ಸೆಕ್ಸ್ ಟಾಯ್ಸ್ ಬಳಕೆ ಬಗ್ಗೆ ಜನರು ಬಹಿರಂಗವಾಗಿ ಮಾತನಾಡೋದಿಲ್ಲ. ಇದೇ ಕಾರಣಕ್ಕೆ ಅದ್ರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗೋದಿಲ್ಲ. ಲೈಂಗಿಕ ಸುಖಕ್ಕೆ ಸೆಕ್ಸ್ ಆಟಿಕೆ ಬಳಸುವ ಜನರು ಮುಂದೆ ಸಮಸ್ಯೆ ಎದುರಿಸುವ ಬದಲು ಆರಂಭದಲ್ಲೇ ಕೆಲ ಟಿಪ್ಸ್ ಫಾಲೋ ಮಾಡ್ಬೇಕು.
ಇತ್ತೀಚಿನ ದಿನಗಳಲ್ಲಿ ಸೆಕ್ಸ್ ಟಾಯ್ಸ್ ಬಳಕೆ ಸಾಮಾನ್ಯವಾಗಿದೆ. ಅನೇಕರು ತಮ್ಮ ಲೈಂಗಿಕ ಸಂತೋಷಕ್ಕೆ ಸೆಕ್ಸ್ ಟಾಯ್ಸ್ ಬಳಕೆ ಮಾಡ್ತಿದ್ದಾರೆ. ಅದನ್ನು ಬಳಸೋದು ಕೆಟ್ಟ ವಿಷ್ಯವಲ್ಲ. ಇದನ್ನು ಸರಿಯಾಗಿ ಬಳಸುವ ವಿಧಾನ ತಿಳಿದಿರಬೇಕು. ಸೆಕ್ಸ್ ಆಟಿಕೆಯನ್ನು ತಪ್ಪಾಗಿ ಬಳಕೆ ಮಾಡಿದ್ರೆ ಆರೋಗ್ಯ ಸಮಸ್ಯೆ ಮಹಿಳೆಯನ್ನು ಕಾಡುವ ಸಾಧ್ಯತೆ ಇರುತ್ತದೆ. ಲೈಂಗಿಕ ಆಟಿಕೆ ಬಳಸುವ ಮುನ್ನ ನೈರ್ಮಲ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಕೊಳಕು ಸೆಕ್ಸ್ ಟಾಯ್ಸ್ ಯೋನಿ ಸೋಂಕು, ಯುಟಿಐ, ದದ್ದುಗಳು ಮತ್ತು ಇತರ ಸಮಸ್ಯೆಗಳಿಗೆ ಕಾರಣವಾಗುವ ಸಾಧ್ಯತೆ ಇರುತ್ತದೆ. ನಾವಿಂದು ಸೆಕ್ಸ್ ಟಾಯ್ಸ್ ಬಳಸುವ ಮುನ್ನ ನಿಮಗೆ ಏನು ತಿಳಿದಿರಬೇಕು ಎಂಬುದನ್ನು ಹೇಳ್ತೇವೆ.
