ಸರ್ಕಾರಿ ನೌಕರರಿಗೆ ಶುಭಸುದ್ದಿ; ಗ್ರ್ಯಾಚುಟಿ, ಮಕ್ಕಳ ಶಿಕ್ಷಣ ಭತ್ಯೆ, ಹಾಸ್ಟೆಲ್ ಸಬ್ಸಿಡಿಯಲ್ಲಿ ಶೇ.25ರಷ್ಟು ಹೆಚ್ಚಳ

By Suvarna NewsFirst Published May 3, 2024, 3:18 PM IST
Highlights

ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಹೆಚ್ಚಳದ ಬೆನ್ನಲ್ಲೇ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಗ್ರ್ಯಾಚುಟಿ, ಮಕ್ಕಳ ಶಿಕ್ಷಣ ಭತ್ಯೆ, ಹಾಸ್ಟೆಲ್ ಸಬ್ಸಿಡಿಯಲ್ಲಿ ಶೇ.25ರಷ್ಟು ಏರಿಕೆಯಾಗಿದೆ. 
 

ನವದೆಹಲಿ (ಮೇ 3): ಕೇಂದ್ರ ಸರ್ಕಾರಿ ನೌಕರರಿಗೆ ಶುಭಸುದ್ದಿ. ಇತ್ತೀಚೆಗಷ್ಟೇ ತುಟ್ಟಿ ಭತ್ಯೆಯಲ್ಲಿ ಶೇ.4ರಷ್ಟು ಹೆಚ್ಚಳವಾದ ಬೆನ್ನಲ್ಲೇ ಮಕ್ಕಳ ಶಿಕ್ಷಣ ಭತ್ಯೆ, ಹಾಸ್ಟೆಲ್ ಸಬ್ಸಿಡಿ, ನಿವೃತ್ತಿ ಗ್ರ್ಯಾಚುಟಿ ಹಾಗೂ ನಿಧನ ಗ್ರ್ಯಾಚುಟಿಯಲ್ಲಿ ಶೇ.25ರಷ್ಟು ಹೆಚ್ಚಳವಾಗಿದೆ ಎಂದು ಸರ್ಕಾರ ಇತ್ತೀಚೆಗೆ ಮಾಹಿತಿ ನೀಡಿದೆ. ಇತ್ತೀಚೆಗೆ ಶೇ.4ರಷ್ಟು ಹೆಚ್ಚಳ ಮಾಡಿದ ಬಳಿಕ ಡಿಎ ಮೂಲವೇತನದ ಶೇ.50ರಷ್ಟು ತಲುಪಿದ್ದರೂ ಮಕ್ಕಳ ಶಿಕ್ಷಣ ಭತ್ಯೆ, ಹಾಸ್ಟೆಲ್ ಸಬ್ಸಿಡಿ, ನಿವೃತ್ತಿ ಗ್ರ್ಯಾಚುಟಿ ಹಾಗೂ ನಿಧನ ಗ್ರ್ಯಾಚುಟಿಯಲ್ಲಿ ಅದರಷ್ಟಕ್ಕೆ ಹೆಚ್ಚಳವಾಗಿದೆ ಎಂದು ಸರ್ಕಾರ ತಿಳಿಸಿದೆ. ಸಿಬ್ಬಂದಿ ಹಾಗೂ ತರಬೇತಿ ಇಲಾಖೆ ಇತ್ತೀಚೆಗೆ ಮಕ್ಕಳ ಶಿಕ್ಷಣ ಭತ್ಯೆ ಹಾಗೂ ಹಾಸ್ಟೆಲ್ ಸಬ್ಸಿಡಿಗೆ ಸಂಬಂಧಿಸಿ ವಿವಿಧ ಮಾಹಿತಿಗಳನ್ನು ಪಡೆದಿತ್ತು. ಕೇಂದ್ರ ಸರ್ಕಾರಿ ನೌಕರರಿಗೆ 2024ರ ಜನವರಿ 1ರಿಂದ ಜಾರಿಗೆ ಬರುವಂತೆ ಶೇ.50ರಷ್ಟು ಡಿಎ ಹೆಚ್ಚಳ ಮಾಡಲಾಗಿತ್ತು. 

