Women Rights : ಪ್ರತಿಯೊಬ್ಬ ಮಹಿಳೆಗೂ ತಿಳಿದಿರಬೇಕು ಈ ಕಾನೂನು

ಭಾರತದಲ್ಲಿ ದೌರ್ಜನ್ಯಕ್ಕೊಳಗಾಗ್ತಿರುವ ಮಹಿಳೆಯರ ಸಂಖ್ಯೆ ಕಡಿಮೆಯೇನಿಲ್ಲ. ಬರೀ ಕೌಟುಂಬಿಕ ದೌರ್ಜನ್ಯ ಮಾತ್ರವಲ್ಲ ವೃತ್ತಿಯಲ್ಲಿ ಉನ್ನತ ಸ್ಥಾನ,ರಜೆ ಸೇರಿದಂತೆ ಅನೇಕ ವಿಷ್ಯಗಳಲ್ಲಿ ಮಹಿಳೆ ಮೇಲೆ ದೌರ್ಜನ್ಯ ನಡೆಯುತ್ತಿದೆ. ಇದ್ರ ವಿರುದ್ಧ ಹೋರಾಟ ನಡೆಸಲು ತನಗಿರುವ ಹಕ್ಕುಗಳನ್ನು ಮಹಿಳೆ ತಿಳಿದಿರಬೇಕಾಗುತ್ತದೆ. 
 

International Womens Day Rights That Every Woman Should Know

ಪ್ರತಿ ವರ್ಷ ಮಾರ್ಚ್ 8ರಂದು ಮಹಿಳಾ ದಿನ (Womens Day)ವನ್ನು ಆಚರಿಸಲಾಗುತ್ತದೆ. ಮಹಿಳೆ (Women)ಯರಿಗೆ ಮೀಸಲಾದ ಈ ದಿನವನ್ನು ಆಚರಿಸುವ ಮುಖ್ಯ ಉದ್ದೇಶವೆಂದರೆ ಅವರ ಹಕ್ಕು (Right)ಗಳ ಬಗ್ಗೆ ಅವರಿಗೆ ಅರಿವು ಮೂಡಿಸುವುದು. ಇಂದು ಪ್ರಪಂಚ (World)ದಾದ್ಯಂತ ಮಹಿಳೆಯರು ಪುರುಷರಿಗೆ ಸರಿಸಮಾನವಾಗಿ ಕೆಲಸ ಮಾಡ್ತಿದ್ದಾರೆ. ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯ ಹೆಜ್ಜೆ ಗುರುತಿದೆ. ಬೇರೆ ದೇಶಗಳಂತೆ ಭಾರತದಲ್ಲಿಯೂ ಮಹಿಳೆಯರಿಗೆ ಅನೇಕ ಹಕ್ಕುಗಳನ್ನು ನೀಡಲಾಗಿದೆ. ಮಹಿಳೆಯರಿಗಾಗಿ ಸಾಕಷ್ಟು ಕಾನೂನುಗಳಿವೆ. ಆದ್ರೆ ಮಹಿಳೆ ಎಷ್ಟೇ ಓದಿದ್ದರೂ, ಎಷ್ಟೇ ಮುಂದುವರೆದಿದ್ದರೂ ಕಾನೂನು,ಹಕ್ಕುಗಳ ಬಗ್ಗೆ ಸರಿಯಾಗಿ ತಿಳಿದಿಲ್ಲ. ಅನೇಕ ಮಹಿಳೆಯರಿಗೆ ಈ ಹಕ್ಕುಗಳ ಬಗ್ಗೆ ಸಂಪೂರ್ಣ ಅರಿವಿಲ್ಲ. ಮಹಿಳಾ ದಿನದ ವಿಶೇಷ ಸಂದರ್ಭದಲ್ಲಿ  ಮಹಿಳೆಯರು ತಮಗಿರುವ ಹಕ್ಕುಗಳ ಬಗ್ಗೆ ತಿಳಿಯಬೇಕಿದೆ. 

