ಅಪ್ಪ ಅಮ್ಮ ಇಂಡಸ್ಟ್ರಿಯಲ್ಲಿ ಇದ್ದರೂ ನಾನು ಅವಕಾಶಗಳನ್ನು ಗಿಟ್ಟಿಸಿಕೊಳ್ಳಬೇಕಿತ್ತು: ಸಿಹಿ ಕಹಿ ಚಂದ್ರು ಪುತ್ರಿ ಹೇಳಿಕೆ ವೈರಲ್!

By Vaishnavi Chandrashekar  |  First Published Oct 3, 2024, 4:06 PM IST

ಚಿತ್ರರಂಗದಲ್ಲಿ ಎದುರಿಸಿದ ಚಾಲೆಂಜ್‌ಗಳನ್ನು ಹಂಚಿಕೊಂಡ ಹಿತಾ ಚಂದ್ರಶೇಖರ್. ಮೂರು ಸಾವಿರ ಅಡಿಷನ್ ಕೊಟ್ಟ ಸುಂದರಿ....


ಕನ್ನಡ ಚಿತ್ರರಂಗ ಹಿರಿಯ ಕಲಾವಿದ ಸಿಹಿ ಕಹಿ ಚಂದ್ರು ಮತ್ತು ಪತ್ನಿ ನಟಿ ಗೀತಾ ಅವರ ಮುದ್ದಿನ ಮಗಳು ಹಿತಾ ಚಂದ್ರಶೇಖರ್ ಸುಮಾರು 10 ವರ್ಷಗಳಿಂದ ಬಣ್ಣದ ಪ್ರಪಂಚದಲ್ಲಿ ಮಿಂಚುತ್ತಿದ್ದಾರೆ. ಒಂದು ಸಲ ಸಿನಿಮಾ ಒಂದು ಸಲ ಜಾಹೀರಾತು ಮತ್ತೊಂದು ಸಲ ವೆಬ್‌ ಸೀರಿಸ್‌...ಹೀಗೆ ನಾನ ಕ್ಷೇತ್ರಗಳನ್ನು ಎಕ್ಸ್‌ಪ್ಲೋರ್ ಮಾಡುತ್ತಿರುವ ನಟಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳಲು ಎಷ್ಟು ಕಷ್ಟ ಪಟ್ಟರು? ಸಿನಿಮಾ ಕ್ಷೇತ್ರದಲ್ಲಿ ಇರುವ ನೆಪೋಟಿಸಂ ನಿಜವೇ ಎಂದು ಉತ್ತರಿಸಿದ್ದಾರೆ.

ತಂದೆ ತಾಯಿ ಬಿಗ್ ಸಪೋರ್ಟ್:

