ಬಂದೂಕುಧಾರಿ ಉಗ್ರರ ಮಧ್ಯೆ ನ್ಯೂಸ್ ಓದೋ ಈ ಆ್ಯಂಕರ್ ಕಷ್ಟ ನೋಡಿ

Aug 31, 2021, 10:00 AM IST

ತಾಲೀಬಾನ್ ದೇಶವಾಗಿರೋ ಅಫ್ಘಾನಿಸ್ತಾನದ ಜನ ಓಡಿ ಹೋಗುತ್ತಿದ್ದಾರೆ. ತಾಲೀಬಾನ್ ನಿಯಮಗಳ ಭೀಕರತೆ ತಡೆಯಲಾಗದ ಜನರು ಎದ್ದೆವೋ, ಬಿದ್ದೆವೋ ಎಂದು ಓಡೋಡಿ ಹೋಗುತ್ತಿದ್ದಾರೆ. ಜನರನ್ನು ಸಾಲು ಸಾಲು ನಿಲ್ಲಿಸಿ ಗುಂಡಿಕ್ಕುತ್ತಿದ್ದಾರೆ. ಹೆಣ್ಮಕ್ಕಳನ್ನು ಹೊತ್ತೊಯ್ಯುತ್ತಿದ್ದಾರೆ. ಬಾಳಿ ಬದುಕಬೇಕಾದ ಕಂದಮ್ಮಗಳು, ಕನಸು ಕಂಗಳ ಯುವಕ, ಯುವತಿಯರು ಕಂಡು ಕಂಡಲ್ಲಿ ಹೆಣವಾಗುತ್ತಿದ್ದಾರೆ. ತಾಲೀಬಾನ್ ಜೊತೆ ಐಸಿಸ್ ಕೂಡಾ ಸೇರಿಕೊಂಡು ನರಕ ಸೃಷ್ಟಿಯಾಗಿದೆ.

ಪಾಕ್ ಶನಿ ಸಂತಾನ ಭಾರತಕ್ಕೂ ಬರುತ್ತಾ? ಮಕ್ಕಳ ಮೇಲೆ ಕ್ರೌರ್ಯ!

ಸಾಯಿಸೋದೇ ಗುರಿ ಎಂಬಂತೆ ಆಡುತ್ತಿದ್ದಾರೆ ರಕ್ಕಸ ತಾಲೀಬಾನಿಗಳು. ವಿಮಾನ ನಿಲ್ದಾಣ ಹತ್ತಿರವೇ ನಡೆದ ಬಾಂಬ್ ದಾಳಿಯಲ್ಲಿ ಜನ ನುಚ್ಚು ನೂರಾಗಿದ್ದಾರೆ. ಅಲ್ಲೇ ಇದ್ದ ಚರಂಡಿಯ ನೀರಿನ ಬಣ್ಣ ತಕ್ಷಣವೇ ಕೆಂಪಾಗಿದೆ ಎನ್ನುತ್ತಾರೆ ಪ್ರತ್ಯಕ್ಷದರ್ಶಿಗಳು. ಲೈವ್ ಓದುತ್ತಿರೋ ನಿರೂಪಕನ ಹಿಂದೆ ಇಬ್ಬರು ಉಗ್ರರು ಮತ್ತು ಮುಂದೆ 8 ಜನರ ಬಂದೂಕುಧಾರಿಗಳು ನಿಂತುಕೊಂಡಿದ್ದಾರೆ.