Ukraine Crisis: ನಿದ್ದೆ ಬರಲ್ಲ, ಊಟ ಸೇರಲ್ಲ, ಆತಂಕವಾಗ್ತಾ ಇದೆ: ಕನ್ನಡಿಗ ವಿದ್ಯಾರ್ಥಿಗಳು

Feb 26, 2022, 3:03 PM IST

'ದಾಳಿಯ ಸದ್ದುಗಳು ಕೇಳಿಸುತ್ತಿವೆ, ಇಲ್ಲಿರೋಕೆ ಭಯ ಆಗ್ತಾ ಇದೆ. ರಾತ್ರಿ ನಿದ್ದೆ ಬರಲ್ಲ, ಊಟ ಸೇರಲ್ಲ, ಆತಂಕದಲ್ಲೇ ಕಳೆಯುತ್ತಿದ್ದೇವೆ' ಎಂದು ಬಳ್ಳಾರಿಯ ವಿದ್ಯಾರ್ಥಿ ನವೀನ್ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.

Ukraine Crisis: ರಷ್ಯಾ ಸುಳ್ಳು ಸುದ್ದಿಗೆ ಯಾರೂ ಹೆದರಬೇಡಿ: ಜನತೆಗೆ ಧೈರ್ಯ ತುಂಬಿದ ಝೆಲೆನ್‌ಸ್ಕೀ

ವಾರಗಳ ಹಿಂದೆಯೇ ಯುದ್ಧದ ಮುನ್ಸೂಚನೆ ಇದ್ದು, ಭಾರತಕ್ಕೆ ಹಿಂದಿರುಗುವಂತೆ ಸಲಹೆ ಬಂದರೂ ತಮ್ಮ ಭವಿಷ್ಯದ ದೃಷ್ಟಿಯಿಂದ ಹಲವು ಕನ್ನಡಿಗ ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿಯೇ ಉಳಿದುಕೊಂಡು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಉಕ್ರೇನ್‌ನಲ್ಲಿ ಸಿಲುಕಿರುವ ಕನ್ನಡಿಗರ ಪೈಕಿ ಬಹುತೇಕ ವೈದ್ಯಕೀಯ ವಿದ್ಯಾರ್ಥಿಗಳು. ಬೆರಳೆಣಿಕೆಯಷ್ಟುವಿದ್ಯಾರ್ಥಿಗಳು ಮಾತ್ರ ಅಲ್ಲಿಂದ ಹೊರಟು ಕರ್ನಾಟಕ ಸೇರಿದ್ದಾರೆ. ಉಕ್ರೇನ್‌ನ ತಾತ್ಕಾಲಿಕ ನಿವಾಸಿ ಕಾರ್ಡ್‌ ಲಭ್ಯವಾಗದ ವಿದ್ಯಾರ್ಥಿಗಳು, ವಿವಿಗಳಿಂದ ಮೂಲ ದಾಖಲಾತಿ ಸಿಗದ ವಿದ್ಯಾರ್ಥಿಗಳು, ಜತೆಗೆ ಆನ್‌ಲೈನ್‌ ಪಾಠ ಇರಲ್ಲ ಎಂದು ತಿಳಿದ ಬಹುತೇಕ ವಿದ್ಯಾರ್ಥಿಗಳು ಅಲ್ಲಿಯೇ ಉಳಿದುಕೊಳ್ಳುವ ನಿರ್ಧರಿಸಿದ್ದು, ಇದೀಗ ಸಂಕಷ್ಟಕ್ಕೆ ಸಿಲುಕಿಸಿದೆ.