ಮಹಿಳೆಯರಿಗಿದೆ ಈ ಎಲ್ಲ ಹಕ್ಕು

ಸಮಾನ ವೇತನ : ಪುರುಷರಂತೆ ಮಹಿಳೆಯರೂ ಸಹ ಕೆಲಸದ ಸ್ಥಳದಲ್ಲಿ ಸಮಾನ ವೇತನ ಪಡೆಯುವ ಎಲ್ಲಾ ಹಕ್ಕುಗಳನ್ನು ಹೊಂದಿದ್ದಾರೆ. ಭಾರತೀಯ ಕಾರ್ಮಿಕ ಕಾನೂನಿನ ಪ್ರಕಾರ, ಯಾವುದೇ ಸ್ಥಳದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ವೇತನದಲ್ಲಿ ಲಿಂಗದ ಆಧಾರದ ಮೇಲೆ ಯಾವುದೇ ತಾರತಮ್ಯ ಮಾಡುವಂತಿಲ್ಲ. ತಾರತಮ್ಯವಾದಲ್ಲಿ ಮಹಿಳೆ ಇದ್ರ ವಿರುದ್ಧ ಕೋರ್ಟ್ ಮೊರೆ ಹೋಗಬಹುದು.

ಕೌಟುಂಬಿಕ ಹಿಂಸೆಯಿಂದ ರಕ್ಷಣೆ : ಮಹಿಳೆಯರ ಮೇಲಿನ ದೌರ್ಜನ್ಯ ತಡೆಯುವುದು ಈ ಹಕ್ಕಿನ ಉದ್ದೇಶ. ಇದರ ಪ್ರಕಾರ, ಮಹಿಳೆಯ ಮೇಲೆ ಆಕೆಯ ಮನೆಯಲ್ಲಿ ಅಥವಾ ಅತ್ತೆಯ ಮನೆಯಲ್ಲಿ ಯಾವುದೇ ದೌರ್ಜನ್ಯ ನಡೆದರೆ, ಅದರ ವಿರುದ್ಧ ದೂರು ಅಥವಾ ಪ್ರಕರಣ ದಾಖಲಿಸಲು ಸಂಪೂರ್ಣ ಹಕ್ಕಿದೆ. ಅನೇಕರು ಮರ್ಯಾದೆಗೆ ಅಂಜಿ ದೂರು ದಾಖಲಿಸುವುದಿಲ್ಲ. ಆದ್ರೆ ದೂರುದಾರರ ಹೆಸರನ್ನು ಗೌಪ್ಯವಾಗಿರುವ ಕಾರಣ ನೀವು ಧೈರ್ಯವಾಗಿ ದೂರು ಸಲ್ಲಿಸಬಹುದು.

ಮಾತೃತ್ವದ ಹಕ್ಕು : ಮಹಿಳೆ ಗರ್ಭಿಣಿಯಾದರೆ 26 ವಾರಗಳ ಕಾಲ ರಜೆ ತೆಗೆದುಕೊಳ್ಳುವ ಎಲ್ಲಾ ಹಕ್ಕುಗಳನ್ನು ಹೊಂದಿದ್ದಾಳೆ.  ಈ ಅವಧಿಯಲ್ಲಿ ಮಹಿಳಾ ಉದ್ಯೋಗಿಯ ವೇತನದಲ್ಲಿ ಯಾವುದೇ ಕಡಿತ ಮಾಡುವಂತಿಲ್ಲ. ಜೊತೆಗೆ ಅವರು ಮತ್ತೆ ಕೆಲಸ ಮಾಡಬಹುದು.

ರಾತ್ರಿ ಬಂಧನದ ಹಕ್ಕು : ಈ ಕಾನೂನಿನ ಪ್ರಕಾರ, ಯಾವುದೇ ಪೊಲೀಸ್ ಅಧಿಕಾರಿ ಸೂರ್ಯಾಸ್ತದ ನಂತರ ಅಂದರೆ ರಾತ್ರಿ  ಮಹಿಳೆಯರನ್ನು ಬಂಧಿಸುವಂತಿಲ್ಲ. ಮಹಿಳೆ ಯಾವುದೇ ಕಾನೂನನ್ನು ಉಲ್ಲಂಘಿಸಿದರೂ  ಪೊಲೀಸರು ಬೆಳಿಗಿನವರೆಗೆ ಕಾಯಬೇಕಾಗುತ್ತದೆ.

