Latest Videos

ಒಂದಲ್ಲ..ಎರಡಲ್ಲ..ಬರೋಬ್ಬರಿ ನಾಲ್ಕು ಗಂಡು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ!

By Vinutha PerlaFirst Published Nov 25, 2023, 10:56 AM IST
Highlights

ಗರ್ಭಿಣಿ ಅವಳಿ ಮಕ್ಕಳಿಗೆ ಜನ್ಮ ನೀಡುವ ಘಟನೆಗಳು ನಮ್ಮ ಸುತ್ತಮುತ್ತ ಆಗಾಗ ನಡೆಯುತ್ತಿರುತ್ತದೆ. ಆದರೆ ಒಂದೇ ಬಾರಿಗೆ ನಾಲ್ಕು ಮಕ್ಕಳು ಹುಟ್ಟುವುದು ತೀರಾ ಅಪರೂಪ. ಹಾಗೆ ಗರ್ಭಿಣಿಯೊಬ್ಬರು ಒಂದೇ ಹೆರಿಗೆಯಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿರೋ ಘಟನೆ ಬಿಹಾರದಲ್ಲಿ ನಡೆದಿದೆ. 

ಬಿಹಾರ: ಗರ್ಭಿಣಿ ಅವಳಿ ಮಕ್ಕಳಿಗೆ ಜನ್ಮ ನೀಡುವ ಘಟನೆಗಳು ನಮ್ಮ ಸುತ್ತಮುತ್ತ ಆಗಾಗ ನಡೆಯುತ್ತಿರುತ್ತದೆ. ಆದರೆ ಒಂದೇ ಬಾರಿಗೆ ನಾಲ್ಕು ಮಕ್ಕಳು ಹುಟ್ಟುವುದು ತೀರಾ ಅಪರೂಪ. ಹಾಗೆ ಗರ್ಭಿಣಿಯೊಬ್ಬರು ಒಂದೇ ಹೆರಿಗೆಯಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿರೋ ಘಟನೆ ಬಿಹಾರದಲ್ಲಿ ನಡೆದಿದೆ. ಇಲ್ಲಿ  ಬಕ್ಸರ್ ಜಿಲ್ಲೆಯ ಚೋಟ್ಕಿ ನೈನಿಜೋರ್ ಗ್ರಾಮದ ಭರತ್ ಯಾದವ್ ಅವರ ಪತ್ನಿ ಜ್ಞಾನತಿ ದೇವಿ (32) ಏಕಕಾಲದಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ. 

ಹೆರಿಗೆ ನೋವು ಕಾಣಿಸಿಕೊಂಡ ನಂತರ, ಜ್ಞಾನತಿ ದೇವಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅವರು ಎಲ್ಲಾ ನಾಲ್ಕು ಮಕ್ಕಳಿಗೆ ಜನ್ಮ ನೀಡಿದರು. ಜ್ಞಾನತಿ ದೇವಿಗೆ ಶಸ್ತ್ರಚಿಕಿತ್ಸೆ ನಡೆಸಿದ ಸ್ತ್ರೀರೋಗ ತಜ್ಞ ಡಾ.ಗುಂಜನ್ ಸಿಂಗ್ ಈ ಬಗ್ಗೆ ಮಾತನಾಡಿ ಹಲವು ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ.

Mama Uganda : 44 ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ ಪರಿಚಯಿಸಿದ ಡಾ.ಬ್ರೋ

'ಮೊದಲು ಜ್ಞಾನತಿದೇವಿಯ ಹೊಟ್ಟೆಯಲ್ಲಿ ನಾಲ್ವರು ಮಕ್ಕಳಿರುವುದು ನಮಗೆ ಗೊತ್ತಿರಲಿಲ್ಲ. ನಂತರ ಮಹಿಳೆ ಹೊಟ್ಟೆಯಲ್ಲಿ ಒಂದಲ್ಲ ನಾಲ್ಕು ಮಕ್ಕಳನ್ನು ಹೊತ್ತಿರುವುದು ಪತ್ತೆಯಾಗಿದೆ. ಮೇಲಾಗಿ ನಾಲ್ವರು ಗಂಡು ಮಕ್ಕಳೆಂದು ನಾವು ಕಂಡುಕೊಂಡೆವು. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ನಾಲ್ಕು ಶಿಶುಗಳು ಮತ್ತು ತಾಯಿ ಸಂಪೂರ್ಣ ಆರೋಗ್ಯವಾಗಿದ್ದಾರೆ ಎಂದು ಡಾ.ಗುಂಜನ್ ಸಿಂಗ್ ಸಂತಸ ವ್ಯಕ್ತಪಡಿಸಿದ್ದಾರೆ

ಈ ಆಸ್ಪತ್ರೆಯಲ್ಲಿ ಒಂದೇ ಬಾರಿಗೆ ನಾಲ್ಕು ಶಿಶುಗಳು ಜನಿಸಿರುವುದು ಇದೇ ಮೊದಲು ಎಂದು ತಿಳಿದುಬಂದಿದೆ. ಒಂದೇ ಹೆರಿಗೆಯಲ್ಲಿ ನಾಲ್ಕು ಮಕ್ಕಳು ಜನಿಸಿರುವ ಬಗ್ಗೆ ಆಸ್ಪತ್ರೆ ಅಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಅಬ್ಬಬ್ಬಾ..ಏಕಕಾಲಕ್ಕೆ ಐದು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ!

ನಾಲ್ಕು ಮಕ್ಕಳ ಜನನದಿಂದ ಜ್ಞಾನತಿ ದೇವಿ ಕುಟುಂಬವು ಆರು ಜನರ ಕುಟುಂಬವಾಗಿದೆ. ನಾಲ್ಕು ಮಕ್ಕಳ ಜನನಕ್ಕೂ ಮೊದಲು, ದಂಪತಿಗೆ ಈಗಾಗಲೇ ಮಗಳು ಮತ್ತು ಮಗನಿದ್ದಾರೆ. ಈ ಬಗ್ಗೆ ಮಾತನಾಡಿರುವ ಭರತ್‌ ಯಾದವ್‌, 'ತಾಯಿ ಮತ್ತು ಮಕ್ಕಳು ಇಬ್ಬರೂ ಸುರಕ್ಷಿತವಾಗಿರುವುದು ಅತ್ಯಂತ ಸಂತೋಷವಾಗಿದೆ. ಸುರಕ್ಷಿತ ಹೆರಿಗೆಯ ನಂತರ, ನಾಲ್ಕು ನವಜಾತ ಶಿಶುಗಳನ್ನು ಒಂದೇ ಸಮಯದಲ್ಲಿ ನೋಡಿಕೊಳ್ಳುವುದು ಸ್ಪಲ್ಪ ಮಟ್ಟಿಗೆ ಕಷ್ಟವಾಗುತ್ತಿದೆ. ನಾಲ್ಕು ಮಕ್ಕಳು ಅಳುತ್ತಿದ್ದರೆ ಅವರಿಗೆ ಹಾಲುಣಿಸುವುದು ತುಂಬಾ ಕಷ್ಟ. ಆದರೆ, ಕ್ರಮೇಣ ಪರಿಸ್ಥಿತಿ ಸುಧಾರಿಸುತ್ತಿದೆ. ಎಷ್ಟೇ ಕಷ್ಟ ಬಂದರೂ  ಹೆಂಡತಿ ಮಕ್ಕಳನ್ನು ನೆಮ್ಮದಿಯಿಂದ ಸಾಕುತ್ತೇವೆ' ಎಂದಿದ್ದಾರೆ.

click me!