ಸೆಕ್ಸ್ ಟಾಯ್ಸ್ (Sex Toys) ಬಳಸಲು ಸುರಕ್ಷಿತ ಮಾರ್ಗ :
ಉತ್ಪನ್ನದ ಬಗ್ಗೆ ಗಮನವಿರಲಿ : ನೀವು ಖರೀದಿ ಮಾಡಿದ ಸೆಕ್ಸ್ ಟಾಯ್ಸ್ ಗಳನ್ನು ಹೇಗೆ ಸ್ವಚ್ಛಗೊಳಿಸಬೇಕು ಎನ್ನುವ ಬಗ್ಗೆ ನಿಮಗೆ ಜ್ಞಾನವಿರಬೇಕು. ಸಿಲಿಕೋನ್, ಗಾಜು ಮತ್ತು ಸ್ಟೇನ್‌ಲೆಸ್ ಸ್ಟೀಲ್‌ನಿಂದ ಮಾಡಲಾದ ಹೆಚ್ಚಿನ ಲೈಂಗಿಕ ಆಟಿಕೆಗಳನ್ನು ಸೌಮ್ಯವಾದ ಸಾಬೂನು (soap) ಮತ್ತು ನೀರಿನಿಂದ ಸ್ವಚ್ಛಗೊಳಿಸಬಹುದು. ಹಾಗಂತ ಎಲ್ಲ ಸಾಬೂನು ಅಥವಾ ಶಾಂಪೂ, ಸೆಕ್ಸ್ ಟಾಯ್ಸ್ ವಾಶ್ ಮಾಡಲು ಯೋಗ್ಯವಾಗಿರುವುದಿಲ್ಲ. ಕೆಲವೊಂದು ಸೋಪ್ ಹಾಗೂ ವಾಶಿಂಗ್ ಸೋಪ್ ಗಳು ಕಿರಿಕಿರಿಯುಂಟುಮಾಡುತ್ತವೆ. ಇದ್ರಿಂದ ನಿಮ್ಮ ಯೋನಿಯಲ್ಲಿ ಸೋಂಕು (Infection) ಕಾಣಿಸಿಕೊಳ್ಳುವ ಅಪಾಯವಿರುತ್ತದೆ. ಇದು ನಿಮ್ಮ ಯೋನಿಯ ಪಿಎಚ್ ಮಟ್ಟದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.
ಆಹಾರ ಕ್ರಮದಿಂದಲೂ ದಾಂಪತ್ಯ ಜೀವನದಲ್ಲಿ ಮೂಡುತ್ತೆ ಬಿರುಕು!
ಸೆಕ್ಸ್ ಟಾಯ್ಸ್ ಶುಷ್ಕವಾಗಿರಲಿ : ಲೈಂಗಿಕ ಆಟಿಕೆಯನ್ನು ಸ್ವಚ್ಛಗೊಳಿಸಿದ ನಂತ್ರ ಅದ್ರಲ್ಲಿ ತೇವ ಇರದಂತೆ ನೋಡಿಕೊಳ್ಳಬೇಕು. ನೀವು ಅದನ್ನು ಶುದ್ಧ ಬಟ್ಟೆ ಅಥವಾ ಅಂಟಿಕೊಳ್ಳದ ಪೇಪರ್ ನಿಂದ ಒರೆಸಬೇಕು. ಲೈಂಗಿಕ ಆಟಿಕೆಗೆ ಅಂಟಿಕೊಳ್ಳುವ ಯಾವುದೇ ಬಟ್ಟೆ ಅಥವಾ ವಸ್ತುವನ್ನು ಕ್ಲೀನಿಂಗ್ ಗೆ ಬಳಸಬೇಡಿ. ಅದು ಟಾಯ್ಸ್ ಗೆ ಅಂಟಿಕೊಂಡು ನಿಮ್ಮ ಯೋನಿ ಸೇರುವ ಕಾರಣ ಅದ್ರಿಂದ ಕಿರಿಕಿರಿ ಶುರುವಾಗುತ್ತದೆ. ತೇವವಾಗಿರುವ ಸೆಕ್ಸ್ ಟಾಯ್ಸ್ ನಲ್ಲಿ ಬ್ಯಾಕ್ಟೀರಿಯಾ ಬೆಳೆಯುವ ಅಪಾಯವಿದೆ. ಹಾಗಾಗಿ ನೀವು ಅದನ್ನು ಒಣಗಿಸಿ ಬಳಸಬೇಕು ಅಥವಾ ಇಡಬೇಕು. ನೀವು ಗಾಳಿಯಲ್ಲೂ ಇದನ್ನು ಒಣಗಿಸಬಹುದು.
Intimate health Tips: ಯೋನಿ ಆರೋಗ್ಯಕ್ಕೆ ವಜೈನಲ್ ಶಾಂಪೂ ಎಷ್ಟು ಸೇಫ್?
