ನೋಕಿಯಾ ಹ್ಯಾಂಡ್‌ಸೆಟ್‌ಗಳಲ್ಲಿ ಬರುತ್ತಿದ್ದ ಸ್ನೇಕ್ ಗೇಮ್ ಅನ್ನು ಹೋಲುವ ಹಾವೊಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈಗ ಎಲ್ಲರ ಕೈಯಲ್ಲೂ ಸ್ಮಾರ್ಟ್‌ಫೋನ್‌ಗಳು ಅದರಲ್ಲಿವೆ ತರಹೇವಾರಿ ವೀಡಿಯೋ ಗೇಮ್‌ಗಳು, ಹೀಗಾಗಿ ಈ ಜನರೇಷನ್‌ನ ಮಕ್ಕಳಿಗೆ ನೋಕಿಯಾ ಸೆಟ್‌ನಲ್ಲಿದ್ದ ಈ ಗೇಮ್ ಬಗ್ಗೆ ಗೊತ್ತಿರಲು ಸಾಧ್ಯವಿಲ್ಲ. ಆದರೆ ನೀವು ಹಳೆ ನೋಕಿಯಾ ಹ್ಯಾಂಡ್ ಸೆಟ್ ಬಳಸಿದವರಗಿದ್ದರೆ ನಿಮಗೆ ಅದರಲ್ಲಿದ್ದ ಏಕೈಕ ಸ್ನೇಕ್ ಗೇಮ್ ಬಗ್ಗೆ ನೆನಪಿರಬಹುದು. ಈ ಗೇಮನ್ನ ನೆನಪಿಸುವ ನಿಜವಾದ ಹಾವೊಂದರ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಹುತೇಕ ನೆಟ್ಟಿಗರು ಈ ರಿಯಲ್ ಸ್ನೇಕ್ ನೋಡಿ ತಮ್ಮ ಹಳೆಯ ನೋಕಿಯಾ ಸೆಟ್‌ನ್ನು ನೆನಪು ಮಾಡಿಕೊಂಡಿದ್ದಾರೆ.
ನೋಕಿಯಾ ಸೆಟ್ ಎಂದರೆ ಅನೇಕರಿಗೆ ನೋಸ್ಟಲಾಜಿಯಾ ಫೀಲ್, ಅಂದಾಜು ಎರಡು ದಶಕಗಳ ಹಿಂದೆ ಮನೆ ಮನದ ಜೀವನಾಡಿಯಾಗಿದ್ದವು ಈ ನೋಕಿಯಾ ಹ್ಯಾಂಡ್‌ಸೆಟ್‌ಗಳು, ಇವೇನೂ ಸ್ಮಾರ್ಟ್‌ಫೋನ್‌ಗಳಲ್ಲ. ಆದರೂ ಇವುಗಳಲ್ಲಿ ಮೆಸೇಜ್ ಹಾಗೂ ಕಾಲ್ ಮಾಡಲು ಸಾಧ್ಯವಾಗುತ್ತಿತ್ತು. ಹಾಗೆಯೇ ಇಯರ್ ಫೋನ್ ಸಿಕ್ಕಿಸಿದರೆ ಎಫ್‌ಎಂ ರೇಡಿಯೋಗಳನ್ನು ಕೇಳಬಹುದಿತ್ತು. ಜೊತೆಗೆ ಸ್ಮಾರ್ಟ್‌ಫೋನ್ ಅಲ್ಲದಿದ್ದರು ಇದರಲ್ಲೊಂದು ಗೇಮ್ ಇತ್ತು ಅದೇ ಸ್ನೇಕ್ ಗೇಮ್, ಆ ಗೇಮನ್ನು ಬಹುತೇಕ 90ರ ದಶಕದ ಎಲ್ಲಾ ಮಕ್ಕಳು ಆಡಿರುತ್ತಾರೆ. ಸಣ್ಣದಾಗಿರುವ ಹಾವು ಸ್ಕ್ರಿನ್ ಮೇಲಿದ್ದ ಹಣ್ಣು ತಿಂದು ತಿಂದು ದೊಡ್ಡದೊಡ್ಡದಾಗುತ್ತಾ ಹೋಗುತ್ತದೆ. ಸುಮ್ಮನೆ ಬಿಟ್ಟರೆ ಹಾವು ಸತ್ತು ಹೋಗುತ್ತದೆ. ಆಟ ಮುಗಿಯುತ್ತದೆ.
ಸ್ಯಾಮ್‌ಸಂಗ್ 13 ವರ್ಷಗಳ ಪ್ರಾಬಲ್ಯ ಅಂತ್ಯ: ಜಗತ್ತಿನ ನಂ. 1 ಸ್ಮಾರ್ಟ್‌ಫೋನ್ ತಯಾರಕ ಎನಿಸಿಕೊಂಡ ಆ್ಯಪಲ್
ಹಾಗೆಯೇ ಆ ಹಾವನ್ನು ಹೋಲುವಂತದೇ ಹಾವೊಂದು ಮನೆಯ ಗೋಡೆಯ ಮೇಲೆ ಚಲಿಸುತ್ತಿರುವ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹಾವಿನ ಚಲನೆಗೂ ಬಹುತೇಕ ನೋಕಿಯಾ ಫೋನ್ ಗೇಮ್‌ನಲ್ಲಿರುವ ಹಾವಿನ ಚಲನೆಗೂ ಪೂರ್ಣ ಸಾಮ್ಯತೆ ಇದ್ದು, ಅಮಾಸಿಯನ್ ಎಂಬುವವರು ಈ ವೀಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ವೀಡಿಯೋದಲ್ಲಿ ಕಾಣಿಸುವಂತೆ ಹಾವೊಂದು ಮನೆಯ ಗೋಡೆಯ ಮೇಲೆ ಇಟ್ಟಿಗೆಗಳ ಮಧ್ಯೆ ಇರುವ ಜಾಗದಲ್ಲಿ ಹೊರಳಿಕೊಂಡು ಹೋಗುತ್ತಿದೆ. ವೀಡಿಯೋ ನೋಡಿದ ಅನೇಕರು ಈ ಹಾವು ನೋಕಿಯಾ ಗೇಮ್‌ನ್ನು ನಿಜ ಮಾಡಿದೆ ಎಂದು ಕಾಮೆಂಟ್ ಮಾಡಿದ್ದಾರೆ. ನೋಕಿಯಾಗೆ ಈ ಗೇಮ್ ಮಾಡಲು ಸ್ಪೂರ್ತಿ ಎಲ್ಲಿಂದ ಸಿಕ್ತು ಎಂಬುದು ಈಗ ಗೊತ್ತಾಯ್ತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅಲ್ಲದೇ ಆ ಗೇಮನ್ನು ತಾನು ತುಂಬಾ ಇಷ್ಟಪಡುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ಸ್ನೇಕ್ ಅನೇಕರನ್ನು ತಮ್ಮ ಹಳೆ ನೆನಪಿಗೆ ದೂಡಿದೆ.