೆ.
ಅದು ಬಾರ್ ಅಂಡ್ ರೆಸ್ಟೋರೆಂಟ್. ಇಬ್ಬರು ಗ್ರಾಹಕರು ಬಂದು ಮದ್ಯ ಸೇವಿಸಿದ್ದಾರೆ. ಇವರ ಟೇಬಲ್ ಮೇಲೆ ಹಲವು ಬಿಯರ್ ಬಾಟಲ್ ಇವೆ. ಗ್ರಾಹಕರ ಆರ್ಡರ್ ಹಿಡಿದು ಬಂದ ಮಹಿಳಾ ವೈಟ್ರೆಸ್ ನಯವಾಗಿ ತಾಳ್ಮೆಯಿಂದ ಗ್ರಾಹಕರಿಗೆ ಆರ್ಡರ್ ನೀಡಿದ್ದಾಳೆ. ಈ ವೇಳೆ ಓರ್ವ ಗ್ರಾಹಕರ ವೈಟ್ರೆಸ್ ವಿರುದ್ದ ಏನೋ ಹೇಳಿದ್ದಾನೆ. ಇಷ್ಟೇ ಅಲ್ಲ ಕುಳಿತಲ್ಲಿಂದ ಎದ್ದು ಮಹಿಳಾ ವೈಟ್ರೆಸ್ ಕೈ ಹಿಡಿದಿದ್ದಾನೆ. ಆಕೆ ಬಿಡಿಸಿಕೊಳ್ಳುವ ಪ್ರಯತ್ನ ಮಾಡಿದ್ದಾಳೆ. ಮತ್ತೆ ಆತ ಈಕೆಯನ್ನು ಹಿಡಿದು ಎಳೆಯುವ ಪ್ರಯತ್ನ ಮಾಡಿದ್ದಾನೆ.
ಈ ಮಹಿಳಾ ಬಸ್ ಡ್ರೈವರ್ ಡ್ರೈವಿಂಗ್ ಸ್ಕಿಲ್‌ಗೆ ಪ್ರಯಾಣಿಕರು ಫಿದಾ
ಅಷ್ಟರಲ್ಲೇ ಮಹಿಳಾ ವೈಟ್ರೆಸ್ ತನ್ನ ಮಾರ್ಷಲ್ ಆರ್ಟ್ಸ್ ಕಲೆಯನ್ನೇ ಪ್ರದರ್ಶಿಸಿದ್ದಾಳೆ. ಹಿಡಿಯಲು ಬಂದ ಕೈಯನ್ನು ತಳ್ಳಿ ಪಂಚ್ ಮೇಲೆ ಪಂಚ್ ಕೊಟ್ಟಿದ್ದಾಳೆ. ಅಷ್ಟಕ್ಕ ಓರ್ವ ಗ್ರಾಹಕ ನೆಲಕ್ಕೆ ಉರುಳಿದ್ದಾನೆ. ಇತ್ತ ಮತ್ತೊರ್ವ ಮಹಿಳಾ ವೈಟ್ರೆಸ್ ಮೇಲೆ ದಾಳಿ ಮಾಡಲು ಮುಂದಾಗಿದ್ದಾನೆ. ಆದರೆ ವೈಟ್ರೆಸ್ ಒಂದೇ ಕಿಕ್‌ಗೆ ಮತ್ತೆ ಕುರ್ಚಿಯಲ್ಲಿ ಬಿದ್ದಿದ್ದಾನೆ. ಮತ್ತೆ ಎದ್ದು ಬಂದ ಗ್ರಾಹಕನಿಗೆ ಮತ್ತೊಂದು ಪಂಚ್ ನೀಡಿದ ಬೆನ್ನಲೇ ಹೊರಗೆ ಓಡಿಹೋಗುವ ಯತ್ನ ಮಾಡಿದ್ದಾನೆ. ಅಷ್ಟರಲ್ಲೇ ಪಕ್ಕದಲ್ಲಿ ಸಿಕ್ಕ ಕುರ್ಚಿಯನ್ನು ಮಹಿಳಾ ವೈಟ್ರೆಸ್ ಮೇಲೆ ಎಸೆದಿದ್ದಾನೆ. ಸಿನಿಮಾ ಶೈಲಿಯಲ್ಲಿ ಕ್ಯಾಚ್ ಹಿಡಿದ ವೈಟ್ರೆಸ್, ಎದೆಗೆ ಒಂದು ಕಿಕ್ ಕೊಟ್ಟಿದ್ದಾಳೆ. ಗ್ರಾಹಕ ಎದ್ನೋ ಬಿದ್ನೋ ಅಂತಾ ಓಡಿದ್ದಾನೆ. ಮೊದಲು ಪಂಚ್ ನೀಡಿದ ಗ್ರಾಹಕರ ಮೇಲೆ ಎದ್ದೇ ಇಲ್ಲ.
ಜಾಕಿ ಚಾನ್, ಬ್ರೂಸ್ ಲೀ ಸಿನಿಮಾಗಳಲ್ಲಿನ ಮಾರ್ಷಲ್ ಆರ್ಟ್ಸ್ ಫೈಟಿಂಗ್ ದೃಶ್ಯಕ್ಕೂ, ಈ ಘಟನೆಗೂ ಯಾವುದೇ ವ್ಯತ್ಯಾಸವಿಲ್ಲ. 15 ಸೆಕೆಂಡ್‌ಗಳ ಈ ವಿಡಿಯೋದಲ್ಲಿ ಮಹಿಳಾ ವೈಟ್ರೆಸ್ ಅನುಚಿತ ವರ್ಚನೆ ತೋರಿದ ಇಬ್ಬರಿಗೂ ಗೂಸಾ ನೀಡಿದ್ದಾಳೆ. 15 ಸೆಕಂಡ್‌ನಲ್ಲಿ ಎಲ್ಲವೂ ಮುಗಿದಿದೆ. ಈ ಸಿಸಿಟಿವಿ ವಿಡಿಯೋ ವೈರಲ್ ಆಗಿದೆ. ಈಕೆಯನ್ನು ನೆಟ್ಟಿಗರು ಮಹಿಳಾ ಬ್ರೂಸ್ ಲಿ ಎಂದು ಕೊಂಡಿದ್ದಾರೆ. ಅನುಚಿತ ವರ್ತನೆ ತೋರುವ ಪ್ರತಿಯೊಬ್ಬರಿಗೂ ಇದೇ ಶಿಕ್ಷೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
'ನಾನು ಸಾಯಬಹುದು ಡಾಕ್ಟರ್ ಎಚ್ಚರಿಕೆ ನೀಡಿದ್ದರು, ಆದರೂ ಬಾಕ್ಸಿಂಗ್ ರಿಂಗ್‌ನಲ್ಲಿ ಹೋರಾಡಿದೆ': ಸ್ವೀಟಿ
ಈ ದೃಶ್ಯ ಸಿನಿಮಾದ ತುಣುಕಿನಂತಿದೆ. ಮಹಿಳಾ ವೈಟ್ರೆಸ್ ಮಾರ್ಷಲ್ ಆರ್ಟ್ಸ್ ಅದ್ಭುತ. ಸೂಕ್ತ ಸಂದರ್ಭದಲ್ಲಿ ತನ್ನ ರಕ್ಷಣೆಗೆ ಮಾರ್ಷಲ್ ಆರ್ಟ್ಸ್ ಬಳಸಿದ್ದಾಳೆ. ಯುವತಿಗೆ ಅಭಿನಂದನೆಗಳು ಎಂದು ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ.