ಮನೋರಂಜನೆ ಬೇಡ: ಕಲಾವಿದರಿಗೆ ಕಂಡಲ್ಲಿ ಗುಂಡು..! ತಾಲೀಬಾನ್ ಅಟ್ಟಹಾಸ

Oct 11, 2021, 5:24 PM IST

ಕಂಡಕಂಡಲ್ಲಿ ಎಕೆ47 ಆರ್ಭಟ. ಗ್ರೆನೇಡ್ ಆರ್ಭಟ. ಇದು ಅಫ್ಘಾನಿಸ್ತಾನದ ಸದ್ಯದ ಸ್ಥಿತಿ. ಜಗತ್ತು ಅಪ್ಡೇಟ್ ಆಗುತ್ತಿದ್ದರೆ ತಾಲೀಬಾನಿಗಳು ಮಾತ್ರ ಶಿಲಾಯುಗಕ್ಕೆ ಹೋಗುತ್ತಿದೆ. ಜಗತ್ತು ಕ್ಷಣ ಕ್ಷಣಕ್ಕೆ ಬದಲಾಗುತ್ತಾ ಅಭಿವೃದ್ಧಿಯಾಗುತ್ತಿದ್ದರೆ ತಾಲೀಬಾನಿಗಳು ಮಾತ್ರ ಮತ್ತೇನೋ ಮಾಡುತ್ತಿದ್ದಾರೆ. ಕಾಲವಿದರೆ ಜೀವಕ್ಕೆ ಬೆಲೆಯೇ ಇಲ್ಲ. ಮನರಂಜನೆಗೂ ಕತ್ತರಿ ಹಾಕಿದ ತಾಲೀಬಾನ್ ಕಲಾವಿದರನ್ನು ಹುರಿದು ಮುಕ್ಕುತ್ತಿದೆ.

ಅಫ್ಘಾನ್‌ನಲ್ಲಿ ತಾಲಿಬಾನ್‌- ಐಸಿಸ್ ಉಗ್ರರ ನಡುವೆ ಸಂಘರ್ಷ..?

ಇನ್ನು ಕೆಲವೇ ದಿನಗಳಲ್ಲಿ ಈ ರಾಷ್ಟ್ರ ಶಿಲಾಯುಗಕ್ಕೆ ಜಾರಿದರು ಅಚ್ಚರಿಪಡಬೇಕಾಗಿಲ್ಲ. ಅಫ್ಘಾನ್‌ನಲ್ಲಿ ಬಡತನ, ಕಷ್ಟದ ದಿನಗಳು ಬರಲಿವೆ. ಶಿಲಾಯುಗದಲ್ಲಿ ಜನರು ಹೇಗೆ ವಾಸಿಸುತ್ತಿದ್ದರೋ ಅದೇ ರೀತಿ ವಾಸಿಸುವ ಪರಿಸ್ಥಿತಿ ಬರಲಿದೆ. ಅಫ್ಘಾನ್‌ನ ಸದ್ಯದ ಪರಿಸ್ಥಿತಿ ನೋಡಿದರೆ ಇವರು ಸಾಗುತ್ತಿರುವುದು ಎತ್ತ ಎಂಬ ಪ್ರಶ್ನೆ ಮೂಡುತ್ತದೆ.