ಏಪ್ರಿಲ್ 25ರಂದು ನೀಡಿರುವ ಕಚೇರಿ ಪ್ರಕಟಣೆ ಪ್ರಕಾರ ವೇತನ ಪರಿಷ್ಕರಣೆಯಲ್ಲಿ ಪ್ರತಿ ಬಾರಿ ಡಿಎ ಶೇ.50ಕ್ಕಿಂತ ಹೆಚ್ಚಿದ್ದಾಗ ಶಿಕ್ಷಣ ಭತ್ಯೆ ಹಾಗೂ ಹಾಸ್ಟೆಲ್ ಸಬ್ಸಿಡಿಯಲ್ಲಿ ಅಟೋಮ್ಯಾಟಿಕ್ ಆಗಿ ಶೇ.25ರಷ್ಟು ಹೆಚ್ಚಳವಾಗಲಿದೆ. ಮೂಲವೇತನದ ಶೇ.50ರಷ್ಟಕ್ಕೆ ಶೇ.4ರಷ್ಟು ಡಿಎ ಹೆಚ್ಚಳಕ್ಕೆ ಕೇಂದ್ರ ಸಂಪುಟ ಮಾ.7ರಂದು ಅನುಮೋದನೆ ನೀಡಿತ್ತು. ಶೇ.4ರಷ್ಟು ಡಿಎ ಹೆಚ್ಚಳ ಒಂದು ಕೋಟಿಗೂ ಅಧಿಕ ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಪ್ರಯೋಜನವಾಗಲಿದೆ. ಇದು 2024ರ ಜನವರಿ 1ರಿಂದ ಅನುಷ್ಠಾನಕ್ಕೆ ಬರಲಿದೆ. ಇದರ ಹೊರತಾಗಿ ಉದ್ಯೋಗಿಗಳಿಗೆ ಎಚ್ ಆರ್ ಎ ಅನ್ನು ಕೂಡ ಹೆಚ್ಚಳ ಮಾಡಲಾಗಿದೆ. 

ಕೇಂದ್ರ ಸರ್ಕಾರಿ ನೌಕರರಿಗೆ ಶುಭಸುದ್ದಿ, ಏಪ್ರಿಲ್ ತಿಂಗಳ ವೇತನದ ಜೊತೆಗೆ ಖಾತೆ ಸೇರಲಿದೆ ಡಿಎ ಹೆಚ್ಚಳದ ಬಾಕಿ ಮೊತ್ತ

ಡಿಎ ಮೂಲವೇತನದ ಶೇ.50ರಷ್ಟನ್ನು ತಲುಪುತ್ತಿದ್ದಂತೆ ರೈಲ್ವೆ ಯೂನಿಯನ್ಸ್ ಸೇರಿದಂತೆ  ವಿವಿಧ ಕೇಂದ್ರ ಸರ್ಕಾರಿ ನೌಕರರ ಸಂಘಟನೆಗಳು 8ನೇ ವೇತನ ಆಯೋಗ ರಚಿಸುವಂತೆ ಒತ್ತಾಯ ಮಾಡಲಾರಂಭಿಸಿವೆ. 

ಗ್ರ್ಯಾಚುಟಿಗೆ ಸಂಬಂಧಿಸಿದ ಪ್ರತ್ಯೇಕ ಅಧಿಸೂಚನೆಯಲ್ಲಿ ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯ 2024ರ ಏಪ್ರಿಲ್ 30ರಂದು ಹೊರಡಿಸಿದ ಕಚೇರಿ ಆದೇಶದಲ್ಲಿ ನಿವೃತ್ತಿ ಗ್ರ್ಯಾಚುಟಿ ಹಾಗೂ ನಿಧನ ಗ್ರ್ಯಾಚುಟಿ ಗರಿಷ್ಠ ಮಿತಿಯನ್ನು ಡಿಎ ಮೂಲವೇತನದ ಶೇ.50ರಷ್ಟನ್ನು ತಲುಪಿದ ಸಂದರ್ಭದಲ್ಲಿ ಶೇ.25ರಷ್ಟು ಹೆಚ್ಚಳ ಮಾಡಲಾಗುತ್ತದೆ ಎಂದು ತಿಳಿಸಿದೆ. 

