Women Empowerment : ಸಾಧಕ ಮಹಿಳೆಯರಿಗೆ ಗೌರವ,  WEFT ಸಂಪರ್ಕ ಆಪ್

Published : Mar 12, 2022, 01:56 AM ISTUpdated : Mar 12, 2022, 02:01 AM IST
Women Empowerment : ಸಾಧಕ ಮಹಿಳೆಯರಿಗೆ ಗೌರವ,  WEFT ಸಂಪರ್ಕ ಆಪ್

ಸಾರಾಂಶ

* ಬೆಂಗಳೂರಿನಲ್ಲಿ ಮಹಿಳಾ ಸಾಧಕರಿಗೆ ಸನ್ಮಾನ * ಮಹಿಳಾ ಸಬಲೀಕರಣಕ್ಕೆ ದುಡಿದವರಿಗೆ ಗೌರವ *  ಡಬ್ಲ್ಯೂಇಎಫ್‍ಟಿ ತನ್ನ ಆ್ಯಪ್ `ವಿಮೆಂಟಾಸ್ಟಿಕ್’ ಮೂಲಕ ಸಂದೇಶ

ಬೆಂಗಳೂರು (ಮಾ. 11) ವಿಮೆನ್ ಆಂತ್ರಪ್ರಿನ್ಯೂರ್ಸ್ ಫಾರ್ ಟ್ರಾನ್ಸ್‍ಫಾರ್ಮೇಷನ್(WEFT) ಮಹಿಳೆಯರ ಸ್ವಾಯುತ್ತತೆ (Women's empowerment) ಬೆಂಬಲಿಸುವ ಸಂಘಟನೆಯಾಗಿದ್ದು ಬೆಂಗಳೂರಿನಲ್ಲಿ(Bengaluru) ಸಾಧಕ ಮಹಿಳೆಯರನ್ನು (women achievers)ಸನ್ಮಾನಿಸಿತು.  ಈ ಕಾರ್ಯಕ್ರಮದಲ್ಲಿ ಮಹಿಳಾ ಸಬಲೀಕರಣಕ್ಕೆ ಶ್ರಮಿಸಿದ ಮಹಿಳಾ ಉದ್ಯಮಿಗಳಿಗೆ ಗೌರವ ಸಮರ್ಪಿಸಲಾಯಿತು.

ಸೋಮ್ಯ ಲುಹಾಡಿಯಾ ವರ್ಷದ ಯುವ ಸಾಧಕಿ, ಸುಜ್ಯೋತಿ ಎನ್.ಪ್ರಸಾದ್, ಪುಷ್ಪಲತಾ ಎಂ.ಎಸ್, ಡಾ.ಶ್ರೇಯಾ ಗೋವಿಂದ್, ಗಾಯತ್ರಿ ವಂಸಿ, ಸ್ವಾತಿ ಝಾ, ದೀಪ್ತಿ ಬಾಬು, ಅನುಜಾ ಸೋನಿ, ದೀಪ್ತಿ ಭಂಡಾರಿ, ಡಾ.ಸಮಿನಾ ಎಫ್.ಜಮೀನ್ದಾರ್, ರೂಪಾ ದೇಶ್‍ರಾಜ್, ಶಿಲ್ಪಾ ಕುಲಶ್ರೇಷ್ಠ, ರಶ್ಮಿ ವಿ.ಕುಲಕರ್ಣಿ, ಮಂಜೂಶ್ರೀ ಎನ್., ಸರ್‍ಗಮ್ ಧವನ್ ಭಾವನ, ಸ್ವರ್ಣ ರಾಜ, ಡಿಂಪಲ್ ವರ್ಮಾ, ಸುದಕ್ಷಿಣ ಭಟ್ಟಾಚಾರ್ಯ, ಪ್ರೀತಿ ಕಬ್ರಾ, ಸ್ಮಿತಾ ಆರಾಮಗಲಿ, ಆರ್ತಿ ನೋಟಿಯಾಲ್ ಅವರನ್ನು ಸನ್ಮಾನಿಸಲಾಯಿತು. 

 ಡಬ್ಲ್ಯೂಇಎಫ್‍ಟಿ ತನ್ನ ಆ್ಯಪ್ `ವಿಮೆಂಟಾಸ್ಟಿಕ್’ ಮಹಿಳಾ ಉದ್ಯಮಿಗಳಿಗೆ ಸಂಪರ್ಕ ಹೊಂದಲು, ಪರಸ್ಪರ ಜಾಲ ನಿರ್ಮಿಸಿಕೊಳ್ಳಲು, ಮುಕ್ತವಾಗಿ ಮಾತನಾಡಲು ಮತ್ತು ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಡಿಜಿಟಲ್ ವೇದಿಕೆಯಾಗಿದೆ. 