ಬ್ಯಾಟರಿ ಉತ್ಪನ್ನಗಳ ಬಳಕೆ ಹೀಗಿರಲಿ : ಸೆಕ್ಸ್ ಟಾಯ್ಸ್ ವೈಬ್ರೇಟರ್ ಹೊಂದಿರುತ್ತವೆ. ವೈಬ್ರೇಟರ್ ಟಾಯ್ಸ್ ಬ್ಯಾಟರಿ ಅಥವಾ ವಿದ್ಯುತ್ ನಿಂದ ನಡೆಯುತ್ತವೆ. ನೀವು ಇದನ್ನು ನೀರಿನಲ್ಲಿ ಮುಳುಗಿಸಿಟ್ಟು ಸ್ವಚ್ಛಗೊಳಿಸಿದ್ರೆ ಟಾಯ್ಸ್ ಕೆಲಸ ಮಾಡೋದಿಲ್ಲ. ಹಾಗಾಗಿ ಅದನ್ನು ಒದ್ದೆ ಬಟ್ಟೆಯಲ್ಲಿ ಒರೆಸಬೇಕು. ಬ್ಯಾಟರಿಗೆ ನೀರು ಹೋಗದಂತೆ ನೋಡಿಕೊಳ್ಳಬೇಕು.
ಸೆಕ್ಸ್ ಟಾಯ್ಸ್ ಸಂಗ್ರಹ ಹೇಗೆ? : ಸೆಕ್ಸ್ ಟಾಯ್ಸ್ ಖರೀದಿ ಮಾಡಿ, ಅದನ್ನು ಬಳಸಿ ಹಾಗೆ ಇಡುವುದು ಸರಿಯಲ್ಲ. ಪ್ರತಿ ಬಾರಿ ಸೆಕ್ಸ್ ಗೆ ಮುನ್ನ ಹಾಗೂ ನಂತ್ರ ಸೆಕ್ಸ್ ಟಾಯ್ಸ್ ಗಳನ್ನು ಸ್ವಚ್ಛವಾಗಿ ತೊಳೆದು, ಒಣಗಿಸಿ ಇಡಬೇಕು. ಬೆಡ್ ಪಕ್ಕದಲ್ಲಿ ಅಥವಾ ಕಪಾಟಿನಲ್ಲಿ ಇದನ್ನು ಹಾಗೆ ಇಡಬೇಡಿ. ಇದಕ್ಕೆ ಧೂಳು ಅಂಟಿಕೊಳ್ಳುವ ಅಪಾಯವಿರುತ್ತದೆ. ನೀವು ಡಸ್ಟ್ ಬ್ಯಾಗ್ ನಲ್ಲಿ ಇಡಬೇಕು. ಕಂಪನಿಗಳು ನೀಡುವ ಸ್ಯಾಟಿನ್ ಬ್ಯಾಗ್ ಗಳಲ್ಲಿಯೂ ಇಡಬಹುದು. ಸೂರ್ಯನ ಕಿರಣದ ನೇರ ಸಂಪರ್ಕಕ್ಕೆ ಬರುವ ಜಾಗದಲ್ಲಿ ನೀವು ಸೆಕ್ಸ್ ಟಾಯ್ಸ್ ಇಡಬೇಡಿ.
ಕಾಂಡೋಮ್ ಬಳಕೆ (Condome Usage) ಮರೆಯಬೇಡಿ : ನೀವು ಸಂಗಾತಿ ಜೊತೆ ಶಾರೀರಿಕ ಸಂಬಂಧ ಬೆಳೆಸುವ ಸಮಯದಲ್ಲಿ ಮಾತ್ರವಲ್ಲ ಸೆಕ್ಸ್ ಟಾಯ್ಸ್ ಬಳಸುವ ವೇಳೆಯೂ ಕಾಂಡೋಮ್ ಬಳಕೆಗೆ ಆದ್ಯತೆ ನೀಡಿ. ನೀವು ಸೆಕ್ಸ್ ಟಾಯ್ಸ್ ಗಳನ್ನು ಎಷ್ಟೇ ಸ್ವಚ್ಛಗೊಳಿಸಿದ್ರೂ ಸೋಂಕಿನ ಅಪಾಯವಿರುತ್ತದೆ.