ಕೆಲಸದ ಸ್ಥಳದಲ್ಲಿ ಕಿರುಕುಳ : ಕೆಲಸದ ಸ್ಥಳದಲ್ಲಿ ಮಹಿಳಾ ಕಾರ್ಮಿಕರು ಲೈಂಗಿಕ ಕಿರುಕುಳಕ್ಕೆ ಬಲಿಯಾಗಿದ್ದರೆ, ಅವರು ಅದರ ವಿರುದ್ಧ ದೂರು ದಾಖಲಿಸಬಹುದು. ಅವರು ತಮಗಾದ ಅನ್ಯಾಯಕ್ಕೆ ಸೇಡು ತೀರಿಸಿಕೊಳ್ಳಬಹುದು. 

ಹೆಣ್ಣು ಭ್ರೂಣ ಹತ್ಯೆ ವಿರುದ್ಧ ಹಕ್ಕು:  ಹೆಣ್ಣು ಭ್ರೂಣ ಹತ್ಯೆ ವಿರುದ್ಧ ಭಾರತದಲ್ಲಿ ಕಟ್ಟುನಿಟ್ಟಿನ ಕಾನೂನಿದೆ. ಹೆಣ್ಣು ಭ್ರೂಣ ಪರೀಕ್ಷೆ ಹಾಗೂ ಹತ್ಯೆ ಎರಡರ ವಿರುದ್ಧವೂ ದೂರು ಸಲ್ಲಿಸಬಹುದು. ಅಪರಾಧಿಗಳಿಗೆ ಇದ್ರಡಿ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ.   

International Women's Day 2022: ಮಹಿಳಾ ದಿನಾಚರಣೆಯನ್ನು ಈ ರೀತಿ ವಿಶೇಷವಾಗಿ ಆಚರಿಸಿ

ಉಚಿತ ಕಾನೂನು ನೆರವಿನ ಹಕ್ಕು: ಪ್ರತಿಯೊಬ್ಬ ಭಾರತೀಯ ಮಹಿಳೆಯರು ಇದನ್ನು ತಿಳಿಯುವ ಅವಶ್ಯಕತೆಯಿದೆ. ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಉಚಿತ ಕಾನೂನು ನೆರವು ಸಿಗಲಿದೆ. ಕಾನೂನು ಸೇವೆಗಳ ಪ್ರಾಧಿಕಾರಗಳ ಕಾಯಿದೆಯಡಿಯಲ್ಲಿ ಉಚಿತ ಕಾನೂನು ನೆರವು ಪಡೆಯುವ ಹಕ್ಕನ್ನು ಹೊಂದಿದ್ದಾರೆ. 

ಘನತೆ ಮತ್ತು ಸಭ್ಯತೆಯ ಹಕ್ಕು: ಮಹಿಳಾ ಆರೋಪಿಗಳಿಗೂ ವಿಶೇಷ ಕಾನೂನಿದೆ. ಅವರ ಸಭ್ಯತೆಗೆ ಹಾಗೂ ಘನತೆಗೆ ಧಕ್ಕೆ ತರುವ ಕೆಲಸ ಮಾಡಬಾರದು. ಯಾವುದೇ ವೈದ್ಯಕೀಯ ಪರೀಕ್ಷೆ ನಡೆಸುವ ವೇಳೆ ಮಹಿಳಾ ಪೊಲೀಸರ ಉಪಸ್ಥಿತಿ ಕಡ್ಡಾಯವಾಗಿರುತ್ತದೆ.

INTERNATIONAL WOMENS DAY: ಸ್ತ್ರೀ ಎಂದರೆ ಅಷ್ಟೇ ಸಾಕೆ

ಉತ್ತರಾಧಿಕಾರದಲ್ಲಿ ಸಮಾನ ಪಾಲು : ಹಿಂದೂ ಉತ್ತರಾಧಿಕಾರ ಕಾಯಿದೆಯು ಮಹಿಳೆಯರು ಮತ್ತು ಪುರುಷರಿಗೆ ಉತ್ತರಾಧಿಕಾರದಲ್ಲಿ ಸಮಾನ ಪಾಲನ್ನು ನೀಡುತ್ತದೆ.  

Latest Videos
Follow Us:
Download App:
  • android
  • ios