ಮಹಿಳಾ ದಿನದಂದು ಸಾರೋಟು ಏರಿ ಬಂದರು

ಮಹಿಳಾ ಉದ್ಯಮಿಗಳು ಅಸಂಖ್ಯ ಸವಾಲುಗಳನ್ನು ಎದುರಿಸುತ್ತಾರೆ, ಆದ್ದರಿಂದ ಡಬ್ಲ್ಯೂಇಎಫ್‍ಟಿ ಫೌಂಡೇಷನ್ ಮಹಿಳೆಯರಿಗೆ ಅವರ ಉದ್ಯಮಶೀಲತೆಯ ಕನಸುಗಳಿಗೆ ನೆರವಾಗುವ ಉಪಕ್ರಮವಾಗಿ ಪ್ರಾರಂಭವಾಯಿತು. ಆ್ಯಪ್ ಬಿಡುಗಡೆಯು ಮಹಿಳೆಯರಿಗೆ ತಕ್ಷಣ ಲಭ್ಯತೆ ಮತ್ತು ವಿಸಿಬಿಲಿಟಿ ನೀಡುವ ಸಾಮಾನ್ಯ ವೇದಿಕೆಯಾಗಿದೆ. ವಿಮೆಂಟಾಸ್ಟಿಕ್ ಮಹಿಳಾ ಉದ್ಯಮಿಗಳ ಸಂಪರ್ಕ ಹೊಂದುವ ಮತ್ತು ತಲುಪುವ ಮೂಲಭೂತ ಅಗತ್ಯಗಳನ್ನು ಪೂರೈಸುತ್ತದೆ. ವಿಮೆಂಟಾಸ್ಟಿಕ್ ಅನ್ನು ಇತಿ ರಾವತ್, ಸಂಜಯ್ ಕೌಲ್ ಮತ್ತು ಗೌರವ್ ರಹೇಜಾ ಅವರಿಂದ ಸ್ಥಾಪನೆಯಾಗಿದ್ದು ಸ್ಥಳದಲ್ಲಿಯೇ ಹಲವಾರು ಮಹಿಳೆಯರು ಆ್ಯಪ್ ಡೌನ್‍ಲೋಡ್ ಮಾಡಿಕೊಂಡರು. 

ಆ್ಯಪ್ ಸಂಸ್ಥಾಪಕರೊಂದಿಗೆ ರೇಖಾ ಶರ್ಮಾ, ದೀಪಿಕಾ ಟ್ರೆಹಾನ್, ಅಪರ್ಣಾ ವೇದಾಪುರಿ ಸಿಂಗ್, ಅಲಿನಾ ಅಲಂ, ವಂದನಾ ಸುರಿ, ಅನಿಶಾ ಸಿಂಗ್ ಭಾಗವಹಿಸಿದ್ದರು. 
ವೆಫ್ಟ್ ಫೌಂಡೇಷನ್ ಸಂಸ್ಥಾಪಕಿ ಇತಿ ರಾವತ್, “ಈ ಆ್ಯಪ್ ಬಿಡುಗಡೆಗೆ ದೊರೆತ ಅಭೂತಪೂರ್ವ ಪ್ರತಿಕ್ರಿಯೆ ನಮಗೆ ಬಹಳ ಸಂತೋಷ ತಂದಿದೆ. ವಿಮೆಂಟಾಸ್ಟಿಕ್ ಮಹಿಳೆಯರಿಗೆ ಈಗಾಗಲೇ ಇರುವ ಆಂತರಿಕ ಸಾಮರ್ಥ್ಯ ಮತ್ತು ಉದ್ಯಮಿಗಳಾಗಿ ಯಶಸ್ವಿಯಾಗಲು ಕೌಶಲ್ಯದ ಫಲಿತಾಂಶ ಎನ್ನುವುದು ನಮ್ಮ ನಂಬಿಕೆಯಾಗಿದೆ. 