Tap to resize

Latest Videos

undefined

'ನನ್ನ ತಂದೆ ತಾಯಿ ಒಂದೇ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿದ್ದರೂ ನಾನು ಅವಕಾಶಗಳಿಗೆ ಕಷ್ಟ ಪಡಬೇಕಿತ್ತು. ಸಪೋರ್ಟ್ ಆಗಿ ನಿಂತುಕೊಳ್ಳುತ್ತಿದ್ದರು ಆದರೆ ನನ್ನ ಮಗಳಿಗೆ ಅವಕಾಶ ನೀಡಿ ಎಂದು ಅವರು ಕೇಳುವಂತೆ ಪರಿಸ್ಥಿತಿ ಬಂದಿಲ್ಲ ನಾನು ಹೇಳಿಲ್ಲ. ನನ್ನ ಹಾದಿಯನ್ನು ನಾನೇ ಸೃಷ್ಟಿ ಮಾಡಿಕೊಳ್ಳಬೇಕು ಎಂದು ಕಷ್ಟ ಪಟ್ಟಿರುವದೆ, ಖಂಡಿತಾ ಕೇಳಿದ್ದರೆ ಯಾರೋ ಸಹಾಯ ಮಾಡುತ್ತಿದ್ದರು ಆದರೆ ಮನಸ್ಸಿಗೆ ಆ ಖುಷಿ ಮತ್ತು ನೆಮ್ಮದಿ ಬೇಕು ಅಂತ ನಾನೇ ಗಿಟ್ಟಿಸಿಕೊಳ್ಳುತ್ತಿದ್ದೆ. ಸಿಹಿ ಕಹಿ ಚಂದ್ರು ಅವರ ಮಗಳು ಹಿತಾ ಅನ್ನೋದು ಜನರಿಗೆ ಗೊತ್ತಿದೆ ಆ ಒಂದು ವಿಚಾರ ಹಿಡಿದುಕೊಂಡು ನಾನು ಜನರನ್ನು ಸಂಪರ್ಕ ಮಾಡಬಹುದು ಆದರೆ ಅವರು ಕೆಲಸ ಕೊಡುತ್ತಾರೆ ಇಲ್ವೋ ಅನ್ನೋದು ನನ್ನ ಸಾಮರ್ಥ್ಯದ ಮೇಲೆ ಬಿಟ್ಟಿದ್ದು. ಇಷ್ಟು ವರ್ಷಗಳಿಂದ ಇಂಡಸ್ಟ್ರಿಯಲ್ಲಿ ಇದ್ದೀನಿ ಜನರಿಗೆ ನನ್ನ ಮುಖ ಪರಿಚಯವಿದೆ ಆದರೂ ಯಾರಾದರೂ ಸಿನಿಮಾ ಮಾಡುತ್ತಿದ್ದರೆ ಅವಕಾಸ ಕೊಡಲು ಆಗುತ್ತಾ ನಾನು ಆಡಿಷನ್ ಮಾಡುತ್ತೀನಿ ಎಂದು ಕೇಳುತ್ತೀನಿ' ಎಂದು ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದಾರೆ.

ಕೂದಲು ಕಲರ್ ಹಾಕಿಸಿ ಎಡವಟ್ಟು ಮಾಡಿಕೊಂಡ ನಟಿ; ಮುಖ ನೋಡಿ ಹೆದರಿಕೊಳ್ಳಬೇಡಿ, ವಿಡಿಯೋ ವೈರಲ್

ಆಡಿಷನ್ ಕಥೆಗಳು:

ಸುಮಾರು ಮೂರು ಸಾವಿರ ಆಡಿಷನ್‌ಗಳನ್ನು ನೀಡಿದ್ದೀನಿ ಆದರೆ ಅಷ್ಟರಲ್ಲಿ ನಾನು 8 ಸಿನಿಮಾಗ, 1 ವೆಬ್‌ ಸೀರಿಸ್‌ ಮತ್ತು 60 ಜಾಹೀರಾತುಗಳಲ್ಲಿ ಮಾಡಿದ್ದೀನಿ. 10 ವರ್ಷಗಳ ಹಿಂದೆ ನನ್ನ ಮೊದಲ ಆಡಿಷನ್ ಕೊಟ್ಟಿದ್ದು, ಈ ಲೆಕ್ಕಾಚಾರ ಹಾಕಿದರೆ 10 ವರ್ಷದಲ್ಲಿ ಮೂರು ಸಾವಿರ ಆಡಿಷನ್ ಕೊಟ್ಟಿದ್ದೀನಿ. ಆರಂಭದಲ್ಲಿ ರಿಜೆಕ್ಟ್ ಮಾಡಿದಾಗ ಸಿಕ್ಕಾಪಟ್ಟೆ ಬೇಸರ ಆಗುತ್ತಿತ್ತು ಏಕೆಂದರೆ ಆಗ ನಾವು ಮುಟ್ಟಿದೆಲ್ಲಾ ಚಿನ್ನ ಆಗಬೇಕು ಅನ್ನೋ ಆಸೆ ಇರುತ್ತದೆ ಆದರೆ ದಿನ ಕಳೆಯುತ್ತಿದ್ದಂತೆ ರಿಜೆಕ್ಟ್ ಆಗಲು ನಾನೇ ಕಾರಣ ಆಗಿರುವುದಿಲ್ಲ ಪಾತ್ರಕ್ಕೆ ಸೂಕ್ತನಾ ಇಲ್ಲಾ ಅನ್ನೋದು ಅರ್ಥ ಆಗಲು ಶುರುವಾಗಿತ್ತು. ಆಡಿಷನ್ ಕೊಡುತ್ತಿದ್ದಂತೆ ನನಗೆ ಧೈರ್ಯ ಶುರುವಾಯ್ತು ಪ್ರತಿ ಆಡಿಷನ್‌ನಲ್ಲಿ ನನ್ನ ನಟನೆಯನ್ನು ಅಭ್ಯಾಸ ಮಾಡುತ್ತಿದ್ದಂತೆ ಇರುತ್ತಿತ್ತು. ಆಡಿಷನ್ ಮಾಡಲು ಅವಕಾಶ ಸಿಕ್ಕಾಗ ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುತ್ತಿದ್ದೆ, ನನಗೆ ಅಂತ ಪಾತ್ರ ಬರೆದಿದ್ದರೆ ಖಂಡಿತಾ ಹುಡುಕಿಕೊಂಡು ಬರಲಿದೆ ಅಂತ ಯೋಚನೆ ಮಾಡುತ್ತಿದ್ದೆ' ಎಂದು ಹಿತಾ ಹೇಳಿದ್ದಾರೆ.