ಮಾರ್ಚ್ 7ರಂದು ಕೇಂದ್ರ ಸಚಿವ ಸಂಪುಟ ಮೂಲವೇತನದ ಶೇ.50ಕ್ಕೆ ಶೇ.4ರಷ್ಟು ತುಟ್ಟಿ ಭತ್ಯೆ (ಡಿಎ) ಹೆಚ್ಚಳ ಮಾಡಲು ಅನುಮೋದನೆ ನೀಡಿತ್ತು. ಶೇ.4ರಷ್ಟು ಡಿಎ ಹೆಚ್ಚಳ ಒಂದು ಕೋಟಿಗೂ ಅಧಿಕ ಕೇಂದ್ರ ಸರ್ಕಾರಿ ಉದ್ಯೋಗಿಗಳು ಹಾಗೂ ಪಿಂಚಣಿದಾರರಿಗೆ ಪ್ರಯೋಜನ ನೀಡಲಿದೆ. ಇದು 2024ರ ಜನವರಿ 1ರಿಂದ ಜಾರಿಗೆ ಬರಲಿದೆ. ಇದರ ಹೊರತಾಗಿ ಉದ್ಯೋಗಿಗಳಿಗೆ  ಎಚ್ ಆರ್ ಎ ಅನ್ನು ಕೂಡ ಹೆಚ್ಚಳ ಮಾಡಲಾಗಿದೆ. ಈ ಹೆಚ್ಚಳದಿಂದ ಕೇಂದ್ರ ಸರ್ಕಾರಿ ನೌಕರರ ಡಿಎ ಶೇಕಡಾ 50ಕ್ಕೆ ಏರಿದಂತಾಗಿದೆ.

Breaking News: ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ. 4ರಷ್ಟು ಹೆಚ್ಚಿಸಿದ ಮೋದಿ ಸರ್ಕಾರ!

ಅಕ್ಟೋಬರ್ 2023 ರಲ್ಲಿ, ಕೇಂದ್ರ ಸಚಿವ ಸಂಪುಟವು 48.67 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 67.95 ಲಕ್ಷ ಪಿಂಚಣಿದಾರರಿಗೆ ಪ್ರಯೋಜನವಾಗುವಂತೆ 2023ರ ಜುಲೈ 1 ರಿಂದ ಜಾರಿಗೆ ಬರುವಂತೆ ತುಟ್ಟಿ ಭತ್ಯೆ ಮತ್ತು ತುಟ್ಟಿಭತ್ಯೆ ಪರಿಹಾರವನ್ನು 4 ಶೇಕಡಾ ಪಾಯಿಂಟ್‌ ಏರಿಕೆ ಮಾಡುವ ಮೂಲಕ ಶೇ. 46ಕ್ಕೆ ಹೆಚ್ಚಿಸಿತು.

ಡಿಎ ಹೆಚ್ಚಳವನ್ನು ಹೇಗೆ ನಿರ್ಧರಿಸಲಾಗುತ್ತದೆ?
ಉದ್ಯೋಗಿಗಳ ಜೀವನ ನಿರ್ವಹಣಾ ವೆಚ್ಚದ ಆಧಾರದಲ್ಲಿ ಡಿಎ ನಿಗದಿಪಡಿಸಲಾಗುತ್ತದೆ. ಉದ್ಯೋಗಿ ನಗರ, ಗ್ರಾಮೀಣ, ಅರೆಪಟ್ಟಣ ಹೀಗೆ ಯಾವ ಪ್ರದೇಶದಲ್ಲಿ ವಾಸಿಸುತ್ತಾನೆ ಎಂಬ ಆಧಾರದಲ್ಲಿ ಡಿಎ ನಿಗದಿಪಡಿಸಲಾಗುತ್ತದೆ. ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರ ಡಿಎ ಲೆಕ್ಕಾಚಾರ ಮಾಡೋ ಫಾರ್ಮುಲಾವನ್ನು ಕೇಂದ್ರ ಸರ್ಕಾರ 2006ರಲ್ಲಿ ಬದಲಾಯಿಸಿತ್ತು.ಅದು ಈ ಕೆಳಗಿನಂತಿದೆ.
ತುಟ್ಟಿ ಭತ್ಯೆ %= (ಅಖಿಲ ಭಾರತ ಗ್ರಾಹಕ ದರ ಸೂಚ್ಯಂಕದ ಸರಾಸರಿ (ಮೂಲ ವರ್ಷ 2001=100) ಕಳೆದ 12 ತಿಂಗಳು-115.76)/115.76)x100.
ಕೇಂದ್ರೀಯ ಸಾರ್ವಜನಿಕ ವಲಯದ ಉದ್ಯೋಗಿಗಳಿಗೆ =(ಅಖಿಲ ಭಾರತ ಗ್ರಾಹಕ ದರ ಸೂಚ್ಯಂಕದ ಸರಾಸರಿ (ಮೂಲ ವರ್ಷ 2001=100) ಕಳೆದ 3 ತಿಂಗಳು-126.33)/126.33)x100.

 

click me!