ನೆಟ್‍ವರ್ಕಿಂಗ್ ಉದ್ಯಮಿಯಾಗಲು ಅತ್ಯಂತ ಅಗತ್ಯ ಆಯಾಮವಾಗಿದೆ ಮತ್ತು ನಮ್ಮ ಆ್ಯಪ್ ಅದನ್ನು ಹಿಂದೆಂದಿಗಿಂತಲೂ ಸರಳಗೊಳಿಸಿದೆ. ಒಂದೇ ಗುಂಡಿ ಒತ್ತುವುದರೊಂದಿಗೆ ಬಂಡವಾಳ ಪಡೆಯುವ, ಕಾನೂನು ಆರೋಗ್ಯ ಮತ್ತು ಕೌನ್ಸೆಲಿಂಗ್ ಹಾಗೂ ಇನ್ನಿತರೆ ನೆರವನ್ನು ಸಂಬಂಧಿಸಿದ ಗ್ರೂಪ್‍ಗೆ ಸಲ್ಲಿಸುವ ಮೂಲಕ ಪಡೆಯುವುದನ್ನು ಕಲ್ಪಿಸಿಕೊಳ್ಳಿ. ವಿಮೆಂಟಾಸ್ಟಿಕ್ ಮಹಿಳಾ ಉದ್ಯಮಿಗಳಿಗೆ ಅಗತ್ಯವಿರುವ ಪ್ರತಿಯೊಂದನ್ನೂ ಒಳಗೊಂಡಿರುತ್ತದೆ. ಉದ್ಯೋಗಗಳಿಂದ, ಉದ್ಯಮದ ಅವಕಾಶಗಳು ಇತ್ಯಾದಿ ಒದಗಿಸುತ್ತದೆ. `ಒಟ್ಟಿಗೆ ಶಕ್ತಿಯುತ’ವಾಗುವುದು ನಮ್ಮ ಉದ್ದೇಶವಾಗಿದ್ದು ನಾವು ಮಹಿಳೆಯರ ಸಬಲೀಕರಣಕ್ಕೆ ಉತ್ತೇಜಿಸಲು ಪರಸ್ಪರ ಬೆಂಬಲಿಸುವುದರಲ್ಲಿ ನಂಬಿಕೆ ಇರಿಸಿದ್ದೇವೆ ಎಂದರು.

ಟಾಪ್ ಲೆಸ್ ಪ್ರತಿಭಟನೆ: ರಷ್ಯಾ ಉಕ್ರೇನ್ ಯುದ್ಧ ಯಾರ ನಿಯಂತ್ರಣಕ್ಕೂ ಸಿಗದೇ ವಿಪರೀತದಿಂದ ವಿಕೋಪಕ್ಕೆ ತಿರುಗಿದ್ದು, ಕೋಟ್ಯಾಂತರ ಜನ ಜೀವ ಉಳಿಸಿಕೊಳ್ಳಲು ದೇಶ ಬಿಡುತ್ತಿದ್ದಾರೆ. ಈ ಮಧ್ಯೆ ಪ್ಯಾರಿಸ್‌ನಲ್ಲಿ ಮಹಿಳೆಯರು ಯುದ್ಧ ನಿಲ್ಲಿಸುವಂತೆ ಆಗ್ರಹಿಸಿ ವ್ಲಾಡಿಮಿರ್ ಪುಟಿನ್ ವಿರುದ್ಧ ಟಾಪ್‌ಲೆಸ್‌ ಆಗಿ ಪ್ರತಿಭಟನೆ ನಡೆಸುತ್ತಿದ್ದಾರೆ. 

Visegrad24 ಎಂಬ ಸುದ್ದಿ ಸಂಸ್ಥೆಯೊಂದು ತನ್ನ ಅಧಿಕೃತ ಟ್ವಿಟ್ಟರ್ (Twitter) ಖಾತೆಯಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದೆ. ಇದರಲ್ಲಿ ಪ್ಯಾರಿಸ್‌ನ (Paris) ಐಫೆಲ್ ಟವರ್‌ನ  ಮುಂದೆ ಅನೇಕ ಮಹಿಳೆಯರು ಟಾಪ್‌ಲೆಸ್‌ ಆಗಿ ಪ್ರತಿಭಟನೆ ನಡೆಸುತ್ತಿರುವುದನ್ನು ಕಾಣಬಹುದು. ಅವರು ತಮ್ಮ ದೇಹದ ಮೇಲ್ಭಾಗದಲ್ಲಿ ಉಕ್ರೇನಿಯನ್ ಧ್ವಜವನ್ನು ಚಿತ್ರಿಸಿಕೊಂಡಿದ್ದರು. 

ರಷ್ಯಾ ಮತ್ತು ಉಕ್ರೇನ್ ನಡುವಿನ ಸಮರಕ್ಕೆ ಕೊನೆ ಇಲ್ಲ. ಯುದ್ಧ ಹದಿನೈದನೇ ದಿನಕ್ಕೆ ಕಾಲಿಟ್ಟಿದ್ದು ಉಕ್ರೇನ್ ಮಹಾನಗರಗಳೆಲ್ಲ ನಾಶವಾಗಿದೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಾಡೆಲ್ ಮಗಳ ಯಶಸ್ಸು: ಮಾಲ್‌ನಲ್ಲಿ ಬಿಲ್‌ಬೋರ್ಡ್ ಮೇಲೆ ಮಗಳ ಫೋಟೋ ನೋಡಿ ಭಾವುಕರಾದ ಪೋಷಕರು
ಮಾಧುರಿಗೆ 'ನಿನ್ನನ್ನು ತಾಯಿಯಾಗಿ ನೋಡುತ್ತೇನೆ' ಎಂದಿದ್ದ ಎಂಎಫ್ ಹುಸೇನ್; ಆದ್ರೆ ಮುಂದೆ ಆಗಿದ್ದೇನು?