ನನಗೆ ಮಗು ಬೇಡ, ನನ್ನ ನಿರ್ಧಾರವನ್ನು ಅಪ್ಪ-ಅಮ್ಮ ಮತ್ತು ಗಂಡ ಒಪ್ಪಿಕೊಂಡಿದ್ದಾರೆ: ಹಿತಾ ಚಂದ್ರಶೇಖರ್

ಆಕ್ಟಿಂಗ್ ಸಲಹೆ: 

ನಟನೆಯಲ್ಲಿ ಪರ್ಫೆಕ್ಟ್ ಆಗಬೇಕು ಅಂದ್ರೆ ಮೊದಲು ಗಮನಿಸುವುದನ್ನು ಕಲಿಯಬೇಕು, ನಮ್ಮ ಸುತ್ತ ಮುತ್ತ ಇರುವುದನ್ನು ಗಮನಿಸಿ ನೋಡಿ ಕಲಿಯಬೇಕು. ಎರಡನೇ ವಿಚಾರ ಕೇಳಿಸಿಕೊಳ್ಳಬೇಕು, ನಮ್ಮ ಎದುರು ಇರುವ ವ್ಯಕ್ತಿ ಹೇಳುವುದನ್ನು ಕೇಳಿಸಿಕೊಳ್ಳಬೇಕು ಆಗ ನಾವು ಪ್ರತಿಕ್ರಿಯೆ ನೀಡುವುದನ್ನು ಕಲಿಯುತ್ತೀವಿ. ಕಾಲ್ ಕೆಜಿ ಪ್ರೀತಿ ಸಿನಿಮಾ ಚಿತ್ರೀಕರಣದ ವೇಳೆ ಯೋಗರಾಜ್‌ ಭಟ್ರು ಸಲಹೆ ಕೊಟ್ಟರು. ಶೂಟಿಂಗ್ ಮಾಡುವಾಗ ಮುನ್ನ ಹಾರ್ಟ್‌ಬೀಟ್‌ ಎಷ್ಟು ನಾಮರ್ಲ್ ಆಗಿರುತ್ತದೆ ಎಷ್ಟು ಕಾಮ್ ಆಗಿರುತ್ತೀಯಾ ಆಕ್ಷನ್ ಹೇಳಿದ ಮೇಲೆ ಕ್ಯಾಮೆರಾ ಆನ್ ಆದ ಸದ್ದು ಕೇಳಿದಾಗಲೂ ಅಷ್ಟೇ ಕಾಮ್ (Calm) ಆಗಿರಬೇಕು ಎಂದು. ನಟನೆಯಲ್ಲಿ ಉಸಿರಾಟದ ಅಭ್ಯಾಸ ತುಂಬಾ ಮುಖ್ಯವಾಗುತ್ತದೆ ಎಂದು ಮುಖ್ಯವಾದ ಟಿಪ್ಸ್ ನೀಡಿದ್ದಾರೆ ಹಿತಾ. 

click me!